ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯು ರಾಜ್ಯದ ರೈತರಿಗಾಗಿ ವಿಶೇಷ ಯೋಜನೆಯೊಂದನ್ನು ಘೋಷಿಸಿದೆ. ರಾಜ್ಯದಲ್ಲಿ ಈ ಬಾರಿ ಬರದ ಪರಿಸ್ಥಿತಿ ಎದುರಾಗುವುದರಿಂದ ರೈತರು ತೀರ ಕುಗ್ಗಿ ಹೋಗಿದ್ದಾರೆ ಕೃಷಿ ಸಂಪೂರ್ಣ ನೆಲಕಚ್ಚಿದ್ದು ಹೈನುಗಾರಿಕೆ ಈಗ ಅವರ ಭರವಸೆಯಾಗಿದೆ.
ಹಾಗಾಗಿ ಹೈನುಗಾರಿಕೆ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಸಲುವಾಗಿ ಬರಘೋಷಿತವಾಗಿರುವ ತಾಲೂಕುಗಳಲ್ಲಿ ಮೇವಿಗೆ ಕೊರತೆಯಾಗದಂತೆ ತಡೆಯಲು ಉಚಿತವಾಗಿ ಮೇವಿನ ಕಿಟ್ ಬೀಜ ವಿತರಣೆ ಕಾರ್ಯಕ್ರಮ ನಡೆದಿದೆ.
ಮುಂದುವರೆದು 2023-24ನೇ ಸಾಲಿನಲ್ಲಿ ಹಾಲು ಉತ್ಪಾದಕರಿಗೆ (Dairy farming) ಉತ್ತೇಜನ ಕಾರ್ಯಕ್ರಮದಲ್ಲಿ ವಿಶೇಷ ಘಟಕ ಯೋಜನೆ(NCP) ಮತ್ತು ಗಿರಿಜನ ಉಪ ಯೋಜನೆ ಅಡಿ(TSP) ಮಿಶ್ರತಳಿ ಹಸು ಘಟಕ ಯೋಜನೆಯನ್ನು ಘೋಷಿಸಿದೆ. ಈ ಯೋಜನೆ ಮೂಲಕ ಅರ್ಹ ರೈತರು ಹಸು ಖರೀದಿಗೆ ಘಟಕ ವೆಚ್ಚದ ಸಹಾಯಧನವನ್ನು ಪಡೆಯಬಹುದು.
ರೈತರು ಈ ಯೋಜನೆ ಪ್ರಯೋಜನವನ್ನು ಹೇಗೆ ಪಡೆದುಕೊಳ್ಳಬೇಕು ಮತ್ತು ಯಾರೆಲ್ಲಾ ಅರ್ಜಿ ಸಲ್ಲಿಸಲು ಅರ್ಹರು ಅರ್ಜಿ ಸಲ್ಲಿಸುವ ವಿಧಾನ ಹೇಗೆ ಮತ್ತು ಸಹಾಯಧನ ಎಷ್ಟು ಸಿಗುತ್ತದೆ ಎನ್ನುವುದರ ವಿವರ ಹೀಗಿದೆ ನೋಡಿ.
ಯಾರು ಅರ್ಜಿ ಸಲ್ಲಿಸಬಹುದು:-
* ಪಶುಸಂಗೋಪನೆಯಲ್ಲಿ ತೊಡಗಿಸಿಕೊಂಡ ಮತ್ತು ಆಸಕ್ತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
* ಆಯ್ಕೆಗೊಂಡ ಫಲಾನುಭವಿಗಳು ಕಡ್ಡಾಯವಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಾಗಿರಬೇಕು ಇಲ್ಲವಾದಲ್ಲಿ ಅರ್ಜಿ ಸಲ್ಲಿಸಿದ ಮೇಲಾದರೂ ತಪ್ಪದೇ ಸದಸ್ಯತ್ವ ಪಡೆಯಬೇಕು.
* ಈ ಯೋಜನೆಯ ಪ್ರಯೋಜನ ಪಡೆದ ನಂತರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕಡ್ಡಾಯವಾಗಿ ಹಾಲು ಪೂರೈಸುವ ಷರತ್ತಿಗೆ ಒಳಪಟ್ಟು ಮುಚ್ಚಳಿಕೆಯನ್ನು ವ್ಯವಸ್ಥಾಪಕರು ಅಥವಾ ಪ್ರತಿನಿಧಿಯವರಿಂದ ಧೃಢೀಕರಿಸಿ ಸಲ್ಲಿಸಬೇಕು.
* ಕಳೆದ 5 ವರ್ಷಗಳಲ್ಲಿ ಪಶುಪಾಲನಾ ಇಲಾಖೆಯಲ್ಲಿ ಯಾವುದೇ ಯೋಜನೆ ಮೂಲಕ ಹೈನುಗಾರಿಕೆಗೆ ಸಹಾಯಧನ ಪಡೆದಿದ್ದರೆ ಆ ಕುಟುಂಬಗಳು ಈ ಯೋಜನೆಯ ಸವಲತ್ತು ಪಡೆಯಲು ಅರ್ಹರಿರುವುದಿಲ್ಲ.
* ಸರ್ಕಾರದ ನಿಯಮದಂತೆ ಮಹಿಳೆಯರಿಗೆ 33.3% ಮತ್ತು ವಿಶೇಷ ಚೇತನರಿಗೆ 3% ಅದ್ಯತೆ ನೀಡಲಾಗಿದೆ.
ಸಿಗುವ ಸಹಾಯಧನ:-
* ಮಿಶ್ರತಳಿ ಹಸು ಘಟಕದಲ್ಲಿ ಒಂದು ಮಿಶ್ರ ತಳಿ ಹಸು ಖರೀದಿಗೆ ಸಹಾಯ ಒದಗಿಸಲಾಗುವುದು.
* ಈ ಘಟಕದ ವೆಚ್ಚ 65,000 ಅಂದಾಜಿಸಲಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ 90% ಅಂದರೆ 58,500 ರೂ. ಸಹಾಯಧನ ಮತ್ತು ಉಳಿದ 10% 6500 ರೂ. ನ್ನು ವಂತಿಕೆ ರೂಪದಲ್ಲಿ ಅಥವಾ ಬ್ಯಾಂಕ್ನಿಂದ ಸಾಲದೊಂದಿಗೆ ಅನುಷ್ಠಾನಗೊಳಿಸಲಾಗುವುದು.
ಬೇಕಾಗುವ ದಾಖಲೆಗಳು:-
* ರೈತನ ಆಧಾರ್ ಕಾರ್ಡ್
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* FRUITS ID
* ವಿಶೇಷ ಚೇತನರಿಗೆ ಅಂಗವಿಕಲ ಪ್ರಮಾಣ ಪತ್ರ
* ಬ್ಯಾಂಕ್ ಪಾಸ್ ಬುಕ್ ವಿವರ
* ಮೊಬೈಲ್ ಸಂಖ್ಯೆ
* ಇತ್ಯಾದಿ ಯಾವುದೇ ಪ್ರಮುಖ ದಾಖಲೆಗಳು.
ಅರ್ಜಿ ಸಲ್ಲಿಸುವ ವಿಧಾನ:-
* ರಾಜ್ಯದ ಹಲವು ಜಿಲ್ಲೆಗಳಿಗೆ ಈ ಯೋಜನೆ ಲಭ್ಯವಿದ್ದು ಆಸಕ್ತರು ಆಯಾ ತಾಲ್ಲೂಕುಗಳ ಮುಖ್ಯ ಪಶುವೈದ್ಯಾಧಿಕಾರಿಗಳು ಅಥವಾ ಪಶು ಆಸ್ಪತ್ರೆಯಲ್ಲಿ ಅರ್ಜಿ ನಮೂನೆ ಪಡೆದು ಸೂಕ್ತ ದಾಖಲೆಗಳ ಜೊತೆಗೆ ತಮ್ಮ ವ್ಯಾಪ್ತಿಯ ಪಶುವೈದ್ಯ ಸಂಸ್ಥೆಗಳಿಗೆ ಸಲ್ಲಿಸಬೇಕು.
* ಕಡೆಗೆ ದಿನಾಂಕವು ಸಮೀಪದಲ್ಲಿದ್ದು ಪ್ರತಿಯೊಂದು ಜಿಲ್ಲೆಗೂ ಪ್ರತ್ಯೇಕ ದಿನಾಂಕವನ್ನು ಕಡೆಯ ದಿನಾಂಕವಾಗಿ ನಿಗದಿಪಡಿಸಲಾಗಿದೆ, ಹಾಗಾಗಿ ಆದಷ್ಟು ಶೀಘ್ರವಾಗಿ ಅರ್ಜಿ ಸಲ್ಲಿಸಿ ಮತ್ತು ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗಳಿಗೆ ಕರೆ ಮಾಡಿ.
1. ಚಿತ್ರದುರ್ಗ ಜಿಲ್ಲೆ – 25 ನವೆಂಬರ್, 2024 ಕಡೆಯ ದಿನಾಂಕ.
ಚಿತ್ರದುರ್ಗ – 948294311
ಚಳ್ಳಕೆರೆ – 9448816499
ಹೊಳಲ್ಕೆರೆ – 8073900950
ಹೊಸದುರ್ಗ – 9945298407
ಹಿರಿಯೂರು – 9483451044
ಮೊಣಕಾಲ್ಮೂರು – 9900964820
2. ಬೀದರ್ ಜಿಲ್ಲೆ – 25 ನವೆಂಬರ್, 2024
ಸಹಾಯವಾಣಿ ಸಂಖ್ಯೆ:-
9480383732
9448579825
9611175868
9449336740
9886187512