ಕಾನೂನು ಪದವಿ ಪಡೆದವರಿಗೆ ಪ್ರತಿ ತಿಂಗಳು 10,000 ಸ್ಟೈ ಫಂಡ್ ನೀಡುತ್ತಿದ್ದಾರೆ ಆಸಕ್ತರು ಸಮಾಜ ಕಲ್ಯಾಣ ಇಲಾಖೆಗೆ ಅರ್ಜಿ ಸಲ್ಲಿಸಿ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಕಾನೂನು ಪದವೀಧರರು ಎರಡು ವರ್ಷಗಳ ಲಾ ಪ್ರಾಕ್ಟೀಸ್ ಮಾಡಲು ಸರ್ಕಾರದಿಂದ ಸಹಾಯಧನವನ್ನು ನೀಡಲಾಗುತ್ತಿದೆ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಈ ಸಹಾಯಧನವನ್ನು ನೀಡಲು ನಿರ್ಧರಿಸಲಾಗಿದ್ದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿ ಕಾನೂನು ಪದವಿ ಪಡೆದು ಲಾ ಪ್ರಾಕ್ಟೀಸ್ ಮಾಡುತ್ತಿರುವ ಅಭ್ಯರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now

ಈ ಕುರಿತಂತೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿರುವ ಸಮಾಜ ಕಲ್ಯಾಣ ಇಲಾಖೆಯು ತನ್ನ ನೋಟಿಫಿಕೇಶನ್ ನಲ್ಲಿ ಇದಕ್ಕೆ ಸಂಬಂಧಪಟ್ಟ ಹಾಗೆ ಇರುವ ಸಂಪೂರ್ಣ ವಿವರಗಳನ್ನು ಕೂಡ ತಿಳಿಸಿದೆ. ಆ ಆದೇಶದ ಪ್ರಕಾರ ಈ ಸ್ಟೈ ಫಂಡ್ ಪಡೆಯಲು ಇರುವ ನಿಬಂಧನೆಗಳು ಮತ್ತು ಮಾರ್ಗಸೂಚಿಗಳು ಈ ರೀತಿ ಇವೆ.

● ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ಮಾತ್ರ ಈ ಸಹಾಯಧನವನ್ನು ಪಡೆಯುವ ಅವಕಾಶ ಇರುತ್ತದೆ.
● ಕಾನೂನು ಪದವಿ ಪಡೆದು ಎರಡು ವರ್ಷಗಳ ಕಾಲ ಲಾ ಪ್ರಾಕ್ಟೀಸ್ ಮಾಡುವ ಅಭ್ಯರ್ಥಿಗಳು ಮಾತ್ರ ಈ ಸ್ಟೈಫಂಡ್ ಅನ್ನು ಪಡೆಯಬಹುದು.
● ಅರ್ಹ ಅಭ್ಯರ್ಥಿಗಳಿಗೆ ಮಾಸಿಕವಾಗಿ 10,000 ರೂಪಾಯಿಗಳ ಶಿಷ್ಯವೇತನವನ್ನು ಎರಡು ವರ್ಷಗಳ ಕಾಲ ನೀಡಲಾಗುತ್ತದೆ.
● ಇದಕ್ಕಾಗಿ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು. ಆಯ್ಕೆ ಆದ ಅಭ್ಯರ್ಥಿಗಳಿಗೆ ಮಾತ್ರ ಈ ಸೌಲಭ್ಯ ಸಿಗುತ್ತದೆ.

● ಕಾನೂನು ಪದವೀದರರು ಜುಲೈ 17 ರ ಒಳಗೆ ಅರ್ಜಿ ಸಲ್ಲಿಸಬೇಕು. ಸಮಾಜ ಕಲ್ಯಾಣ ಇಲಾಖೆಯ ವೆಬ್ಸೈಟ್ ಆದ www.sw.kar.nic.in ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಈ ಕುರಿತು ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಇಲಾಖೆ ವೆಬ್ಸೈಟ್ ನಲ್ಲಿರುವ ನೋಟಿಫಿಕೇಶನ್ ಓದಿ ತಿಳಿದುಕೊಳ್ಳಬಹುದು ಅಥವಾ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

● ಕಾನೂನು ಪದವಿ ಪಡೆದು ಎರಡು ವರ್ಷ ಪೂರೈಸಿದ್ದರೆ ಅಂತಹ ಅಭ್ಯರ್ಥಿಗಳ ಅಪ್ಲಿಕೇಶನ್ಗಳು ಮಾನ್ಯವಾಗುವುದಿಲ್ಲ, ಅಪ್ಲಿಕೇಶನ್ ಸಲ್ಲಿಸುವ ದಿನಾಂಕಕ್ಕೆ ಪದವಿ ಪಡೆದು ಎರಡು ವರ್ಷ ಮೀರಿರಬಾರದು ಎನ್ನುವ ಕಡ್ಡಾಯ ನಿಯಮ ಹಾಕಲಾಗಿದೆ.
● ಈ ರೀತಿ ಲಾ ಪ್ರಾಕ್ಟೀಸ್ ಮಾಡುವವರು ಅವರ ಜಿಲ್ಲೆಯಲ್ಲಿಯೇ ತರಬೇತಿ ಪಡೆಯಬೇಕು.
● ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ ಕೂಡ ಇದ್ದು ಅರ್ಜಿ ಸಲ್ಲಿಸುವ ಕಡೆ ದಿನಾಂಕಕ್ಕೆ ಸರಿಯಾಗಿ 40 ವರ್ಷಗಳನ್ನು ಮೀರಿರಬಾರದು.

● ಈ ಸ್ಟೈ ಫಂಡ್ ಪಡೆಯಲು ಅರ್ಹರಾಗುವ ಅಭ್ಯರ್ಥಿಗಳು ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್ ಬಳಿ ಅಥವಾ ಸರ್ಕಾರಿ ವಕೀಲರ ಬಳಿ ಅಥವಾ 20 ವರ್ಷಗಳಿಗೆ ಕಡಿಮೆ ಇಲ್ಲದಂತೆ ವಕೀಲ ವೃತ್ತಿಯಲ್ಲಿ ಸೇವೆ ಸಲ್ಲಿಸಿರುವ ನ್ಯಾಯವಾದಿಗಳ ಬಳಿ ತರಬೇತಿ ಪಡೆಯಬೇಕು ಮತ್ತು ಇದಕ್ಕೆ ಸಂಬಂಧಪಟ್ಟ ಹಾಗೆ ಒಂದು ಲಿಖಿತವಾಗಿ ಬರೆದ ಪತ್ರವನ್ನು ಅರ್ಜಿ ಸಲ್ಲಿಸುವ ವೇಳೆ ಕೊಡಬೇಕು.

● ಈ ರೀತಿ ಸಹಾಯಧನವನ್ನು ಪಡೆಯುವುದಕ್ಕೆ ಅರ್ಹರಾದ ಅಭ್ಯರ್ಥಿಗಳು ಮಧ್ಯಂತರದಲ್ಲಿ ತರಬೇತಿಯನ್ನು ಬಿಟ್ಟರೆ ಅವರು ಪಡೆದ ಸ್ಟೈ ಫಂಡ್ ಗೆ 10% ಸೇರಿಸಿ ವಾಪಸು ಕೊಡುವುದಾಗಿ ಮುಚ್ಚಳಿಕೆ ಬರೆದು ಕೊಡಬೇಕು.
● ತರಬೇತಿ ನಡುವೆ ರಾಜ್ಯ ಅಥವಾ ಕೇಂದ್ರ ಸರ್ಕಾರದಲ್ಲಿ ನೌಕರಿ ಪಡೆದರೆ ಸ್ಟೈ ಫಂಡ್ ಸ್ಥಗಿತಗೊಳಿಸಲಾಗುವುದು.
● ಸುಳ್ಳು ಮಾಹಿತಿ ಅಥವಾ ದಾಖಲೆಗಳನ್ನು ನೀಡಿ ಶಿಷ್ಯಾವೇತನ ಪಡೆದರೆ 10% ಬಡ್ಡಿಯ ಜೊತೆ ಪಡೆದ ಸ್ಟೈ ಫಂಡನ್ನು ಭೂ ಕಂದಾಯ ಬಾಕಿಯಂತೆ ವಸೂಲಿ ಮಾಡಲಾಗುತ್ತದೆ

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now