ನೂತನ ಸರ್ಕಾರವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳ (Guarantee Scheme) ಪೈಕಿ ಮಹಿಳೆಯರ ಪಾಲಿಗೆ ಗೃಹಲಕ್ಷ್ಮಿ ಯೋಜನೆಯು (Gruhalakshmi) ವಿಶೇಷ ಯೋಜನೆಯಾಗಿದೆ. ಈ ಯೋಜನೆ ಮೂಲಕ ಪ್ರತಿ ತಿಂಗಳು ಕುಟುಂಬದ ಯಜಮಾನಿ ಮಹಿಳೆ 2000 ರೂಪಾಯಿ ಸಹಾಯಧನವನ್ನು ಆಕೆಯ ಬ್ಯಾಂಕ್ ಖಾತೆಗೆ ಪಡೆಯಬಹುದು.
ಜುಲೈ ತಿಂಗಳ 19ರಿಂದ ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ, ಹಾಗೆಯೇ ಆಗಸ್ಟ್ 30ರಂದು ಮೊದಲ ಕಂತಿನ ಹಣ ಕೂಡ ವರ್ಗಾವಣೆ ಆಗಿದೆ. ಅರ್ಜಿ ಸಲ್ಲಿಸಿದ ಮಹಿಳೆಯರು ಎರಡು ಕಂತುಗಳ ಹಣ ಪಡೆದು ಈಗ ಮೂರನೇ ಕಂತಿನ ಹಣದ ನಿರೀಕ್ಷೆಯಲ್ಲಿದ್ದಾರೆ, ಮೊದಲನೇ ಕಂತಿನ ಹಣ ಪಡೆಯಲಾಗದಿದ್ದವರು ತಮ್ಮ ಸಮಸ್ಯೆಯನ್ನು ತಿದ್ದುಪಡಿ ಮಾಡಿಸಿಕೊಂಡ ನಂತರ ಎರಡನೇ ಕಂತಿನ ಹಣವನ್ನು ಪಡೆದಿದ್ದಾರೆ.
ಆದರೆ ಇನ್ನು ಅನೇಕ ಮಹಿಳೆಯರಿಗೆ ಅರ್ಜಿ ಸಲ್ಲಿಸಿದ್ದರೂ ಕೂಡ ಒಂದು ಕಂತಿನ ಹಣವೂ ಬಂದಿಲ್ಲ ಈ ರೀತಿ ಸಮಸ್ಯೆ ಎದುರಿಸುತ್ತಿರುವವರಿಗೆ ಸಹಾಯ ಮಾಡುವ ಉದ್ದೇಶದಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು (KWCWD) ಒಂದು ನಿರ್ಧಾರಕ್ಕೆ ಬಂದಿದೆ.
ಅದೇನೆಂದರೆ ಯಾರೆಲ್ಲಾ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರು ಮೊದಲನೇ ಕಂತಿನ ಹಣ ಕೂಡ ಪಡೆಯಲು ಸಾಧ್ಯವಾಗಿಲ್ಲ ಹಾಗೂ ಅವರಿಗೆ ಅವರ ಸಮಸ್ಯೆ ಏನು ಎಂದು ತಿಳಿದು ಬಂದಿಲ್ಲ ಅಥವಾ ಸಮಸ್ಯೆ ಇಲ್ಲದಿದ್ದರೂ ಹಣ ಪಡೆಯಲಾಗಿಲ್ಲ ಅಂತವರು ತಮ್ಮ ತಾಲೂಕು ವ್ಯಾಪ್ತಿಗೆ ಬರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ CDPO ಅಧಿಕಾರಿಗಳಿಗೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ್ ಮತ್ತು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಅರ್ಜಿ ಸ್ವೀಕೃತಿ ಪತ್ರದ ಪ್ರತಿಗಳನ್ನು (Submit ration card, adhar card, bank account, aknowledgment copies to CDPO) ಸಲ್ಲಿಸಬೇಕು.
CDPO ಅಧಿಕಾರಿಗಳ ಬಳಿ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದ್ದ ಫಲಾನುಭವಿಗಳ ಪಟ್ಟಿ ಇರುವುದರಿಂದ ಅವರು ನಿಮ್ಮ ದಾಖಲೆಗಳು ಹಾಗೂ ಆ ಪಟ್ಟಿಯನ್ನು ಪರಿಶೀಲಿಸಿ ಸಮಸ್ಯೆ ಏನೆಂದು ನಿಮಗೆ ತಿಳಿಸುತ್ತಾರೆ ಮತ್ತು ಅದನ್ನು ಪರಿಹರಿಸಿಕೊಳ್ಳುವ ಮಾರ್ಗವನ್ನು ಕೂಡ ಸೂಚಿಸುತ್ತಾರೆ.
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಆಗದೆ ಇರುವುದಕ್ಕೆ ಕಾರಣಗಳು:-
● ಕುಟುಂಬದ ಹಿರಿಯ ಸ್ಥಾನದಲ್ಲಿರುವ ಮಹಿಳೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಅರ್ಜಿ ಸಲ್ಲಿಸಿರುವ ಮಹಿಳೆಯು ತನ್ನ ಬ್ಯಾಂಕ್ ಖಾತೆಯನ್ನು ಆಕ್ಟಿವ್ (Bank account active) ಆಗಿ ಇಟ್ಟುಕೊಳ್ಳಬೇಕಾಗುತ್ತದೆ. ಮತ್ತು ಮಹಿಳೆಯ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮತ್ತು NPCI ಮ್ಯಾಪಿಂಗ್ (adhar seeding NPCI Mapping) ಆಗಿರಬೇಕು. ಆಗಿದ್ದಾಗ ಮಾತ್ರ DBT ಮೂಲಕ ಹಣ ಬರಲು ಸಾಧ್ಯವಾಗುತ್ತದೆ. ಇದೇ ಕಾರಣದಿಂದ ಲಕ್ಷಾಂತರ ಮಹಿಳೆಯರು ಗೃಹಲಕ್ಷ್ಮಿ ಯೋಜನೆ ಹಣದಿಂದ ವಂಚಿತರಾಗಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
● ರೇಷನ್ ಕಾರ್ಡ್ ಇ-ಕೆವೈಸಿ ಅಪ್ಡೇಟ್ (e-kyc update) ಮಾಡಿಸದ ಕಾರಣದಿಂದ ಕೂಡ ಗೃಹಲಕ್ಷ್ಮಿ ಯೋಜನೆ ಹಣ ಬರದೇ ಇರಬಹುದು.
● ಬಹು ಮುಖ್ಯವಾದ ವಿಷಯ ಏನೆಂದರೆ, ಆಧಾರ್ ಕಾರ್ಡ್ ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಅಕೌಂಟ್ ಮೂರರಲ್ಲೂ ಕೂಡ ಫಲಾನುಭವಿಯ ಹೆಸರು ಒಂದೇ ರೀತಿ ಇರಬೇಕು, ಹೆಸರಿನಲ್ಲಿ ವ್ಯತ್ಯಾಸಗಳಿದ್ದರೆ (mismatch) ಅಂತಹ ಫಲಾನುಭವಿಗಳಿಗೂ ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆ ಆಗುವುದಿಲ್ಲ.
● ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದಾಗ ಅರ್ಜಿ ಸಲ್ಲಿಕೆ ಯಶಸ್ವಿಯಾಗಿದೇ (application failed) ಇರುವುದು ಕೂಡ ಒಂದು ಕಾರಣವಾಗಿದೆ.