IAS, KAS, UPSC ಪರೀಕ್ಷೆಗೆ ಉಚಿತ ತರಬೇತಿ & ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ.!

 

WhatsApp Group Join Now
Telegram Group Join Now

ಸರ್ಕಾರಿ ಹುದ್ದೆಗಳನ್ನು ಪಡೆಯಬೇಕು ಎಂದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲೇಬೇಕು. ಕೇಂದ್ರ ಸರ್ಕಾರದ ಉದ್ಯೋಗವಾಗಲಿ, ರಾಜ್ಯ ಸರ್ಕಾರದ ಉದ್ಯೋಗವಾಗಲಿ ಅಥವಾ ಬ್ಯಾಂಕಿಗ್ ಹುದ್ದೆಗಳು, ರೈಲ್ವೆ ಇಲಾಖೆ ಉದ್ಯೋಗಗಳು ಯಾವುದೇ ಆದರೂ ಕೂಡ ಸ್ಪರ್ಧಾತ್ಮಕ ಪರೀಕ್ಷೆಗಳು ಇದ್ದೇ ಇರುತ್ತವೆ.

ನಾವು ಇದುವರೆಗೂ ಕೂಡ ವಿದ್ಯಾಭ್ಯಾಸ ಮಾಡಿದ ವಿಷಯಗಳ ಆಧಾರದ ಮೇಲೆಯೇ ಪ್ರಶ್ನೆಗಳನ್ನು ಕೇಳಲಾದರೂ ಕೂಡ ಸ್ಪರ್ಧಾತ್ಮಕ ಪರೀಕ್ಷೆ ಓದು ಹಾಗೂ ಶೈಕ್ಷಣಿಕ ಓದು ಒಂದೇ ಎಂದು ಹೇಳಲಾಗುವುದಿಲ್ಲ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಮಾಡಿಕೊಳ್ಳುವ ತಯಾರಿಯೂ ಒಂದು ಶಿಸ್ತಿನ ಜೀವನ ಹಾಗೂ ಕರ್ತವ್ಯ ಪ್ರಜ್ಞೆ ಇನ್ನಿತರವಾದ ಜವಾಬ್ದಾರಿಗಳನ್ನು ನಮ್ಮೊಳಗೆ ತುಂಬುತ್ತದೆ.

ಒಂದು ರೀತಿಯಲ್ಲಿ ನಾವು ಸರ್ಕಾರಿ ನೌಕರ ಎನ್ನುವ ಭಾವನೆಯನ್ನು ಮನದಲ್ಲಿ ತುಂಬುತ್ತದೆ ಹಾಗಾಗಿ ನಮ್ಮ ಏಕಾಗ್ರತೆಯನ್ನು ಹೆಚ್ಚಿಸಿ ಗುರಿ ಕಡೆ ನಿಖರವಾಗಿ ಗಮನ ಕೊಡುವಂತೆ, ತರಬೇತಿ ನೀಡಲಾಗುವ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿಗಳಿಗೆ ಸೇರಿ ಅಂದುಕೊಂಡ ಕನಸನ್ನು ಶೀಘ್ರವಾಗಿ ಮುಟ್ಟಲು ಪ್ರತಿಯೊಬ್ಬರೂ ಕೂಡ ನಗರ ಪ್ರದೇಶಗಳಿಗೆ ಬಂದು ಕಲಿಯುತ್ತಾರೆ.

ಆದರೆ ಎಲ್ಲರಿಗೂ ಈ ಸೌಕರ್ಯ ಇರುವುದಿಲ್ಲ ಹಣಕಾಸಿನ ಕೊರತೆಯಿಂದಾಗಿ ಇಂತಹ ಅನುಕೂಲತೆಯಿಂದ ಪ್ರತಿಭಾವಂತ ವಿದ್ಯಾರ್ಥಿಗಳು ವಂಚಿತರಾಗಬಾರದು ಎಂದು ಸರ್ಕಾರವು ಕೂಡ ಕೆಲವರಿಗೆ ಸಹಾಯ ಮಾಡುತ್ತಿದೆ.

ಅಂತೆಯೇ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಉಚಿತವಾಗಿ ಅವರು ಬಯಸಿದ ಪರೀಕ್ಷೆಗೆ ತರಬೇತಿ ಕೊಡಿಸಲು ಸಹಾಯಧನವನ್ನು ನೀಡಲಾಗುತ್ತಿದೆ. ಇದರ ಕುರಿತು ಕೆಲ ಪ್ರಮುಖ ವಿಷಯವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ ಇದನ್ನು ಓದಿ ನೀವು ಅರ್ಹರಿದ್ದರೆ ತಪ್ಪದೆ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳಿ.

* ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ಜಾತಿ 3500, ಪರಿಶಿಷ್ಟ ಪಂಗಡ 1500 ಸೀಟ್ ಗಳಿಗೆ ಸಹಾಯಧನ ಕೊಡಲು ನಿರ್ಧರಿಸಲಾಗಿದೆ. ಇವರಿಗೆ KEA ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಾಗುತ್ತದೆ ಇದರಲ್ಲಿ ಉತ್ತಮ ಅಂಕ ಗಳಿಸಿದ ಅಭ್ಯರ್ಥಿಗಳು ಈ ಸಹಾಯಧನವನ್ನು ಪಡೆಯುತ್ತಾರೆ.

* ಬೆಂಗಳೂರು, ಚೆನ್ನೈ, ದೆಹಲಿ ಹಾಗೂ ಹೈದ್ರಾಬಾದ್ ನ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ಪಡೆಯಲು ಅವಕಾಶ ಇರುತ್ತದೆ. ಅವರು ಆರಿಸಿಕೊಳ್ಳುವ ಸ್ಥಳದ ಆಧಾರದ ಮೇಲೆ ಸಹಾಯಧನ ನಿರ್ಧಾರವಾಗುತ್ತದೆ.

ಯಾವ ಪರೀಕ್ಷೆಗಳಿಗೆ ಎಷ್ಟು ತಿಂಗಳು ತರಬೇತಿ ಬೇಕಾಗಬಹುದು ಮತ್ತು ಸಿಗುವ ಸಹಾಯಧನವೆಷ್ಟು ಎನ್ನುವುದರ ವಿವರ ಕೆಳಗಿದೆ ನೋಡಿ.!

UPSC – 9 ತಿಂಗಳು
KPSC – 7 ತಿಂಗಳು
SSB – 3 ತಿಂಗಳು
Banking3 ತಿಂಗಳು
RRB3 ತಿಂಗಳು
Group C 3 ತಿಂಗಳು

UPSC

ದೆಹಲಿ – 10,000ರೂ.
ಹೈದರಾಬಾದ್ – 8,000ರೂ.
ಬೆಂಗಳೂರು – 6,000ರೂ.
ಚೆನ್ನೈ – 5,000ರೂ.
ಇನ್ನುಳಿದ ಯಾವುದೇ ಪರೀಕ್ಷೆ ತರಬೇತಿಗೆ 5,000

ಅರ್ಜಿ ಸಲ್ಲಿಸಲು ಅರ್ಹತೆಗಳು:-

1. ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು
2. ಈ ಹಿಂದೆ ಯೋಜನೆ ಅನುಕೂಲ ಪಡೆದಿದ್ದವರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ
3. ಕುಟುಂಬದ ಆದಾಯವು 5 ಲಕ್ಷದ ಒಳಗಿರಬೇಕು ಅರ್ಜಿ ಸಲ್ಲಿಸಲು ಇರುವ ಕಡೆಯ ದಿನಾಂಕದ ಒಳಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಅಂಗವಿಕಲ ಮತ್ತು ಇನ್ನಿತರ ಮೀಸಲಾತಿಗಳನ್ನು ಕೋರಿ ಅರ್ಜಿ ಸಲ್ಲಿಸುತ್ತಾರೆ ಆ ಎಲ್ಲ ದಾಖಲೆಗಳನ್ನು ಹೊಂದಿರಬೇಕು.

* ಅರ್ಜಿ ಸಲ್ಲಿಸುವ ವಿಧಾನ:-

www.sw.kar.nic.in ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬೇಕು.

* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 29.11.2023.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now