ರಾಜ್ಯದಾದ್ಯಂತ ಇರುವ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ (Government job Aspirants)
ಕೃಷಿ ವಿಜ್ಞಾನಿ ನೇಮಕಾತಿ ಮಂಡಳಿ (ASRB) ವತಿಯಿಂದ ಸಿಹಿ ಸುದ್ದಿ ಇದೆ. ಕೃಷಿ ಇಲಾಖೆಯಲ್ಲಿ (Agriculture department) ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ (ASRB Recruitment 2024) ಯನ್ನು ASRB ನೋಟಿಫಿಕೇಶನ್ ಹೊರಟಿಸಿದೆ.
ರಾಜ್ಯದಾದ್ಯಂತ ಇರುವ ಎಲ್ಲ ಮಹಿಳಾ ಮತ್ತು ಪುರುಷ ಸರ್ಕಾರಿ ಹುದ್ದೆ ಆಕಾಂಕ್ಷಿಗಳು ಈ ಸದಾವಕಾಶವನ್ನು ಉಪಯೋಗಿಸಿಕೊಂಡು ಹುದ್ದೆ ಗಿಟ್ಟಿಸಿಕೊಳ್ಳಲಿ ಎನ್ನುವುದೇ ನಮ್ಮ ಲೇಖನದ ಆಶಯ ಹಾಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅನುಕೂಲತೆ ಮಾಡಿಕೊಡಲು ನೇಮಕಾತಿ ಕುರಿತಂತೆ ಹೊರಡಿಸಿರುವ ಪ್ರಮುಖ ಅಂಶಗಳಾದ.
ಹುದ್ದೆಗಳ ವಿವರ, ಉದ್ಯೋಗ ಸ್ಥಳ, ಒಟ್ಟು ಹುದ್ದೆಗಳ ಸಂಖ್ಯೆ, ವೇತನ ಶ್ರೇಣಿ, ಶೈಕ್ಷಣಿಕ ವಿದ್ಯಾರ್ಹತೆ ವಯೋಮಿತಿ, ವಯೋಮಿತಿ ಸಡಿಲಿಕೆ, ಅರ್ಜಿ ಸಲ್ಲಿಸುವ ವಿಧಾನ, ಆಯ್ಕೆ ವಿಧಾನ, ಬೇಕಾಗುವ ದಾಖಲೆಗಳು, ಅಧಿಕೃತ ವೆಬ್ಸೈಟ್ ವಿಳಾಸ, ಅರ್ಜಿ ಶುಲ್ಕ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇತ್ಯಾದಿ ಮಾಹಿತಿಗಳನ್ನು ತಿಳಿಸುತ್ತಿದ್ದೇವೆ. ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಈ ಸುದ್ದಿ ಓದಿ:- ಇನ್ಮುಂದೆ ವಾಟ್ಸಾಪ್ನಲ್ಲೇ ಸಿಗಲಿದೆ ಗ್ರಾಮ ಪಂಚಾಯತಿ ಸೇವೆಗಳು.! ಈ ವಾಟ್ಸಾಪ್ ನಂಬರ್ಗೆ ಹಾಯ್ ಎಂದು ಕಳುಹಿಸಿ ಸಾಕು.!
ನೇಮಕಾತಿ ಸಂಸ್ಥೆ: ಕೃಷಿ ವಿಜ್ಞಾನ ನೇಮಕಾತಿ ಮಂಡಳಿ (ASRB)
ಹುದ್ದೆ ಹೆಸರು:- ಅಸಿಸ್ಟೆಂಟ್ ಡೈರೆಕ್ಟರ್
ಹುದ್ದೆಗಳ ಸಂಖ್ಯೆ: 21
ಉದ್ಯೋಗ ಸ್ಥಳ: ಭಾರತದಾದ್ಯಂತ…
ವೇತನ ಶ್ರೇಣಿ: ಈ ಹುದ್ದೆಗಳಿಗೆ ಆಯ್ಕೆ ಆದ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ.56,100 ದಿಂದ ರೂ.1,77,500 ವೇತನ ಇರುತ್ತದೆ.
ಶೈಕ್ಷಣಿಕ ವಿದ್ಯಾರ್ಹತೆ:
ಕೃಷಿ ವಿಜ್ಞಾನ ನೇಮಕಾತಿ ಮಂಡಳಿ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಕಡ್ಡಾಯವಾಗಿ ಭಾರತದಲ್ಲಿ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
ಈ ಸುದ್ದಿ ಓದಿ:- ಈ ರೀತಿ ಬೇಲಿ ಹಾಕಿದರೆ 40 ವರ್ಷ ಜಗ್ಗಲ್ಲ ಬಗ್ಗಲ್ಲ, ನೀವೇನಾದರೂ ಇದನ್ನು ನೋಡಿದರೆ ಇಂಪ್ರೆಸ್ ಆಗಿ ಇನ್ನು ಹತ್ತು ಜನ ರೈತರಿಗೆ ಹೇಳುತ್ತೀರ.!
ವಯೋಮಿತಿ:
* ಕೃಷಿ ವಿಜ್ಞಾನಿ ನೇಮಕಾತಿ ಮಂಡಳಿ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಗರಿಷ್ಠ 35 ವರ್ಷದ ಒಳಗಿರಬೇಕು.
ವಯೋಮಿತಿ ಸಡಿಲಿಕೆ:
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 05 ವರ್ಷಗಳು
* OBC ಅಭ್ಯರ್ಥಿಗಳಿಗೆ 03 ವರ್ಷಗಳು
* ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು
ಅರ್ಜಿ ಶುಲ್ಕ:-
* ಅರ್ಜಿ ಶುಲ್ಕವನ್ನು ಆನ್ಲೈನ್ ನಲ್ಲಿ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕವೇ ಪಾವತಿಸಬೇಕು.
* ಮಹಿಳೆಯರು, ಅಂಗವಿಕಲರು, ಟ್ರಾನ್ಸ್ಜೆಂಡರ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
* UR / EWS / OBC ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ರೂ.1000
ಈ ಸುದ್ದಿ ಓದಿ:- ಹೊಸದಾಗಿ ಡ್ರೈವಿಂಗ್ ಲೈಸನ್ಸ್ ಮಾಡಿಸುವವರಿಗೆ ಗುಡ್ ನ್ಯೂಸ್, ಲೈಸೆನ್ಸ್ ಪಡೆಯುವುದು ಈಗ ತುಂಬಾ ಸುಲಭ.!
ಅರ್ಜಿ ಸಲ್ಲಿಸುವ ವಿಧಾನ:-
* https://asrb.org.in ಈ ವೆಬ್ಸೈಟ್ ವಿಳಾಸಕ್ಕೆ ಭೇಟಿ ಕೊಡಿ
* ಅಧಿಸೂಚನೆಯನ್ನು ಮತ್ತೊಮ್ಮೆ ಓದಿ ಅರ್ಥೈಸಿಕೊಂಡು ಬೇಕಾಗುವ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿ
* ಅರ್ಜಿ ಸಲ್ಲಿಸುವ ಲಿಂಕ್ ಕ್ಲಿಕ್ ಮಾಡಿ ಫಾರ್ಮೆಟ್ ನಲ್ಲಿ ಸರಿಯಾದ ವಿವರಗಳನ್ನು ಪಟ್ಟಿ ಮಾಡಿ ಪೂರಕ ದಾಖಲೆಗಳ ಸಂಖ್ಯೆ ನಮೂದಿಸಿ ಅಥವಾ ಅವಶ್ಯಕತೆ ಇದ್ದರೆ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
* ಅರ್ಜಿ ಶುಲ್ಕ ಪಾವತಿ ಮಾಡಿ ಇ-ರಸೀದಿ ಪಡೆಯಿರಿ ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ತಪ್ಪದೇ ಅರ್ಜಿ ಸ್ವೀಕೃತಿ ಪ್ರತಿ ಕೂಡ ಪಡೆದುಕೊಳ್ಳಿ.
ಪ್ರಮುಖ ದಿನಾಂಕಗಳು:
* ಅರ್ಜಿ ಸಲ್ಲಿಕೆ ಆರಂಭ ದಿನಾಂಕ – 03 ಏಪ್ರಿಲ್, 2024
* ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ – 02 ಮೇ, 2024.