ಉದ್ಯೋಗ ಆಕಾಂಕ್ಷಿಗಳಿಗೆ ಒಂದು ಬಿಗ್ ಅಪ್ಡೇಟ್ ಇದೆ. ಅದೇನೆಂದರೆ, ವಿಕಾಸ – ಸೌಹಾರ್ದ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್, ಹೊಸಪೇಟೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗಾಗಿ ಅರ್ಹ ಆಸಕ್ತರಿಂದ ಅರ್ಜಿ ಆಹ್ವಾನ ಮಾಡಲಾಗಿದೆ.
ಈ ಹುದ್ದೆಗಳಿಗೆ ಸಂಬಂಧಪಟ್ಟ ಮಾಹಿತಿಗಳನ್ನು ಒಳಗೊಂಡ ಅಧಿಕೃತ ಅಧಿಸೂಚನೆಯನ್ನು ಬ್ಯಾಂಕ್ ಹೊರಡಿಸಿದ್ದು ಅರ್ಜಿ ಸಲ್ಲಿಸಲು ಆಸಕ್ತಿ ಇರುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ನಾವು ಸಹ ಈ ಲೇಖನದಲ್ಲಿ ನೇಮಕಾತಿ ಕುರಿತಂತೆ ಇರುವ ಪ್ರಮುಖ ಸಂಗತಿಗಳ ಬಗ್ಗೆ ತಿಳಿಸಿಕೊಡುತ್ತಿದ್ದೇವೆ. ತಪ್ಪದೆ ಈ ಉದ್ಯೋಗ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಂಡು ಹೆಚ್ಚಿನ ಜನರಿಗೆ ಉದ್ಯೋಗ ಮಾಹಿತಿ ತಲುಪುವಂತೆ ಮಾಡಿ.
ಉದ್ಯೋಗ ಸಂಸ್ಥೆ:- ವಿಕಾಸ ಸೌಹಾರ್ದ ಕೋ – ಆಪರೇಟಿವ್ ಬ್ಯಾಂಕ್
ಹುದ್ದೆ ಹೆಸರು:- ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:- 47 ಹುದ್ದೆಗಳು
ಹುದ್ದೆಗಳ ವಿವರ:-
* ವಿಭಾಗೀಯ ವ್ಯವಸ್ಥಾಪಕರು (ಹಿರಿಯ ಆಡಳಿತ ಅಧಿಕಾರಿ) – 1
* ಲೆಕ್ಕಪರಿಶೋಧನಾಕಾರರು (ಹಿರಿಯ ವ್ಯವಸ್ಥಾಪಕರು) – 2
* ಶಾಖಾ ವ್ಯವಸ್ಥಾಪಕರು (ವ್ಯವಸ್ಥಾಪಕರು) – 5
* ವಸೂಲಾತಿ ಹಿರಿಯ ಅಧಿಕಾರಿ (ಹಿರಿಯ ಅಧಿಕಾರಿ) – 1
* ಪರಿಶೀಲನಾ ಮತ್ತು ಪರಿವೀಕ್ಷಣ ಅಧಿಕಾರಿ (ಹಿರಿಯ ಅಧಿಕಾರಿ) – 1
* ಹಿರಿಯ ಲೆಕ್ಕ ಪರಿಶೋಧಕರು (ಹಿರಿಯ ಅಧಿಕಾರಿ) – 1
* ಹೂಡಿಕೆ ಅಧಿಕಾರಿ (ಅಧಿಕಾರಿ) – 1
* ಕಾನೂನು ಅಧಿಕಾರಿ (ಅಧಿಕಾರಿ) – 1
* ತಂತ್ರಜ್ಞಾನ ಅಧಿಕಾರಿ (ಅಧಿಕಾರಿ) – 2
* ಕೇಂದ್ರೀಯ ವೀಕ್ಷಣಾಧಿಕಾರಿ (ಅಧಿಕಾರಿ) – 2
* ಪರಿಕ್ಷಾರ್ಥ ಅಧಿಕಾರಿ (ಅಧಿಕಾರಿ) – 30
ಉದ್ಯೋಗ ಸ್ಥಳ:- ಹೊಸಪೇಟೆ
ಶೈಕ್ಷಣಿಕ ವಿದ್ಯಾರ್ಹತೆ:-
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ಯಾವುದಾದರೂ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಉತ್ತೀರ್ಣರಾಗಿರಬೇಕು.
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 45 ವರ್ಷಗಳು
ವಯೋಮಿತಿ ಸಡಿಲಿಕೆ:-
* OBC ಅಭ್ಯರ್ಥಿಗಳಿಗೆ 03 ವರ್ಷಗಳು
* SC / ST ವರ್ಗದ ಅಭ್ಯರ್ಥಿಗಳಿಗೆ 05 ವರ್ಷಗಳು
ಅರ್ಜಿ ಸಲ್ಲಿಸುವ ವಿಧಾನ:-
* ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.
* www.vikasbank.com ವೆಬ್ ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸುವ ಲಿಂಕ್ ಮಾಡಿ ಕೇಳಲಾಗಿರುವ ಎಲ್ಲ ವೈಯಕ್ತಿಕ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
* ವಿದ್ಯಾರ್ಹತೆ, ವಯೋಮಿತಿ, ಅನುಭವ ಮತ್ತು ಪರಿಣಿತಿ ಇತ್ಯಾದಿ ವಿವರಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
* ಅರ್ಜಿ ಸಲ್ಲಿಕೆ ಯಶಸ್ವಿ ಆದ ಮೇಲೆ ತಪ್ಪದೆ ಅರ್ಜಿ ಸ್ವೀಕೃತಿ ಪ್ರತಿ ಪಡೆದುಕೊಳ್ಳಿ, ಭವಿಷ್ಯದಲ್ಲಿ ಇದು ಬಳಕೆಗೆ ಬರುತ್ತದೆ.
ಆಯ್ಕೆ ವಿಧಾನ:-
* ಸ್ಪರ್ಧಾತ್ಮಕ ಪರೀಕ್ಷೆ
* ದಾಖಲೆಗಳ ಪರಿಶೀಲನೆ
* ಸಂದರ್ಶನ
ಅರ್ಜಿ ಶುಲ್ಕ:-
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಲ್ಲಾ ವರ್ಗದ ಅಭ್ಯರ್ಥಿಗಳಿಗೂ ಕೂಡ ರೂ.500 ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
* ಅರ್ಜಿ ಶುಲ್ಕವನ್ನು ಆನ್ಲೈನ್ ನಲ್ಲಿ ಕ್ರೆಡಿಟ್ ಕಾರ್ಡ್ / ಡೆಬಿಟ್ ಕಾರ್ಡ್ / ನೆಟ್ ಬ್ಯಾಂಕಿಂಗ್ ಅಥವಾ UPI ಆಧಾರಿತ ಆಪ್ ಗಳ ಮೂಲಕ ಪಾವತಿ ಮಾಡಿ ತಪ್ಪದೇ ಇ-ರಸೀದಿ ಪಡೆದುಕೊಳ್ಳಬೇಕು.
ಪ್ರಮುಖ ದಿನಾಂಕ ಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 03 ಏಪ್ರಿಲ್, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 19 ಏಪ್ರಿಲ್, 2024.