ಸಂಖ್ಯಾಶಾಸ್ತ್ರವನ್ನು ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚು ನಂಬುತ್ತಾರೆ. ಸಂಖ್ಯಾಶಾಸ್ತ್ರ ನಂಬುವವರ ಹಾಗೂ ಸಂಖ್ಯಾಶಾಸ್ತ್ರಜ್ಞರ ವಾದವೇನೆಂದರೆ ಈಗಿನ ಕಾಲದಲ್ಲಿ ಜೀವನ ನಡೆಯುತ್ತಿರುವುದೇ ನಂಬರ್ ಇಂದ. ಉದಾಹರಣೆಗೆ ನಾವು ಶಾಲೆಗೆ ಸೇರಿದರೂ ಒಂದು ರಿಜಿಸ್ಟರ್ ನಂಬರ್ ಇರುತ್ತದೆ.
ಪ್ರತಿ ವ್ಯವಹಾರಕ್ಕೆ ಆಧಾರ್ ನಂಬರ್ ಕೇಳುತ್ತಾರೆ, ನಮ್ಮ ಮೊಬೈಲ್ ನಂಬರ್ ನಮ್ಮ ಪ್ರಮುಖ ವಿಳಾಸವಾಗಿ ಹೋಗಿದೆ. ಗಳಿಸುವ ಸಂಬಳವೂ ಕೂಡ ನಂಬರ್, ಸಮಯ ಎಷ್ಟಾಗಿದೆ ಎಂದರೂ ನಂಬರ್ ಮೂಲಕ ಹೇಳಬೇಕು. ಹೀಗಾಗಿ ನಂಬರ್ ಇಂದಲೇ ಪ್ರಪಂಚ ನಡೆಯುತ್ತಿರುವುದರಿಂದ ನಂಬರ್ ಗೆ ಬಹಳ ದೊಡ್ಡ ಶಕ್ತಿ ಇದೆ.
ಅದನ್ನು ಫಾಲೋ ಮಾಡುವುದಂತ ಬಹಳ ಒಳ್ಳೆಯ ಪ್ರಭಾವ ನಮ್ಮ ಜೀವನದ ಮೇಲೆ ಬೀಳುತ್ತದೆ, ಇದರಲ್ಲಿ ಎಡವುದರಿಂದ ಅಷ್ಟೇ ಕ’ಷ್ಟವನ್ನು ಪಡಬೇಕಾಗುತ್ತದೆ ಎಂದು ಹೇಳುತ್ತಾರೆ. ಇದೊಂದು ಬೃಹತ್ ವಿಷಯವಾಗಿದ್ದು ಇದರಲ್ಲಿ ಮೊಬೈಲ್ ಸಂಖ್ಯೆ ಆಧಾರಿತ ಕೆಲ ಪ್ರಮುಖ ಅಂಶಗಳ ಬಗ್ಗೆ ನಾವು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಪಂಚರತ್ನಗಳ ಬಗ್ಗೆ ಕೇಳುದ್ದೇವೆ.
ಸಂಖ್ಯಾಶಾಸ್ತ್ರದಲ್ಲಿ ಹೇಳಿರುವ ಪಂಚ ರತ್ನಗಳೆಂದರೆ ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ, ವೆಹಿಕಲ್ ನಂಬರ್, ಬ್ಯಾಂಕ್ ಅಕೌಂಟ್ ನಂಬರ್ ಹಾಗೂ ಮದುವೆ ಆಗಿರುವ ಸಂಖ್ಯೆ ಇದಿಷ್ಟು ಸರಿ ಇದ್ದರೆ ಆ ವ್ಯಕ್ತಿ ತನ್ನಿಂದ ತಾನೇ ಯಾವುದೇ ಅಡೆತಡೆ ಇಲ್ಲದಂತೆ ಜೀವನದಲ್ಲಿ ಮೇಲೆ ಬರುತ್ತಿರುತ್ತಾನೆ.
ಆತ ಕೈ ಹಾಕಿದ್ದೆಲ್ಲಾ ಚಿನ್ನವಾಗುತ್ತದೆ, ಇಡಿ ಯೂನಿವರ್ಸ್ ಆತನಿಗೆ ಸಪೋರ್ಟ್ ಗೆ ಮಾಡುತ್ತದೆ, ಹಾಗೆ ಗಳಿಸಿದ್ದನ್ನು ಆತ ಅನುಭವಿಸಿ ಸಂತೋಷವಾಗಿರುತ್ತಾನೆ. ಮೊಬೈಲ್ ಸಂಖ್ಯೆಯಿಂದಲೇ ಒಬ್ಬ ವ್ಯಕ್ತಿ ಉನ್ನತಿ ಹಾಗೂ ಅವನತಿ ನಿರ್ಧಾರ ಮಾಡುತ್ತದೆ ಎಂದು ಸಹ ಹೇಳಲಾಗುತ್ತದೆ.
ಈ ಮೊಬೈಲ್ ಸಂಖ್ಯೆಯು ಎಲ್ಲರಿಗೂ ಒಂದೇ ರೀತಿಯ ಲಕ್ಕಿ ನಂಬರ್ ಆಗಿರುವುದೆಲ್ಲ, ಮೊದಲನೇದಾಗಿ ಅವರ ಹುಟ್ಟಿದ ದಿನಾಂಕದ ಆಧಾರದ ಮೇಲೆ ಇದನ್ನು ನಿರ್ಧಾರ ಮಾಡಲಾಗುತ್ತದೆ. ನೀವು ಹುಟ್ಟಿದ ದಿನಾಂಕವನ್ನು ನೋಡಿ ನಿಮ್ಮ ಭಾಗ್ಯ ಸಂಖ್ಯೆಗೆ ಅನುಗುಣವಾಗಿ ಭಾಗ್ಯ ತರುವ ನಂಬರ್ ಅನ್ನು ಲಕ್ಕಿ ನಂಬರ್ ಎಂದು ಕೊಡುತ್ತಾರೆ.
ನಿಮ್ಮ ಹುಟ್ಟಿದ ದಿನಾಂಕದಲ್ಲಿ ಯಾವ ಸಂಖ್ಯೆ ಪ್ರಭಾವ ಕಡಿಮೆ ಅದನ್ನು ಸರಿದೂಗಿಸುವಂತಹ ಲಕ್ಕಿ ನಂಬರ್ ಅನ್ನು ನಿಮಗೆ ಸೂಚಿಸುತ್ತಾರೆ. ಇದು ಎಲ್ಲರಿಗೂ ಒಂದೇ ರೀತಿ ಅನ್ವಯವಾಗುವುದಿಲ್ಲ. ರೈತರಿಗೆ, ವೈದ್ಯರಿಗೆ, ರಿಯಲ್ ಎಸ್ಟೇಟ್ ಮಾಡುವವರಿಗೆ, ವ್ಯವಹಾರ ಮಾಡುವವರಿಗೆ ವಿದ್ಯಾರ್ಥಿಗಳಿಗೆ ಹೀಗೆ ಪ್ರತಿಯೊಬ್ಬರಿಗೂ ಕೂಡ ಬೇರೆ ಬೇರೆ ನಂಬರ್ ಪ್ರಭಾವ ಬೀರುತ್ತದೆ.
ಸಂಖ್ಯಾಶಾಸ್ತ್ರದ ಮೂಲಕ ಭವಿಷ್ಯ ಬದಲಾಯಿಸಿಕೊಳ್ಳಬೇಕು ಎಂದರೆ ಹುಟ್ಟಿದ ದಿನಾಂಕ ಬಹಳ ಮುಖ್ಯ. ಹುಟ್ಟಿದ ದಿನಾಂಕಕ್ಕೆ ಅನುಗುಣವಾಗಿ ಬರುವ ಲಕ್ಕಿ ನಂಬರ್ ಇದ್ದರೆ ಸಾಕು ಎಂದು ನೋಡುವಂತಿಲ್ಲ ನಿಮ್ಮ ಮೊಬೈಲ್ ನಂಬರ್ 10 ಸಂಖ್ಯೆ ಕೂಡಿದರು ನಿಮ್ಮ ಲಕ್ಕಿ ನಂಬರ್ ಬರಬೇಕು ಹಾಗೂ ಆ 10 ಅಂಕೆಗಳ ಮಧ್ಯದಲ್ಲಿ ಒಂದರ ಪಕ್ಕ ಒಂದು ಬರುವ ಅಂಕಿಗಳು ಕೂಡ ನೆಗೆಟಿವ್ ಹಾಗೂ ಪಾಸಿಟಿವ್ ಎನರ್ಜಿ ತರುವಂತಹವಾಗಿವೆ.
ಹಾಗಾಗಿ ವ್ಯವಸ್ಥಿತವಾಗಿ ಯಾವ ಸಂಖ್ಯೆ ಪಕ್ಕದಲ್ಲಿ ಯಾವ ಸಂಖ್ಯೆ ಬರಬಾರದು ಯಾವ ಸಂಖ್ಯೆ ಬರಬೇಕು ಎನ್ನುವುದನ್ನು ಕೂಡ ಲೆಕ್ಕಾಚಾರ ಹಾಕಬೇಕು. ಸಂಖ್ಯಾಶಾಸ್ತ್ರದ ಬಗ್ಗೆ ನಿಮಗೆ ಆಸಕ್ತಿ ಇದ್ದರೆ, ನೀವು ಕೂಡ ನಿಮ್ಮ ಲಕ್ಕಿ ನಂಬರ್ ಪಡಿದುಕೊಳ್ಳಬೇಕೆಂದರೆ ಸಂಖ್ಯಾಶಾಸ್ತ್ರಜ್ಞರನ್ನು ಭೇಟಿಯಾಗಿ ಸಲಹೆ ಪಡೆದು ಪಾಲಿಸಿ ಅದೃಷ್ಟ ಬದಲಾಯಿಸಿಕೊಳ್ಳಿ.