ಚಿತ್ರರಂಗದಲ್ಲಿ ಆಗಾಗ ಸ್ಟಾರ್ ಗಳ ನಡುವೆ ವಾರ್ ನಡೆಯುತ್ತಲೇ ಇರುತ್ತದೆ ಆದರೆ ಇದೀಗ ಸ್ಟಾರ್ ನಟರುಗಳ ಅಭಿಮಾನಿಗಳ ಮಧ್ಯದಲ್ಲಿ ವಾರ್ ಶುರುವಾಗಿದೆ ಈ ಒಂದು ವಿವಾದ ಎಲ್ಲಿಂದ ಶುರುವಾಗಿತ್ತು ಎಂದು ನೋಡುವುದಾದರೆ. ಬಾಕ್ಸ್ ಆಫೀಸ್ ಕರ್ನಾಟಕ ಎಂಬ ಟ್ವಿಟರ್ ಪೇಜ್ ನಲ್ಲಿ ದರ್ಶನ್ ಅವರು ಮಾತನಾಡಿರುವಂತಹ ಒಂದು ವಿಡಿಯೋ ತುಣುಕನ್ನು ಹಾಕಲಾಗಿತ್ತು ಹಾಗೆಯೆ ಅಲ್ಲಿ ಹೀಗೆ ಬರೆಯಲಾಗಿತ್ತು ನಿಮ್ಮ ಫ್ಯಾನ್ ಬೇಸ್ ತೋರಿಸೋಕೆ ಸತ್ತು ದೇವರಾಗಿರುವಂತಹ ಅಪ್ಪು ಸರ್ ಅವಮಾನಿಸುವುದು ಸರಿಯಲ್ಲ ನಿಮ್ಮ ಅಭಿಮಾನಿಗಳ ಬಗ್ಗೆ ಹೊಗಳಿ ಅದನ್ನು ಬಿಟ್ಟು ಇನ್ನೊಬ್ಬ ಅವಮಾನೀಯವಾಗಿ ಮಾತನಾಡುವುದು ಸರಿಯಲ್ಲ ನಿಮ್ಮ ಹೇಳಿಕೆ ಎಷ್ಟೋ ಫ್ಯಾನ್ಸ್ ಗೆ ನೋವು ಮಾಡಿದೆ ನೀವು ಕ್ಷಮೆ ಕೇಳಬೇಕು ಎಂದು ಟ್ವೀಟ್ ಅನ್ನು ಮಾಡಲಾಗುತ್ತದೆ ಈ ಒಂದು ಟ್ವಿಟ್ ವಿವಾದವನ್ನು ಸೃಷ್ಟಿ ಮಾಡಿ ಬಿಟ್ಟಿದೆ.
ಈ ಒಂದು ವಿಚಾರವಾಗಿ ದರ್ಶನ್ ಅವರು ಕ್ಷಮೆ ಕೇಳಬೇಕು ಎನ್ನುವಂತಹ ಸಾಕಷ್ಟು ರೀತಿಯಾದಂತಹ ಮಾತುಗಳು ಕೇಳಿ ಬರುತ್ತಿವೆ. ಈ ಸೋಶಿಯಲ್ ಮೀಡಿಯಾ ಎನ್ನುವಂತಹದ್ದು ಯಾರನ್ನು ಹೇಗೆ ಬೇಕಾದರೂ ಪ್ರತಿಬಿಂಬ ಮಾಡುವಂತಹದಾಗಿದೆ ಇದೀಗ ದರ್ಶನ್ ಅವರ ವಿಚಾರದಲ್ಲಿಯೂ ಸಹ ಅದೇ ಆಗಿದೆ ದರ್ಶನ್ ಅವರು ಪುನೀತ್ ರಾಜಕುಮಾರ್ ಅವರ ಬಗ್ಗೆ ಮಾತನಾಡಿರುವುದು ತಪ್ಪು ಎಂದು ಎಲ್ಲೂ ಹೇಳಲು ಸಾಧ್ಯವಿಲ್ಲ. ದರ್ಶನ್ ಅವರು ಮಾತನಾಡಿರುವಂತಹ ಪೂರ್ತಿ ವಿಡಿಯೋವನ್ನು ನೋಡಿದರೆ ನಮಗೆ ಸತ್ಯ ಏನು ಎನ್ನುವಂತಹದ್ದು ತಿಳಿಯುತ್ತದೆ. ಯಾರೋ ಒಬ್ಬರು ಸೋಶಿಯಲ್ ಮೀಡಿಯಾದಲ್ಲಿ ದರ್ಶನ್ ಅವರು ಪುನೀತ್ ರಾಜಕುಮಾರ್ ಅವರಿಗೆ ಅವಮಾನ ಮಾಡಿದರು ಎನ್ನುವಂತಹ ಒಂದು ವಿಷಯವನ್ನು ಎಲ್ಲರೂ ಓದಿ ದರ್ಶನ್ ಅವರ ಬಗ್ಗೆ ಅನೇಕ ರೀತಿಯಾದಂತಹ ತಪ್ಪು ಕಲ್ಪನೆಗಳನ್ನು ಮಾಡಿಕೊಳ್ಳುತ್ತಾರೆ, ಇದು ಒಂದು ಕಿಡಿಯನ್ನು ಹೆಚ್ಚಿಸುವಂತಹ ಕೆಲಸ ಎಂದು ಹೇಳಬಹುದು.
ಇದೀಗ ಪ್ರೇಕ್ಷಕರು ಅಥವಾ ಅಭಿಮಾನಿಗಳು ಸ್ಟಾರ್ ಗಳ ನಡುವೆ ತಂದಿಡುವಂತಹ ಕೆಲಸ ಒಂದು ನಡೆಯುತ್ತಿದೆ ದರ್ಶನ್ ಮತ್ತು ಪುನೀತ್ ರಾಜಕುಮಾರ್ ಅವರು ಉತ್ತಮವಾದಂತಹ ಸ್ನೇಹಿತರು ಆದರೆ ಇವರಿಬ್ಬರ ಮಧ್ಯ ಈ ರೀತಿಯಾದಂತಹ ವಿವಾದ ಸೃಷ್ಟಿ ಮಾಡಬಾರದು. ಈ ಒಂದು ವಿಚಾರವಾಗಿ ನಡೆದಿರುವುದು ಇಷ್ಟೇ ನಟ ದರ್ಶನ್ ಅವರು ಕ್ರಾಂತಿ ಸಿನಿಮಾದ ಪ್ರಮೋಶನ್ ನಲ್ಲಿ ಒಂದು ಪ್ರೆಸ್ ಮೀಟ್ ಅನ್ನು ಆಯೋಜನೆ ಮಾಡಿರುತ್ತಾರೆ ಈ ಒಂದು ಪ್ರೆಸ್ ಮೀಟ್ ನಲ್ಲಿ ಕ್ರಾಂತಿ ಸಿನಿಮಾದ ಬಗ್ಗೆ ಮಾತನಾಡುವಾಗ ನನ್ನ ಅಭಿಮಾನಿಗಳು ನನ್ನ ಚಿತ್ರವನ್ನು ಈಗಾಗಲೇ ಗೆಲ್ಲಿಸಿದ್ದಾರೆ ನಮ್ಮ ಕ್ರಾಂತಿ ಸಿನಿಮಾ ಈ ಒಂದು ದೊಡ್ಡ ಯಶಸ್ಸನ್ನು ಕಾಣಬೇಕಾದರೆ ಅದಕ್ಕೆ ನನ್ನ ಅಭಿಮಾನಿಗಳೇ ಕಾರಣ ಎಂದು ಹೇಳಿ,
ಎಲ್ಲರಿಗೂ ಸತ್ತ ನಂತರ ಅಭಿಮಾನಿಗಳ ಪ್ರೀತಿ ಮತ್ತು ಗೌರವ ಸಿಗುತ್ತದೆ ಆದರೆ ನನಗೆ ನಾನು ಬದುಕಿದ್ದಾಗಲೇ ಈ ರೀತಿಯಾದಂತಹ ಒಂದು ಸೌಭಾಗ್ಯ ಸಿಕ್ಕಿರುವುದು ನನ್ನ ಪುಣ್ಯ ಎಂದು ಹೇಳುತ್ತಾರೆ. ಹಾಗೆಯೇ ಮಾತನಾಡುತ್ತಾ ಪುನೀತ್ ರಾಜಕುಮಾರ್ ಅವರು ವಿಧಿವಶರಾದ ನಂತರ ಅವರಿಗೆ ಸಾಕಷ್ಟು ಜನರ ಅಭಿಮಾನಿಗಳ ಪ್ರೀತಿ, ಗೌರವ ಎನ್ನುವಂತಹದ್ದು ಸಿಕ್ಕಿದೆ ಅವರನ್ನು ದೇವರು ಎಂದು ಕಾಣುತ್ತಿದ್ದಾರೆ ಎನ್ನುವಂತಹ ಮಾತನ್ನು ದರ್ಶನವರು ಆಡುತ್ತಾರೆ. ಇದರಲ್ಲಿ ತಪ್ಪು ಇದೆ ಎಂದು ನಾವು ಹೇಳಲು ಸಾಧ್ಯವಿಲ್ಲ. ಇದರಲ್ಲಿ ಪುನೀತ್ ರಾಜಕುಮಾರ್ ಅವರಿಗೆ ಅವಮಾನ ಮಾಡುವಂತಹ ಯಾವುದೇ ಪದಗಳ ಬಳಕೆ ಆಗಿಲ್ಲ. ಈ ಒಂದು ವಿಚಾರದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ಸ್ ಮೂಲಕ ತಿಳಿಸಿ.