ಕೇಂದ್ರ ಸರ್ಕಾರದಿಂದ (Central government) ದೇಶದ ರೈತರಿಗಾಗಿ ಹಲವು ಯೋಜನೆಗಳನ್ನು ಕೈಗೊಳ್ಳಲಾಗಿದೆ. ಇವುಗಳ ಪೈಕಿ PM ಕಿಸಾನ್ ಸಮ್ಮಾನ್ ನಿಧಿ (PM Kisan Samman Nidhi Sceme) ಯೋಜನೆ ಕೂಡ ಒಂದು. 2019ರ ಫೆಬ್ರವರಿ ತಿಂಗಳಲ್ಲಿ ಈ ಯೋಜನೆಯನ್ನು ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು (PM Narendra Modi) ಲಾಂಚ್ ಮಾಡಿದರು.
ಈ ಯೋಜನೆಗೆ ನೋಂದಣಿಯಾದ ದೇಶದ ಎಲ್ಲಾ ರೈತರು ಕೂಡ ಯೋಜನೆ ಜಾರಿಗೆ ಬಂದ ವರ್ಷದಿಂದ ಪ್ರತಿ ನಾಲ್ಕು ತಿಂಗಳಿಗೊಮ್ಮೆ 2000ರೂ. ಸಹಾಯಧನವನ್ನು ಪಡೆಯುತ್ತಿದ್ದಾರೆ. ಒಂದು ಆರ್ಥಿಕ ವರ್ಷದಲ್ಲಿ ರೈತರಿಗೆ ಮೂರು ಕಂತುಗಳಲ್ಲಿ 6,000ರೂ. ಸಿಗುತ್ತಿದೆ. ಈವರೆಗೆ ಯಶಸ್ವಿಯಾಗಿ 13 ಕಂತುಗಳಲ್ಲಿ ಈ ಯೋಜನೆಯ ಹಣ ವರ್ಗಾವಣೆ ಆಗಿದೆ.
ಇಂದು ಜುಲೈ 27, 2023ರ ಬೆಳಿಗ್ಗೆ 11 ಗಂಟೆಯಲ್ಲಿ ರಾಜಸ್ಥಾನ ರಾಜ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಗಳು 14ನೇ ಕಂತಿನ (14th batch) ಹಣವನ್ನು ಕೂಡ ಬಿಡುಗಡೆ ಮಾಡಿದ್ದಾರೆ. ಯಾವುದೇ ಮಧ್ಯವರ್ತಿ ಕಾಟವಿಲ್ಲದೆ ಸಹಾಯಧನವು ರೈತರ ಬ್ಯಾಂಕ್ ಖಾತೆಗೆ DBT ಮೂಲಕ ವರ್ಗಾವಣೆ ಆಗುತ್ತಿದೆ. ರೈತರು ನಮ್ಮ ಕೃಷಿ ಚಟುವಟಿಕೆಗಳಿಗೆ ಅಗತ್ಯ ಸಮಯದಲ್ಲಿ ಈ ಸಹಾಯಧನವನ್ನು ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎನ್ನುವುದು ಸರ್ಕಾರದ ಅಭಿಲಾಷೆ.
ಈ ಸುದ್ದಿ ನೋಡಿ:- ಪದವೀಧರರಿಗೆ ಸಿಹಿ ಸುದ್ದಿ, ಯುವನಿಧಿ ಯೋಜನೆ ಜಾರಿ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ ಸರ್ಕಾರ.!
ಈ ಯೋಜನೆ ಆರಂಭವಾದ ಆರಂಭಿಕ ವರ್ಷಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯ ರೈತರು ಯೋಜನೆಯ ಸಹಾಯಧನವನ್ನು ಪಡೆದಿದ್ದರು. ಇತ್ತೀಚೆಗೆ ಕಟ್ಟುನಿಟ್ಟಾದ ಕ್ರಮವನ್ನು ಪಾಲಿಸಲಾಗುತ್ತಿದೆ ಹಾಗಾಗಿ ನಕಲಿ ಫಲಾನುಭವಿಗಳು ಸಿಕ್ಕಿಬಿದ್ದಿದ್ದಾರೆ. ಅವರ ಹೆಸರನ್ನು ಫಲಾನುಭವಿಗಳ ಪಟ್ಟಿಯಿಂದ ಕೈ ಬಿಡಲಾಗಿದೆ. ಜೊತೆಗೆ ಈ ಯೋಜನೆಗೆ ರೈತರು e-kyc ಅಪ್ಡೇಟ್ ಮಾಡಿಸಬೇಕಾದದ್ದು ಕಡ್ಡಾಯ ಎನ್ನುವ ನಿಯಮವನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿತ್ತು.
ಇದನ್ನು ಪೂರ್ತಿ ಗೊಳಿಸಿದ ರೈತರು ಹಾಗೂ ದಾಖಲೆಗಳಲ್ಲಿ ಹೊಂದಾಣಿಕೆ ಆಗದ ರೈತರುಗಳು ಕೂಡ ಕೆಲ ಕಂತುಗಳ ಹಣದಿಂದ ವಂಚಿತರಾಗಿದ್ದಾರೆ. ಈ ರೈತರು ತಕ್ಷಣವೇ ಹತ್ತಿರದಲ್ಲಿರುವ ಗ್ರಾಮ ಒನ್ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ತಮ್ಮ ಮಾಹಿತಿಗಳನ್ನು ತಿದ್ದುಪಡಿ ಮಾಡಿಸಿ ಮತ್ತೊಮ್ಮೆ ಅರ್ಜಿ ಸಲ್ಲಿಸಿ, e-kyc ಅಪ್ಡೇಟ್ ಮಾಡಿಸಿದರೆ ಮುಂದಿನ 15ನೇ ಕಂತಿನ ಹಣವನ್ನು ಪಡೆಯಲು ಅರ್ಹರಾಗುತ್ತಾರೆ.
ಈಗಾಗಲೇ 14ನೇ ಕಂತಿನ (14th batch) 2000ರೂ. ಸಹಾಯಧನವನ್ನು ಪಡೆದಿರುವ ರೈತರಿಗೆ ಅವರ ಮೊಬೈಲ್ ಸಂಖ್ಯೆಗೆ ಮೆಸೇಜ್ ಕೂಡ ಬಂದಿದೆ, ಕೆಲವರ ಖಾತೆಗಳಿಗೆ ಹಣ ವರ್ಗಾವಣೆಯಾಗುವ ಪ್ರೋಸೆಸ್ ನಲ್ಲಿ ಕೂಡ ಇದೆ. ಒಂದು ವೇಳೆ ನಿಮಗೆ ನೀವು 14ನೇ ಕಂತಿನ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಹರಾಗಿದ್ದೀರಾ ಅಥವಾ ಇಲ್ಲವೋ ಎನ್ನುವ ಅನುಮಾನಗಳಿದ್ದರೆ ಈಗ ನಾವು ಹೇಳಬಹುದಾದ ಮೂಲಕ ನಿಮ್ಮ ಸ್ಟೇಟಸ್ ಕೂಡ ತಿಳಿದುಕೊಳ್ಳಬಹುದು..
● ಮೊದಲಿಗೆ https://pmkisan.gov.in/BeneficiaryStatus_New.aspx ವೆಬ್ ಸೈಟ್ ಗೆ ಭೇಟಿ ಕೊಡಿ.
● ಮುಖಪುಟ ಓಪನ್ ಆದ ಮೇಲೆ ಬಲಭಾಗದಲ್ಲಿ ಕಾಣುವ ಆಯ್ಕೆಗಳಲ್ಲಿ know your status ಕ್ಲಿಕ್ ಮಾಡಿ.
● ಮತ್ತೊಂದು ಪೇಜ್ ಓಪನ್ ಆಗುತ್ತದೆ ಅದರಲ್ಲಿ ನಿಮ್ಮ Registration number ಹಾಗೂ ಅಲ್ಲಿರುವ Captcha code ನಮೂದಿಸಲು ಹೇಳಲಾಗಿರುತ್ತದೆ. ನಿಮಗೆ ನಿಮ್ಮ Registration number ಗೊತ್ತಿದ್ದರೆ ಅದನ್ನು ನಮೂದಿಸಿ Captcha ಹಾಕಿ ಡೈರೆಕ್ಟ್ ಆಗಿ ನಿಮ್ಮ ಸ್ಟೇಟಸ್ ತಿಳಿಯಬಹುದು.
● Registration number ಗೊತ್ತಿಲ್ಲ ಎಂದರೆ know your registration number ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ, ನಿಮ್ಮ ನೋಂದಾಯಿತ mobile number ಹಾಕಿ Captcha ಎಂಟ್ರಿ ಮಾಡಿ ನಿಮ್ಮ Registration number ತಿಳಿದುಕೊಳ್ಳಿ.
● ಮತ್ತೆ ಮೆನುವಿಗೆ ಬಂದು know your status ನಲ್ಲಿ Registration number ಹಾಕಿ ಅಲ್ಲಿರುವ Captcha ಹಾಕಿ ನಿಮ್ಮ ಸ್ಟೇಟಸ್ ಚೆಕ್ ಮಾಡಬಹುದು.