ರೇಷನ್ ಕಾರ್ಡ್ (Ration Card) ಒಂದು ಪ್ರಮುಖ ದಾಖಲೆಯಾಗಿದೆ. ನಮ್ಮ ದೇಶದಲ್ಲಿ ಎರಡು ವಿಭಾಗದ ರೇಷನ್ ಕಾರ್ಡ್ ಚಾಲ್ತಿಯಲ್ಲಿದೆ. ಬಡತನ ರೇಖೆಗಿಂತ ಮೇಲಿರುವ ಕುಟುಂಬಗಳಿಗೆ APL ರೇಷನ್ ಕಾರ್ಡ್ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ BPL ರೇಷನ್ ಕಾರ್ಡ್ ಮತ್ತು ಅತಿ ಬಡವರಿಗೆ ಅಂತ್ಯೋದಯ ರೇಷನ್ ಕಾರ್ಡ್ ವಿತರಿಸಲಾಗುತ್ತಿದೆ.
ಸದ್ಯಕ್ಕಿಗ ಕರ್ನಾಟಕದಲ್ಲಿ ಜಾರಿಯಾಗಿರುವ ಗ್ಯಾರೆಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ (Gruhalakshmi and Annabhagya) ಫಲಾನುಭವಿಗಳಾಗಲು ಕೂಡ ಕಡ್ಡಾಯವಾಗಿ ರೇಷನ್ ಕಾರ್ಡ್ ಹೊಂದಿರಲೇಬೇಕು. ಗ್ಯಾರೆಂಟಿ ಯೋಜನೆಗಳು ಮಾತ್ರವಲ್ಲದೇ ಗ್ಯಾರಂಟಿಯೇತರವಾಗಿ ಕೂಡ ಸರ್ಕಾರದ ಯಾವುದೇ ಯೋಜನೆಗಳ ಫಲಾನುಭವಿಗಳ ಆಗಬೇಕು ಎಂದರೆ ಆಗಲು ಸಹ ರೇಷನ್ ಕಾರ್ಡ್ ಇರಬೇಕು.
ಇದರಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಸರ್ಕಾರದಿಂದ ಹೆಚ್ಚಿನ ಅನುಕೂಲತೆಗಳಿವೆ. ಉದಾಹರಣೆಗೆ ಹೇಳುವುದಾದರೆ ಒಬ್ಬ ರೈತನಿಗೆ ತನ್ನ ಕೃಷಿ ಚಟುವಟಿಕೆ ಸರ್ಕಾರದಿಂದ ಯಾವುದೇ ನೆರವು ಪಡೆದುಕೊಳ್ಳಬೇಕು ಎಂದರು ಆತ ಜಮೀನಿನ ದಾಖಲೆಗಳ ಜೊತೆ ತಾನೊಬ್ಬ ಬಡತನ ರೇಖೆಗಿಂತ ಕೆಳಗಿರುವ ಕುಟುಂಬ ವರ್ಗಕ್ಕೆ ಸೇರಿದವರು ಎಂದು ಸಾಕ್ಷಿ ನೀಡುವುದು ಮುಖ್ಯವಾಗಿರುತ್ತದೆ.
ಇದನ್ನು ಹೊರತುಪಡಿಸಿ ದೇಶದ ಎಲ್ಲಾ ನಾಗರಿಕರಿಗೂ ತಿಳಿದಿರುವಂತೆ ಪಡಿತರ ಚೀಟಿ ಮೂಲಕ ನಾವು ಸರ್ಕಾರದಿಂದ ಉಚಿತ ಪಡಿತರ ಅಥವಾ ಅತಿ ಕಡಿಮೆ ಬೆಲೆಗೆ ಆಹಾರ ಧಾನ್ಯಗಳನ್ನು ಪಡೆದುಕೊಳ್ಳಬಹುದು. ಈಗಂತೂ ದೇಶದಲ್ಲಿ ಕಡ್ಡಾಯ ಆಹಾರ ನೀತಿ ಮತ್ತು ಕರ್ನಾಟಕದಲ್ಲಿ ಅನ್ನಭಾಗ್ಯ ಯೋಜನೆ ಅಡಿ ಗರಿಷ್ಠ 10Kg ಅಕ್ಕಿ ನೀಡಲು ಪ್ರಯತ್ನ ಮಾಡಲಾಗುತ್ತಿದೆ.
ಆದರೆ ಅನೇಕರು ಈ ರೀತಿ ರೇಷನ್ ಕಾರ್ಡ್ ಹೊಂದಿದ್ದರು ಕೂಡ ಉಚಿತ ಪಡಿತರವನ್ನು ಪಡೆಯದೆ ನಿರ್ಲಕ್ಷ ಮಾಡಿರುತ್ತಾರೆ
ಇವರು ಉಚಿತ ಪಡಿತರದ ವ್ಯವಸ್ಥೆ ಬಿಟ್ಟು ಬೇರೆ ಕಾರಣಗಳಿಗಾಗಿ ರೇಷನ್ ಕಾರ್ಡ್ ಪಡೆದಿರುತ್ತಾರೆ. ಈಗ ಇಂತಹ ಕಾಡುಗಳನ್ನು ಪತ್ತೆಹಚ್ಚಲು ಸರ್ಕಾರ ಒಂದು ಮಹತ್ವವಾದ ನಿರ್ಧಾರ ಕೈಗೊಂಡಿದೆ.
ಅದೇನೆಂದರೆ ಯಾರು ಆರು ತಿಂಗಳಿನಿಂದ ಸರ್ಕಾರದಿಂದ ಉಚಿತ ಪಡಿತರ ಪಡೆದಿಲ್ಲ ಅವರಿಗೆ BPL ರೇಷನ್ ಕಾರ್ಡ್ ಅವಶ್ಯಕತೆ ಇರುವುದಿಲ್ಲ ಹಾಗಾಗಿ ಇಂತಹ ಕಾರ್ಡ್ ಗಳನ್ನು ಕ್ಯಾನ್ಸಲ್ ಮಾಡಲು (ration card cancel) ಸರ್ಕಾರ ನಿರ್ಧಾರ ಮಾಡಿದೆ.
ಈ ನಿಟ್ಟಿನಲ್ಲಿ ರಾಜ್ಯದಲ್ಲಿ 1.12 ಕೋಟಿ ಬಡತನ ರೇಖೆಗಿಂತ ಕೆಳಗಿರುವ ರೇಷನ್ ಕಾರ್ಡ್ ಗಳು ಇದ್ದು ಇದರಲ್ಲಿ 3,20,000 ರೇಷನ್ ಕಾರ್ಡ್ ಗಳು ರದ್ದಾಗುವ ಸಾಧ್ಯತೆ ಇದೆ ಎಂದು ಆಹಾರ ಇಲಾಖೆ ಮೂಲಗಳು ಹೇಳುತ್ತಿವೆ. ಈ ರೀತಿ ಅವಶ್ಯಕತೆ ಇಲ್ಲದವರ ಇರುವವರಿಂದ ರೇಷನ್ ಕಾರ್ಡ್ ಕ್ಯಾನ್ಸಲ್ ಮಾಡುವುದರಿಂದ ಸರ್ಕಾರಕ್ಕೆ ಪ್ರತಿ ತಿಂಗಳಿಗೆ ಗ್ಯಾರಂಟಿ ಯೋಜನೆಗಳಲ್ಲೇ 60 ಕೋಟಿ ಹಣ ಉಳಿತಾಯವಾಗಲಿದೆ ಎಂದು ಸಹ ಲೆಕ್ಕಾಚಾರ ಹಾಕಲಾಗಿದೆ.
ಇದರಲ್ಲಿ ಪ್ರಮುಖವಾಗಿ ತಿಳಿದುಕೊಳ್ಳಲೇ ಬೇಕಾದ ಮತ್ತೊಂದು ವಿಚಾರವೇನೆಂದರೆ ಒಂದು ಬಾರಿ ಈ ರೀತಿ ರೇಷನ್ ಕಾರ್ಡ್ ಈ ಕಾರಣದಿಂದಾಗಿ ಕ್ಯಾನ್ಸಲ್ ಆದರೆ ಮತ್ತೆ ಆ ಕುಟುಂಬಕ್ಕೆ ಮರಳಿ BPL ರೇಷನ್ ಕಾರ್ಡ್ ಪಡೆದುಕೊಳ್ಳಲು ಅವಕಾಶ ಇರುವುದಿಲ್ಲ.
ಒಂದು ವೇಳೆ 60 ವರ್ಷ ವಯಸ್ಸಿಗಿಂತ ಮೇಲ್ಪಟ್ಟರಿದ್ದು ಅವರು ಸರ್ಕಾರದಿಂದ ವೃದ್ಯಾಪ್ಯ ವೇತನ ಪಡೆದುಕೊಳ್ಳುವ ಕಾರಣಕ್ಕಾಗಿ BPL ರೇಷನ್ ಕಾರ್ಡ್ ಪಡೆಯಲು ಬಯಸಿದ್ದರೆ ಅವರಿಗೆ ಮಾತ್ರ ವಿನಾಯಿತಿ ನೀಡಲಾಗುತ್ತದೆ. ಇನ್ನುಳಿದಂತೆ ಈಗ ಯಾರೆಲ್ಲ ರೇಷನ್ ಕಾರ್ಡ್ ಪಡೆಯದೆ ಕ್ಯಾನ್ಸಲ್ ಆಗಿದ್ದರೆ ಅವರೆಲ್ಲರೂ ಪರ್ಪನೆಂಟಾಗಿ ಬಡತನ ರೇಖೆಗಿಂತ ಕೆಳಗಿರುವ ರೇಷನ್ ಕಾರ್ಡ್ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ.