ರಾಜ್ಯದಾದ್ಯಂತ ಇರುವ ಉದ್ಯೋಗಾಕಾಂಕ್ಷಿಗಳಿಗೆ ಒಂದು ಗುಡ್ ನ್ಯೂಸ್ ಇದೆ ಅದರಲ್ಲೂ ಪೊಲೀಸ್ ಇಲಾಖೆಗೆ ಸಂಬಂಧ ಪಟ್ಟ ಉದ್ಯೋಗ ಮಾಡಬೇಕು ಎಂದು ಕನಸು ಕಂಡಿದ್ದು ಕಾರಣಾಂತರಗಳಿಂದ ಈ ರೀತಿ ಆರಕ್ಷಕರಾಗದೆ ವಂಚನೆಗೊಳಗಾಗಿದ್ದವರಿಗೆ ಇದೇ ರೀತಿಯ ಉದ್ಯೋಗ ಮಾಡುವ ಅವಕಾಶ ದೊರೆಯುತ್ತದೆ.
ಅದು ಕೂಡ ನೀವು ವಾಸಿಸುವ ಸ್ಥಳದ ಸುತ್ತಮುತ್ತಲ ವ್ಯಾಪ್ತಿಯಲ್ಲಿಯೇ ಉದ್ಯೋಗವಕಾಶ ದೊರೆಯುತ್ತಿದ್ದು ಈ ಬಗ್ಗೆ ಆಸಕ್ತಿ ಇರುವವರು ಅಥವಾ ನಿರುದ್ಯೋಗಿಗಳು ಅಥವಾ ಗ್ರಾಮೀಣ ಭಾಗದಲ್ಲಿ ವಾಸಿಸುವವರು ಇದರ ಸದುಪಯೋಗ ಪಡೆದುಕೊಳ್ಳಬಹುದು.
ಈ ಸುದ್ದಿ ಓದಿ:- ಬ್ಯಾಂಕ್ ಅಕೌಂಟ್ ನಲ್ಲಿ ಇನ್ಮೇಲೆ ಇದಕ್ಕಿಂತ ಹೆಚ್ಚು ಹಣ ಇಟ್ಟರೆ ತೆರಿಗೆ ಕಟ್ಟಬೇಕು.! ಇಂದಿನಿಂದ ಹೊಸ ರೂಲ್ಸ್ ಜಾರಿ
ಗೃಹರಕ್ಷಕ ದಳವು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗೃಹರಕ್ಷಕ ಹಾಗೂ ಗೃಹರಕ್ಷಕಿ (Home Guards) ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ ಮಾಡಲಾಗಿದೆ. ಈ ನೇಮಕಾತಿ ಕುರಿತಂತೆ ಕೆಲವು ಪ್ರಮುಖ ಅಂಶಗಳನ್ನು ತಿಳಿಸುತ್ತಿದ್ದೇವೆ, ಆಸಕ್ತಿ ಇದ್ದವರು ಇದರ ಸದುಪಯೋಗ ಪಡೆದುಕೊಳ್ಳಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಈ ಸುದ್ದಿ ಓದಿ:- 5 ಸಾವಿರ ಹೂಡಿಕೆ ಮಾಡಿ ಕೋಟ್ಯಾಧಿಪತಿಗಳಾಗುವುದು ಹೇಗೆ ಅಂತ ನೋಡಿ.!
ನೇಮಕಾತಿ ಸಂಸ್ಥೆ:- ಗೃಹರಕ್ಷಕ ದಳ
ಹುದ್ದೆಯ ಹೆಸರು:- ಗೃಹ ರಕ್ಷಕ / ಗೃಹರಕ್ಷಕಿ
ಒಟ್ಟು ಹುದ್ದೆಗಳ ಸಂಖ್ಯೆ:- 327
ಜಿಲ್ಲಾವಾರು ವಿವರ
* ಉತ್ತರ ಕನ್ನಡ ಜಿಲ್ಲೆ – 202
* ಯಾದಗಿರಿ ಜಿಲ್ಲೆ – 126
ಉದ್ಯೋಗ ಸ್ಥಳ:-
* ಉತ್ತರ ಕನ್ನಡ ಜಿಲ್ಲೆ:-
ಕಾರವಾರ, ಚೆಂಡಿಯ, ಮಲ್ಲಾಪುರ, ಅಂಕೋಲಾ, ಕುಮಟ, ಹೊನ್ನಾವರ, ಭಟ್ಕಳ, ಸಿದ್ದಾಪುರ, ಶಿರಸಿ, ಎಲ್ಲಾಪುರ, ಹಳಿಯಾಳ, ದಾಂಡೇಲಿ, ಜೋಹಿಡಾ ಘಟಕಗಳು ಮತ್ತು ಇವುಗಳ ಉಪಘಟಕಗಳು
* ಯಾದಗಿರಿ ಜಿಲ್ಲೆ:-
ಯಾದಗಿರಿ, ಶಹಾಪುರ, ಸುರಪುರ, ಕೆಂಭಾವಿ, ಹುಣಸಗಿ, ಗುರುಮಠಕಲ್, ಸೈದಾಪುರ, ಘಟಕಗಳು ಮತ್ತು ಉಪಘಟಕಗಳು
ಶೈಕ್ಷಣಿಕ ವಿದ್ಯಾರ್ಹತೆ:-
* 10ನೇ ತರಗತಿ ಉತ್ತೀರ್ಣರಾಗಿರುವಂತಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
* ಅರ್ಜಿ ಸಲ್ಲಿಸುವ ಅಭ್ಯರ್ಥಿಯು 19 ವರ್ಷ ಮೇಲ್ಪಟ್ಟು 50 ವರ್ಷದ ಒಳಗಿನವರಾಗಿರಬೇಕು
* ದೈಹಿಕವಾಗಿ ಆರೋಗ್ಯವಾಗಿರಬೇಕು, ವೈದ್ಯಕೀಯ ಪರೀಕ್ಷೆ ನಡೆಸಿ ಅರ್ಹರನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ
* ಅರ್ಜಿದಾರನ ಮೇಲೆ ಯಾವುದೇ ಅಪರಾಧಿ ಪ್ರಕರಣಗಳು ಇರಬಾರದು
* ಅರ್ಜಿದಾರನ್ನು ಉದ್ಯೋಗ ಸ್ಥಳದ ಸುತ್ತಮುತ್ತಲಿನ ಸ್ಥಳದಲ್ಲಿ ವಾಸಿಸುತ್ತಿರಬೇಕು
* ಯಾವುದೇ ರಾಜಕೀಯ ಪಕ್ಷಗಳ ಕಾರ್ಯಕರ್ತನಾಗಿರಬಾರದು.
ಅರ್ಜಿ ಸಲ್ಲಿಸುವ ವಿಧಾನ:-
* ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬೇಕು
* ಸಂಬಂಧಪಟ್ಟ ಗೃಹರಕ್ಷಕ ದಳದ ಕಚೇರಿಗೆ ಭೇಟಿ ನೀಡಿ ವಿವರಗಳನ್ನು ಸರಿಯಾಗಿ ಭರ್ತಿ ಮಾಡಬೇಕು ಮತ್ತು ಕೇಳಿರುವ ಪೂರಕ ದಾಖಲೆಗಳ ಪ್ರತಿಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬೇಕು.
ಬೇಕಾಗುವ ದಾಖಲೆಗಳು:–
* 10ನೇ ತರಗತಿ ಅಂಕಪಟ್ಟಿ
* ಸರ್ಕಾರಿ ವೈದ್ಯರಿಂದ ಪಡೆದ ದೈಹಿಕ ಸದೃಢತೆ ಪ್ರಮಾಣ ಪತ್ರ
* ಆಧಾರ್ ಕಾರ್ಡ್
* ಇತ್ತೀಚಿನ ಭಾವಚಿತ್ರ
* ಮೊಬೈಲ್ ಸಂಖ್ಯೆ
* ಇತ್ಯಾದಿ ಪ್ರಮುಖ ದಾಖಲೆಗಳು.
ಈ ಸುದ್ದಿ ಓದಿ:- ರಾಜ್ಯ ಸರ್ಕಾರದಿಂದ ಮತ್ತೊಂದು ಸೇವೆ.! ಇನ್ಮುಂದೆ ಕಣ್ಣಿನ ಸಮಸ್ಯೆಗೆ ಚಿಕಿತ್ಸೆ ನೀಡಲು ಮನೆ ಬಾಗಿಲಿಗೆ ಬರಲಿದ್ದಾರೆ ವೈದ್ಯರು.!
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 28 ಫೆಬ್ರವರಿ, 2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 27 ಫೆಬ್ರವರಿ, 2024.
ಹೆಚ್ಚಿನ ವಿವರಕ್ಕಾಗಿ:-
* ಈ ಹುದ್ದೆಗಳಿಗೆ ಸಂಬಂಧಪಟ್ಟ ಯಾವುದೇ ಗೊಂದಲಗಳು ಇದ್ದರು ಸಂಬಂಧ ಪಟ್ಟ ಕಚೇರಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು ಅಥವಾ ಈ ಕೆಳಗಿನ ಮೊಬೈಲ್ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.
* ಯಾದಗಿರಿ ಜಿಲ್ಲೆ ಗೃಹರಕ್ಷಕ ದಳ ಕಛೇರಿ:-
8970428778, 8971512785
* ಉತ್ತರ ಕನ್ನಡ ಜಿಲ್ಲೆ ಗೃಹರಕ್ಷಕ ದಳ ಕಚೇರಿ:-
08382200137, 2263618