ಹೊಸ ಬೈಕ್ ತೆಗೆದುಕೊಳ್ಳುತ್ತಿದ್ದೀರಾ.? ಎಲೆಕ್ಟ್ರಿಕಲ್ ಬೈಕ್ ಅಥವಾ ಪೆಟ್ರೋಲ್ ಬೈಕ್ ಯಾವುದು ತೆಗೆದುಕೊಂಡರೆ ಬೆಸ್ಟ್ ನೋಡಿ.!

ಭಾರತ ಸರ್ಕಾರ ಮತ್ತು ಆಟೋಮೊಬೈಲ್ ಕಂಪನಿಗಳು ಎಲೆಕ್ಟ್ರಿಕಲ್ ವಾಹನಗಳ ಉತ್ಪಾದನೆ ಹೆಚ್ಚಿಸಿ ಬಳಕೆಗೆ ಉತ್ತೇಜನ ನೀಡುತ್ತಿದೆ. ಎಲೆಕ್ಟ್ರಿಕಲ್ ವಾಹನಗಳ ಬಳಕೆಯು ಪರಿಸರ ಮಾಲಿನ್ಯ ಕಡಿಮೆ ಮಾಡುತ್ತದೆ ಮತ್ತು ಇಂಧನ ಕೊರತೆಗೆ ಪರಿಹಾರ ಕೂಡ. ಆದರೆ ಜನಸಾಮಾನ್ಯನಿಗೆ ಎರಡರಲ್ಲಿ ಯಾವುದು ಬೆಸ್ಟ್. ಬಾಳಿಕೆ ಜೊತೆಗೆ ಬೆಲೆ.

WhatsApp Group Join Now
Telegram Group Join Now

ಮೇಂಟೆನೆನ್ಸ್, ಫ್ಯೂಚರ್ ಇತ್ಯಾದಿ ವಿಷಯಗಳು ಬಂದಾಗ ಯಾವ ಕಡೆ ಹೋಗಬೇಕು ಎಂದು ಗೊಂದಲಕ್ಕೆ ಒಳಗಾಗುತ್ತಾರೆ. ಇದೀಗ ಪ್ರಪಂಚದಲ್ಲಿ ಎಲೆಕ್ಟ್ರಿಕಲ್ ಕಾರ್, ಎಲೆಕ್ಟ್ರಿಕಲ್ ಬೈಕ್, ಎಲೆಕ್ಟ್ರಿಕಲ್ ಸ್ಕೂಟರ್ ಆರ್ಭಟ ಜೋರಾಗಿದೆ. ಇವುಗಳಲ್ಲಿ ಇಂದು ಈ ಲೇಖನದಲ್ಲಿ ಎಲೆಕ್ಟ್ರಿಕಲ್ ಬೈಕ್ ವರ್ಸಸ್ ಪೆಟ್ರೋಲ್ ಬೈಕ್ (EV Bike / Petrol Bike ) ಕುರಿತಾಗಿ ಕೆಲ ವಿಷಯಗಳ ನ್ನು ಪ್ರಸ್ತಾಪಿಸುತ್ತಿದ್ದೇವೆ, ಇದನ್ನು ಅರಿತ ನಂತರ ಯಾವುದನ್ನು ಖರೀದಿಸಬೇಕು ಎಂದು ನೀವೇ ನಿರ್ಧಾರ ಮಾಡಿ.

ಈ ಸುದ್ದಿ ಓದಿ:- ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ (BMTC) ಬೃಹತ್ ಉದ್ಯೋಗವಕಾಶ, 2,500 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.! ವೇತನ 25,300/-

* ದಿನೇ ದಿನೇ ಎಲೆಕ್ಟ್ರಿಕಲ್ ವಾಹನಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗಿರುತ್ತದೆ ಇದಕ್ಕೆ ಸರ್ಕಾರ ಮತ್ತು ಆಟೋ ಮೊಬೈಲ್ ಕಂಪನಿಗಳ ಸಹಕಾರವು ಸಿಗುತ್ತಿದೆ ಮತ್ತು ಸರ್ಕಾರಿ ಸಬ್ಸಿಡಿ ಸೌಲಭ್ಯಗಳು ಸಿಗುತ್ತವೆ. ಈ ವಾಹನಗಳಿಗೆ ಯಾವುದೇ ರಿಜಿಸ್ಟ್ರೇಷನ್ ಫೀಸ್ ಆಗಲಿ ಅಥವಾ ರೋಡ್ ಟ್ಯಾಕ್ಸ್ ಆಗಲಿ ಅನ್ವಯವಾಗುವುದಿಲ್ಲ. ಹಾಗಾಗಿ EV (Electrical Vehicles) ಗಳ ಖರೀದಿ ಲಾಭ ಎಂದು ಮೇಲ್ನೋಟಕ್ಕೆ ಅನಿಸುತ್ತದೆ.

* ಎಲೆಕ್ಟ್ರಿಕಲ್ ವಾಹನಗಳು Lithium iin Battery ಮೂಲಕ ಕಾರ್ಯ ನಿರ್ವಹಿಸುತ್ತವೆ ಅಂದರೆ ನಮ್ಮ ಮೊಬೈಲ್ ಚಾರ್ಜ್ ಆಗುವ ರೀತಿ ಈ ಬ್ಯಾಟರಿ ಚಾರ್ಜ್ ಆಗಿ ಬೈಕ್ ಗಳು ರನ್ ಆಗುವುದು ಆದರೆ ಪೆಟ್ರೋಲ್ ಬೈಕ್ ಗಳು ICE technology ಪ್ರಕಾರ ಕಾರ್ಯ ನಿರ್ವಹಿಸುತ್ತವೆ. ಪೆಟ್ರೋಲ್ ಗಾಡಿ ಎಂಜಿನ್ ಗೆ ಹೋಗಿ ಕಂಬಸ್ಟ್ ಆಗಿ ಕಾರ್ಬನ್ ಡೈಯಾಕ್ಸೈಡ್ (CO2) ಆಗಿ ಹೊರಬಂದು ಆ ಎನರ್ಜಿಯೇ ಇಂಧನವಾಗಿ ಪರಿವರ್ತನೆ ಹೊಂದಿ ಬೈಕ್ ಕಾರ್ಯನಿರ್ವಹಿಸುತ್ತದೆ.

* ಮುಖ್ಯವಾದ ವಿಚಾರಗಳ ಬಗ್ಗೆ ಹೇಳುವುದಾದರೆ ಬೆಲೆ ಖಂಡಿತ ಒಂದು ಪ್ರಮುಖ ಪಾತ್ರ ವಹಿಸುತ್ತದೆ. ಬೆಲೆ ವಿಚಾರವಾಗಿ ಎಲೆಕ್ಟ್ರಿಕಲ್ ವಾಹನಗಳನ್ನು ಪೆಟ್ರೋಲ್ ಬೈಕ್ ಗಳ ಜೊತೆ ಕಂಪೇರ್ ಮಾಡುವುದು ಕಷ್ಟ. ಯಾಕೆಂದರೆ ಒಂದು ಅತ್ಯುತ್ತಮವಾದ ಬೈಕ್ 1.5 ಲಕ್ಷಕ್ಕೆ ಕೊಂಡುಕೊಳ್ಳಬಹುದು.

ಈ ಸುದ್ದಿ ಓದಿ:-SBI ಬ್ಯಾಂಕ್ ನಲ್ಲಿ ನೇರ ನೇಮಕಾತಿ ಯಾವುದೇ ಪರೀಕ್ಷೆ ಇಲ್ಲ ಆಸಕ್ತರು ಅರ್ಜಿ ಸಲ್ಲಿಸಿ.!

ಆದರೆ ಎಲೆಕ್ಟ್ರಿಕಲ್ ವಾಹನಗಳ ಆರಂಭಿಕ ಬೆಲೆಯೇ ಒಂದೂವರೆ ಲಕ್ಷದಿಂದ ಆರಂಭವಾಗುತ್ತದೆ ಮತ್ತು ಈ ಎಲೆಕ್ಟ್ರಿಕಲ್ ವಾಹನಗಳ ಬೆಲೆ ಹೆಚ್ಚಾಗುವುದಕ್ಕೆ ಕಾರಣ ಬ್ಯಾಟರಿ. ಎಲೆಕ್ಟ್ರಿಕಲ್ ಬೈಕ್ ಅರ್ಧಕ್ಕಿಂತ ಹೆಚ್ಚು ಬೆಲೆಯನ್ನು ಅದರ ಬ್ಯಾಟರಿ ಗೆ ವ್ಯಯಿಸಬೇಕಾಗುತ್ತದೆ ಮುಂದೆ ಒಂದು ದಿನ ಟೆಕ್ನಾಲಜಿ ಬೆಳೆದು ನಮ್ಮ ದೇಶದಲ್ಲಿ ಇವುಗಳನ್ನು ತಯಾರಿಸುವ ರೀತಿ ಆದರೆ ಬೆಲೆ ಕಡಿಮೆ ಆಗಬಹುದು ಎಂದು ಊಹಿಸಬಹುದು.

* ರೇಂಜ್ ಕೂಡ ಮುಖ್ಯವಾಗುತ್ತದೆ. ಒಂದು ಬಾರಿ ಪೆಟ್ರೋಲ್ ಬೈಕ್ ಟ್ಯಾಂಕ್ ಫಿಲ್ ಮಾಡಿದರೆ ಉದಾಹರಣೆ 10ಲೀ. ಟ್ಯಾಂಕ್ ಇದೆ. 50km/h ಮೈಲೇಜ್ ಕೊಡುತ್ತದೆ ಎಂದರೆ 500 ಕಿಲೋಮೀಟರ್ ಓಡಿಸಬಹುದು. ಆದರೆ ಎಲೆಕ್ಟ್ರಿಕಲ್ ಬೈಕ್ ಗಳನ್ನು ಬ್ಯಾಟರಿ ಪೂರ್ತಿ ಚಾರ್ಜ್ ಮಾಡಿದರೆ 80km ರಿಂದ 110km ಸರಾಸರಿ ಓಡುತ್ತದೆ ಅಷ್ಟೇ.

ಮತ್ತೊಂದು ವಿಚಾರೇನೆಂದರೆ ನಮ್ಮ ದೇಶದಲ್ಲಿ ಪ್ರತಿ 5kmಗೆ ಒಂದಾದರೂ ಪೆಟ್ರೋಲ್ ಬಂಕ್ ಸಿಗುತ್ತದೆ ಹಾಗಾಗಿ ಪೆಟ್ರೋಲ್ ಖಾಲಿ ಆದರೂ ಐದು ನಿಮಿಷಗಳಲ್ಲಿ ಪೆಟ್ರೋಲ್ ಬಂಕ್ ಗೆ ಹೋಗಿ ರೀಫಿಲ್ ಮಾಡಿಸಬಹುದು.

ಈ ಸುದ್ದಿ ಓದಿ:-SSLC ಪಾಸಾದವರಿಗೆ ಚಾಲಕ ಹಾಗೂ ಗ್ರೂಪ್ ಡಿ ಹುದ್ದೆಗಳು, ಸರ್ಕಾರಿ ಹುದ್ದೆ ಆಸೆ ಇದ್ದವರು ತಪ್ಪದೆ ಅರ್ಜಿ ಸಲ್ಲಿಸಿ.! ವೇತನ 42,000

ಆದರೆ ಇತ್ತೀಚಿಗಷ್ಟೇ ಎಲೆಕ್ಟ್ರಿಕಲ್ ವಾಹನಗಳ ಬಳಕೆ ಹೆಚ್ಚಾಗಿರುವುದರಿಂದ ಎಲ್ಲಾ ಕಡೆ ಪವರ್ ಸ್ಟೇಷನ್ ಸಿಗುತ್ತದೆ ಎಂದು ಗ್ಯಾರಂಟಿ ಹೇಳಲು ಆಗುವುದಿಲ್ಲ ಮತ್ತು ಅದು ಪೂರ್ತಿ ಚಾರ್ಜ್ ಆಗೋದಕ್ಕೆ 6-7 ಗಂಟೆ ಆದರೂ ಸಮಯ ತೆಗೆದುಕೊಳ್ಳುತ್ತದೆ ಮತ್ತು ರೇಂಜ್ ಕಡಿಮೆ ಇರುವುದರಿಂದ ಲಾಂಗ್ ಡ್ರೈವ್ಗೆ ಅಷ್ಟೊಂದು ಸೂಕ್ತವಲ್ಲ ಎಂದು ಪ್ರಾಕ್ಟಿಕಲ್ ಆಗಿ ಯೋಚಿಸಿ ಹೇಳಬಹುದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now