ಕಣ್ಣಿನ ದೃಷ್ಟಿ ಎನ್ನುವುದು ಮನುಷ್ಯನ ಅತ್ಯಮೂಲ್ಯ ಅಂಗಗಳಲ್ಲಿ ಒಂದು ದೃಷ್ಟಿ ಇರದ ವ್ಯಕ್ತಿಯು ಜೀವನದಲ್ಲಿ ಬಹುತೇಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ ಮತ್ತು ಜೀವನಪೂರ್ತಿ ಮತ್ತೊಬ್ಬರ ಮೇಲೆ ಅವಲಂಬಿತರಾಗಿ ಇರಬೇಕಾಗುತ್ತದೆ ಇಂತಹ ಬದುಕು ಅಕ್ಷರಶಃ ನರಕ ಎಂದರೂ ತಪ್ಪಾಗುವುದಿಲ್ಲ.
ಕೆಲವರಿಗೆ ಬಾಲ್ಯದಿಂದಲೇ ಈ ಬಗ್ಗೆ ಸಮಸ್ಯೆ ಇದ್ದರೆ ಕೆಲವರು ನಂತರ ಜೀವನದಲ್ಲಾದ ಅ’ಪ’ಘಾ’ತ, ಆ’ಘಾ’ತಗಳಿಂದ ದೃಷ್ಟಿ ಕಳೆದುಕೊಂಡಿರುತ್ತಾರೆ. ಇದಕ್ಕಿಂತ ದೊಡ್ಡ ಸವಾಲೆಂದರೆ ವಯಸ್ಸಾಗುತ್ತಿದ್ದಂತೆ ದೃಷ್ಟಿ ದೋಷ ಕೂಡ ಉಂಟಾಗುತ್ತದೆ. ಸಮೀಪ ದೃಷ್ಟಿದೋಷ, ದೂರ ದೃಷ್ಟಿದೋಷ ಇರುಳು ಕುರುಡು, ಕಲರ್ ಬ್ಲೈಂಡ್ ನೆಸ್ ಕಣ್ಣಿನಲ್ಲಿ ನೀರು ಸುರಿಯುವುದು, ಕಣ್ಮು ಮಂಜಾಗುವುದು, ಕಣ್ಣಿನಲ್ಲಿ ಪೊರೆ ಕಟ್ಟುವುದು ಇನ್ನು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
ಈ ಸುದ್ದಿ ಓದಿ:- ಬ್ಯಾಂಕ್ ಅಕೌಂಟ್ ನಲ್ಲಿ ಇನ್ಮೇಲೆ ಇದಕ್ಕಿಂತ ಹೆಚ್ಚು ಹಣ ಇಟ್ಟರೆ ತೆರಿಗೆ ಕಟ್ಟಬೇಕು.! ಇಂದಿನಿಂದ ಹೊಸ ರೂಲ್ಸ್ ಜಾರಿ
ಕಣ್ಣಿನ ಶಸ್ತ್ರ ಚಿಕಿತ್ಸೆಗೆ ವಿಪರೀತ ಹಣ ಖರ್ಚಾಗುತ್ತದೆ ಹಾಗಾಗಿ ಬಡವರಿಗೆ ಇದು ಸಾಧ್ಯವಾಗುವುದಿಲ್ಲ ಎಂದು ಕೆಲವು ಟ್ರಸ್ಟ್ ಗಳು ಮತ್ತು ಕೆಲವೊಂದು ಪ್ರತಿಷ್ಠಿತ ಕಣ್ಣಿನ ಆಸ್ಪತ್ರೆಗಳು ಹಾಗೂ ಸರ್ಕಾರವು ಒಟ್ಟುಗೂಡಿ ಕ್ಯಾಂಪ್ ಗಳ್ಳನ್ನು ಏರ್ಪಡಿಸಿ ಜನಸಾಮಾನ್ಯರಿಗೆ ಉಚಿತವಾಗಿ ಔಷಧಿ, ಕನ್ನಡಕ ವಿತರಣೆ, ಶಸ್ತ್ರ ಚಿಕಿತ್ಸೆ ವರೆಗಿನ ಸೌಕರ್ಯಳನ್ನು ನೋಡಿಕೊಳ್ಳುತ್ತಿದ್ದಾರೆ.
ಈಗ ಇದೇ ರೀತಿ ಮತ್ತೊಂದು ಯೋಜನೆಯನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದಿದೆ ಈ ಯೋಜನೆ ಹೆಸರು ಆಶಾಕಿರಣ ಯೋಜನೆ ಎಂಬುದಾಗಿದೆ. ಜನಸಾಮಾನ್ಯರಿಗೆ ಈ ಯೋಜನೆಯಿಂದ ಅನುಕೂಲತೆಗಳೇನು? ಎನ್ನುವುದರ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ.
ಈ ಸುದ್ದಿ ಓದಿ:- ಹೈನುಗಾರಿಕೆಯಲ್ಲಿ ಖರ್ಚು ಹೇಗೆ ಲಾಭ ಎಷ್ಟು ಗೊತ್ತಾ.? ಸಗಣಿಯಿಂದಲೇ 2.5 ಲಕ್ಷ ಹಣ ಸಂಪಾದನೆ.!
ಹಾವೇರಿಯಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಈ ಯೋಜನೆಯ ಉದ್ದೇಶವೇನೆಂದರೆ ರಾಜ್ಯದ ಎಲ್ಲಾ ಕಡೆ ಉಚಿತವಾಗಿ ಕಣ್ಣಿನ ತಪಾಸಣೆ ನಡೆಸಿ, ಸುಮಾರು 2 ಲಕ್ಷ ಜನರಿಗೆ ಉಚಿತವಾಗಿ ಕನ್ನಡಕ ವಿತರಣೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಸದ್ಯಕ್ಕೆ ಮೊದಲ ಹಂತದಲ್ಲಿ ರಾಜ್ಯದ 8 ಜಿಲ್ಲೆಗಳಲ್ಲಿ ಆಶಾಕಿರಣ ಯೋಜನೆಯ ಮೂಲಕ ಉಚಿತ ಕಣ್ಣಿನ ತಪಾಸಣೆ ಕಾರ್ಯಕ್ರಮ ಆರಂಭಿಸಲಾಗಿದೆ.
ಆ ಪ್ರಕಾರವಾಗಿ ಚಾಮರಾಜನಗರ, ಹಾವೇರಿ, ಕಲಬುರ್ಗಿ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸುಮಾರು 56,59,036 ಜನರಿಗೆ ಕಣ್ಣಿನ ಟೆಸ್ಟ್ ಮಾಡಿ 8,28,884 ಜನರಿಗೆ ಕಣ್ಣಿನ ಸಮಸ್ಯೆ ಇದೆ ಎಂದು ಗುರುತಿಸಲಾಗಿದೆ. ಮತ್ತೊಮ್ಮೆ ಟೆಸ್ಟ್ ಮಾಡಿಸಿದಾಗ, 2,45,588 ಜನರಿಗೆ ದೃಷ್ಟಿ ದೋಷ ಇದೆ ಎಂದು ತಿಳಿದುಬಂದಿದ್ದು, ಅವರಿಗೆಲ್ಲಾ ಉಚಿತವಾಗಿ ಕನ್ನಡಕ ವಿತರಣೆ ವ್ಯವಸ್ಥೆ ಮಾಡಲಾಗಿದೆ.
ಈ ಸುದ್ದಿ ಓದಿ:- 3 ಲಕ್ಷ ಹಣ ಡೆಪೋಸಿಟ್ ಮಾಡಿದ್ರೆ ಪ್ರತಿ ತಿಂಗಳು 30 ಸಾವಿರ ಬಡ್ಡಿ ಸಿಗುವ ಬಂಪರ್ ಯೋಜನೆ ಇದು.!
39,336 ಜನರಿಗೆ ಕಣ್ಣಿನ ಪೊರೆ ಸಮಸ್ಯೆ ಗುರುತಿಸಿ ಉಚಿತವಾಗಿ ಆಪರೇಷನ್ ಮಾಡಿಸಲಾಗುತ್ತಿದೆ ಎಂದು ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಸರ್ಕಾರದ ಈ ಕಾರ್ಯಕ್ರಮ ಯಶಸ್ವಿಯಾಗಲು ಆಯಭಾಗದ ಆಶಾ ಕಾರ್ಯಕರ್ತೆಯರು ಸಹಾಯ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಎರಡನೇ ಹಂತದಲ್ಲಿ ಮಂಡ್ಯ, ರಾಯಚೂರು, ಚಿತ್ರದುರ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಆಶಾಕಿರಣ ಯೋಜನೆಯ ಮೂಲಕ ಉಚಿತ ತಪಾಸಣೆ ಶುರುವಾಗಿದೆ. ಇಲ್ಲಿಯೂ ಸಹ 5,277,235 ಜನರಿಗೆ ಟೆಸ್ಟ್ ಮಾಡಿಸಲಾಗಿದೆ, ಇವರುಗಳ ಪೈಕಿ 943,398 ಜನರಿಗೆ ಸಮಸ್ಯೆ ಕಂಡುಬಂದಿದೆ. ಇವರಿಗೆಲ್ಲಾ ಕನ್ನಡಕ ಕೊಡಲಾಗಿದ್ದು ಹಾಗೂ ಅಗತ್ಯ ಇದ್ದವರಿಗೆ ಆಪರೇಷನ್ ಕೊಡ ಮಾಡಿಸಲಾಗುತ್ತದೆ.
ಈ ಸುದ್ದಿ ಓದಿ:- ಚೆಕ್ ಬರೆಯುವಾಗ ಅಪ್ಪಿತಪ್ಪಿ ಈ ತಪ್ಪು ಮಾಡಿದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿ ಖಾಲಿ ಎಚ್ಚರ.! ಚೆಕ್ ವ್ಯವಹಾರ ಮಾಡುವವರು ತಪ್ಪದೆ ನೋಡಿ.!
ನಂತರ ರಾಮನಗರ, ಕೊಡಗು, ಬೀದರ್, ಗದಗ, ಚಿಕ್ಕಮಗಳೂರು, ಬೀದರ್, ಕೋಲಾರ, ಬಾಗಲಕೋಟೆ ಈ ಎಲ್ಲಾ ಜಿಲ್ಲೆಗಳಲ್ಲಿ ಆಶಾಕಿರಣ ಯೋಜನೆಯ ಮೂಲಕ ತಪಾಸಣೆ ನಡೆಸಲಾಗುತ್ತದೆ. ಈ ಯೋಜನೆಯ ಮೂಲಕ ಮಕ್ಕಳಿಂದ ಹಿಡಿದು ವಯಸ್ಸಾದವರ ವರೆಗು ಎಲ್ಲರೂ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳಬಹುದು ಮತ್ತು ಸಮಸ್ಯೆ ಇದ್ದವರು ಉಚಿತ ನೆರವು ಸಿಗಲಿದೆ ಎಂದು ತಿಳಿಸಿದ್ದಾರೆ.