ಕರ್ನಾಟಕ ರಾಜ್ಯ ಸರ್ಕಾರವು (Karnataka Government) ಮಹಿಳೆಯರನ್ನು ಆರ್ಥಿಕವಾಗಿ ಸಬಲರಾಗಿಸುವ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳಲ್ಲಿ (Guarantee Schemes) ಬಹುಪಾಲನ್ನು ಮಹಿಳೆಯರಿಗಾಗಿ ಮೀಸಲಿಟ್ಟಿದೆ.
ಶಕ್ತಿ ಯೋಜನೆಯಡಿ (Shakti yojane) ವಿದ್ಯಾರ್ಥಿನಿಯರು ಸೇರಿದಂತೆ ಮಹಿಳೆಯರಿಗೆ ಉಚಿತ ಪ್ರಯಾಣ, ಗೃಹಲಕ್ಷ್ಮಿ ಯೋಜನೆ (Gruhalakshmi Scheme) ಮೂಲಕ ಪ್ರತಿ ತಿಂಗಳು ಕೂಡ ಕುಟುಂಬ ನಿರ್ವಹಣೆಗಾಗಿ ಕುಟುಂಬದ ಯಜಮಾನಿ ಮಹಿಳೆಗೆ 2,000ರೂ. ಸಹಾಯಧನ ನೀಡಲು ಆದೇಶಿಸಿದೆ.
ಸರ್ಕಾರವು ಗ್ಯಾರಂಟಿಯೇತರವಾಗಿ ಕೂಡ ಮಹಿಳೆಯರಿಗಾಗಿ ಇನ್ನತರ ಕಲ್ಯಾಣ ಯೋಜನೆಗಳ ನೆರವು ನೀಡಿದೆ. ಈಗ ಆ ಪಟ್ಟಿಗೆ ಮತ್ತೊಂದು ಯೋಜನೆ ಕೂಡ ಸೇರ್ಪಡೆಯಾಗುತ್ತಿತ್ತು, ಕರ್ನಾಟಕ ಕಾಯಕ ಯೋಜನೆ 2023 (Karnataka Kayaka yojane – 2023) ಎನ್ನುವ ವಿಶೇಷ ಯೋಜನೆಯಡಿ ಮಹಿಳೆಯರಿಗೆ ಅವರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆಗಾಗಿ ಗರಿಷ್ಠ 5 ಲಕ್ಷದವರೆಗೆ ಬಡ್ಡಿ ರಹಿತವಾಗಿ ಸಾಲ ನೀಡಲು ಮುಂದಾಗಿದೆ. ಅದರ ಕುರಿತ ವಿವರಗಳು ಇಲ್ಲಿದೆ ನೋಡಿ.
ಗ್ರಾಮೀಣ ಅಥವಾ ಪಟ್ಟಣ ಪ್ರದೇಶ ಅಥವಾ ನಗರ ಪ್ರದೇಶಗಳಲ್ಲೇ ಆಗಲಿ ಮಹಿಳೆಯರು ಗುಂಪಾಗಿ ನಡೆಸಲಾಗುವ ಸ್ತ್ರೀ ಶಕ್ತಿ ಸಂಘಗಳು (SHG) ಅಥವಾ ಸ್ವಸಹಾಯ ಸಂಘಗಳಲ್ಲಿ ಮಹಿಳೆಯರ ಆರ್ಥಿಕ ಶಕ್ತಿ ಉತ್ತಮಗೊಳ್ಳುವಂತಹ ಅನೇಕ ಅನುಕೂಲತೆಗಳು ಇವೆ. ಯಾಕೆಂದರೆ ಈ ಗುಂಪುಗಳಲ್ಲಿ ಮಹಿಳೆಯರು ತಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಳ್ಳಲು ಅವಕಾಶಗಳಿವೆ ಹಾಗೂ ಅದಕ್ಕೆ ಪೂರಕವಾಗಿ ಹಣಕಾಸಿನ ನೆರವಿಗಾಗಿ ಬ್ಯಾಂಕ್ ಗಳಿಂದ ಸಾಲ ಸೌಲಭ್ಯವನ್ನು ಪಡೆಯಬಹುದು.
ಇದುವರೆಗೂ ಅವರು ಉಳಿತಾಯ ಮಾಡಿದ ಹಣವನ್ನು ಸಾಲದ ರೂಪದಲ್ಲಿ ಪಡೆದು ತಮ್ಮ ಹಣವನ್ನು ಬೆಳೆಸುತ್ತಿದ್ದರು, ಈಗ ಸರ್ಕಾರದ ವತಿಯಿಂದ ಕೂಡ ಈ ಮಹಿಳೆಯರಿಗೆ ಸಾಲ ಸೌಲಭ್ಯ ಸಿಗುತ್ತದೆ. ಸ್ವಸಹಾಯ ಹಾಗೂ ಸ್ತ್ರೀ ಶಕ್ತಿ ಸಂಘಗಳಲ್ಲಿ ಗುರುತಿಸಿಕೊಂಡು ಉದ್ಯಮ ಮಾಡುವ ಮಹಿಳೆಯರಿಗೆ ಕಾಯಕಯೋಜನೆ ಮೂಲಕ ಸಹಕಾರಿ ಬ್ಯಾಂಕ್ ಗಳಿಂದ ಬಡ್ಡಿರಹಿತ ಸಾಲ ಸೌಲಭ್ಯ (0% intrest loan) ಸಿಗುತ್ತಿದೆ.
ಕರ್ನಾಟಕದ ಮಹಿಳೆಯರಾಗಿರುವ, ಕರ್ನಾಟಕದ ನಿವಾಸಿಗಳೂ ಆಗಿರುವ ಮತ್ತು ಸ್ವ ಸಹಾಯ ಅಥವಾ ಸ್ತ್ರೀ ಶಕ್ತಿ ಸಂಘದ ಗುಂಪಿನಲ್ಲಿ ಇರುವ ಮಹಿಳೆಯರು ಒಟ್ಟಾಗಿ ಸ್ತ್ರೀ ಶಕ್ತಿ ಸಂಘ ಅಥವಾ ಸ್ವಸಹಾಯದ ಸಂಘದ ಮೂಲಕ ಈ ಸಾಲ ಸೌಲಭ್ಯವನ್ನು ಪಡೆಯಬಹುದು. ಇದಕ್ಕೆ ಪೂರಕವಾದ ದಾಖಲೆಗಳನ್ನು ಒದಗಿಸಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ಮಹಿಳೆಯರ ಗುಂಪಿಗೆ ಈ ಸಾಲ ಸೌಲಭ್ಯದ ನೆರವು ಸಿಗುತ್ತದೆ.
ಈ ಹಣವನ್ನು ಉಪಯೋಗಿಸಿಕೊಂಡು ಅವರು ತಮ್ಮ ಕೌಶಲ್ಯವನ್ನು ಅಭಿವೃದ್ಧಿ ಮಾಡಿಕೊಳ್ಳಬಹುದು ಮತ್ತು ಇವರು ತಯಾರಿಸುವ ಉತ್ಪನ್ನಗಳಿಗೆ ಸರ್ಕಾರವೇ ಮಾರುಕಟ್ಟೆ ಕೂಡ ಒದಗಿಸಿಕೊಡುತ್ತದೆ ಎನ್ನುವುದು ಇನ್ನಷ್ಟು ವಿಶೇಷವಾದ ವಿಷಯವಾಗಿದೆ. ಈ ರೀತಿಯಾಗಿ ಕಡಿಮೆ ಬಡ್ಡಿ ದರದಲ್ಲಿ ತಕ್ಷಣವೇ ಸಾಲ ಸೌಲಭ್ಯ ಕಲ್ಪಿಸಿ ಕೊಡುವುದು ಮತ್ತು ಉತ್ಪನ್ನಗಳ ಖರೀದಿ ಕೂಡ ಮಾಡುವ ಸರ್ಕಾರದ ನಿರ್ಧಾರವು ಸ್ವಸಹಾಯ ಗುಂಪಿನಲ್ಲಿ ತೊಡಗಿಕೊಂಡಿರುವ ಮಹಿಳೆಯರ ಪಾಲಿಗೆ ವರದಾನವಾಗಿದೆ.
2018ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಕುಮಾರಸ್ವಾಮಿಯವರು (Kumaraswamy) ಈ ಯೋಜನೆಯನ್ನು ಜಾರಿಗೆ ತಂದಿದ್ದರು. ಬಳಿಕ ಎಲ್ಲಾ ಸರ್ಕಾರಗಳು ಕೂಡ ಯಶಸ್ವಿಯಾಗಿ ಯೋಜನೆಯನ್ನು ಮುಂದುವರಿಸಿಕೊಂಡು ಬಂದಿದ್ದವು. ಅದೇ ರೀತಿ 2023-24ನೇ ಸಾಲಿನಲ್ಲಿಯೂ ಕೂಡ ಗ್ಯಾರೆಂಟಿಯೇತರ ಯೋಜನೆಯಾಗಿ ಕರ್ನಾಟಕ ಕಾಯಕ ಯೋಜನೆ 2023 ಯೋಜನೆ ಮೂಲಕ 3000 ಸ್ವಸಹಾಯ ಗುಂಪುಗಳಿಗೆ ಈ ರೀತಿ ಸಾಲ ಸೌಲಭ್ಯ ಒದಗಿಸಲು ಸರ್ಕಾರ ನಿರ್ಧಾರ ಮಾಡಿದೆ. ಇದಕ್ಕಾಗಿ ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಕೂಡ ಹೇಳಿದ್ದು ಅದರ ಅಧಿಕೃತ ವೆಬ್ಸೈಟ್ ಗಳು ತಕ್ಷಣದಲ್ಲಿ ಓಪನ್ ಕೂಡ ಆಗಲಿವೆ.