ಗೃಹಜ್ಯೋತಿ ಯೋಜನೆಯಲ್ಲಿ ದೊಡ್ಡ ಬದಲಾವಣೆ, ಅರ್ಜಿ ಸಲ್ಲಿಸಿದರೂ ಕೆಲವರಿಗೆ ವಿದ್ಯುತ್ ಭಾಗ್ಯವಿಲ್ಲ ಯಾಕೆ ಗೊತ್ತ.?

 

ಕರ್ನಾಟಕದಲ್ಲಿ ಈಗ ಕಾಂಗ್ರೆಸ್ ಪಕ್ಷವು ಘೋಷಿಸಿದ್ದ ಗ್ಯಾರಂಟಿ ಕಾರ್ಡ್ ಯೋಜನೆಗಳ ಜಾರಿ ಬಗ್ಗೆಯೇ ಹೆಚ್ಚು ಸುದ್ದಿ. ಕೊಟ್ಟ ಮಾತಿನಂತೆ ಸರ್ಕಾರವು ಕೂಡ ಪ್ರತಿ ಯೋಜನೆಗೂ ಮಾರ್ಗಸೂಚಿಯನ್ನು ಸೂಚಿಸಿ ಅರ್ಜಿಗಳನ್ನು ಆಹ್ವಾನಿಸುತ್ತಿದೆ. ಅದರಂತೆ ಗೃಹ ಜ್ಯೋತಿ ಯೋಜನೆಯಡಿ ಪ್ರತಿ ಕುಟುಂಬಕ್ಕೂ ಕೂಡ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಕೊಡುವುದಾಗಿ ಪ್ರಣಾಳಿಕೆಯಲ್ಲಿ ತಿಳಿಸಿದರು.

ಅದರಂತೆ ಅರ್ಜಿ ಆಹ್ವಾನ ಮಾಡಿ ಆ ಫಲಾನುಭವಿಗಳಿಗೆ ಆಗಸ್ಟ್ ತಿಂಗಳಿನಿಂದ ಅಂದರೆ ಜುಲೈ ತಿಂಗಳಲ್ಲಿ ಅವರು ಬಳಸಿದ ವಿದ್ಯುತ್ ಬಳಕೆಗೆ ಆಗಸ್ಟ್ ತಿಂಗಳಲ್ಲಿ ಬರುವ ವಿದ್ಯುತ್ ಅನ್ನು ಪಾವತಿ ಮಾಡುವ ಅಗತ್ಯ ಇಲ್ಲ, ಸರ್ಕಾರವೇ ಬರಿಸಲಿದೆ ಎಂದು ತಿಳಿಸಿದೆ. ಆದರೆ ಈ ಯೋಜನೆಯಡಿ ಅರ್ಜಿ ಸಲ್ಲಿಸಿ ನೋಂದಣಿಯಾಗಿದ್ದರು ಕೆಲವರಿಗೆ ಈ ಉಚಿತ ವಿದ್ಯುತ್ ಭಾಗ್ಯ ಇರುವುದಿಲ್ಲ.

● ಮೊದಲನೆಯದಾಗಿ ಯಾರು ತಮ್ಮ ವಿದ್ಯುತ್ ಬಿಲ್ ನಲ್ಲಿ ಹಳೆ ಬಾಕಿ ಉಳಿಸಿಕೊಂಡಿರುತ್ತಾರೆ ಅವರಿಗೆ ಗೃಹಜ್ಯೋತಿ ಯೋಜನೆಯ ಉಚಿತ ವಿದ್ಯುತ್ ಸೌಲಭ್ಯ ಸಿಗುವುದಿಲ್ಲ, ಹಾಗಾಗಿ ಸರ್ಕಾರ ಘೋಷಿಸಿರುವಂತೆ ನಿಮಗೆ ಜುಲೈ ತಿಂಗಳಲ್ಲಿ ಮಾಡಿದ ವಿದ್ಯುತ್ ಬಳಕೆಗೆ ಆಗಸ್ಟ್ ತಿಂಗಳಲ್ಲಿ ಸರ್ಕಾರ ವಿದ್ಯುತ್ ಪಾವತಿ ಮಾಡಬೇಕು.

ಅಂದರೆ ನೀವು ಜೂನ್ ತಿಂಗಳವರೆಗೆ ಬಳಸಿದ ವಿದ್ಯುತ್ ಬಿಲನ್ನು ಬಾಕಿ ಉಳಿಸಿಕೊಳ್ಳದೆ ಪಾವತಿ ಮಾಡಬೇಕು ಇದಕ್ಕೆ ಸರ್ಕಾರ ಮೂರು ತಿಂಗಳವರೆಗೆ ಸಮಯಾವಕಾಶ ಕೊಟ್ಟಿದೆ. ಸೆಪ್ಟೆಂಬರ್ 30ರ ವರೆಗೆ ವಿದ್ಯುತ್ ಹಿಂಬಾಕಿಯನ್ನು ಪಾವತಿ ಮಾಡಿದವರಿಗೆ ಮಾತ್ರ ಗೃಹಜೋತಿ ಯೋಜನೆಯ ಫಲಾನುಭವಿಗಳಾಗುವ ಭಾಗ್ಯ ದೊರೆಯಲಿದೆ.

● ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ತಿಳಿಸದೇ ಇದ್ದರೂ ಜುಲೈ ತಿಂಗಳಿನಿಂದಲೇ ವಿದ್ಯುತ್ ಉಚಿತವಾಗಿ ಪಡೆಯಬೇಕು ಎಂದರೆ ಜುಲೈ 25ರ ಒಳಗೆ ನೋಂದಣಿ ಮಾಡಿಕೊಳ್ಳಬೇಕು.ಎಂದು ಸರ್ಕಾರ ತಿಳಿಸಿದೆ. ಯಾರು ಜುಲೈ 25ರ ಒಳಗಡೆ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ ನೋಂದಣಿ ಆಗಿರುತ್ತಾರೆ ಆ ಫಲಾನುಭವಿಗಳಿಗೆ ಆಗಸ್ಟ್ ತಿಂಗಳಲ್ಲಿ ನೀಡುವ ಬಿಲ್ ನಲ್ಲಿ ಗೃಹಜ್ಯೋತಿ ಯೋಜನೆಯ ಸೌಲಭ್ಯ ಸಿಗಲಿದೆ.

ಒಂದು ವೇಳೆ ಜುಲೈ 25ರ ನಂತರ ಆಗಸ್ಟ್ 25ರ ವರೆಗೆ ನೋಂದಣಿ ಮಾಡಿಕೊಂಡರೆ ಅವರಿಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಉಚಿತ ವಿದ್ಯುತ್ ಬಗ್ಗೆ ದೊರೆಯಲಿದೆ. ಪ್ರತಿ ತಿಂಗಳ 25ನೇ ತಾರೀಖಿನಿಂದ ಮುಂದಿನ ತಿಂಗಳ 25ನೇ ತಾರೀಕು ಬಿಲ್ಲಿಂಗ್ ಅವಧಿ ಆಗಿರುತ್ತದೆ ಆದ್ದರಿಂದ ಈ ಒಂದು ನಿಯಮವನ್ನು ಸರ್ಕಾರ ಜಾರಿಗೆ ತಂದಿದೆ.

● ಮುಖ್ಯವಾಗಿ ಈ ಯೋಜನೆಯ ಫಲಾನುಭವಿಗಳು ಆಗಬೇಕು ಎಂದು ಅರ್ಜಿ ಸಲ್ಲಿಸಿದ್ದರೂ ಕೂಡ ಅವರ ವಿದ್ಯುತ್ ಬಳಕೆ 200 ಯೂನಿಟ್ ಒಳಗೆ ಇರಬೇಕು ಅಂತವರಿಗೆ ಮಾತ್ರ ಈ ಯೋಜನೆಯ ಪ್ರಯೋಜನ ಸಿಗಲಿದೆ. ಮುಖ್ಯವಾಗಿ ಸರ್ಕಾರ ಸೂಚಿಸಿರುವಂತೆ ಈಗಾಗಲೇ ವಾರ್ಷಿಕವಾಗಿ ಬಳಸಿರುವ ವಿದ್ಯುತ್ ಬಿಲ್ ಜೊತೆಗೆ 10% ಮಾತ್ರ ಉಚಿತವಾಗಿ ನೀಡಲಿದೆ ಹೆಚ್ಚುವರಿಗಾಗಿ ಬಳಸಿದ ವಿದ್ಯುತ್ ಗೆ ಮಾಲೀಕರೇ ವಿದ್ಯುತ್ ಬಿಲ್ ಕಟ್ಟಬೇಕಾಗುತ್ತದೆ.

ಆದರೆ 200 ಯೂನಿಟ್ ಗಡಿ ದಾಟಿದರೆ ಸಂಪೂರ್ಣ ವಿದ್ಯುತ್ ಬಿಲ್ಲನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿಸಿದೆ. ಆದ್ದರಿಂದ ವಿಳಂಬ ಮಾಡದೆ ಶೀಘ್ರವೇ ಈ ಯೋಜನೆಗೆ ಸೇವಾ ಸಿಂಧು ಪೋರ್ಟಲ್ ಮೂಲಕ ಅಥವಾ ವಿದ್ಯುತ್ ಕಚೇರಿಗಳಲ್ಲಿ, ಗ್ರಾಮ ಪಂಚಾಯಿತಿಗಳಲ್ಲಿ ಆಫ್ಲೈನ್ ಮೂಲಕ ಕೂಡ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಿ.

Leave a Comment

%d bloggers like this: