ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಇರುವವರು ಖಂಡಿತವಾಗಿಯೂ ತಮ್ಮ ದುಡಿಮೆಯಲ್ಲಿ ಸ್ವಲ್ಪ ಮೊತ್ತದ ಹಣವನ್ನು ಅವರಿಗಾಗಿ ಉಳಿತಾಯ ಮಾಡುತ್ತಾರೆ. ಈ ಹಣವು ಮುಂದೆ ಅವರ ವಿದ್ಯಾಭ್ಯಾಸದ ಖರ್ಚಿಗೆ, ಮದುವೆ ಖರ್ಚಿಗೆ ಅಥವಾ ಮಕ್ಕಳು ಭವಿಷ್ಯದಲ್ಲಿ ಯಾವುದಾದರೂ ಸಣ್ಣ ಪುಟ್ಟ ವ್ಯಾಪಾರ ಮಾಡಲು ಬಯಸಿದರೆ ಆ ಖರ್ಚಿಗೆ ಬಂಡವಾಳವಾಗಿ ಅನುಕೂಲಕ್ಕೆ ಬರುತ್ತದೆ.
ಹಾಗಾಗಿ ಪ್ರತಿಯೊಬ್ಬರೂ ಕೂಡ ತಮಗೆ ಹೆಣ್ಣು ಮಕ್ಕಳಿರಲಿ, ಗಂಡು ಮಕ್ಕಳಿರಲಿ ಅವರಿಗಾಗಿ ಈ ರೀತಿ ಹಣ ಉಳಿಸುವುದು ಮುಖ್ಯ. ಇಂಥ ಧೀರ್ಘ ಕಾಲ ಉಳಿತಾಯಗಳಿಗೆ LIC ಯಲ್ಲಿ ವಿಮಾ ಪಾಲಿಸಿಗಳಿವೆ, ಅದನ್ನು ಹೊರತುಪಡಿಸಿ ಅಂಚೆ ಕಚೇರಿಯ FD, PPF, ಮತ್ತು ಹೆಣ್ಣು ಮಕ್ಕಳಿಗಾಗಿಯೇ ಇರುವ ಸುಕನ್ಯ ಸಮೃದ್ಧಿ ಯೋಜನೆ ಬಹಳ ಅನುಕೂಲಕರವಾಗಿವೆ.
ಯಾಕೆಂದರೆ ಕಡಿಮೆ ಮೊತ್ತದ ಹಣವನ್ನು ಹೂಡಿಕೆ ಮಾಡಿ ಅವಶ್ಯಕತೆ ಇದ್ದ ಸಮಯದಲ್ಲಿ ಹೆಚ್ಚಿನ ಹಣವನ್ನು ಪಡೆಯಬಹುದು. ಈಗ ಇದೇ ರೀತಿಯ ಮತ್ತೊಂದು ಯೋಜನೆಯನ್ನು ಪೋಸ್ಟ್ ಆಫೀಸ್ ನಲ್ಲಿ ಎಲ್ಲಾ ಮಕ್ಕಳಿಗಾಗಿ ಜಾರಿಗೆ ತರಲಾಗಿದೆ. ಬಾಲ್ ಜೀವನ್ ವಿಮಾ (Bal Jeevan Bhima) ಎನ್ನುವ ಈ ವಿಶೇಷ ಯೋಜನೆ ಬಗ್ಗೆ ಕೆಲ ಮಾಹಿತಿಯನ್ನು ಈ ಅಂಕಣದಲ್ಲಿ ಹಂಚಿಕೊಳ್ಳುತ್ತಿದ್ದೇವೆ.
* ಪೋಸ್ಟ್ ಆಫೀಸ್ ನಲ್ಲಿ ಮಕ್ಕಳಿಗಾಗಿಯೇ ಈ Bal Jeevan Bhima ಜೀವ ವಿಮಾ ಯೋಜನೆಯು ಪರಿಚಯಿಸಲಾಗಿದೆ.
* ಈ ಯೋಜನೆಯು ಪೋಸ್ಟಲ್ ಲೈಫ್ ಇನ್ಶೂರೆನ್ಸ್ (Postal Life Insurance) ಅಡಿಯಲ್ಲಿ ನಡೆಸಲ್ಪಡುತ್ತದೆ. ಈ ಯೋಜನೆಯ ಅಡಿಯಲ್ಲಿ, ಮೆಚ್ಯೂರಿಟಿ ಅವಧಿಯಲ್ಲಿ ಲಕ್ಷದವರೆಗಿನ ಮೊತ್ತದ ವಿಮಾ ಮೊತ್ತವನ್ನು ಪಡೆಯುವ ಅವಕಾಶ ಇದೆ.
* Bal Jeevan Bhima ಯೋಜನೆಯನ್ನು 5 ವರ್ಷದಿಂದ 20 ವರ್ಷ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಖರೀದಿಸಬಹುದು.
* ತಮ್ಮ ಮಕ್ಕಳಿಗೆ ಈ ವಿಮಾ ಯೋಜನೆಯನ್ನು ಖರೀದಿಸಲು ಬಯಸುವ ಪೋಷಕರ ವಯಸ್ಸು 45 ವರ್ಷಕ್ಕಿಂತ ಹೆಚ್ಚಿಗೆ ಇರಬಾರದು. ಪೋಸ್ಟ್ ಆಫೀಸ್ ಮಕ್ಕಳ ಜೀವ ವಿಮೆಯನ್ನು ಮಕ್ಕಳ ಹೆಸರಿನಲ್ಲಿ ಅವರ ಪೋಷಕರು ಖರೀದಿಸುತ್ತಾರೆ.
* ಈ ಯೋಜನೆಯನ್ನು ಪೋಷಕರು ತಮ್ಮ ಮೊದಲ ಎರಡು ಮಕ್ಕಳ ಹೆಸರಿನಲ್ಲಿ ಮಾತ್ರ ಖರೀದಿಸಬಹುದು
* ಪೋಸ್ಟಲ್ ಲೈಫ್ ಇನ್ಶೂರೆನ್ಸ್ ಅಡಿಯಲ್ಲಿ, ರೂ. 3 ಲಕ್ಷದ ವರೆಗಿನ ವಿಮಾ ಮೊತ್ತವು ಕೂಡ ಲಭ್ಯವಿದೆ.
* ಆದರೆ ನೀವು ರೂರಲ್ ಪೋಸ್ಟಲ್ ಲೈಫ್ ಇನ್ಶೂರೆನ್ಸ್ (RPLI) ಅಡಿಯಲ್ಲಿ ಪಾಲಿಸಿಯನ್ನು ತೆಗೆದುಕೊಂಡಿದ್ದರೆ ನಂತರ ಪಾಲಿಸಿದಾರರು ರೂ. 1 ಲಕ್ಷದ ವರೆಗೆ ವಿಮಾ ಮೊತ್ತವನ್ನು ಪಡೆಯುತ್ತೀರಿ.
* ನೀವು ರೂರಲ್ ಪೋಸ್ಟಲ್ ಲೈಫ್ ಇನ್ಶೂರೆನ್ಸ್ ಅಡಿಯಲ್ಲಿ ಈ ಪಾಲಿಸಿಯನ್ನು ತೆಗೆದುಕೊಂಡಿದ್ದರೆ, ನಂತರ ರೂ. 1000 ರ ವಿಮಾ ಮೊತ್ತದಲ್ಲಿ, ನಿಮಗೆ ಪ್ರತಿ ವರ್ಷ ರೂ 48 ಬೋನಸ್ ಸಹ ಸೇರಿಸಲಾಗುತ್ತದೆ. ಆದರೆ ಪೋಸ್ಟಲ್ ಲೈಫ್ ಇನ್ಶೂರೆನ್ಸ್ ಅಡಿಯಲ್ಲಿ, ಪ್ರತಿ ವರ್ಷ ರೂ. 52 ಬೋನಸ್ ನೀಡಲಾಗುತ್ತದೆ.
* ಎಲ್ಲಾ ಅಂಚೆ ಕಚೇರಿ ಯೋಜನೆಗಳಂತೆ ನಾಮಿನಿ ಫೆಸಿಲಿಟಿ ಕೂಡ ಇದೆ.
* ಅಂಚೆ ಕಚೇರಿಗಳಲ್ಲಿ ಮಾತ್ರ ಈ ಯೋಜನೆಯನ್ನು ಖರೀದಿಸಬಹುದು. ಇದರ ಕುರಿತು ಹೆಚ್ಚಿನ ಮಾಹಿತಿಗಾಗಿ ಹತ್ತಿರದಲ್ಲಿರುವ ಅಂಚೆ ಕಚೇರಿ ಶಾಖೆಗೆ ಭೇಟಿ ಕೊಡಿ ಅಥವಾ ಅಂಚೆ ಕಚೇರಿ ಅಧಿಕೃತ ವೆಬ್ಸೈಟ್ ಗಳಲ್ಲಿ ಹುಡುಕಾಡಿ ಹೆಚ್ಚಿನ ಮಾಹಿತಿ ಪಡೆಯಿರಿ.