ಅನೇಕ ಕಾರಣಗಳಿಂದಾಗಿ ನಮಗೆ ನಮ್ಮ ಗ್ರಾಮದ ನಕ್ಷೆ ಬೇಕಾಗಿರುತ್ತದೆ. ಗ್ರಾಮದ ಕಂದಾಯನಕ್ಷೆಗಳಲ್ಲಿ ಸಾಕಷ್ಟು ಮಾಹಿತಿಗಳು ಲಭ್ಯವಿರುತ್ತದೆ. ಇವು ಕೆಲವೊಮ್ಮೆ ನಿಮ್ಮ ಅವಶ್ಯಕತೆಗೂ ಬರುತ್ತವೆ ಹಾಗಾಗಿ ನಿಮ್ಮ ಬಳಿ ಇದರ ಒಂದು ಪ್ರಿಂಟ್ ಇಟ್ಟುಕೊಂಡರೆ ಉತ್ತಮ. ರೈತರಿಗೆ ತಮ್ಮ ಜಮೀನಿನ ಕಾಲು ದಾರಿ, ಬಂಡಿದಾರಿ ಅಥವಾ ಸರ್ವೇ ನಂಬರ್ ಅಥವಾ ಒತ್ತುವರಿ ಆಗಿರುವುದು ಇತ್ಯಾದಿ ವಿವರಗಳನ್ನು ತಿಳಿದುಕೊಳ್ಳಲು ಈ ನಕ್ಷೆ ಅನುಕೂಲಕ್ಕೆ ಬರುತ್ತದೆ.
ಪ್ರತಿಯೊಬ್ಬ ರೈತನಿಗೂ ಕೂಡ ಅನುಕೂಲವಾಗುವ ಮಾಹಿತಿ ಇದಾಗಿತ್ತು ಇದನ್ನು ಈಗ ಮೊಬೈಲ್ ನಲ್ಲಿ ಪಡೆದುಕೊಳ್ಳಬಹುದಾಗಿದೆ ಈಗ ನಾವು ಹೇಳುವ ಈ ವಿಧಾನವನ್ನು ಅನುಸರಿಸಿ ಮೊಬೈಲ್ ನಲ್ಲಿ ಈ ಮಾಹಿತಿ ಚೆಕ್ ಮಾಡಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಹೆಚ್ಚಿನ ರೈತರ ಜೊತೆ ಹಂಚಿಕೊಳ್ಳಿ.
● ನಿಮ್ಮ ಮೊಬೈಲ್ ನಲ್ಲಿ landrecords.karnataka.gov.in ಎಂದು ಟೈಪ್ ಮಾಡಿ ಸರ್ಚ್ ಕೊಡಿ.
● ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ ಓಪನ್ ಆಗುತ್ತದೆ.
● ಇದರಲ್ಲಿ ಮೋಜಿನಿ ಹಾಗೂ ಸರ್ವೆ ಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಸಿಗುತ್ತದೆ.
● ಪೇಜ್ ಸ್ಕ್ರೋಲ್ ಮಾಡಿದಾಗ ಆಲ್ ಸರ್ವಿಸಸ್ (All services) ಎಂದು ಇರುತ್ತದೆ, ಅದನ್ನು ಮೋಜಿಣಿ ಎನ್ನುವುದನ್ನು ಸೆಲೆಕ್ಟ್ ಮಾಡಿ.
● ಮತ್ತೊಂದು ವಿಂಡೋ ಓಪನ್ ಆಗುತ್ತದೆ, ಮೋಜಿನಿ ಸೇವೆಗಳು ಎಂದು ಇರುತ್ತದೆ. ಅದರಲ್ಲಿ ಸ್ಕ್ರೋಲ್ ಮಾಡಿ ಕಂದಾಯ ನಕ್ಷೆಗಳು ಗ್ರಾಮ ನಕ್ಷೆಗಳನ್ನು ವೀಕ್ಷಿಸಲು ಎನ್ನುವುದನ್ನು ಸೆಲೆಕ್ಟ್ ಮಾಡಿ.
● Revenue map online ಎನ್ನುವ ಪೇಜ್ ಕಾಣುತ್ತದೆ ಅದರಲ್ಲಿ ನಿಮ್ಮ ಗ್ರಾಮದ ವಿವರವನ್ನು ಚೆಕ್ ಮಾಡಲು ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಹೆಸರನ್ನು ಸೂಚಿಸಿರುವ ಆಪ್ಷನ್ಗಳಲ್ಲಿ ಸರಿಯಾಗಿ ಫಿಲ್ ಮಾಡಬೇಕು.
● Map type ಎನ್ನುವ ಆಪ್ಷನ್ ನಲ್ಲಿ All ಎಂದು ಇರಲಿ
● ನೀವು ಮಾಹಿತಿ ಫಿಲ್ ಮಾಡಿ ಸರ್ಚ್ ಕೊಟ್ಟ ತಕ್ಷಣ ನೀವು ಕೊಟ್ಟ ಮಾಹಿತಿಯಲ್ಲಿ ಬರುವ ಎಲ್ಲಾ ಗ್ರಾಮ ಪಂಚಾಯಿತಿಗಳ ಹೆಸರು ಕೂಡ ಬರುತ್ತದೆ ಅದರಲ್ಲಿ ನಿಮ್ಮ ಗ್ರಾಮ ಸೆಲೆಕ್ಟ್ ಮಾಡಿ ಅದರ ಮುಂದಿರುವ pdf ಫೈಲ್ ಮೇಲೆ ಕ್ಲಿಕ್ ಮಾಡಿ.
● ತಕ್ಷಣ ನಿಮ್ಮೂರಿನ ರೆವಿನ್ಯೂ ಮ್ಯಾಪ್ ಓಪನ್ ಆಗುತ್ತದೆ.
● ಮ್ಯಾಪ್ ಜೊತೆಗೆ ವಿವರಣೆ ಹಾಗೂ ಚಿಹ್ನೆಗಳನ್ನು ಕೊಟ್ಟಿರುತ್ತದೆ ಚಿಹ್ನೆಗಳ ಆಧಾರದ ಮೇಲೆ ನಿಮ್ಮ ಊರಿನ ಬಂಡಿ ದಾರಿ, ಕಾಲುದಾರಿ, ಹಳ್ಳಗಳು, ನೀರಿನ ತೊರೆಗಳು, ಹಳೆ ಕಾಲದ ಸರ್ಕಾರಿ ಮರಗಳು, ನಿಮ್ಮ ಗ್ರಾಮದ ವಸತಿ ನಕ್ಷೆ ಹಾಗೂ ಹೊಲದ ನಕ್ಷೆ ಕೂಡ ನೋಡಬಹುದು. ನಿಮ್ಮ ಜಮೀನಿನ ಮಾಹಿತಿ ಕೂಡ ನೋಡಬಹುದು. ಇದರಿಂದ ನಿಮ್ಮ ಜಮೀನು ಎಷ್ಟು ಒತ್ತುವರಿಯಾಗಿದೆ ಎನ್ನುವುದರ ಮಾಹಿತಿ ಕೂಡ ಇದರ ಮೂಲಕ ನಿಮಗೆ ತಿಳಿಯುತ್ತದೆ.
● ನಿಮ್ಮ ಗ್ರಾಮದ ಗಡಿ ಕುರಿತು, ನಿಮ್ಮ ಗ್ರಾಮದಲ್ಲಿ ಎಷ್ಟು ಸರ್ವೆ ನಂಬರ್ ಗಳಿವೆ ಎನ್ನುವುದರ ಖಚಿತ ಮಾಹಿತಿ ತಿಳಿಯುತ್ತದೆ.
● ಇದನ್ನು ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳುವ ಆಪ್ಷನ್ ಕೂಡ ಇದೆ.
● ಆದರೆ ಮುಖ್ಯವಾದ ವಿಷಯವೇನೆಂದರೆ ಇದನ್ನು ನಿಮ್ಮ ಮಾಹಿತಿಗಾಗಿ ಇಟ್ಟುಕೊಳ್ಳಬಹುದು ಹೊರತು ಕಾನೂನಿನ ಪ್ರಕ್ರಿಯೆಗಳಿಗೆ ಇವುಗಳನ್ನು ಬಳಸಲು ಆಗುವುದಿಲ್ಲ. ಒಂದು ವೇಳೆ ನಿಮಗೆ ಲೀಗಲ್ ಪರ್ಪೋಸ್ ಗಾಗಿ ಧೃಡೀಕೃತ ನಿಮ್ಮ ಗ್ರಾಮದ ನಕ್ಷೆ ಬೇಕಾದಲ್ಲಿ ಕಂದಾಯ ಇಲಾಖೆಯ ಕಚೇರಿಗೆ ಹೋಗಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು.