ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿಸುದ್ದಿ, ಅದರಲ್ಲೂ ನೀವು ವಾಸಿಸುವ ವ್ಯಾಪ್ತಿಯಲ್ಲಿ ಕೆಲಸ ಮಾಡುವಂತಹ ಅವಕಾಶ ಸಿಗುತ್ತಿದೆ. ಈ ಬಗ್ಗೆ ಕರ್ನಾಟಕ ಸರ್ಕಾರ ಸಮಾದೇಷ್ಟರವರ ಕಾರ್ಯಾಲಯ, ಜಿಲ್ಲಾ ಗೃಹರಕ್ಷಕ ದಳ, ಚಿಕ್ಕಮಗಳೂರು ವತಿಯಿಂದ (Chikkamagaluru District) ಅಧಿಕೃತ ಪತ್ತಿಕಾ ಪ್ರಕಟಣೆ ಕೂಡ ಬಿಡುಗಡೆಯಾಗಿದೆ.
ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಖಾಲಿ ಇರುವ ಗೃಹರಕ್ಷಕ ದಳ (Hime guard recruitment) ಸ್ವಯಂಸೇವಕ ಸದಸ್ಯರ ಭರ್ತಿಗೆ ಅರ್ಹ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಯಾರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರು? ಹೇಗೆ ಅರ್ಜಿ ಸಲ್ಲಿಸಬೇಕು? ಆಯ್ಕೆ ಕ್ರಮ ಹೇಗಿರುತ್ತದೆ? ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ? ಇತ್ಯಾದಿ ಪ್ರಮುಖ ಅಂಶಗಳ ಬಗ್ಗೆ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ. ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಹೆಚ್ಚಿನ ಸ್ನೇಹಿತರೊಡನೆ ಶೇರ್ ಮಾಡಿ.
ಅಂಗವಿಕಲ, ವಿಧವಾ ವೇತನ, ವೃದ್ಧಾಪ್ಯ ವೇತನ ಯಾವುದೇ ಇರಲಿ, ಪ್ರತಿ ತಿಂಗಳ ಪಿಂಚಣಿ ಜಮೆಯಾಗಿರುವ ಮಾಹಿತಿ ಮೊಬೈಲ್ ನಲ್ಲಿ ಚೆಕ್ ಮಾಡುವ ಸುಲಭ ವಿಧಾನ.!
ನೇಮಕಾತಿ ಸಂಸ್ಥೆ:- ಗೃಹರಕ್ಷಕ ದಳ, ಚಿಕ್ಕಮಗಳೂರು
ಒಟ್ಟು ಹುದ್ದೆಗಳ ಸಂಖ್ಯೆ:- 247
ಹುದ್ದೆಗಳ ವಿವರ:- ಗೃಹರಕ್ಷಕ ಸ್ವಯಂಸೇವಕ
ಉದ್ಯೋಗ ಸ್ಥಳ:- ಚಿಕ್ಕಮಗಳೂರು ಜಿಲ್ಲಾ ಘಟಕ
* ಚಿಕ್ಕಮಗಳೂರು
* ಬೆಳವಾಡಿ
* ಕಡೂರು
* ಸಖರಾಯಪಟ್ಟಣ
* ಕಾಟಗನೆರೆ
* ಬೀರೂರು
* ತರೀಕೆರೆ
* ಶಿವನಿ
* ಅಜ್ಜಂಪುರ
* ಬಾಳೆಹೊನ್ನೂರು
* ಎನ್.ಆರ್.ಪುರ
* ಶೃಂಗೇರಿ, ಕೊಪ್ಪ
* ಕಳಸಾಪುರ
* ಲಿಂಗದಹಳ್ಳಿ
* ಹರಿಹರಪುರ
* ಜಯಪುರ
* ಹೋಚಿಹಳ್ಳಿ
* ಮೂಡಿಗೆರೆ
* ಜಾವೂರು
ಶೈಕ್ಷಣಿಕ ವಿದ್ಯಾರ್ಹತೆ ಮತ್ತು ಇತರ ನಿಬಂಧನೆಗಳು:-
* ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
* ಅರ್ಜಿ ಸಲ್ಲಿಸಲು ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು, ಹೆಚ್ಚು ವಿದ್ಯಾರ್ಹತೆ ಹೊಂದಿದವರಿಗೆ ಆದ್ಯತೆ ಇರುತ್ತದೆ
* ಅರ್ಜಿ ಸಲ್ಲಿಸಲು ಬಯಸುವವರು ತಮ್ಮ ವಾಸ ಸ್ಥಳದಿಂದ ತಾವು ಸೇರ ಬಯಸುವ ಘಟಕಕ್ಕೆ 6 ಕಿ.ಮೀ. ವ್ಯಾಪ್ತಿಯ ಒಳಗಿರಬೇಕು
* ಅಭ್ಯರ್ಥಿಗಳು ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿರಬಾರದು.
* ಧೃಢಕಾಯರಾಗಿದ್ದು ಆರೋಗ್ಯವಂತರಾಗಿರಬೇಕು, ಯಾವುದೇ ಗಂಭೀರ ಕಾಯಿಲೆಗಳನ್ನು ಹೊಂದಿರಬಾರದು.
* ಯಾವುದೇ ರಾಜಕೀಯ ಪಕ್ಷದ ಸದಸ್ಯರಾಗಿರಬಾರದು.
ಸೈಟ್, ಮನೆ, ಜಮೀನು, ಇನ್ನಿತರ ಆಸ್ತಿ ಖರೀದಿಸುವ ಸಮಯದಲ್ಲಿ ಇದಕ್ಕಿಂತ ಹೆಚ್ಚು ಹಣ ಕೊಡುವಂತಿಲ್ಲ.! ಹೊಸ ರೂಲ್ಸ್ ಜಾರಿ.! ನಿಯಮ ಮೀರಿದ್ರೆ ದಂಡ ಗ್ಯಾರಂಟಿ
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 19 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 50 ವರ್ಷಗಳು
ಅರ್ಜಿ ಸಲ್ಲಿಸುವ ವಿಧಾನ:-
* ಆಫ್ ಲೈನ್ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
* ಚಿಕ್ಕಮಗಳೂರು ಜಿಲ್ಲಾ ಗೃಹರಕ್ಷಕ ದಳದ ಕಛೇರಿಯಿಂದ ಹಾಗೂ ಘಟಕಾಧಿಕಾರಿ ಕಛೇರಿ ಗೃಹರಕ್ಷಕ ದಳ ಚಿಕ್ಕಮಗಳೂರು, ಬೆಳವಾಡಿ, ಕಡೂರು, ಸಖರಾಯಪಟ್ಟಣ, ಕಾಟಗನೆರೆ, ಬೀರೂರು, ತರೀಕೆರೆ, ಶಿವನಿ, ಅಜ್ಜಂಪುರ, ಬಾಳೆಹೊನ್ನೂರು, ಎನ್.ಆರ್.ಪುರ, ಶೃಂಗೇರಿ, ಕೊಪ್ಪ, ಕಳಸಾಪುರ, ಲಿಂಗದಹಳ್ಳಿ, ಹರಿಹರಪುರ, ಜಯಪುರ, ಹೋಚಿಹಳ್ಳಿ, ಮೂಡಿಗೆರೆ ಹಾಗೂ ಜಾವೂರು ಇವರಿಂದ ಅರ್ಜಿಗಳನ್ನು ಉಚಿತವಾಗಿ ಪಡೆಯಬಹುದಾಗಿದು.
* ನೀವು ಸೇರ ಬಯಸುವ ಘಟಕದ ಗೃಹರಕ್ಷಕ ಘಟಕ ಅಧಿಕಾರಿಗಳಿಗೆ ತುಂಬಿದ ಅರ್ಜಿ ಫಾರಂ ಜೊತೆ ಪೂರಕ ದಾಖಲೆಗಳ ಪ್ರತಿಗಳನ್ನು ಸೇರಿಸಿ ಸಲ್ಲಿಸಬೇಕು.
ಆಯ್ಕೆ ವಿಧಾನ:-
* ನೇರ ಸಂದರ್ಶನ
* ವೈದ್ಯಕೀಯ ಪರೀಕ್ಷೆಗಳು
* ದಾಖಲೆಗಳ ಪರಿಶೀಲನೆ
LIC ಕಡೆಯಿಂದ ವಿದ್ಯಾರ್ಥಿಗಳಿಗೆ 40,000 ಉಚಿತ ಸ್ಕಾಲರ್ ಶಿಪ್.! ಅರ್ಜಿ ಸಲ್ಲಿಸಿ.!
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – ಈಗಾಗಲೇ ಪ್ರಾರಂಭಗೊಂಡಿದೆ.
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 31 ಜನವರಿ, 2024.
ಬೇಕಾಗುವ ದಾಖಲೆಗಳು:-
* ಆಧಾರ್ ಕಾರ್ಡ್ ಪ್ರತಿ
* ವಯಸ್ಸಿನ ದೃಢೀಕರಣಕ್ಕಾಗಿ SSLCಅಂಕಪಟ್ಟಿ
* ಶೈಕ್ಷಣಿಕ ವಿದ್ಯಾರ್ಥಿಗೆ ಸಂಬಂಧಪಟ್ಟ ಅಂಕಪಟ್ಟಿಗಳು ಮತ್ತು ಪ್ರಮಾಣ ಪತ್ರಗಳ ಪ್ರತಿ
* ವೈದ್ಯಕೀಯ ದೃಢೀಕರಣ ಪ್ರತಿ
* ಇತ್ತೀಚಿನ ಭಾವಚಿತ್ರ
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
1. ಜಿಲ್ಲಾ ಗೃಹರಕ್ಷಕ ದಳ ಕಛೇರಿ,
ಅಗ್ನಿಶಾಮಕ ಇಲಾಖೆ ಪಕ್ಕ,
K.M. ರಸ್ತೆ,
ಚಿಕ್ಕಮಗಳೂರು.
2. ಸಹಾಯವಾಣಿ ಸಂಖ್ಯೆಗಳು
8151914734
9164283743