ಭಾರತದಲ್ಲಿ ಕಡ್ಡಾಯ ಶಿಕ್ಷಣ ನೀತಿ ಜಾರಿಯಲ್ಲಿರುವುದರಿಂದ 14 ವರ್ಷದವರೆಗೆ ಮಕ್ಕಳು ಉಚಿತವಾಗಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಆನಂತರ ವಿದ್ಯಾಭ್ಯಾಸ ಬಗ್ಗೆ ಆಸಕ್ತಿ ಹೊಂದಿರುವವರು ಸರ್ಕಾರಿ ಕಾಲೇಜುಗಳನ್ನು ಸೇರಿ ಕೂಡ ವಿದ್ಯಾಭ್ಯಾಸ ಮುಂದುವರಿಸಬಹುದು ಅಥವಾ ಖಾಸಗಿ ಶಾಲಾ-ಕಾಲೇಜುಗಳನ್ನು ಸೇರ ಬಯಸುವವರು ಬ್ಯಾಂಕ್ ಲೋನ್ ಗಳನ್ನು ಪಡೆದು ತಮ್ಮ ಇಚ್ಛೆ ಕೋರ್ಸ್ ಅನುಸರಿಸಬಹುದು.
ಇವರುಗಳಿಗೆ ಸರ್ಕಾರವು ವಿದ್ಯಾರ್ಥಿ ವೇತನದಂತಹ ಅನುಕೂಲತೆ ನೀಡುತ್ತದೆ. ಸರ್ಕಾರ ಮಾತ್ರವಲ್ಲದೇ ಅನೇಕ ಸರ್ಕಾರೇತರ ಸಂಸ್ಥೆಗಳು, NGO ಗಳು ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ವಿದ್ಯಾರ್ಥಿಗಳಿಗೆ ನೆರವು ನೀಡುತ್ತಿವೆ. ಹಣಕಾಸಿನ ತೊಂದರೆ ಕಾರಣದಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳ ವಿದ್ಯಾಭ್ಯಾಸ ನಿಲ್ಲಬಾರದು ಎನ್ನುವ ಕಾರಣಕ್ಕಾಗಿ, ಮೂಲಕ ಭಾರತದ ಯುವಕರನ್ನು ಸಬಲೀಕರಣಗೊಳಿಸಿ, ಭಾರತವನ್ನು ಜಾಗತಿಕ ನಾಯಕರನ್ನಾಗಿ ಮಾಡುವ ಮಹತ್ವಾಕಾಂಕ್ಷೆಯಿಂದ ಈ ವಿದ್ಯಾರ್ಥಿ ವೇತನ ನೀಡುತ್ತಿವೆ.
ಈಗ ರಿಲಯನ್ಸ್ ಸಂಸ್ಥೆ (Reliance Foundation Scholarship) ಕೂಡ ಅಂತಹದೊಂದು ಕಾರ್ಯಕ್ಕೆ ಮುಂದಾಗಿದೆ ಪದವಿ ಪೂರ್ವ (PUC), ಸ್ನಾತಕೋತ್ತರ ಪದವಿಯಲ್ಲಿ (PG) ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಅಥವಾ ಕಂಪ್ಯೂಟರ್ ಸೈನ್ಸ್ ನಂತಹ (Artificial intelligence and Computer science students) ವಿಷಯಗಳನ್ನು ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಅವರ ಶೈಕ್ಷಣಿಕ ವೆಚ್ಚಕ್ಕೆ 6 ಲಕ್ಷದವರೆಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ.
ಈ ಪ್ರಯೋಜನವನ್ನು ಪಡೆದುಕೊಳ್ಳಲು ಕೆಲ ಮಾನದಂಡಗಳಿದ್ದು ಅವುಗಳನ್ನು ಪೂರೈಸುವವರು ಸೂಕ್ತ ದಾಖಲೆಗಳ ಜೊತೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಈ ಅಂಕಣದಲ್ಲಿ ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿದ್ಯಾರ್ಥಿ ವೇತನದ ಕುರಿತು ಕೆಲ ಪ್ರಮುಖ ಅಂಶಗಳನ್ನು ತಿಳಿಸುತ್ತಿದ್ದೇವೆ.
ಸಂಸ್ಥೆ ಹೆಸರು:- ರಿಲಯನ್ಸ್ ಫೌಂಡೇಶನ್
ಪ್ರಯೋಜನ:-
● ಪದವಿಪೂರ್ವ ವಿದ್ಯಾರ್ಥಿಗಳಿಗೆ 2 ಲಕ್ಷದವರೆಗೆ
● ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ 6 ಲಕ್ಷದವರೆಗೆ
ಅರ್ಹತಾ ಮಾನದಂಡ:-
● ಭಾರತೀಯ ನಾಗರಿಕರುವ ವಿದ್ಯಾರ್ಥಿ ಮಾತ್ರ ಅರ್ಜಿ ಹಾಕಬಹುದು
● ಅರ್ಜಿದಾರರು ಕನಿಷ್ಠ 60% ನೊಂದಿಗೆ 12 ನೇ ತರಗತಿ ಉತ್ತೀರ್ಣರಾಗಿರಬೇಕು, ಭಾರತದಲ್ಲಿ ಮಾನ್ಯತೆ ಪಡೆದ ಯಾವುದೇ ಕಾಲೇಜಿನಲ್ಲಿ ದೈನಂದಿಕ ತರಗತಿಗಳಲ್ಲಿ ವಿದ್ಯಾಭ್ಯಾಸ ಮಾಡಿರಬೇಕು.
● ಸ್ನಾತಕೋತ್ತರ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು GATE ಪರೀಕ್ಷೆಯಲ್ಲಿ 550 – 1,000 ಅಂಕಗಳನ್ನು ಗಳಿಸಿದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. GATE ಪ್ರಯತ್ನಿಸದವರು ಪದವಿಪೂರ್ವ CGPA ನಲ್ಲಿ 7.5 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿದ್ದರೆ ಅರ್ಹರಾಗಿರುತ್ತಾರೆ.
● ಕಂಪ್ಯೂಟರ್ ಸೈನ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಗಣಿತ ಮತ್ತು ಕಂಪ್ಯೂಟಿಂಗ್, ಎಲೆಕ್ಟ್ರಿಕಲ್/ ಎಲೆಕ್ಟ್ರಾನಿಕ್ಸ್ ಇಂಜಿನಿಯರ್, ಕೆಮಿಕಲ್ ಇಂಜಿನಿಯರಿಂಗ್, ಮೆಕ್ಯಾನಿಕಲ್ ಇಂಜಿನಿಯರ್, ರಿನ್ಯೂವಬಲ್ ಮತ್ತು ನ್ಯೂ ಎನರ್ಜಿ, ಮೆಟೀರಿಯಲ್, ಸೈನ್ಸ್ & ಎಂಜಿ. ಮತ್ತು ಲೈಫ್ ಸೈನ್ಸ್ ವಿಷಯ ಅಭ್ಯಾಸ ಮಾಡುವ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
LIC ಈ ಸ್ಕೀಮ್ ನಲ್ಲಿ 2,000 ಹೂಡಿಕೆ ಮಾಡಿದ್ರೆ ಸಾಕು 43 ಲಕ್ಷ ಸಿಗುತ್ತೆ.! ಹೆಚ್ಚು ಹಣ ಗಳಿಸುವ ಸೂಪರ್ ಸ್ಕೀಮ್ ಇದು.!
ಬೇಕಾಗುವ ದಾಖಲೆಗಳು:-
● ಆಧಾರ್ ಕಾರ್ಡ್
● ನಿವಾಸ ದೃಢೀಕರಣ ಪತ್ರ
● ಆದಾಯ ಪ್ರಮಾಣ ಪತ್ರ
● ಬ್ಯಾಂಕ್ ಪಾಸ್ ಬುಕ್ ವಿವರ
● ಪೋಷಕರ ದಾಖಲೆಗಳು
● ಶೈಕ್ಷಣಿಕ ಅಂಕಪಟ್ಟಿಗಳು ಮತ್ತು ಪ್ರಮಾಣ ಪತ್ರಗಳು
● ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
● ಇತ್ತೀಚಿನ ಭಾವಚಿತ್ರ
ಅರ್ಜಿ ಸಲ್ಲಿಸುವ ವಿಧಾನ:-
● ರಿಲಯನ್ಸ್ ಫೌಂಡೇಶನ್ ವೆಬ್ ಸೈಟ್ ಗೆ ಭೇಟಿ ಕೊಟ್ಟು ರಿಲಯನ್ಸ್ ಫೌಂಡೇಶನ್ ಸ್ಕಾಲರ್‌ಶಿಪ್ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬೇಕು.
● ಅರ್ಜಿ ಫಾರಂ ಓಪನ್ ಮಾಡಿ ವಿವರಗಳನ್ನು ಭರ್ತಿ ಮಾಡಿ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಕೆ ಪೂರ್ತಿಗೊಳಿಸಬಹುದು.
ಆಧಾರ್ ಸೀಡಿಂಗ್ ಆಗಿದ್ರೂ ಗೃಹಲಕ್ಷ್ಮಿ ಯೋಜನೆಯ ಹಣ ಜಮೆ ಆಗಿಲ್ಲವೇ? ಹಣ ಬಂದೇ ಬರುತ್ತಿದೆ ಹೀಗೆ ಮಾಡಿ.!
ಪ್ರಮುಖ ದಿನಾಂಕಗಳು:-
● ಪದವಿಪೂರ್ವ ವಿದ್ಯಾರ್ಥಿವೇತನದ ಪ್ರಾರಂಭ ದಿನಾಂಕ – 07.09.2023
● ಪದವಿಪೂರ್ವ ವಿದ್ಯಾರ್ಥಿವೇತನದ ಕೊನೆಯ ದಿನಾಂಕ – 15.10.2023
● ಸ್ನಾತಕೋತರ ಪದವಿ ವಿದ್ಯಾರ್ಥಿವೇತನದ ಅರ್ಜಿ ಸ್ವೀಕಾರ ಪ್ರಕ್ರಿಯೆ ಶೀಘ್ರದಲ್ಲಿ ಆರಂಭವಾಗಲಿದೆ.