ಮನೆ ಕಟ್ಟಿಸುವ ಸಮಯದಲ್ಲಿ ಎಷ್ಟು ಜಾಗ್ರತೆ ಇಂದ ಇದ್ದರೂ ಸಾಲದು. ಯಾಕೆಂದರೆ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಾವು ಸರಿಯಾಗಿ ಯೋಚಿಸಿ ಮುಂದುವರಿಯದೇ ಇದ್ದರೆ ಮನೆ ಕಟ್ಟಿ ಆದಮೇಲೆ ಅದನ್ನು ಬದಲಾಯಿಸಲು ಆಗದೆ ಅಥವಾ ಬದಲಾಯಿಸುವುದಕ್ಕೆ ಹೆಚ್ಚು ಹಣ ಖರ್ಚಾಗಿ ಪಶ್ಚಾತಾಪ ಪಡಬೇಕಾಗುತ್ತದೆ.
ಮನೆಗೆ ಬಳಸುವ ಮೆಟೀರಿಯಲ್ ನಿಂದ ಹಿಡಿದು ಅದರ ಬಣ್ಣದವರೆಗೆ ನಾವು ಎಚ್ಚರವಾಗಿ ಇದ್ದು ತಾಳ್ಮೆಯಿಂದ ಎಲ್ಲವನ್ನೂ ತಿಳಿದುಕೊಂಡು ಮುಂದುವರಿಯಬೇಕು. ಈ ವಿಚಾರದಲ್ಲಿ ಮನೆ ಅಂದಮೇಲೆ ಕಿಚನ್ ಸಂಗತಿಗಳೂ ಕೂಡ ಮುಖ್ಯವೆ ಆಗುತ್ತದೆ. ಹಾಗಾಗಿ ಇಂದು ಈ ಅಂಕಣದಲ್ಲಿ ಸಿಂಕ್ ಹಾಕಿಸುವಾಗ ಯಾವ ರೀತಿ ನಿರ್ಧಾರ ಮಾಡಬೇಕು ಎನ್ನುವುದಕ್ಕೆ ಅನುಕೂಲವಾಗುವ ಕೆಲವು ಪಾಯಿಂಟ್ ಗಳನ್ನು ತಿಳಿಸಿಕೊಡುತ್ತಿದ್ದೇವೆ.
ಈ ಸುದ್ದಿ ಓದಿ:- ಕೇವಲ 14 ಲಕ್ಷದಲ್ಲಿ ಕಟ್ಟಿರೋ ಹಳ್ಳಿ ಶೈಲಿಯ ಟ್ರೆಂಡಿಂಗ್ ತೊಟ್ಟಿ ಮನೆ.! ಆರೋಗ್ಯಕ್ಕೂ ಹಿತ ಖರ್ಚಿನಲ್ಲೂ ಮಿತ.! ಕಡಿಮೆ ಬಡ್ಜೆಟ್ ನಲ್ಲಿ ಸುಂದರವಾದ ಮನೆ
* ಟಾಪ್ ಮೌಂಟೆಡ್ ಅಥವಾ ಅಂಡರ್ ಮೌಂಟೆಡ್ ಇದರಲ್ಲಿ ಯಾವ ಸಿಂಕ್ ಉತ್ತಮ ಎನ್ನುವುದು ಅನೇಕರ ಕನ್ಫ್ಯೂಷನ್. ಯಾವಾಗಲೂ ಅಂಡರ್ ಮೌಂಟೆಡ್ ಸಿಂಕ್ ಹಾಕಿಸಿದರೆ ಲುಕ್ ಚೆನ್ನಾಗಿರುತ್ತದೆ ನಿಜ, ಆದರೆ ಟಾಪ್ ಮೌಂಟೆಡ್ ಯಾವಾಗಲೂ ಬೆಸ್ಟ್. ಅಂಡರ್ ಮೌಂಟೆಡ್ ಹಾಕಿಸಿದರೆ ಆಗಾಗ ಲೀಕೇಜ್ ಆಗುತ್ತದೆ ನಂತರ ಮೆಂಟೇನೆನ್ಸ್ ಎನ್ನುವುದೇ ಕಿರಿಕಿರಿ ಆಗಿಬಿಡುತ್ತದೆ. ಹಾಗಾಗಿ ಟಾಪ್ ಮೌಂಟೆಡ್ ಅದರಲ್ಲೂ ಬೇಸಿನ್ ಎಡ್ಜ್ ಗ್ರಾನೆಟ್ ಸರ್ಫೇಸ್ ಗಿಂತ ಓವರ್ ಲಾಪ್ ಆಗಿರುವಂತೆ ಎತ್ತರಕ್ಕೆ ಇದ್ದರೆ ಬಹಳಷ್ಟು ಉತ್ತಮ.
* ಸಿಂಕ್ ಫಿಕ್ಸ್ ಮಾಡುವ ವಿಚಾರ ಕೂಡ ಹೆಚ್ಚು ಮುಖ್ಯವಾಗುತ್ತದೆ. ಇಲ್ಲವಾದಲ್ಲಿ ನೀರು ಕೆಳಗೆ ಲೀಕ್ ಆಗುತ್ತಿರುತ್ತದೆ . ಹಾಗಾಗಿ ಪಿಕ್ಸ್ ಮಾಡುವ ಮುನ್ನ ಹೆರಾಲ್ಡೇಟ್ ಮತ್ತು ರಬ್ಬರ್ ಸಿಮೆಂಟ್ ಗಳನ್ನು ಜೊತೆಗೆ ಹಾಕಿ ಅದರ ಮೇಲೆ ವಾಷ್ ಬೇಸಿನ್ ಇಟ್ಟು ಪ್ರೆಸ್ ಮಾಡಿ ಹೀಗೆ ಪ್ರಾಪರ್ ಆಗಿ ಫಿಕ್ಸ್ ಮಾಡಬೇಕು.
ಈ ಸುದ್ದಿ ಓದಿ:-ಲಾಭದಾಯಕ ಸೇವಂತಿಗೆ ಹೂವಿನ ಕೃಷಿ ಮಾಡಿ, ಮೊದಲ ಇಳುವರಿಯಲ್ಲಿಯೇ 7.5 ಲಕ್ಷ ಲಾಭ ಪಡೆಯಬಹುದು.!
* ಸಿಂಕ್ ಗಳಲ್ಲೂ ಕೂಡ ಈಗ ಹಲವಾರು ವೈವಿಧ್ಯತೆಗಳು ಇದೆ. ಸಿಂಗಲ್ ಬೌಲ್, ಡಬ್ಬಲ್ ಬೋಲ್ , ವಿತ್ ಡ್ರೇನ್ ಹೀಗೆ ಹಲವು ಆಪ್ಷನ್ ಗಳು ಇವೆ. ಕೆಲವರು ಒಂದು ಚಿಕ್ಕ ಬೌಲ್, ಒಂದು ದೊಡ್ಡ ಬೌಲ್, ಡಬಲ್ ಬೌಲ್, ಒಂದು ಬೌಲ್ ಮತ್ತೊಂದು ಡ್ರೇನ್ ಈ ರೀತಿಯೆಲ್ಲಾ ಹಾಕಿಸಿಕೊಳ್ಳುತ್ತಾರೆ ಇದೆಲ್ಲವೂ ಕೂಡ ನಂತರದ ದಿನಗಳಲ್ಲಿ ನಿಮಗೆ ವೇಸ್ಟ್ ಎನಿಸಿಬಿಡುತ್ತದೆ. ಯಾಕೆಂದರೆ ನಾವು ಕಿಚನ್ ನಲ್ಲಿ ವಾಶ್ ಮಾಡುವ ಪರ್ಪಸ್ ಇಟ್ಟುಕೊಂಡಿರುವುದರಿಂದ ಒಂದು ದೊಡ್ಡ ಸಿಂಕ್ ಬೌಲ್ ಹಾಕಿಸುವುದೇ ಸರಿ.
* ಸಿಂಕ್ ಮೆಟೀರಿಯಲ್ ನಲ್ಲೂ ಕೂಡ ಗ್ರಾನೈಟ್ ಕಾರ್ಡ್ ಸಿಮೆಂಟ್ ಸ್ಟೇನ್ಲೆಸ್ ಸ್ಟೀಲ್ ಹೀಗೆ ತುಂಬಾ ಆಪ್ಷನ್ ಗಳಿವೆ ಇದರಲ್ಲಿ SS ಸ್ಟೀಲ್ 304 ಗ್ರೇಡ್ ಗೆ ಹೋಗುವುದು ತುಂಬಾ ಬೆಸ್ಟ್, 202 ಗ್ರೇಡ್ ಬೇಡವೇ ಬೇಡ. ಸ್ಕಾರ್ಡ್ ಗಳಲ್ಲಿ ಕಲರ್ ಆಪ್ಷನ್ ಇದೆ ಮತ್ತು ಸಿಂಗಲ್ ಬೌಲ್ ಬಹಳ ಕಡಿಮೆ ಬೆಲೆಗೆ ಸಿಗುತ್ತಿದೆ, ಹಾಗಾಗಿ ಸ್ಟೇನ್ಲೆಸ್ ಸ್ಟೀಲ್ ಬೇಡ ಎನ್ನುವವರು ಸ್ಕ್ವಾರ್ಡ್ ಗೆ ಆರಿಸಿಕೊಳ್ಳಬಹುದು.
ಈ ಸುದ್ದಿ ಓದಿ:-ಪೋಸ್ಟ್ ಆಫೀಸ್ ನಿಂದ ಪ್ರತಿ ತಿಂಗಳು 20,500 ರೂ ಬಡ್ಡಿ ಪಡೆಯುವ ಹೊಸ ಸ್ಕೀಮ್ ಜಾರಿ.!
ಒಂದು ಹಂತದಲ್ಲಿ SS ಕಿಂತ ಸ್ಕ್ವಾರ್ಡ್ ಉತ್ತಮ ಎನ್ನಬಹುದು ಯಾಕೆಂದರೆ ಎಸ್ ಎಸ್ ನಲ್ಲಿ ಹಾರ್ಪಿಕ್ ನಿಂಬೆಹಣ್ಣು ಈ ರೀತಿ ಹಾಕಿ ವಾಷ್ ಮಾಡಿದರೆ ಕಲೆ ಬಿದ್ದು ಗಲೀಜಾಗಿ ಕಾಣಬಹುದು ಆದರೆ ಸ್ಕ್ವಾರ್ಡ್ ಗೆ ಏನು ಹಾಕಿದರು ಈ ರೀತಿ ಕಲೆ ಆಗುವುದಿಲ್ಲ ಇದೊಂದು ಪ್ಲಸ್ ಪಾಯಿಂಟ್ ಆಗಿದೆ. ಈ ವಿಚಾರವಾಗಿ ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಹೆಚ್ಚಿನ ವಿವರಕ್ಕಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಮತ್ತು ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.