ಉದ್ಯೋಗ ಆರಂಭ ಮಾಡುವುದಕ್ಕಿಂತ ಉದ್ದಿಮೆ ಆರಂಭಿಸಲು ಹೆಚ್ಚು ಜನ ಆಸಕ್ತಿ ತೋರುತ್ತಾರೆ. ಆದರೆ ಅವರಿಗೆ ಬಂಡವಾಳ ಇರುವುದಿಲ್ಲ. ಅಂತವರಿಗಾಗಿ ಸರ್ಕಾರ ಅನೇಕ ಬಗೆಯ ಯೋಚನೆಗಳನ್ನು ರೂಪಿಸಿದೆ. ಅಂತೆಯೇ ಈಗ ಹೋಟೆಲ್ ಉದ್ಯಮದಲ್ಲಿ ಆಸಕ್ತಿ ಹೊಂದಿರುವವರಿಗೂ ಕೂಡ ಕರ್ನಾಟಕ ರಾಜ್ಯ ಸರ್ಕಾರ ಹೋಟೆಲ್ ಯೋಜನೆ ಆರಂಭಿಸಿದ್ದು ಈ ಬಗ್ಗೆ ಕನಸು ಹೊಂದಿರುವವರು ಸರ್ಕಾರದಿಂದ ಸಬ್ಸಿಡಿ ರೂಪದ ಸಾಲ ಪಡೆಯುವುದರಿಂದ ತಮ್ಮ ಕನಸನ್ನು ನನಸು ಮಾಡಿಕೊಳ್ಳಬಹುದು. ಈ ಉದ್ಯಮವನ್ನು ಆರಂಭಿಸಲು ಸರ್ಕಾರದಿಂದ ಏನೆಲ್ಲಾ ನೆರವು ಸಿಗುತ್ತಿದೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ.
ಯಾರು ಅರ್ಹರು:-
● ಕರ್ನಾಟಕ ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮವು ರಾಜ್ಯದಲ್ಲಿ 3B ಕೆಟಗರಿಯಲ್ಲಿ ಬರುವ ವೀರಶೈವ ಲಿಂಗಾಯತ ಜಾತಿ ಹಾಗೂ ಉಪ ಜಾತಿಗೆ ಸೇರುವವರಿಗೆ ಭೋಜನಾಲಯ ಕೇಂದ್ರ ಅಥವಾ ಲಿಂಗಾಯಿತ ಖಾನಾವಳಿ ಹೆಸರಿನಲ್ಲಿ ಹೋಟೆಲ್ ತೆರೆಯಲು.
● ಕರ್ನಾಟಕ ಮರಾಠ ಸಮುದಾಯ ಅಭಿವೃದ್ಧಿ ನಿಗಮವು ಕೂಡ ಮರಾಠಿ ಮಿಲ್ಟ್ರಿ ಹೋಟೆಲ್ ಯೋಜನೆಗೆ ಹಿರಿಯ ಹಿಂದುಳಿದ ವರ್ಗ ಪ್ರವರ್ಗ 3B, 2A-2F ವರೆಗೆ ಬರುವ ಮರಾಠ ಜಾತಿಗೆ ಮತ್ತು ಉಪಜಾತಿಗೆ ಸೇರಿದವರಿಗೆ ನೆರವು ನೀಡುತ್ತಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಇರುವ ಕಂಡಿಷನ್ ಗಳು:-
● ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು, ಖಾಯಂ ವಿಳಾಸ ಕರ್ನಾಟಕ ರಾಜ್ಯವಾಗಿರಬೇಕು.
●ಅರ್ಜಿ ಸಲ್ಲಿಸಲು ಕನಿಷ್ಠ 15ರಿಂದ ಗರಿಷ್ಠ 55 ವರ್ಷದ ಒಳಗಿನವರಾಗಿರಬೇಕು.
● ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ, ಕುಟುಂಬವು ಕಳೆದ ಮೂರು ವರ್ಷಗಳಿಂದ ಸರ್ಕಾರದ ಯಾವುದೇ ಇಲಾಖೆ /ನಿಗಮದ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆದಿರಬಾರದು.
● ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ಗ್ರಾಮೀಣ ಭಾಗದವರಿಗೆ 28,000 ನಗರ ಪ್ರದೇಶದವರೆಗೆ 1,20,000ರೂ. ಮೀರಿರಬಾರದು.
● ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹೋಟೆಲ್ ನಡೆಸಲು ಸಂಬಂಧಪಟ್ಟ ಪರವಾನಿಗಳು, FASSAI ಸರ್ಟಿಫಿಕೇಟ್, ಫುಡ್ ಲೈಸೆನ್ಸ್ ಹೊಂದಿರಬೇಕು.
● ವಿಶೇಷ ಚೇತನರಿಗೆ 5%, ಅವಿವಾಹಿತ ಮಹಿಳೆಯರು, ವಿಧವೆಯರ ಹಾಗೂ ವಿಚ್ಛೇದಿತ ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುವುದು.
● ಅರ್ಜಿ ಸಲ್ಲಿಸುವವರ ಹೆಸರಿನಲ್ಲಿ ಕನಿಷ್ಠ 20×30 ನಿವೇಶನ ಇರಬೇಕು.
ಗೋಡೆ ಅಥವಾ ಮನೆ ಮೇಲೆ ಈ ಗಿಡ ಬೆಳೆದಿದೆಯಾ.? ಗಿಡ ಕಿತ್ತು ಹಾಕುವ ಮುನ್ನ ಈ ವಿಷಯ ತಪ್ಪದೆ ತಿಳ್ಕೋಳಿ.!
ಸಹಾಯಧನ:-
● ಘಟಕ ವೆಚ್ಚಕ್ಕೆ 5 ಲಕ್ಷ ರೂಪಾಯಿ ನಿಗದಿಪಡಿಸಲಾಗಿದ್ದು ಇದರಲ್ಲಿ 4,60,000ರೂ. ಸಾಲವಾಗಿರುತ್ತದೆ, 40,000 ಸಬ್ಸಿಡಿ ಸಿಗುತ್ತದೆ.
● ಬ್ಯಾಂಕ್ ನಿಯಮದಂತೆ ಕಂತುಗಳ ಮೂಲಕ ಈ ಸಾಲವನ್ನು ತಿಳಿಸಬೇಕು.
ಬೇಕಾಗುವ ದಾಖಲೆಗಳು:-
● ಆಧಾರ್ ಕಾರ್ಡ್
● ಭಾವಚಿತ್ರ
● ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
● ಜಾತಿ ಮತ್ತು ಆದಾಯ ಪ್ರಮಾಣ ಪತ್ರ
● ಈ ಮೇಲೆ ತಿಳಿಸಿದಂತೆ ಹೋಟೆಲ್ ನಡೆಸಲು ಸಕ್ಷಮ ಪ್ರಾಧಿಕಾರಗಳಿಂದ ಪಡೆದ ಪರವಾನಗಿ ಮತ್ತು ಇನ್ನಿತರ ಸರ್ಟಿಫಿಕೇಟ್ ಗಳು
● ಬ್ಯಾಂಕ್ ಪಾಸ್ ಬುಕ್ ( ಬ್ಯಾಂಕ್ ಅಕೌಂಟಿಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಆಗಿರಬೇಕು, ಮೊಬೈಲ್ ಸಂಖ್ಯೆ ಕೂಡ ಲಿಂಕ್ ಆಗಿರಬೇಕು).
ಅರ್ಜಿ ಸಲ್ಲಿಸುವ ವಿಧಾನ:-
● https://sevasindhu.karnataka.gov.in ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
● ಹತ್ತಿರದಲ್ಲಿರುವ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಸೇವಾಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 30 ಅಕ್ಟೋಬರ್, 2024.
ಸಹಾಯವಾಣಿ ಸಂಖ್ಯೆಗಳು:-
● ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ
080-22865522, 9900012351
● ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ
8867537799