ಮಾರುಕಟ್ಟೆಗೆ ಮತ್ತೆ ಬರಲಿದೆ ಯುವಕರ ಫೇವರಿಟ್ ಯಮಹಾ ಆರ್ ಎಕ್ಸ್ 1೦೦ ಬೈಕ್.

ಓಲ್ಡ್ ಇಸ್ ಗೋಲ್ಡ್ ಎನ್ನುವ ಮಾತು ಎಲ್ಲಾ ವಿಷಯಗಳಿಗೂ ಕೂಡ ಅನ್ವಯವಾಗುತ್ತದೆ ಎನ್ನಬಹುದು. ಅದು ಫ್ಯಾಶನ್ ವಿಚಾರಗಳಿಗೂ ಊಟ ತಿಂಡಿಯ ವಿಚಾರಗಳಿಗೂ ಹಾಗೆಯೇ ಹಳೆ ಮಾಡೆಲ್ ಗಳಿಗೂ ಕೂಡ. ಯಾವಾಗಲೂ ಜನರು ಹೊಸದನ್ನು ಕುತೂಹಲದಿಂದ ತಿಳಿದುಕೊಳ್ಳುತ್ತಾರೆ ಹಾಗೂ ಹೊಸದವರ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿರುತ್ತಾರೆ ಆದರೆ ಎಂದಿಗೂ ಮನುಷ್ಯನಿಗೆ ತೃಪ್ತಿ ಕೊಡುವುದು ಹಳೆಯ ವಿಚಾರಗಳು ಮಾತ್ರ ಹಾಗೂ ಅದರ ಬಗ್ಗೆ ಅವನಿಗೆ ಬಹಳ ಸೆಂಟಿಮೆಂಟ್ ಕೂಡ ಇರುತ್ತದೆ. ಹೊಸದಾಗಿ ಏನಾದರೂ ತಯಾರಿಸಬಹುದು ಆದರೆ ಹಳೆಯದು ಮತ್ತು ಸಿಗುವುದಿಲ್ಲವಲ್ಲ ಎಂದು ಬೇಜಾರು ಪಟ್ಟುಕೊಳ್ಳುವ ಅಗತ್ಯವಿಲ್ಲ ಇಂದು ಅನೇಕ ವಿಷಯಗಳು ಓಲ್ಡ್ ಇಸ್ ಗೋಲ್ಡ್ ಎನ್ನುವಂತೆ ಮತ್ತೆ ಮರುಕಳಿಸಿ ಹೊಸ ಫ್ಯಾಷನ್ ಜೊತೆ ಸ್ವಲ್ಪ ವಿನ್ಯಾಸಗೊಂಡು ಗ್ರಾಹಕರನ್ನು ಖುಷಿ ಪಡಿಸಲು ಮಾರ್ಕೆಟಿಗೆ ಲಗ್ಗೆ ಇಡುತ್ತಿವೆ.

ವೆಹಿಕಲ್ ಗಳ ವಿಚಾರಕ್ಕೆ ಬರುವುದಾದರೆ ಒಂದು ದಶಕದಲ್ಲಿ ಯುವಕರ ಮೋಸ್ಟ್ ಫೇವರೆಟ್ ಬೈಕ್ ಮಾಡೆಲ್ ಆಗಿದ್ದ ಯಮಹಾ ಆರ್ ಎಕ್ಸ್100 ಕೂಡ ಮತ್ತೆ ಯುವಕರಿಗೆ ಖುಷಿ ನೀಡಲು ಮಾರ್ಕೆಟಿಗೆ ಬರುತ್ತಿದೆ. ಈ ಬೈಕ್ ಎಂದರೆ ಈಗಲೂ ಹಲವರಿಗೆ ಅದರಲ್ಲೂ ಯುವಕರಿಗೆ ಬಹಳ ಇಷ್ಟ ತುಂಬಾ ಫ್ಯಾಷನ್ ಆಗಿ ಇರುವ ಈ ಬೈಕನ್ನು ಯುವ ಜನರು ಬಹಳ ಇಷ್ಟಪಡುತ್ತಾರೆ. ಇದರ ಸೌಂಡ್ ಕೇಳುತ್ತಿದ್ದಂತೆ ಇದು ಯಾರ ಬೈಕ್ ಎಂದು ಎಲ್ಲರೂ ಗೆಸ್ ಮಾಡುತ್ತಿದ್ದರು. ಅಷ್ಟೊಂದು ಜನರನ್ನು ನೆನಪಿನಲ್ಲಿ ಉಳಿದಿದ್ದ ಎಲ್ಲರ ಮನಸ್ಸಿಗೂ ಹತ್ತಿರವಾಗಿದ್ದ ಈ ಬೈಕ್ ಕೆಲ ವರ್ಷಗಳಿಂದ ತನ್ನ ಪ್ರೊಡಕ್ಷನ್ ಅನ್ನು ಸ್ಟಾಪ್ ಮಾಡಿಕೊಂಡು ಹಿಂದೆ ಸರಿದಿತ್ತು ಆದರೆ ಈಗ ಅದನ್ನು ಮಿಸ್ ಮಾಡಿಕೊಳ್ಳುತ್ತಿದ್ದವರಿಗೆ ಮತ್ತೊಮ್ಮೆ ಅದರ ಖುಷಿ ಅನುಭವಿಸುವ ಅವಕಾಶ ಸಿಕ್ಕಿದೆ ಜೊತೆಗೆ ಸ್ವಲ್ಪ ಹೊಸ ರೂಪದೊಂದಿಗೆ.

ಯಮಾಹ ಆರ್ ಎಕ್ಸ್ 100 ಬೈಕ್ ಇಂದ ಭಾರತದಲ್ಲಿ ಜಪಾನ್ ಕಂಪನಿಯಾದ ಯಮಹಾ ಮಾಡೆಲ್ ಹೆಚ್ಚು ಫೇಮಸ್ ಹಾಗೂ ಬೇಡಿಕೆ ಸೃಷ್ಟಿಸಿಗೊಂಡಿದ್ದು ಎನ್ನಬಹುದು. ಅಷ್ಟರ ಮಟ್ಟಿಗೆ ಕ್ರೇಜ್ ಉಳಿಸಿಕೊಂಡಿದ್ದ ಹಾಗೂ ಒಳ್ಳೆಯ ಮಾರ್ಕೆಟಿಂಗ್ ಕೂಡ ಇದ್ದ ಈ ಬೈಕ್ ತಯಾರಿಕೆಯನ್ನು 2003 ಇದ್ದಕ್ಕಿದ್ದ ಹಾಗೆ ಹಲವಾರು ಕಾರಣಗಳಿಂದ ನಿಲ್ಲಿಸಲಾಯಿತು. ನಂತರ ಈಗ ಬರೋಬ್ಬರಿ 20 ವರ್ಷಗಳ ಬಳಿಕ ಈ ಮಾಡೆಲ್ ಪ್ರಿಯರಿಗೆ ಹೊಸ ಅವತಾರದಲ್ಲಿ ಇದೇ ಬೈಕ್ ಸಿಗಲಿದೆ. ಈ ಕುರಿತಾದ ಮಾಹಿತಿಯನ್ನು ಬಿಸಿನೆಸ್ ಲೈನ್ಸ್ ಸಂದರ್ಶನದಲ್ಲಿ ಯಮಹಾ ಮೋಟರ್ ಇಂಡಿಯಾದ ಅಧ್ಯಕ್ಷ ಐಶಿನ್ ಚಿಹಾನ ಅವರು ಹಂಚಿಕೊಂಡಿದ್ದಾರೆ. ಜೊತೆಗೆ ಭಾರತದಲ್ಲಿ ಮತ್ತೊಮ್ಮೆ ಯಮಹಾ 100 ಬೈಕ್ ಅನ್ನು ಲಾಂಚ್ ಮಾಡಲು ಅವರು ಎಷ್ಟು ಕಾತುರದಿಂದ ಕಾಯುತ್ತಿದ್ದಾರೆ ಎನ್ನುವ ವಿಷಯವನ್ನು ಕೂಡ ಹಂಚಿಕೊಂಡಿದ್ದಾರೆ.

ಈಗ ವಾಯು ಮಾಲಿನ್ಯದ ಪರಿಣಾಮದಿಂದ ವಾಹನಗಳ ತಯಾರಿಕೆ ನಿಯಮಗಳು ಬಹಳ ಕಟ್ಟುನಿಟ್ಟಾಗಿ ಬಳಸಲಾಗುತ್ತಿರುವುದರಿಂದ ಹಳೆ ಮಾಡೆಲ್ ಅಲ್ಲಿ ಇದ್ದ ರೀತಿ ಎರಡು ಸ್ಟ್ರೋಕ್ ಎಂಜಿನ್ ಗಳನ್ನು ಈ ಬಾರಿ ತಯಾರಿಕೆಯಲ್ಲಿ ಬಳಸುವುದಿಲ್ಲವಂತೆ. ಆರ್ ಎಕ್ಸ್ 100 ಮಾಲಿಕರ್ ಕೂಡ ಬಳಸುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಅವರು ಕೊಟ್ಟಿರುವ ಕಾರಣ ಏನೆಂದರೆ ಇದು ಮೋಟರ್ ಸೈಕಲ್ ಇಮೇಜ್ ಮೇಲೆ ಕೆಟ್ಟ ಪರಿಣಾಮ ಬೀರುವುದರಿಂದ ಈ ಐಡಿಯಾ ಕೈ ಬಿಡಲಾಗಿದೆ ಎಂದಿದ್ದಾರೆ. ಎರಡು ಸ್ಟ್ರೋಕ್ ಹೊಂದಿದ ಯಮಹಾ rx100 ಬೈಕ್ ಮಾಡಲ್ ಕಡಿಮೆ ಮೈಲೇಜ್ ಕೊಡುತ್ತಿತ್ತು ಎನ್ನುವುದು ಗ್ರಾಹಕರ ದೂರಾಗಿತ್ತು ಆದರೆ ಈಗ ನವೀಕರಣವಾಗಿ ತಯಾರಾಗುತ್ತಿರುವ ಈ ಹೊಸ ವಿನ್ಯಾಸದ ಯಮಹಾ ಆರ್ ಎಕ್ಸ್ ಅಲ್ಲಿ ಈ ವಿಷಯದ ಬಗ್ಗೆ ಗಮನ ಕೊಡಲಾಗುವುದು ಎಂದು ಕೂಡ ಹೇಳಿದ್ದಾರೆ. ಯಮಹ ಆರ್ ಎಕ್ಸ್ ಬೈಕ್ ಈ ರೀತಿ ವಿನ್ಯಾಸಗೊಳ್ಳುತ್ತಲೇ ಇರುವುದು ಇದೇ ಮೊದಲೇನಲ್ಲ.

ಈ ಹಿಂದೆ 1996ರ ನಂತರ ಭಾರತದಲ್ಲಿ ಹೊರ ಸೂಸುವಿಕೆಯ ಕಾನೂನುಗಳು ಹಾಗೂ ನಿಯಮಗಳನ್ನು ಅನುಸರಿಸಿದ್ದ ಕಂಪನಿಯು ಇದರ ಪಾಲನೆಗಾಗಿ ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಂಡು ಯಮಹ ಆರ್ ಎಕ್ಸ್ ಜಿ ಎನ್ನುವ ಮಾಡೆಲ್ ಅನ್ನು ಮಾರ್ಕೆಟ್ಗೆ ಇಳಿಸಿತ್ತು. ನಂತರ ತಕ್ಷಣವೇ ವೇಗವರ್ತನೆಯನ್ನು ನಿಯಂತ್ರಿಸುವ ಸಲುವಾಗಿ ಫ್ಲೈವೀಲ್ ಗಳನ್ನು ಕೂಡ ಅಳವಡಿಸಿಕೊಂಡಿತು. ಅದಾದ ಮುಂದಿನ ವರ್ಷದಲ್ಲಿ ಅಂದರೆ 1997ರಲ್ಲಿ ಯಮಹ ಆರ್ ಎಕ್ಸ್ ಝಡ್ ಎನ್ನುವ ಮಾಡಲ್ ಬಿಡುಗಡೆ ಮಾಡಿತು. ಈ ಮಾದರಿಯೂ ಕೂಡ ಚಿಕ್ಕ ವೀಲ್ ಬೇಸ್ ಜೊತೆಗೆ ಸಂಪೂರ್ಣ ಚಾಸಿಸ್ ಅನ್ನು ಹೊಂದಿತ್ತು. ಈ ಮಾಡೆಲ್ ಅಲ್ಲಿ ಬದಲಾವಣೆಗಳು ಕೊಂಚ ವಿಭಿನ್ನವಾಗಿದ್ದರಿಂದ ಇದು ಬಾಡಿ ಕೂಡ ಸ್ವಲ್ಪ ಬದಲಾದಂತೆ ಕಾಣುತ್ತಿತ್ತು. ಇದು ಕೂಡ ಗ್ರಾಹಕರಿಗೆ ಬಹಳ ಇಷ್ಟವಾಗಿತ್ತು ಭಾರತದಲ್ಲಿ ವಿನ್ಯಾಸಗೊಂಡಿದ್ದ ಈ ಮಾಡೆಲ್ ಕೂಡ ಒಳ್ಳೆಯ ಬೇಡಿಕೆ ಕೂಡ ಸೃಷ್ಟಿಸಿಕೊಂಡಿತ್ತು.

ಮತ್ತು 1998ರಲ್ಲಿ ಒಮ್ಮೆ ಯಮಹಾ ಆರ್ ಎಕ್ಷ 135 ಎನ್ನುವ ಮಾಡೆಲ್ ಬಂದಿತ್ತು. ಬದಲಾದ ಈ ಮಾಡೆಲ್ ಇಂದ ಇಂಧನ ಉಳಿಸುವ ಅನುಕೂಲತೆ ಇದೆ ಎನ್ನುವುದು ಖಚಿತವಾಗಿದ್ದರೂ ಕೂಡ ಇದೇ ಸಮಯದಲ್ಲಿ ನಾಲ್ಕು ರೋಕ್ ಮೋಟಾರ್ ಸೈಕಲ್ ಗಳು ಕಾಂಪಿಟೇಶನ್ ಗೆ ಮಾರ್ಕೆಟ್ ನಲ್ಲಿ ಬಂದಿದ್ದರಿಂದ ಇದ್ಯಾಕೋ ಈ ಬಾರಿ ಹೆಚ್ಚು ಲಾಭ ಗಳಿಸುವುದರಲ್ಲಿ ವಿಫಲವಾಯಿತು ಎನ್ನಬಹುದು. ಆದರೆ ಇಷ್ಟಕ್ಕೆ ಸೋಲದ ಕಂಪನಿಯು ಇದನ್ನು ಮತ್ತಷ್ಟು ಹೊಸ ರೂಪದೊಂದಿಗೆ ಮೋಟಾರ್ ಸೈಕಲ್ ನ ಫೈ ಸ್ಪೀಡ್ ರೂಪಾಂತರದಲ್ಲಿ ಮತ್ತೊಮ್ಮೆ ಮಾರ್ಕೆಟ್ ಗೆ ತಂದಿತ್ತು. ಈ ರೀತಿ ಬದಲಾವಣೆಗಳು ಹಾಗೂ ಹೊಸ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ ಈಗಾಗಲೇ ಕಂಪನಿಯು 2025 ರವರೆಗೆ ಈಗಾಗಲೇ ಉತ್ಪಾದನೆಗೆ ಬುಕಿಂಗ್ ಆಗಿ ಹೋಗಿರುವುದರಿಂದ 2026ರ ನಂತರ ಅಷ್ಟೇ ಈ ಹೊಸ ಲುಕ್ ಯಮಹಾ ಆರ್ ಎಕ್ಸ್ ಒನ್ ಹಂಡ್ರೆಡ್ ಬೈಕ್ ಗ್ರಾಹಕರ ಕೈ ಸೇರಲಿದೆ.

Leave a Comment

%d bloggers like this: