SSLC ಅಂಕಪಟ್ಟಿ (Marks card) ಒಂದು ಪ್ರಮುಖ ದಾಖಲೆಯಾಗಿದೆ. SSLC ಮುಗಿದ ನಂತರ ಮುಂದಿನ ಶಿಕ್ಷಣಕ್ಕೆ ಅದನ್ನೇ ಪ್ರಮುಖ ದಾಖಲೆಯಾಗಿ ನೀಡುವುದರಿಂದ ಈ ಅಂಕಪಟ್ಟಿಯಲ್ಲಿ ಯಾವ ರೀತಿ ಮಾಹಿತಿಗಳು ಇರುತ್ತವೆ ಮುಂದೆ ಅದೇ ಮಾಹಿತಿಗಳು PUC ಹಾಗೂ ಡಿಗ್ರಿ ಅಂಕ ಪಟ್ಟಿಗಳಲ್ಲಿ ಮುಂದುವರೆಯುತ್ತವೆ.
ಹಾಗಾಗಿ SSLC ಅಂಕಪಟ್ಟಿಯಲ್ಲಿ ಹೆಸರು, ತಂದೆ-ತಾಯಿ ಹೆಸರು, ಹುಟ್ಟಿದ ದಿನಾಂಕ, ವಿಳಾಸ ಇವುಗಳೆಲ್ಲ ಸರಿಯಾಗಿರಬೇಕು. ಒಂದು ವೇಳೆ ಇವುಗಳಲ್ಲಿ ವ್ಯತ್ಯಾಸವಿದ್ದರೆ ಮುಂದೆ ಸರ್ಕಾರಿ ಉದ್ಯೋಗದ ಸಮಯದಲ್ಲಿ ಅಥವಾ ಇನ್ಯಾವುದೇ ಪ್ರಮುಖ ವಿಷಯಕ್ಕೆ ದಾಖಲೆಯಾಗಿ ನೀಡಿದಾಗ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.
ಈ ರೀತಿ SSLC ಅಂಕಪಟ್ಟಿಯಲ್ಲಿ ತಪ್ಪುಗಳು ಇದ್ದಾಗ ಅದನ್ನು ತಿದ್ದುಪಡಿ ಮಾಡಿಸಿಕೊಳ್ಳುವುದಕ್ಕೆ ಹಿಂದೆ ಅನೇಕ ಸವಾಲುಗಳು ಎದುರಾಗುತ್ತಿತ್ತು ಈಗ ಅದನ್ನು ಸರಳಗೊಳಿಸಲಾಗಿದೆ ಮತ್ತು ಆನ್ಲೈನ್ ಮೂಲಕವೇ ತಿದ್ದುಪಡಿ (Markscard correction) ಮಾಡಿಕೊಳ್ಳಲು ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿ (KSEB) ಅನುಮತಿ ಮಾಡಿಕೊಟ್ಟಿದೆ.
ತಿದ್ದುಪಡಿ ಮಾಡಿಕೊಳ್ಳಲು ಅನುಸರಿಸಬೇಕಾದ ವಿಧಾನ:-
● ಮೊದಲಿಗೆ SSLC ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಅಂಕಪಟ್ಟಿ ಪಡೆದ ನಂತರ ಏನೆಲ್ಲ ತೊಂದರೆಗಳಿವೆ ಎಂದು ತಿಳಿದುಕೊಳ್ಳಬೇಕು. ತಂದೆ ಅಥವಾ ತಾಯಿಯ ಹೆಸರು, ಜನ್ಮ ದಿನಾಂಕ, ಊರು ಅಥವಾ ಹೆಸರಿನಲ್ಲಿ ಸ್ಪೆಲ್ಲಿಂಗ್ ಮುಂತಾದ ಮಾಹಿತಿಗಳು ತಪ್ಪಾಗಿ ಮುದ್ರಿತವಾಗಿರುತ್ತವೆ.
● ತಪ್ಪಾಗಿರುವ ಮಾಹಿತಿಗಳ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯರಿಗೆ (head master) ತಿಳಿಸಬೇಕು.
● ಮುಖ್ಯೋಪಾಧ್ಯಯರು ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿಗೆ ಆನ್ಲೈನ್ ಮೂಲಕ ನಿಮ್ಮ ಸಮಸ್ಯೆ ಕುರಿತ ಮಾಹಿತಿಯನ್ನು ರವಾನಿಸುತ್ತಾರೆ.
● ನಂತರ ತಿದ್ದುಪಡಿಗೆ ನಿಗದಿಪಡಿಸಿರುವ ಶುಲ್ಕವನ್ನು ಬ್ಯಾಂಕಿನ ಡೆಬಿಟ್ ಕಾರ್ಡ್(debit card )ಮತ್ತು ಕ್ರೆಡಿಟ್ ಕಾರ್ಡ್(credit card ) ಮೂಲಕ ಆನ್ಲೈನ್ ನಲ್ಲಿ ಪಾವತಿಸಬೇಕು.
● ಆಫ್ ಲೈನ್ ನಲ್ಲಿ ಕೂಡ ಇದಕ್ಕೆ ನಿಗದಿಪಡಿಸಿರುವ ಶುಲ್ಕವನ್ನು ಪಾವತಿ ಮಾಡಬಹುದು. ಇದಕ್ಕಾಗಿ ನಿಗದಿ ಪಡಿಸಿರುವ ಚಲನ್(chalan) ಡೌನ್ಲೋಡ್ ಮಾಡಿಕೊಂಡು ಯೂನಿಯನ್ ಬ್ಯಾಂಕಿನ (union bank )ಯಾವುದೇ ಶಾಖೆಗಳಲ್ಲಿ(branch) ಪಾವತಿಸಬಹುದು.
ಕರ್ನಾಟಕ ಶಾಲಾ ಪರೀಕ್ಷಾ ಮಂಡಳಿಯು ಈ ರೀತಿಯಾಗಿ ವಿದ್ಯಾರ್ಥಿಗಳಿಗೆ ಸುಲಭವಾದ ಮಾರ್ಗವನ್ನು ನೀಡಿದೆ. ಈ ವಿಧಾನದಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಕಳುಹಿಸಿದ ನಿಮ್ಮ ದಾಖಲೆಗಳನ್ನು ಮಂಡಳಿ ಕಚೇರಿ ಅಧಿಕಾರಿಗಳು ಪರಿಶೀಲನೆ ನಡೆಸಿ ನಂತರ ಮುಖ್ಯ ತಿದ್ದುಪಡಿಗಾಗಿ ವಿದ್ಯಾರ್ಥಿಗೆ ಈಗಾಗಲೇ ನೀಡಿದ್ದ ಮೂಲ ಅಂಕಪಟ್ಟಿಯನ್ನು ವಿಭಾಗದ ಕಚೇರಿಗೆ ಕಳುಹಿಸುವಂತೆ ಎಸ್ಎಮ್ಎಸ್ (SMS)ಮೂಲಕ ಮಾಹಿತಿಯನ್ನು ಕಳುಹಿಸುತ್ತದೆ.
ಮಂಡಳಿಯಿಂದ ಈ ರೀತಿಯ ಸೂಚನೆ ಬಂದ ಮೇಲೆ ವಿದ್ಯಾರ್ಥಿಗಳು ಕಡ್ಡಾಯವಾಗಿ ಈಗಾಗಲೇ ವಿತರಿಸಲಾಗಿದ್ದ ಮೂಲ ಅಂಕಪಟ್ಟಿಯನ್ನು ಹಿಂತಿರುಗಿಸಬೇಕು. ವಿದ್ಯಾರ್ಥಿಗಳು ತಮ್ಮ ಶಾಲೆಯ ಮುಖ್ಯ ಶಿಕ್ಷಕರಿಗೆ ಮೂಲ ಅಂಕ ಪಟ್ಟಿಯನ್ನು ವಿತರಿಸಿದರೇ ಅವರು ಮಂಡಳಿಗೆ ಅದನ್ನು ಕಳುಹಿಸಿಕೊಡುತ್ತಾರೆ ಆದರೆ ತಿದ್ದುಪಡಿಯಾದ ಅಂಕಪಟ್ಟಿ ಪಡೆಯುವ ಮೊದಲು ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಿರಬೇಕು.
ಈ ವಿಚಾರದಲ್ಲಿ ಶಾಲಾ ಮುಖ್ಯೋಪಾಧ್ಯಯರು ಬಹಳ ಎಚ್ಚರಿಕೆಯಿಂದ ಇರಬೇಕು. ಆನ್ಲೈನ್ ಮೂಲಕ ಕಳುಹಿಸುವ ಸಂದರ್ಭದಲ್ಲಿ ಆ ಶಾಲೆಯ ಮುಖ್ಯೋಪಾಧ್ಯಾಪಕರು ಅಪ್ಲೋಡ್ ಮಾಡಿದ ದಾಖಲೆಗಳನ್ನು ನಕಲು ಮಾಡಿದಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಇದು ಅತ್ಯಂತ ಪ್ರಮುಖ ಮಾಹಿತಿಯಾಗಿತ್ತು ಅನೇಕರಿಗೆ ಅನುಕೂಲವಾಗುತ್ತದೆ ಹಾಗಾಗಿ ಈ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.