ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ಕಾಂಗ್ರೆಸ್ (Congress) ನೇತೃತ್ವದ ಸರ್ಕಾರವು ಅಧಿಕಾರ ಸ್ಥಾಪಿಸುವ ಮುನ್ನ ರಾಜ್ಯದ ಜನತೆಗೆ ಪಂಚ ಖಾತ್ರಿ ಯೋಜನೆಗಳ (Guarantee Scheme) ಗ್ಯಾರಂಟಿ ನೀಡಿತ್ತು. ಅಂತೆಯೇ ಈಗ ಹಂತ ಹಂತವಾಗಿ ಶಕ್ತಿ ಯೋಜನೆ, ಗೃಹ ಜ್ಯೋತಿ, ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಗಳನ್ನು ಜಾರಿಗೆ ತಂದಿದೆ.
ರಾಜ್ಯದಲ್ಲಿ ಡಿಪ್ಲೋಮಾ ಮತ್ತು ಪದವಿ ಪಡೆದು ಉದ್ಯೋಗ ಇಲ್ಲದೆ ನಿರುದ್ಯೋಗಿಗಳಾಗಿರುವ ವಿದ್ಯಾರ್ಥಿಗಳಿಗೆ ಅವರ ಜೀವನ ನಿರ್ವಹಣೆ ಖರ್ಚಿಗೆ ಮತ್ತು ಅವರ ಆರ್ಥಿಕ ಭದ್ರತೆಗೆ ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ನೀಡಲಾಗುವುದು ಎನ್ನುವುದು ಸಹ ಈ ಗ್ಯಾರಂಟಿ ಯೋಜನೆಗಳ ಪೈಕಿ ಒಂದಾಗಿತ್ತು.
ಯುವನಿಧಿ (Yuvandidhi) ಎನ್ನುವ ಹೆಸರಿನ ಈ ಯೋಜನೆಯು ಐದನೇ ಗ್ಯಾರೆಂಟಿ ಯೋಜನೆಯಾಗಿ ಇಂದಿನಿಂದ ಕಾರ್ಯರೂಪಕ್ಕೆ ಬರುತ್ತಿದೆ. ಡಿಸೆಂಬರ್ 26 ರಿಂದ ಯುವನಿಧಿ ಯೋಜನೆಗೆ ಅರ್ಜಿ ಆಹ್ವಾನ ಮಾಡಲಾಗುತ್ತಿದ್ದು ಅರ್ಜಿ ಸಲ್ಲಿಸಲು ಸರ್ಕಾರ ಹಾಕಿರುವ ಕಂಡೀಷನ್ ಗಳೇನು? ಏನೆಲ್ಲ ದಾಖಲೆಗಳು ಬೇಕಾಗುತ್ತದೆ ಮತ್ತು ಎಂದು ಅರ್ಜಿ ಸಲ್ಲಿಸಬೇಕು ಎನ್ನುವುದರ ಕುರಿತು ಪ್ರಮುಖ ಮಾಹಿತಿ ಹೀಗಿದೆ ನೋಡಿ.
ಯೋಜನೆಯ ಹೆಸರು:- ಯುವನಿಧಿ ಯೋಜನೆ
ಅರ್ಜಿ ಸಲ್ಲಿಸಲು ಇರುವ ಕಂಡಿಷನ್ ಗಳು:-
1. ಗ್ಯಾರಂಟಿ ಯೋಜನೆಗಳಿಗೆ ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳಷ್ಟೇ ಅರ್ಹರಾಗಿರುತ್ತಾರೆ.
2. 2022-23 ನೇ ಸಾಲಿನಲ್ಲಿ ಅಂತಿಮ ವರ್ಷದ ಪದವಿ ಹಾಗೂ ಅಂತಿಮ ವರ್ಷದ ಡಿಪ್ಲೋಮಾ ಪರೀಕ್ಷೆಗಳನ್ನು ಉತ್ತೀರ್ಣರಾಗಿರಬೇಕು ಮತ್ತು ಡಿಪ್ಲೊಮಾ ಅಥವಾ ಪದವಿ ಉತ್ತೀರ್ಣರಾಗಿ ಆರು ತಿಂಗಳು ಕಳೆದರೂ ಕೆಲಸ ಸಿಗದಿದ್ದರೆ ಮಾತ್ರ ಅರ್ಜಿ ಸಲ್ಲಿಸಬೇಕು.
3. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ನಿರುದ್ಯೋಗಿಗಳು ಎನ್ನುವುದಕ್ಕೆ ಸ್ವಯಂ ಧೃಡೀಕರಣ ಪತ್ರ ಸಲ್ಲಿಸಬೇಕು ಮತ್ತು ಅದನ್ನು ನೋಟರಿ ಮಾಡಿಸಬೇಕು
4. ಯಾವುದೇ ಸರ್ಕಾರಿ ಅಥವಾ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವುದು, ಅಪ್ರೆಂಟಿಸ್ ಶಿಪ್ ನಲ್ಲಿ ಕೆಲಸ ಮಾಡುತ್ತಿರುವವರು ನಿರುದ್ಯೋಗಿಗಳಲ್ಲ ಹಾಗಾಗಿ ಇವರು ಅರ್ಜಿ ಸಲ್ಲಿಸಲು ಅರ್ಹರಲ್ಲ
5. 2022-23 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪದವಿ ಅಥವಾ ಡಿಪ್ಲೋಮೋ ಉತ್ತೀರ್ಣರಾಗಿದ್ದರು ವಿದ್ಯಾಭ್ಯಾಸ ಮುಂದುವರಿಸಲು ಮುಂದಿನ ಶೈಕ್ಷಣಿಕ ತರಗತಿಗಳಿಗೆ ದಾಖಲಾಗುವುದಾದರೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
6. ನಿರುದ್ಯೋಗ ಭತ್ಯೆ ಪಡೆಯುವ ಸಂದರ್ಭದಲ್ಲಿ ಕೆಲಸ ಸಿಕ್ಕಿದರೆ ಅದನ್ನು ಕೂಡ ಘೋಷಿಸಿಕೊಳ್ಳಬೇಕು ತಕ್ಷಣವೇ ಆ ತಿಂಗಳಿಂದ ನಿರುದ್ಯೋಗ ಭತ್ಯೆ ಕಡಿತಗೊಳ್ಳುತ್ತದೆ. ಇಲ್ಲವಾದಲ್ಲಿ ಸರ್ಕಾರದಿಂದ ಮಾಹಿತಿ ಮರೆಮಾಚಿದರೆ ದಂಡ ಬೀಳುತ್ತದೆ.
ನಿರುದ್ಯೋಗ ಭತ್ಯೆ ಮೊತ್ತ:-
* ಡಿಪ್ಲೋಮೋ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ರೂ.1500
* ಪದವಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ರೂ.3,000
ಅರ್ಜಿ ಸಲ್ಲಿಸುವ ದಿನಾಂಕ:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – ಡಿಸೆಂಬರ್ 26, 2023 * ಜನವರಿ 2024ರ 26ನೇ ತಾರೀಖಿನ ಒಳಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಜನವರಿ ತಿಂಗಳಿನಿಂದಲೇ ನಿರುದ್ಯೋಗ ಭತ್ಯೆ ನೆರವು ಸಿಗುವ ಸಾಧ್ಯತೆ ಇದೆ.
ಅರ್ಜಿ ಸಲ್ಲಿಸುವ ವಿಧಾನ:-
1. ಸೇವಾ ಸಿಂಧು ಪೋರ್ಟಲ್ ಮೂಲಕವೇ ಆನ್ಲೈನಲ್ಲಿ ಅರ್ಜಿ ಸಲ್ಲಿಸಬೇಕು.
2. ಹತ್ತಿರದ ಯಾವುದೇ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳಲ್ಲಿ ದಾಖಲೆಗಳನ್ನು ಕೊಟ್ಟು ಅರ್ಜಿ ಸಲ್ಲಿಸಬೇಕು.
* ವೆಬ್ಸೈಟ್ ವಿಳಾಸ:-
https://sevasindhu.karnataka.gov.in.