ಈಗಿನ ಕಾಲದಲ್ಲಿ ಎಲ್ಲರೂ ಸ್ಮಾರ್ಟ್ಫೋನ್ ಗೆ ಬಹಳ ಅಡಿಕ್ಟ್ ಆಗಿದ್ದಾರೆ ಬೆಳಗ್ಗೆ ಅಲಾರಂ ಇಡುವುದರಿಂದ ಕ್ಯಾಲೆಂಡರ್ ನೋಡಲು ಕ್ಯಾಲ್ಕುಲೇಟರ್ ಉಪಯೋಗಿಸಲು ಕರೆಗಳನ್ನು ಮಾಡಲು ಸಂದೇಶ ಕಳುಹಿಸಲು ಇಂಟರ್ನೆಟ್ ಉಪಯೋಗಿಸಿಕೊಂಡು ಮಾಡಬಹುದಾದ ಗೂಗಲ್ ಸರ್ಚ್ ಗೂಗಲ್ ಮ್ಯಾಪ್ ಇಂದ ಹಿಡಿದು ಮಕ್ಕಳ ಆಡುವ ಆಟಗಳಿಗೆ ಮತ್ತು ಪುಸ್ತಕಗಳನ್ನು ಓದಲು ಇನ್ನು ಮುಂತಾದ ನೂರಾರು ಕೆಲಸಗಳಿಗೆ ಮೊಬೈಲ್ ಒಂದೇ ಇದ್ದರೆ ಸಾಕು. ಹಾಗಾಗಿ ಹಲವು ವಸ್ತುಗಳ ಬದಲಾಗಿ ಇದೊಂದೇ ಉಪಯೋಗಕ್ಕೆ ಬರುವುದರಿಂದ ಜನ ಇದರ ಬಗ್ಗೆ ಹೆಚ್ಚು ಮೋಹ ಹೊಂದಿದ್ದಾರೆ ಹಾಗೂ ಸದಾ ಇದು ಯಾವಾಗಲೂ ಜೊತೆಯಲ್ಲಿ ಇರಲೇಬೇಕು ಎನ್ನುವಷ್ಟು ಅಡಿಕ್ಟ್ ಆಗಿ ಹೋಗಿದ್ದಾರೆ. ಹಿಂದೆಲ್ಲಾ ಬೆಳಗ್ಗೆ ಎದ್ದು ದೇವರ ಪಠಗಳನ್ನು ನೋಡಿ ಕೈಮುಗಿತ್ತಿದ್ದವರು ಇಂದು ಮೊಬೈಲ್ ಸ್ಕ್ರೀನ್ ಅಲ್ಲೇ ದೇವರ ದರ್ಶನ ಮಾಡುವ ರೂಢಿಗೆ ಬಂದುಬಿಟ್ಟಿದ್ದಾರೆ.
ಹಾಗಾಗಿ ಇಂದು ದೈನಂದಿಕ ಅವಶ್ಯಕತೆಗಳಲ್ಲಿ ಅತೀ ಮುಖ್ಯವಾದ ವಸ್ತು ಎನಿಸಿರುವ ಈ ಸ್ಮಾರ್ಟ್ ಫೋನ್ ಗಳಿಂದ ಅಷ್ಟೇ ಮಟ್ಟದ ದುಷ್ಪರಿಣಾಮಗಳು ಕೂಡ ಮಾನವನ ಆರೋಗ್ಯದ ಮೇಲೆ ಬೀಳುತ್ತಿದೆ. ಮಾನವನ ಮಾನಸಿಕ ಆರೋಗ್ಯದ ಜೊತೆಗೆ ದೈಹಿಕ ಆರೋಗ್ಯವನ್ನು ಕೂಡ ಹಾಳು ಮಾಡುವುದರಲ್ಲಿ ಸ್ಮಾರ್ಟ್ ಫೋನ್ ಗಳ ಬಳಕೆ ಕಾರಣವಾಗಿದೆ ಎನ್ನುವುದು ಈಗಾಗಲೇ ವೈಜ್ಞಾನಿಕ ಅಂಕಿ ಅಂಶಗಳಿಂದ ವರದಿಯಾಗಿದೆ. ಅದರಲ್ಲೂ ಸ್ಮಾರ್ಟ್ ಫೋನ್ ಗಳನ್ನು ಸದಾ ಜೊತೆಯಲ್ಲಿ ಇಟ್ಟುಕೊಂಡು ತಿರುಗುವವರಲ್ಲಿ ಈ ಸಮಸ್ಯೆ ಹೆಚ್ಚು ಇದು ಹೃದಯಾಘಾತದ ಸಮಸ್ಯೆ ಸೇರಿದಂತೆ ಹಾರ್ಮೋನ್ ವೇರಿಯೇಷನ್ ಇದಕ್ಕೆಲ್ಲ ಕಾರಣ ಆಗುತ್ತದೆ ಎನ್ನುವುದು ಎಲ್ಲರಿಗೂ ತಿಳಿದಿತ್ತು. ಈಗ ತೀರ ಆಶ್ಚರ್ಯ ನಡೆಸುವಂತೆ ಮಾನವನ ಕೂದಲು ಉದುರುವಿಕೆಗೆ ಈ ಸ್ಮಾರ್ಟ್ಫೋನ್ ಬಳಕೆ ಕಾರಣವಾಗಿದೆ ಎನ್ನುವ ಹೊಸ ವರದಿ ಎಂದು ಬಿಡುಗಡೆಯಾಗಿದೆ.
ಇದರಂತೆ ನಡೆದ ಸಂಶೋಧನೆಗಳ ಪ್ರಕಾರ ಸಂಶೋಧಕರೊಬ್ಬರು 46ನೇ ವಯಸ್ಸಿನ ಪುರುಷರ ವ್ಯಕ್ತಿಯ ಕಿವಿ ಭಾಗದ ಸುತ್ತಲಿನ ಕೂದಲು ಉದುರುವುದಕ್ಕೆ ಪ್ರಕರಣವನ್ನು ಅಧ್ಯಯನ ಮಾಡಿದಾಗ ಇಂತಹ ಒಂದು ಅಂಶ ಬೆಳಕಿಗೆ ಬಂದಿದೆ.ಇದರ ಪ್ರಕಾರ ಸ್ಮಾರ್ಟ್ ಫೋನ್ ಗಳ ತೀವ್ರ ಬಳಕೆಯು ಈ ರೀತಿ ಕೂದಲು ಉದುರುವಿಕೆಗೆ ಪ್ರಮುಖವಾದ ಕಾರಣ ಎಂದು ಜರ್ನಲ್ ಆಫ್ ಕಾಸ್ಮೆಟಲಜಿ ಮತ್ತು ಟ್ರೈಕಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ವರದಿಯೊಂದು ತಿಳಿಸಿದೆ. ಇದು ಹೇಳುವುದು ಏನೆಂದರೆ ನಮ್ಮ ಸ್ಮಾರ್ಟ್ ಫೋನ್ ಅಲ್ಲಿ ಹಲವು ರೀತಿಯ ತರಂಗಗಳು ಇವೆ. ಹೀಗಾಗಿ ನಮ್ಮ ತಲೆಕೂದಲುಗಳು ಈ ಸೆಲ್ ಫೋನ್ ವಿಕಿರಣಕ್ಕೆ ಸಿಲುಕಿಕೊಳ್ಳುವುದರಿಂದ ಈ ರೀತಿ ಕಡಿಮೆ ವಯಸ್ಸಿಗೆ ಕೂದಲು ಉದುರುವಿಕೆಯ ಅಥವಾ ಸಂಪೂರ್ಣ ಒಂದು ಭಾಗದ ಕೂದಲು ಇಲ್ಲದೆ ಬೋಳಾಗುವಿಕೆಗೆ ಕಾರಣವಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಜೊತೆಗೆ ಹೆಚ್ಚು ಹೆಚ್ಚು ಸ್ಮಾರ್ಟ್ಫೋನ್ ಬಳಕೆ ಮಾಡುವವರಲ್ಲಿ, ಈ ಸಮಸ್ಯೆ ಗಂಭೀರ ಸ್ಥಿತಿಯಲ್ಲಿ ಕಾಡುತ್ತಿದ್ದು ವಿದ್ಯುತ್ ಕಾಂತಿಯ ವಿಕಿರಣಗಳು ಸ್ಮಾರ್ಟ್ ಫೋನ್ ಇಂದ ಹೊರಸೂಸಿದಾಗ ಅದು ಕೂದಲಿನ ಆರೋಗ್ಯದಲ್ಲಿ ಮೇಲೆ ಮೊದಲು ಅತ್ಯಂತ ಕೆಟ್ಟ ಪರಿಣಾಮದಲ್ಲಿ ದುಷ್ಪರಿಣಾಮ ಬೀರುತ್ತದೆ ಎನ್ನುವುದನ್ನು ಸಹ ಇದರಲ್ಲಿ ತಿಳಿಸಲಾಗಿದೆ. ಈ ವಿಕಿರಣಗಳು ಮೊದಲು ಅಡಿನರಿ ಮತ್ತು ಪಿಟ್ಯುಟರಿ ಗ್ರಂಥಿಗಳು ಸ್ರವಿಸುವ ಹಾರ್ಮೋನಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಇದರ ಪರಿಣಾಮವಾಗಿ ಈಸ್ಟ್ರೋಜೆನ್ ಹಾರ್ಮೋನಿನ ಬಿಡುಗಡೆಯ ಪ್ರಮಾಣ ಅಧಿಕವಾಗುತ್ತದೆ ಹಾಗೂ ಟೆಸ್ಟೋಸ್ಟಿರಾನ್ ಹಾರ್ಮೋನ್ ಅನ್ನು ಇದು ಬೆಳವಣಿಗೆ ಕಡಿಮೆಯಾಗುವಂತೆ ಮಾಡಿ ಹಾರ್ಮೋನ್ ಕೊರತೆ ಉಂಟು ಮಾಡುತ್ತದೆ. ಈ ಕಾರಣಗಳು ಹಾರ್ಮೋನ್ ವೈಪರೀತ್ಯದ ಜೊತೆಗೆ ಕೂದಲಿನ ಆರೋಗ್ಯಕರ ಬೆಳವಣಿಗೆಯ ವಿಷಯದಲ್ಲೂ ನಕಾರಾತ್ಮಕ ಪರಿಣಾಮ ಬೀರಿ ಕೂದಲಿನ ಸಮಸ್ಯೆ ಉಂಟಾಗುವಂತೆ ಮಾಡುತ್ತದೆ.
ಇದಷ್ಟೇ ಅಲ್ಲದೆ ಇದರ ಜೊತೆಗೆ ಆರೋಗ್ಯದ ಇನ್ನಿತರ ವಿಷಯದ ಮೇಲೆ ಕೂಡ ದುಷ್ಪರಿಣಾಮವನ್ನು ಬೀರುತ್ತದೆ. ಹೆಚ್ಚಾಗಿ ಯುವ ಜನತೆಯ ಈ ಸಮಸ್ಯೆಗೆ ಈಡಾಗುತ್ತಿರುವ ಪ್ರಮುಖ ಕಾರಣ ಎಂದರೆ ಯುವ ಜನತೆಯೇ ಹೆಚ್ಚಾಗಿ ಮೊಬೈಲ್ ಫೋನ್ ಅನ್ನು ಬಳಸುವುದು ಅದರಲ್ಲೂ ರಾತ್ರಿ ಮಲಗುವ ಹೊತ್ತಿನಲ್ಲೂ ಕೂಡ ನಿದ್ದೆ ಬರುವ ತನಕ ಈ ರೀತಿ ಸ್ಮಾರ್ಟ್ ಫೋನ್ ಬಳಕೆ ಮಾಡಿ ನಂತರ ಅದನ್ನು ದಿಂಬಿನ ಕೆಳಗಡೆ ಇಟ್ಟುಕೊಂಡು ನಿದ್ರಿಸುವವರು ಇದ್ದಾರೆ. ಇಂಥವರಲ್ಲಿ ಈ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುತ್ತದೆ ಮತ್ತು ಮಿದುಳಿನ ಆರೋಗ್ಯದ ವಿಷಯದಲ್ಲೂ ಕೂಡ ಇದು ಒಳ್ಳೆಯದಲ್ಲ ಎನ್ನುವುದನ್ನು ಮೊದಲಿನಿಂದಲೂ ವೈದ್ಯರು ಹೇಳುತ್ತಲೇ ಬಂದಿದ್ದಾರೆ. ಹಾಗಾಗಿ ಈ ರೀತಿಯ ತರಹದ ದುರಭ್ಯಾಸ ಇರುವವರು ಇನ್ನು ಮುಂದೆ ಆದರೂ ಎಷ್ಟು ಬೇಕೋ ಅಷ್ಟೇ ಅವಶ್ಯಕತೆಗೆ ಅನುಗುಣವಾಗಿ ಮೊಬೈಲ್ ಫೋನ್ ಬಳಕೆ ಮಾಡುವಂತಾಗಲಿ.
ಹಾಗೂ ಪ್ರಮುಖವಾಗಿ ರಾತ್ರಿ ಹೊತ್ತು ನಿದ್ರಿಸುವಾಗ ದಿಂಬಿನ ಕೆಳಗೆ ಮೊಬೈಲ್ ಇಡುವುದನ್ನು ಬಿಟ್ಟರೆ ಈ ಸಮಸ್ಯೆಯು ಸ್ವಲ್ಪ ಸುಧಾರಣೆ ಆಗಬಹುದು. ಮೇಲಿನ 46 ವರ್ಷದ ವಯಸ್ಸಿನ ವ್ಯಕ್ತಿಯ ಉದಾಹರಣೆಗೆ ಸಂಬಂಧಪಟ್ಟ ಹಾಗೆ ಆ ವ್ಯಕ್ತಿ ವಿಪರೀತ ಮೊಬೈಲ್ ಫೋನ್ ಬಳಕೆ ಮಾಡುತ್ತಿದ್ದರಿಂದ ಮತ್ತು ಎಡ ಕಿವಿಯಲ್ಲಿ ಇಟ್ಟುಕೊಂಡು ಹೆಚ್ಚಾಗಿ ಕರೆಗಳಲ್ಲಿ ಮಾತನಾಡುತ್ತಿದ್ದರಿಂದ ಆತನ ಎಡ ಕಿವಿಯ ಕಿವಿಯ ಸುತ್ತಲಿನ ಕೂದಲು ಉದುರು ಹೋಗಿರುವುದು ಸ್ಮಾರ್ಟ್ಫೋನ್ ಬಳಕೆಯಿಂದ ಆಗುವ ದುಷ್ಪರಿಣಾಮಕ್ಕೆ ಹಿಡಿದ ಕೈಗನ್ನಡಿ ಎನ್ನಬಹುದಾಗಿದೆ. ಆದರೆ ಕಡಿಮೆ ಪ್ರಮಾಣದ ಜನರಲ್ಲಿ ಮಾತ್ರ ಈ ರೀತಿ ಉದುರಿ ಹೋದ ಕೂದಲಿನ ಬೆಳವಣಿಗೆಯು ಕೂಡ ಕಂಡು ಬಂದಿದೆ. ಆದರೆ ಹೆಚ್ಚಿನ ಭಾಗದ ಜನರು ಸಂಪೂರ್ಣವಾಗಿ ಕೂದಲಿನ ಆರೋಗ್ಯದ ನಿಯಂತ್ರಣ ಕಳೆದುಕೊಂಡು ಶಿ.ಕ್ಷೆ ಅನುಭವಿಸುತ್ತಿದ್ದಾರೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ಶೇರ್ ಮಾಡಿ ಹಾಗೂ ಈ ವಿಚಾರ ಇಷ್ಟ ಆಗಿದ್ದರೆ ಈ ಲೇಖನಕ್ಕೆ ಒಂದು ಲೈಕ್ ಕೊಟ್ಟು ನಿಮ್ಮ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.