ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಶ್ರೇಯೋಭಿವೃದ್ದಿವಾಗಿ ಬಹಳಷ್ಟು ಶ್ರಮಿಸುತ್ತಿವೆ. ಈಗಾಗಲೇ ಕೇಂದ್ರದಿಂದ ಹಲವಾರು ಯೋಜನೆಗಳು ಹಾಗೂ ಸಹಾಯಧನದ ಸೌಲಭ್ಯ ಕೂಡ ದೇಶದ ಎಲ್ಲಾ ರೈತರಿಗೂ ಸಿಗುತ್ತದೆ. ಜೊತೆಗೆ ಪ್ರತ್ಯೇಕವಾಗಿ ಆಯಾ ರಾಜ್ಯ ಸರ್ಕಾರಗಳು ಕೂಡ ಕೃಷಿ ಚಟುವಟಿಕೆ ರಾಜ್ಯದಲ್ಲಿ ಹೆಚ್ಚಾಗಬೇಕು ಯುವಜನತೆಗೆ ಕೃಷಿಯೆಡೆ ಒಲವು ಬರಬೇಕು.
ರೈತರು ಕೂಡ ಕೃಷಿಯಲ್ಲಿ ಖಚಿತ ಆದಾಯ ಪಡೆಯಬೇಕು ಇದಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿ ಕೊಡಬೇಕು ಎನ್ನುವ ಕಾರಣಕ್ಕಾಗಿ ತಮ್ಮದೇ ಆದ ವಿಭಿನ್ನ ಬಗೆಯ ಯೋಜನೆಗಳನ್ನು ಜಾರಿಗೆ ತರುತ್ತಿವೆ. ಪ್ರತಿ ಬಾರಿ ಬಜೆಟ್ ಮಂಡನೆ ಆದಾಗಲು ಸರ್ಕಾರದಿಂದ ರೈತರಿಗೆ ಏನು ಸಿಗುತ್ತದೆ ಎನ್ನುವ ನಿರೀಕ್ಷೆ ಇದ್ದೇ ಇರುತ್ತದೆ. ಅದೇ ರೀತಿ ಈ ಬಾರಿ ರೈತರಿಗಾಗಿ ರೈತ ಶಕ್ತಿ ಯೋಜನೆಯಡಿ 1250 ಸಹಾಯಧನ ನೀಡಲು ಸರ್ಕಾರ ನಿರ್ಧರಿಸಿದೆ.
1 ರಿಂದ 5 ಎಕರೆ ಒಳಗೆ ಕೃಷಿ ಭೂಮಿ ಹೊಂದಿರುವ ರೈತರುಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಈ ಯೋಜನೆ ಉದ್ದೇಶ ಏನೆಂದರೆ, ರೈತರಿಗೆ ತಮ್ಮ ಕೃಷಿ ಚಟುವಟಿಕೆಗಳಿಗೆ ಡೀಸೆಲ್ ಇಂಧನ ಅವಶ್ಯಕವಾಗಿದೆ. ನೀರಿನ ಮಿಷನ್ ಬಳಸಲು ಅಥವಾ ಟ್ರಾಕ್ಟರ್ ಗಳಿಗೆ ಬಳಸಲು ಅಥವಾ ಫಸಲು ಗಳಿಗೆ ಕೀಟನಾಶಕ ಮತ್ತು ಕ್ರಿಮಿನಾಶಕಗಳನ್ನು ಸಿಂಪಡಿಸುವಾಗ ಅದಕ್ಕೆ ಬಳಸುವ ಮಿಷನ್ ಗಳಿಗೆ ಹಾಕಲು ಈ ರೀತಿ ಒಂದಲ್ಲ ಒಂದು ಕಾರಣಕ್ಕೆ ಡೀಸೆಲ್ ಬೇಕಾಗುತ್ತದೆ.
ಈಗ ಡೀಸೆಲ್ ರೇಟ್ ವಿಪರೀತವಾಗಿ ಏರಿರುವುದರಿಂದ ರೈತನಿಗೆ ಇದರ ಕುರಿತು ಸಮಸ್ಯೆ ಆಗಬಾರದು ಎನ್ನುವ ಕಾರಣಕ್ಕಾಗಿ ಎಕರೆಗೆ 250 ರೂಗಳಂತೆ ಸಹಾಯಧನವನ್ನು ನೀಡಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ರೈತರು ಅರ್ಜಿ ಹಾಕಿ ನೋಂದಣಿ ಮಾಡಿಕೊಳ್ಳಬೇಕು, ನೋಂದಣಿ ಮಾಡಿಕೊಂಡ ರೈತನೇ ಖಾತೆಗೆ DBT ಮೂಲಕ ಹಣ ವರ್ಗಾವಣೆ ಆಗಲಿದೆ. ಈ ಬಗ್ಗೆ ಕೃಷಿ ನಿರ್ದೇಶಕರೇ ಮಾಹಿತಿ ನೀಡಿದ್ದಾರೆ.
ಈ ಸಹಾಯಧನವನ್ನು ಪಡೆಯಲು ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳಬೇಕು. ರೈತರಿಗೆ
ಬರಗಾಲ, ಪ್ರವಾಹ ಮುಂತಾದ ಸಂದರ್ಭದಲ್ಲಿ ಬೆಳೆ ನಷ್ಟ ಆದಾಗ ಅದರ ಪರಿಹಾರಧನ ಪಡೆದುಕೊಳ್ಳಲು,
ಬೆಂಬಲ ಬೆಲೆ ಯೋಜನೆಯಲ್ಲಿ ಕೃಷಿ ಉತ್ಪನ್ನ ಖರೀದಿಸಲು, ಕೃಷಿಗೆ ಬೇಕಾಗಿರುವ ಸಾಲ ಸೌಲಭ್ಯವನ್ನು ಬ್ಯಾಂಕುಗಳಿಂದ ಪಡೆಯಲು ಹೀಗೆ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ರೇಷ್ಮೆ ಇಲಾಖೆ ಮೊದಲಾದ ಇಲಾಖೆಗಳಲ್ಲಿ ರೈತರಿಗಾಗಿ ಇರುವ ಯೋಜನೆಗಳ ಸೌಲಭ್ಯವನ್ನು ಪಡೆದುಕೊಳ್ಳಲು ಫ್ರೂಟ್ಸ್ ತಂತ್ರಾಂಶವನ್ನು ಒಂದೇ ವೇದಿಕೆಯನ್ನಾಗಿ ಪರಿಗಣಿಸಲಾಗಿದೆ.
ರೈತ ಶಕ್ತಿ ಯೋಜನೆಯ ಸಹಾಯಧನ ಪಡೆಯುವದು ಅರ್ಜಿ ಸಲ್ಲಿಸುವ ವಿಧಾನ:-
● ಮೊದಲಿಗೆ ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಆಗಬೇಕು. ಫ್ರೂಟ್ಸ್, ಸರ್ಕಾರದ ಇ-ಲಾಖೆಯ ಪೋರ್ಟಲ್, ಕಂದಾಯ ಇಲಾಖೆಯ ಭೂಮಿ ಪೋರ್ಟಲ್ ನೊಂದಿಗೆ ಸಂಯೋಜಿಸಲಾಗಿದ್ದು ಇಲ್ಲಿ ನೋಂದಣಿಯಾಗಲು ರೈತರು ತಮ್ಮ ಭೂಮಿಯ ಸಂಪೂರ್ಣ ವಿವರ, ಬ್ಯಾಂಕ್ ವಿವರ ಇವುಗಳನ್ನು ನೀಡಬೇಕು
● ನೋಂದಾಯಿಸಿಕೊಂಡ ರೈತರಿಗೆ ಗುರುತಿನ ಸಂಖ್ಯೆಯನ್ನು ನೀಡಲಾಗುತ್ತದೆ.
● ಫ್ರೂಟ್ಸ್ ತಂತ್ರಾಂಶವನ್ನು ಬಳಸಿ ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಇಲಾಖೆಯ ಫಲಾನುಭವಿಗಳಿಗೆ ಸರ್ಕಾರ ಹಣ ವರ್ಗಾವಣೆ ಮಾಡುತ್ತದೆ
● ಈಗಲೇ ಕೆಲವು ರೈತರು ತಮ್ಮ ಭೂಹಿಡುವಳಿ ಬಗ್ಗೆ ನೋಂದಾಯಿಸಿಕೊಂಡು ಸರ್ವೇ ನಂಬರ್ ಕೂಡ ಫ್ರೂಟ್ಸ್ ನಲ್ಲಿ ಭರ್ತಿ ಮಾಡಿರುತ್ತಾರೆ. ಅಂಥವರಿಗೆ ಎಕರೆಗೆ 250 ರಂತೆ ಗರಿಷ್ಠ 5 ಎಕರೆಗೆ 1250 ಗಳವರೆಗೆ ಸರ್ಕಾರ ಡೀಸೆಲ್ ಸಹಾಯಧನವಾಗಿ ನೀಡುತ್ತದೆ.
● ಫ್ರೂಟ್ಸ್ ನಲ್ಲಿ ನೋಂದಾವಣೆ ಮಾಡಿಕೊಳ್ಳದೆ ಇರುವ ರೈತರು, ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ನ ವಿವರ, ಪಹಣಿ ವಿವರ ಹಾಗೂ ಜಾತಿ ಪ್ರಮಾಣ ಪತ್ರ ವನ್ನು ಕೃಷಿ ಇಲಾಖೆ ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಕಚೇರಿಗಳಲ್ಲಿ ನೀಡಿ ಅರ್ಜಿ ಸಲ್ಲಿಸಬೇಕು. ಜೊತೆಗೆ ಭೂ ಹಿಡುವಳಿಯ ಸರ್ವೆ ನಂಬರ್ ಕೂಡ ದಾಖಲಿಸಬೇಕು. ಹೀಗೆ ಮಾಡಿದರೆ ರೈತ ಶಕ್ತಿ ಯೋಜನೆಯ ಅಡಿಯಲ್ಲಿ ಡೀಸೆಲ್ ಸಹಾಯಧನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.