ಉದ್ಯೋಗಾಕಾಂಕ್ಷಿಗಳಿಗೆಲ್ಲ ಒಂದು ಬೃಹತ್ ಅವಕಾಶ ಸಿಗುತ್ತಿದೆ.
ನವೋದಯ ವಿದ್ಯಾಲಯ ಸಮಿತಿಯಿಂದ (NVS) ಹೊಸ ನೇಮಕಾತಿ ಅಧಿಸೂಚನೆ ಬಿಡುಗಡೆ ಆಗಿದೆ. ವಿಶೇಷವೇನೆಂದರೆ ಕಡಿಮೆ ವಿದ್ಯಾಭ್ಯಾಸ ಹೊಂದಿರುವವರು ಕೂಡ ಈ ಹುದ್ದೆಗಳನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದಾಗಿದೆ.
ಸುಮಾರು 1000ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿತ್ತು ಅತ್ಯುತ್ತಮ ವೇತನ ಶ್ರೇಣಿಯೊಂದಿಗೆ ಹುದ್ದೆಗಳನ್ನು ಅಲಂಕರಿಸುವ ಅವಕಾಶ ಸಿಗುತ್ತಿದೆ. ರಾಜ್ಯದಾದ್ಯಂತ ಇರುವ ಎಲ್ಲಾ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಪ್ರಯತ್ನಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಆಸಕ್ತಿ ಇರುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ನಾವು ಸಹ ಈ ಲೇಖನದಲ್ಲಿ ನೇಮಕಾತಿ ಕುರಿತಂತೆ ಇರುವ ಪ್ರಮುಖ ಸಂಗತಿಗಳ ಬಗ್ಗೆ ವಿವರ ಹಂಚಿಕೊಳ್ಳುತ್ತಿದ್ದೇವೆ. ತಪ್ಪದೇ ಈ ಉದ್ಯೋಗ ವಾರ್ತೆಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರಿಗೂ ಶೇರ್ ಮಾಡಿ.
ಈ ಸುದ್ದಿ ಓದಿ:- ರೈತರಿಗೆ ಇನ್ನು ಮುಂದೆ ಒಣ ಭೂಮಿಯಲ್ಲೂ 100% ನೀರು ಪಕ್ಕಾ, ರೈತರಿಗಾಗಿ ಈ ಮಾಹಿತಿ.!
ನೇಮಕಾತಿ ಸಂಸ್ಥೆ:- ನವೋದಯ ವಿದ್ಯಾಲಯ ಸಮಿತಿ(NVS)
ಹುದ್ದೆ ಹೆಸರು:- ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:- 1,377 ಹುದ್ದೆಗಳು
ಹುದ್ದೆಗಳ ವಿವರ:-
* ಮಹಿಳಾ ಸಿಬ್ಬಂದಿ ನರ್ಸ್ – 121
* ಸಹಾಯಕ ವಿಭಾಗಾಧಿಕಾರಿ (ASO) – 5
* ಆಡಿಟ್ ಸಹಾಯಕ – 12
* ಜೂನಿಯರ್ ಅನುವಾದ ಅಧಿಕಾರಿ – 4
* ಕಾನೂನು ಸಹಾಯಕ – 1
* ಸ್ಟೆನೋಗ್ರಾಫರ್ – 23
* ಕಂಪ್ಯೂಟರ್ ಆಪರೇಟರ್ – 2
* ಅಡುಗೆ ಮೇಲ್ವಿಚಾರಕ – 78
* ಜೂನಿಯರ್ ಸೆಕ್ರೆಟರಿಯೇಟ್ ಸಹಾಯಕ (JSA)- 381
* ಎಲೆಕ್ಟ್ರಿಷಿಯನ್ ಮತ್ತು ಪ್ಲಂಬರ್ – 128
* ಲ್ಯಾಬ್ ಅಟೆಂಡರ್ – 161
* ಮೆಸ್ ಸಹಾಯಕ – 442
* ಮಲ್ಟಿ ಟಾಸ್ಕಿಂಗ್ ಸ್ಟಾಪ್ (MTS) 9
ಉದ್ಯೋಗ ಸ್ಥಳ:- ನವೋದಯ ವಿದ್ಯಾ ಸಂಸ್ಥೆಯ ವಿವಿಧ ಶಾಖೆಗಳಲ್ಲಿ
ವೇತನ ಶ್ರೇಣಿ:- ಆಯಾ ಹುದ್ದೆಗಳಿಗೆ ಅನುಗುಣವಾಗಿ ರೂ.19,900 ರಿಂದ ರೂ.28,000 ದವರೆಗೆ ವೇತನ ಸಿಗುತ್ತದೆ.
ಈ ಸುದ್ದಿ ಓದಿ:- ಹೊಸ ರೇಷನ್ ಕಾರ್ಡ್ ಪಡೆಯಲು ಈ ಮೂರು ದಾಖಲೆಗಳು ಸಲ್ಲಿಸುವುದು ಕಡ್ಡಾಯ.!
ಶೈಕ್ಷಣಿಕ ವಿದ್ಯಾರ್ಹತೆ:-
ಈ ಮೇಲೆ ತಿಳಿಸಿದ ಹುದ್ದೆಗಳಿಗೆ ಅನುಗುಣವಾಗಿ SSLC , PUC, ITI, ಡಿಪ್ಲೋಮೋ, ಪದವಿ, ಸ್ನಾತಕೋತ್ತರ ಪದವಿ, ನರ್ಸಿಂಗ್ ಪೂರ್ತಿಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 40 ವರ್ಷಗಳು
* ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಕೂಡ ಇರುತ್ತದೆ
ಅರ್ಜಿ ಸಲ್ಲಿಸುವ ವಿಧಾನ:-
* NVS ನೋಟಿಫಿಕೇಶನ್ ನಲ್ಲಿ ಸೂಚಿಸಿರುವಂತೆ https://nvs.ntaonline.in/login-page ಈ ವೆಬ್ ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
* ವೈಯಕ್ತಿಕ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ಕೇಳಿರುವ ಎಲ್ಲಾ ಪೂರಕ ದಾಖಲೆಗಳನ್ನು ಸಲ್ಲಿಸಬೇಕು
* ಆಯಾ ವರ್ಗಗಳಿಗೆ ಅನುಗುಣವಾಗಿ ಸೂಚಿಸಿರುವ ಅರ್ಜಿ ಶುಲ್ಕವನ್ನು ಭರ್ತಿ ಮಾಡಿ ಇ-ರಸೀದಿ ಮತ್ತು ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ಅರ್ಜಿ ಸ್ವೀಕೃತಿ ಪ್ರತಿ ಕೂಡ ಪಡೆದುಕೊಳ್ಳಬೇಕು.
ಆಯ್ಕೆ ವಿಧಾನ:-
* ಸ್ಪರ್ಧಾತ್ಮಕ ಪರೀಕ್ಷೆ
* ನೇರ ಸಂದರ್ಶನ
* ದಾಖಲೆಗಳ ಪರಿಶೀಲನೆ.
ಈ ಸುದ್ದಿ ಓದಿ:- ಇನ್ನು ಮುಂದೆ ಟ್ಯಾಂಕ್ ಕ್ಲೀನಿಂಗ್ ಬಹಳ ಸುಲಭ, ಕರ್ನಾಟಕದಲ್ಲಿ ಯಾವುದೇ ಕಡೆ ಇದ್ದರೆ ನಿಮ್ಮ ಮನೆ ಬಾಗಿಲಿಗೆ ಡೆಲಿವರಿ ಸಿಗುತ್ತದೆ.!
ಅರ್ಜಿ ಶುಲ್ಕ:-
* SC / ST ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ರೂ.500
* ಸಾಮಾನ್ಯ / OBC / EWS ಅಭ್ಯರ್ಥಿಗಳಿಗೆ ಮತ್ತು ಮಹಿಳಾ ಸಿಬ್ಬಂದಿ ನರ್ಸ್ ಹುದ್ದೆಗಳಿಗೆ ರೂ.1500
* ಉಳಿದ ಹುದ್ದೆಗಳಿಗೆ ರೂ.1000
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 22 ಮಾರ್ಚ್, 2024
* ಅರ್ಜಿ ಸಲ್ಲಿಸಲು ಕಡೆಯ ದಿನಾಂಕ – 14 ಮೇ, 2024.