ಕರುನಾಡು ಇಂದು ಮತ್ತೊಂದು ಹೊಸ ದಾಖಲೆ ಮಾಡಲು ಸಜ್ಜಾಗುತ್ತಿದೆ ವಿಕ್ರಾಂತ್ ರೋಣ ಅಬ್ಬರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದರೆ ಅವರನ್ನು ಸ್ವಾಗತಿಸಲು ಎಲ್ಲ ಥಿಯೇಟರ್ ಗಳು ಮಧುಮಂಟಪದಂತೆ ರೆಡಿಯಾಗುತ್ತಿವೆ. ಈಗಾಗಲೇ ಕಳೆದ ಹಲವು ದಿನಗಳಿಂದ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೆ ಅನೇಕ ರೀತಿಯಲ್ಲಿ ಪ್ರಚಾರ ಕಾರ್ಯ ಕೂಡ ಮಾಡಿ ಆಗಿದೆ ಮತ್ತು ತನ್ನ ಟ್ರೈಲರ್ ಹಾಗೂ ಫಸ್ಟ್ ಲುಕ್ ಕೂಡ ವಿಕ್ಷಕರಲ್ಲಿ ಅಪಾರ ನಿರೀಕ್ಷೆಯನ್ನು ಸಿನಿಮಾಗೆ ಸಂಬಂಧಪಟ್ಟ ಹಾಗೆ ಹುಟ್ಟು ಹಾಕಿದೆ ಮತ್ತು ಕನ್ನಡದಲ್ಲಿ ಸುದೀಪ್ ಅವರು ತ್ರೀಡಿ ಸಿನಿಮಾದ ಮೂಲಕ ಅಡ್ವೆಂಚರ್ ಸ್ಟೋರಿ ಒಂದನ್ನು ಕನ್ನಡಿಗರಿಗೆ ಕೊಡಲು ಈ ಸಿನಿಮಾದಲ್ಲಿ ಬರುತ್ತಿದ್ದಾರೆ. ಸುದೀಪ್ ಅಭಿಮಾನಿಗಳು ಬಹು ನಿರೀಕ್ಷಿತ ಕಿಚ್ಚನ ವಿಕ್ರಾಂತ ರೋಣ ಸಿನಿಮಾ ವನ್ನು ನೋಡಲು ಈಗಾಗಲೇ ಟಿಕೆಟ್ ಬುಕ್ ಮಾಡಿಕೊಂಡು ಪ್ರತಿ ಘಳಿಗೆಯನ್ನು ಕೂಡ ಲೆಕ್ಕ ಹಾಕಿ ಕಾಯುತ್ತಿದ್ದಾರೆ.
ಕನ್ನಡ ತಮಿಳು ತೆಲುಗು ಜೊತೆಗೆ ಹಿಂದಿ ಸಿನಿಮಾದಲ್ಲೂ ಕೂಡ ತಮ್ಮ ಅಭಿನಯದಿಂದ ಮೋಡಿ ಮಾಡಿ ಕೋಟ್ಯಾಂತರ ಮನಗಳನ್ನು ಗೆದ್ದಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ವಿಕ್ರಾಂತ್ ಸಿನಿಮಾದ ಮೂಲಕ ತಮ್ಮ ಹೆಸರಿನ ಜೊತೆ ಕನ್ನಡದ ಹೆಸರನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯಲು ರೆಡಿಯಾಗಿದ್ದಾರೆ. ಈ ಸಿನಿಮಾವು ಹಲವಾರು ವಿಭಿನ್ನತೆಗಳನ್ನು ಒಳಗೊಂಡಿದ್ದು ಕನ್ನಡದ ಸಿನಿಮಾದ ಪೋಸ್ಟರ್ ಒಂದು ವಿಶ್ವವಿಖ್ಯಾತ ಬೃಹತ್ ಎತ್ತರದ ಕಟ್ಟಡ ಮೇಲೆ ಲಾಂಚ್ ಆಯಿತು ಎನ್ನುವ ಖ್ಯಾತಿಗೆ ಒಳಗಾದ ವಿಕ್ರಾಂತ್ ರೋಣ ಸಿನಿಮಾವು ಪಾನ್ ಇಂಡಿಯಾ ಸಿನಿಮಾವಾಗಿ ತಯಾರಾಗಿ ಎಲ್ಲರಿಗೂ ಎಲ್ಲಾ ಭಾಷೆಯಲ್ಲೂ ತಲುಪಿದೆ ಮತ್ತೊಂದು ವಿಶೇಷತೆ ಎಂದರೆ ಈ ಸಿನಿಮಾ ಗೆ ಸಿನಿ ಡಬ್ ಎನ್ನುವ ಆಪ್ ಮೂಲಕ ಬೇರೆ ಭಾಗದಲ್ಲಿ ಸಿನಿಮಾ ನೋಡುವವರು ಕೂಡ ತಮ್ಮ ಭಾಷೆಯಲ್ಲಿ ಆಡಿಯೋ ಕೇಳಬಹುದಾದ ಅನುಕೂಲತೆ ಹೊಂದಲಿದ್ದಾರೆ.
ಈ ರೀತಿ ಇನ್ನೂ ಹತ್ತು ಹಲವು ವಿಶೇಷತೆಗಳನ್ನು ಒಳಗೊಂಡಿರುವ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಎಲ್ಲಾ ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ಥಿಯೇಟರ್ ಮುಂದೆ ದೊಡ್ಡ ದೊಡ್ಡ ಕಟೌಟ್ಗಳನ್ನು ನಿಲ್ಲಿಸುವುದು ಹಾಗೂ ದೊಡ್ಡ ದೊಡ್ಡ ಹೂವು ಹಣ್ಣಿನ ಹಾರವನ್ನು ಹಾಕುವುದು ನೆಚ್ಚಿನ ನಟನಿಗೆ ಹಾಲಿನ ಅಭಿಷೇಕ ಮಾಡುವುದು ಇದೆಲ್ಲವೂ ಮಾಮೂಲಿ. ದಾಖಲೆ ಸಂಖ್ಯೆಯಲ್ಲಿ ಥಿಯೇಟರ್ ಮುಂದೆ ತುಂಬಿ ಬರುವ ಅಭಿಮಾನಿಗಳು ತಮ್ಮ ಫೇವರೆಟ್ ಹೀರೋ ಸಿನಿಮಾವನ್ನು ಮೊದಲ ದಿನವೇ ನೋಡಬೇಕು ಮೊದಲ ಶೋ ನೋಡಬೇಕು ಎಂದು ಅದೆಷ್ಟೋ ದಿನಗಳಿಂದ ಕಾದು ಕುಳಿತಿರುತ್ತಾರೆ. ಅದೇ ರೀತಿ ವಿಕ್ರಾಂತ್ ರೋಣ ಸಿನಿಮಾದ ಟಿಕೆಟ್ ಕೂಡ ಈಗಲೇ ದಾಖಲೆ ಮಟ್ಟದಲ್ಲಿ ಸೇಲ್ ಕೂಡ ಹಾಗಿದೆ ಸ್ನೇಹಿತರೊಂದಿಗೆ ಕುಟುಂಬದೊಂದಿಗೆ ಸಿನಿಮಾ ನೋಡಲು ಆಸೆ ಪಡುವ ಮಂದಿ ವಿಕ್ರಾಂತ್ ರೋಣ ಸಿನಿಮಾಗೆ ಹೋಗಲು ತಯಾರಾಗಿದ್ದಾರೆ.
ಈ ಸಿನಿಮಾ ಸುದೀಪ್ ಅವರ ಸಿನಿಮಾ ವಾದ ಕಾರಣ ಥಿಯೇಟರ್ ಗಳ ಮುಂದೆ ಸುದೀಪ್ ಅವರ ಕಟೌಟ್ ಗಳನ್ನು ನಿಲ್ಲಿಸುವುದು ವಾಡಿಕೆ. ಆದರೆ ವಿಶೇಷ ಎನ್ನುವಂತೆ ಬೆಂಗಳೂರಿನ ನವರಂಗ್ ಥಿಯೇಟರ್ ಮುಂದೆ ಸುದೀಪ್ ಹಾಗೂ ಪುನೀತ್ ಅವರ ಫೋಟೋ ಕಟ್ ಔಟ್ ಅನ್ನು ನಿಲ್ಲಿಸಲಾಗಿದೆ. ಈ ಫೋಟೋದಲ್ಲಿ ಸುದೀಪ್ ಅವರು ಯಾವಾಗಲೂ ಇಷ್ಟಪಡುವ ಫೇವರೆಟ್ ಫೋಟೋ ಆದ ಅಪ್ಪು ಅವರು ಸುದೀಪ್ ಅವರನ್ನು ಹಗ್ ಮಾಡಿದ ಫೋಟೋ ಇದೆ. ಬಾಲ್ಯದಲ್ಲಿಯೇ ಇವರಿಬ್ಬರೂ ಸಹ ಇದೇ ರೀತಿಯ ಫೋಟೋವನ್ನು ತೆಗೆಸಿಕೊಂಡಿದ್ದರು ಅದರಲ್ಲೂ ಕೂಡ ಅಪ್ಪು ಅವರು ಸುದೀಪ್ ಅವರನ್ನು ಹಗ್ ಮಾಡಿದ್ದರು ದೊಡ್ಡವರಾದ ಮೇಲು ಅದೇ ಕ್ಷಣವನ್ನು ಮರು ಕ್ರಿಯೇಟ್ ಮಾಡಿದ ಸುದೀಪ್ ಹಾಗೂ ಪುನೀತ್ ಅವರು ಈ ರೀತಿ ಹಗ್ ಮಾಡಿಕೊಂಡು ಫೋಟೋ ಕ್ಲಿಕ್ ಮಾಡಿಸಿಕೊಂಡಿದ್ದರು.
ಈಗ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡಿರುವ ಸುದೀಪ್ ಅವರು ಈ ಫೋಟೋವನ್ನು ತಮ್ಮ ಫೇವರೆಟ್ ಫೋಟೋಗಳಲ್ಲಿ ಒಂದು ಎಂದು ಯಾವಾಗಲೂ ಹೇಳಿಕೊಳ್ಳುತ್ತಿರುತ್ತಾರೆ. ಇಂತಹ ಫೋಟೋವನ್ನು ಅಭಿಮಾನಿಗಳೆಲ್ಲರೂ ಸೇರಿ ದೊಡ್ಡದಾಗಿ ಕಟ್ ಔಟ್ ಹಾಕಿಸಿ ನವರಂಗ್ ಥಿಯೇಟರ್ ಮುಂದೆ ನಿಲ್ಲಿಸಿದ್ದಾರೆ. ಈ ಫೋಟೋವನ್ನು ನೋಡಿದವರ ಎಲ್ಲರ ಕಣ್ಣಂಚು ಕೂಡ ತೇವವಾಗುತ್ತದೆ. ಪುನೀತ್ ಅವರು ಏನಾದರೂ ಇಂದು ನಮ್ಮೊಂದಿಗೆ ಇದ್ದಿದ್ದರೆ ವಿಕ್ರಾಂತ್ ರೋಣ ಸಿನಿಮಾದ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿ ಎಲ್ಲರನ್ನೂ ಮನೋ ರಂಜಿಸುತ್ತಿದ್ದರು. ಯಾಕೆಂದರೆ ಈಗಾಗಲೇ ಹಲವಾರು ಸೆಲೆಬ್ರಿಟಿಗಳು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ, ಖುದ್ದಾಗಿ ಸುದೀಪ್ ಅವರೇ ಈ ಹಾಡಿಗೆ ರೀಲ್ಸ್ ಕೂಡ ಮಾಡಿದ್ದರು. ಕರ್ನಾಟಕದಲ್ಲಿ ಡ್ಯಾನ್ಸಿಂಗ್ ಸ್ಟಾರ್ ಎಂದೇ ಫೇಮಸ್ ಆಗಿರುವ ನಮ್ಮ ಅಪ್ಪು ಅವರು ಕೂಡ ಈ ಹಾಡಿಗೆ ಹೆಜ್ಜೆ ಹಾಕಿದ್ದರೆ ಯಾವೆಲ್ಲ ಸ್ಟೆಪ್ಗಳಲ್ಲೂ ಕೊಡುತ್ತಿದ್ದರು ಎಂದು ಅಭಿಮಾನಿಗಳು ಯೋಚಿಸುತ್ತಿದ್ದಾರೆ.
ಜೊತೆಗೆ ಅಪ್ಪು ಅವರ ಹಳೆಯ ಸಿನಿಮಾದ ಸ್ಟೆಪ್ ಗಳಿಗೆ ಈ ರಾರಾ ರಕ್ಕಮ್ಮ ಹಾಡನ್ನು ಎಡಿಟ್ ಮಾಡಿ ಕೂಡ ಅಭಿಮಾನಿಗಳು ಸಂತಸಪಟ್ಟಿದ್ದಾರೆ. ಪುನೀತ್ ಅವರು ಅಜಾತಶತ್ರು ಕನ್ನಡದ ಎಲ್ಲಾ ಸ್ಟಾರ್ ನಟರೊಂದಿಗೂ ಕೂಡ ಉತ್ತಮವಾದ ಸ್ನೇಹ ಬಾಂಧವ್ಯ ಕಾಯ್ದುಕೊಂಡಿದ್ದ ಅಪ್ಪು ಅವರು ಈ ದಿನ ನಮ್ಮೊಂದಿಗೆ ಇದ್ದಿದ್ದರೆ ವಿಕ್ರಾಂತ್ ರೋಣ ಸಿನಿಮಾ ವನ್ನು ಮೊದಲ ಶೋ ನೋಡಿ ಸುದೀಪ್ ಅವರಿಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ತಿಳಿಸುತ್ತಿದ್ದರು ಹಾಗೂ ಕನ್ನಡದ ಸಿನಿಮಾ ಒಂದು ಈ ರೀತಿ ಹೊಸ ಪ್ರಯೋಗದೊಂದಿಗೆ ಬರುತ್ತಿರುವುದನ್ನು ಕಂಡು ಬಹಳ ಖುಷಿಪಡುತ್ತಿದ್ದರು. ಅಪ್ಪು ಅವರನ್ನು ಈಗ ನೂರಾರು ರೀತಿಯಲ್ಲಿ ಪ್ರತಿದಿನವೂ ಕೂಡ ಅಭಿಮಾನಿಗಳು ನೆನೆಸಿಕೊಳ್ಳುತ್ತಲೇ ಇದ್ದಾರೆ. ಈಗ ವಿಕ್ರಾಂತ್ ರೋಣ ರಿಲೀಸ್ ಸಮಯವಾದ ಇಂತಹ ಶುಭ ಸಂದರ್ಭದಲ್ಲಿ ಕೂಡ ತಮ್ಮ ಅಭಿಮಾನವನ್ನು ಈ ರೀತಿ ವ್ಯಕ್ತಪಡಿಸಿದ್ದಾರೆ. ಈ ಮಾಹಿತಿಯನ್ನು ತಪ್ಪದೆ ಶೇರ್ & ಲೈಕ್ ಮಾಡಿ ನಿಮ್ಮ ಅಭಿಪ್ರಾಯವೇನು ಅಂತ ಕಾಮೆಂಟ್ ಮುಖಾಂತರ ತಿಳಿಸಿ.