ರಾಷ್ಟ್ರೀಯ ಯುವಜನತೆಯ ಪ್ರಯುಕ್ತವಾಗಿ ರಾಜ್ಯದ ಯುವಜನತೆಗೆ ಒಂದು ಒಳ್ಳೆ ಸಿಹಿ ವಿಚಾರವನ್ನು ಈ ದಿನ ಹಂಚಿಕೊಳ್ಳುತ್ತಿದ್ದೇವೆ. ಈಗಾಗಲೇ ರಾಜ್ಯ ಸರ್ಕಾರವು ಯುವಜನತೆಗಾಗಿ ಸಾಕಷ್ಟು ಯೋಜನೆಗಳನ್ನು ಕೈಗೊಂಡಿದೆ ಮತ್ತು ನಿರುದ್ಯೋಗಿ ಯುವಕ ಯುವತಿಯರಿಗೆ ಅವರ ಜೀವನ ನಿರ್ವಹಣೆಗಾಗಿ ಮಾಸಿಕ ರೂ.3000 ತನಕ ನಿರುದ್ಯೋಗಿ ಭತ್ಯೆಯನ್ನು ಕೂಡ ವಿತರಣೆ ಮಾಡುತ್ತಿದೆ.
ಇದರೊಂದಿಗೆ ಈಗ ಮತ್ತೊಂದು ವಿಚಾರವಾಗಿ ಪ್ರಕಟಣೆ ಹೊರಡಿಸಿದ್ದು 2023-24ನೇ ಸಾಲಿನಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪರಿಶಿಷ್ಟ ಜಾತಿ ಉಪ ಯೋಜನೆಯಡಿಯಲ್ಲಿ ಉಚಿತವಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದ ಯುವ ಜನತೆಗೆ ಬ್ಯೂಟಿಷಿಯನ್, ಜಿಮ್ ಟ್ರೈನರ್, ವಿಡಿಯೋಗ್ರಫಿ, ನಿರೂಪಣೆ ಮತ್ತು ವಾರ್ತಾ ವಾಚಕರ ತರಬೇತಿಗಳನ್ನು ನೀಡಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದರ ಕುರಿತ ಸಂಪೂರ್ಣ ವಿವರ ಹೀಗಿದೆ ನೋಡಿ.
ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್.
ತರಬೇತಿಯ ವಿವರಗಳು:-
1. ಬ್ಯೂಟಿಷಿಯನ್ ತರಬೇತಿ (Beautician):-
* ಬೆಂಗಳೂರಿನ ಕುಂಬಳಗೋಡು ತರಬೇತಿ ಕೇಂದ್ರದಲ್ಲಿ 26 ಜನವರಿ 2024 ರಿಂದ 07 ಫೆಬ್ರವರಿ 2024ರ ವರೆಗೆ 13 ದಿನಗಳ ಕಾಲ ನಡೆಯಲಿದೆ.
* ಅರ್ಜಿದಾರರ ವಯಸ್ಸು 15ರಿಂದ 29 ವರ್ಷದ ಒಳಗಿರಬೇಕು
* SSLC ಪಾಸ್ ಅಥವಾ ಫೇಲ್ ಆದವರು ಅರ್ಜಿ ಸಲ್ಲಿಸಬಹುದು.
2. ಜಿಮ್ ಟ್ರೈನರ್ (Gym Trainer):-
* ಶ್ರೀ ಜಯಪ್ರಕಾಶ್ ನಾರಾಯಣ ರಾಷ್ಟ್ರೀಯ ಯುವ ತರಬೇತಿ ಕೇಂದ್ರ ವಿದ್ಯಾನಗರ ಅಥವಾ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತದೆ.
* 15 ದಿನಗಳ ತರಬೇತಿಯಾಗಿದ್ದು 24 ಜನವರಿ 2024 ರಿಂದ 07 ಫೆಬ್ರವರಿ 2024ರ ವರೆಗೆ ನಡೆಯಲಿದೆ.
* ಅರ್ಜಿದಾರರ ವಯಸ್ಸು 16 ರಿಂದ 30 ವರ್ಷದ ಒಳಗಿರಬೇಕು
* ದ್ವಿತೀಯ PUC ಉತ್ತೀರ್ಣರಾಗಿರಬೇಕು.
3. ವೀಡಿಯೋಗ್ರಫಿ (Videography):-
* ಬೆಂಗಳೂರಿನ ಕುಂಬಳಗೋಡು ತರಬೇತಿ ಕೇಂದ್ರದಲ್ಲಿ ನಡೆಯಲಿದೆ.
* 12 ದಿನಗಳ ತರಬೇತಿ ಆಗಿರುತ್ತದೆ
* 27 ಜನವರಿ 2024 ರಿಂದ 7 ಫೆಬ್ರವರಿ 2024 ರವರೆಗೆ ತರಬೇತಿ ನಡೆಯಲಿದೆ.
* ಅರ್ಜಿ ಸಲ್ಲಿಸುವವರ ವಯಸ್ಸು 15 ರಿಂದ 29 ವರ್ಷದ ಒಳಗಿರಬೇಕು.
* ದ್ವಿತೀಯ PUC ಉತ್ತೀರ್ಣರಾಗಿರಬೇಕು.
4. ನಿರೂಪಣೆ ಮತ್ತು ವಾರ್ತಾ ವಾಚಕರ ತರಬೇತಿ ಶಿಬಿರ (Anchoring training):-
* ಈ ತರಬೇತಿಯು ಯುವನಿಕಾ ಸಭಾಂಗಣ ಕೇಂದ್ರ ಬೆಂಗಳೂರಿನಲ್ಲಿ ನಡೆಯಲಿದೆ.
* 8 ದಿನಗಳ ಕಾಲ ತರಬೇತಿ ಇರುತ್ತದೆ
* 31 ಜನವರಿ 2024 ರಿಂದ 07 ಫೆಬ್ರವರಿ 2024ರ ವರೆಗೆ ತರಬೇತಿ ನಡೆಯುತ್ತದೆ
* ಅರ್ಜಿ ಸಲ್ಲಿಸಲು ಪದವಿ ಮತ್ತು ಪತ್ರಿಕೋದ್ಯಮ ವಿಭಾಗ ಅಭ್ಯಾಸ ಮಾಡಿ ಉತ್ತೀರ್ಣರಾಗಿರಬೇಕು.
* ಅರ್ಜಿ ಸಲ್ಲಿಸುವವರ ವಯಸ್ಸು 15 ರಿಂದ 20 ಮತ್ತು ವರ್ಷದ ಒಳಗಿರಬೇಕು.
ಆಶ್ರಯ ಯೋಜನೆ ಸ್ವಂತ ಮನೆ ಇಲ್ಲದವರಿಗೆ ಉಚಿತ ಸೈಟ್ ಹಂಚಿಕೆ ಆಸಕ್ತರು ಅರ್ಜಿ ಸಲ್ಲಿಸಿ.!
ಅರ್ಜಿ ಸಲ್ಲಿಸುವ ವಿಧಾನ:-
* ಆಸಕ್ತಿ ಇರುವ ಮತ್ತೆ ಮೇಲಿನ ಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ನಿಮ್ಮ ಜಿಲ್ಲೆಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಛೇರಿಗೆ ಹೋಗಿ ಆಫ್ಲೈನ್ ಅಲ್ಲಿ ಅರ್ಜಿ ಸಲ್ಲಿಸಬೇಕು.
* 16 ಜನವರಿ, 2024ರ ಒಳಗಾಗಿ ಅರ್ಜಿ ಸಲ್ಲಿಸಬೇಕು.
* ತುಂಬಿದ ಅರ್ಜಿ ಫಾರಂ ಜೊತೆ ಈ ಕೆಳಗಿನ ದಾಖಲೆಗಳ ಪ್ರತಿಕೂಡ ಸಲ್ಲಿಸಬೇಕು.
1. ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ
2. ಇತ್ತೀಚಿನ ಫೋಟೋ
3. ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
4. ಶೈಕ್ಷಣಿಕ ವಿದ್ಯಾರ್ಹತೆಗೆ ಸಂಬಂಧಪಟ್ಟ ಪುರಾವೆ
5. ಸಮಕ್ಷಮ ಪ್ರಾಧಿಕಾರದಿಂದ ನೀಡಿದ ಜಾತಿ ಪ್ರಮಾಣ ಪತ್ರದ ಪ್ರತಿ.