ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಖಾತೆ (Bank Account) ಎನ್ನುವುದು ಎಷ್ಟು ಪ್ರಮುಖವಾದ ಸಂಗತಿ ಎನ್ನುವುದು ಎಲ್ಲರಿಗೂ ಅರಿವಾಗಿದೆ. ಯಾವುದೇ ಒಬ್ಬ ವ್ಯಕ್ತಿ ಸರ್ಕಾರದಿಂದ ಯಾವುದಾದರೂ ಅನುದಾನ ಪಡೆಯಬೇಕು ಎಂದರೆ ಆತನ ಹೆಸರಿನಲ್ಲಿ ಬ್ಯಾಂಕ್ ಖಾತೆ ಇದ್ದರೆ ಮಾತ್ರ ಇದು ಸಾಧ್ಯ. ಸಾಲದ್ದಕ್ಕೆ ಈಗ ಸರ್ಕಾರೇತರವಾಗಿ ಕೂಡ ಇತರೆ ಹಣಕಾಸು ಸಂಸ್ಥೆಗಳಲ್ಲಿ ವಹಿವಾಟು ಮಾಡಬೇಕು ಎಂದರೆ ಬ್ಯಾಂಕ್ ಖಾತೆ ಹೊಂದಿರಲೇಬೇಕು.
ಒಂದರ್ಥದಲ್ಲಿ ಹಣಕಾಸಿನ ವಹಿವಾಟು ಎಂದರೆ ಬ್ಯಾಂಕ್ ಖಾತೆ ಎನ್ನುವಷ್ಟು ಪ್ರತಿಯೊಬ್ಬರು ಈಗ ಬ್ಯಾಂಕ್ ಖಾತೆ ಅವಲಂಬಿಸಿದ್ದಾರೆ. ಒಬ್ಬರು ಎಷ್ಟು ಬೇಕಾದರೂ ಬ್ಯಾಂಕ್ ಅಕೌಂಟ್ ಗಳು ಹೊಂದಿರಬಹುದು ಹೀಗಿರದೆ ಇದ್ದರೂ ಕನಿಷ್ಠ ಒಂದು ಬ್ಯಾಂಕ್ ಖಾತೆಯನ್ನಾದರೂ ಒಬ್ಬ ವ್ಯಕ್ತಿ ಹೊಂದಲೇಬೇಕಾದ ಅನಿವಾರ್ಯತೆ ಇದೆ.
ಶಾಲಾ ಮಕ್ಕಳಿಗೆ ಸಿಗುವ ವಿದ್ಯಾರ್ಥಿವೇತನದಿಂದ ಹಿಡಿದು ಉದ್ಯೋಗಸ್ಥರಿಗೆ ಸಿಗುವ ವೇತನ, ವೃದ್ಧರ ಪಿಂಚಣಿ ಹೀಗೆ ಪ್ರತಿಯೊಂದು ವಿಷಯದಲ್ಲೂ ಕೂಡ ಹಣವು ಬ್ಯಾಂಕ್ ಖಾತೆ ಮೂಲಕವೇ ವರ್ಗಾವಣೆಯಾಗುವುದು ಇದಕ್ಕೆ ಅನುಕೂಲವಾಗಲಿ ಎಂದು ಪ್ರಧಾನಮಂತ್ರಿ ಅವರು ಜನ್ ಧನ್ ಖಾತೆ ಎನ್ನುವ ಖಾತೆಯನ್ನು ತೆರೆದರು.
ಈ ಹಿಂದೆ ಖಾತೆ ತೆರೆಯಲು ಕನಿಷ್ಠ ಹಣ ಪಾವತಿ ಮಾಡಬೇಕಿತ್ತು ಮತ್ತು ಆ ಹಣ ಅವರ ಖಾತೆಗೆ ಜಮೆ ಆಗುತ್ತಿತ್ತು. ಆದರೆ ಜನ್ ಧನ್ ಖಾತೆಯಲ್ಲಿ ಶೂನ್ಯ ದರದಲ್ಲಿ ಖಾತೆ ತೆರೆಯಬಹುದು ಮತ್ತು ಅವರು ಒಂದು ವೇಳೆ ತಮ್ಮ ಖಾತೆಯಲ್ಲಿ ಹಣ ಇಡಲಾಗಿಲ್ಲ ಎಂದರೆ ಆ ಖಾತೆ ಮುಚ್ಚುವುದಿಲ್ಲ. ಈ ಒಂದು ಅವಕಾಶವನ್ನು ಹೊರತುಪಡಿಸಿ ಇತರೆ ಯಾವುದೇ ಖಾತೆ ಇದ್ದರೂ ಕೂಡ ಅದಕ್ಕೆ ಆ ಬ್ಯಾಂಕ್ ಗಳು ನಿಯಮವನ್ನು ಹೇರಿರುತ್ತವೆ.
ತಮ್ಮ ಬ್ಯಾಂಕ್ ಶಾಖೆಯಲ್ಲಿ ಇಂತಿಷ್ಟೇ ಮಿನಿಮಮ್ ಬ್ಯಾಲೆನ್ಸ್ ಇರಲೇಬೇಕು ನಿಯಮದಡಿ ನಿಮಗೆ ದಂಡ ಬೀಳುತ್ತದೆ. ಉದಾಹರಣೆಗೆ ಬ್ಯಾಂಕ್ ಖಾತೆ ಮಿನಿಮಮ್ ಬ್ಯಾಲೆನ್ಸ್ ರೂ.1000 ರೂಪಾಯಿ ಇದ್ದಾಗ ನೀವೇನಾದರೂ ರೂ.800 ಇಟ್ಟಿದ್ದರೆ ದಂಡವಾಗಿ ಆ ಹಣ ಕಡಿತಗೊಳುತ್ತಾ ಹೋಗುತ್ತದೆ ಕೊನೆಗೆ ನಿಮ್ಮ ಅಕೌಂಟ್ ಝೀರೋ ಆದ ಮೇಲೆ ಮೈನಸ್ ಬ್ಯಾಲೆನ್ಸ್ ಆಗುವ ಸಂದರ್ಭ ಬರುತ್ತದೆ,
ನಂತರ ನೀವು ಖಾತೆಗೆ ಹಣ ಹಾಕಿದಾಗ ಅದು ಕಟ್ಟಾಗುತ್ತದೆ ಈಗಾಗಲೇ ಹಲವಾರು ಕಡೆ ಈ ರೀತಿ ಬ್ಯಾಂಕ್ ನಿಂದ ಹಣ ಕಡಿತವಾಗುತ್ತಿದೆ ಎನ್ನುವ ದೂರುಗಳನ್ನು ಕೂಡ ನಾವು ಕೇಳಿರುತ್ತೇವೆ. ಬ್ಯಾಂಕಗಳು RBI ಸೂಚನೆಗೆ ಅನುಸಾರವಾಗಿ ಬ್ಯಾಂಕ್ ಗಳು ಈ ರೀತಿ ಕ್ರಮ ಕೈಗೊಳ್ಳುತ್ತಿವೆ.
ಸದ್ಯಕ್ಕೆ RBI ಸೂಚಿಸುವ ಪ್ರಕಾರವಾಗಿ ಸದ್ಯಕ್ಕೆ ದೇಶದ ಯಾವ ಯಾವ ಬ್ಯಾಂಕ್ ಗಳಲ್ಲಿ ಎಷ್ಟು ಮಿನಿಮಮ್ ಬ್ಯಾಲೆನ್ಸ್ ನಿಗದಿ ಆಗಿದೆ ಎನ್ನುವ ಮಾಹಿತಿಯ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ ತಪ್ಪದೆ ಈಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
* SBI Bank:-
ಗ್ರಾಮೀಣ ಬ್ಯಾಂಕ್ ದಲ್ಲಿ ಮಿನಿಮಮ್ ಬ್ಯಾಲೆನ್ಸ್ ರೂ.1,000. ಅರೆನಗರ ಪ್ರದೇಶದಲ್ಲಿ ರೂ.2,000 ಮತ್ತು ಮೆಟ್ರೋ ನಗರಗಳಲ್ಲಿ ರೂ.3000
* HDFC Bank:-
ಗ್ರಾಮೀಣ ಭಾಗದ ಬ್ಯಾಂಕ್ ಳಲ್ಲಿ ರೂ.2,500, ಅರೇ ನಗರ ಪ್ರದೇಶಗಳಿಗೆ ರೂ.5,000 ಹಾಗೂ ಮೆಟ್ರೋ ನಗರಗಳಲ್ಲಿ ರೂ.10,000.
* ICICI Bank:-
ಗ್ರಾಮೀಣ ಬ್ಯಾಂಕಿನಲ್ಲಿ ರೂ.2,500, ಅರೇ ನಗರ ಪ್ರದೇಶಗಳಿಗೆ ರೂ.5,000 ಹಾಗೂ ಮೆಟ್ರೋ ನಗರಗಳಲ್ಲಿ ರೂ.10,000
* PNB Bank:- ಗ್ರಾಮೀಣ ಪ್ರದೇಶಗಳ ಬ್ಯಾಂಕ್ ಗಳಲ್ಲಿ ರೂ.1,000, ಅರೆ ನಗರ ಪ್ರದೇಶದಲ್ಲಿ ರೂ.2000 ಮೆಟ್ರೋ ನಗರಗಳಲ್ಲಿ ರೂ. 5000
* Canara Bank:- ಗ್ರಾಮೀಣ ಭಾಗದಲ್ಲಿ 500 ಅರೆ ನಗರ ಪ್ರದೇಶಗಳಲ್ಲಿ ಹಾಗೂ ಮೆಟ್ರೋ ನಗರ ಪ್ರದೇಶಗಳಲ್ಲಿ ರೂ.2000