ಹೂಡಿಕೆ ಮಾಡಿ ಲಾಭ ಪಡೆಯುವುದು ವ್ಯಾಪಾರಸ್ಥರು ಮಾತ್ರವಲ್ಲದೆ ಎಲ್ಲ ಜನಸಾಮಾನ್ಯರ ಸಾಮಾನ್ಯ ಬಯಕೆ. ಹೀಗಾಗಿ ಎಲ್ಲರೂ ಕೂಡ ಉತ್ತಮ ಲಾಭ ಬರುವ ಕಡೆ ತಾವು ಗಳಿಸಿರುವ ಮತ್ತು ಉಳಿಸಿರುವ ಹಣವನ್ನು ಹೂಡಿಕೆ ಮಾಡಿ ಅದರಿಂದ ಇನ್ನೂ ಹೆಚ್ಚಿನ ಲಾಭ ಪಡೆದುಕೊಳ್ಳುವ ಅವಕಾಶಗಳನ್ನು ಹುಡುಕುತ್ತಿರುತ್ತಾರೆ. ಆದರೆ ಎಲ್ಲಾ ಸಮಯದಲ್ಲೂ ಕೂಡ ಈ ರೀತಿ ಅವಕಾಶಗಳು ಸುರಕ್ಷತೆಯನ್ನು ಕೊಡುತ್ತವೆ ಎಂದು ಹೇಳುವುದು ಅಸಾಧ್ಯ. ಯಾಕೆಂದರೆ ಈಗಾಗಲೇ ಪ್ರತಿನಿತ್ಯ ನಾವು ಮಾಧ್ಯಮಗಳಲ್ಲಿ ದಿನಪತ್ರಿಕೆಗಳಲ್ಲಿ ಈ ರೀತಿ ಹಣವನ್ನು ವಂಚಿಸಿರುವ ಪ್ರಕರಣಗಳ ಬಗ್ಗೆ ಓದುತ್ತಿದ್ದೇವೆ ಮತ್ತು ನೋಡುತ್ತಿದ್ದೇವೆ. ಹಾಗಾಗಿ ಲಾಭದ ಜೊತೆ ನಾವು ನಮ್ಮ ಹಣದ ಭದ್ರತೆ ಮತ್ತು ಸುರಕ್ಷತೆ ಕಡೆಗೂ ಕೂಡ ಹೆಚ್ಚಿನ ಗಮನವನ್ನು ಕೊಡಬೇಕು. ಇಲ್ಲವಾದರೆ ಹೆಚ್ಚಿನ ಲಾಭದ ಆಸೆಗೆ ಬಿದ್ದು ಇರುವ ಹಣವನ್ನು ಕೂಡ ಕಳೆದುಕೊಳ್ಳ ಬೇಕಾಗುತ್ತದೆ.
ಗ್ರಾಹಕರಿಗೆ ಇಂತಹ ವಂಚನೆಗಳ ಬಗ್ಗೆ ಸರ್ಕಾರ ಯಾವಾಗಲೂ ಎಚ್ಚರಿಸುತ್ತಲೇ ಇರುತ್ತದೆ. ಆದರೂ ಕೂಡ ಅಧಿಕ ಲಾಭದ ಆಸೆಗೆ ಬೀಳುವ ಜನ ಈ ರೀತಿ ಮೋಸದ ಜಾಲಗಳಿಗೆ ಸಿಲುಕಿ ನಷ್ಟ ಅನುಭವಿಸುತ್ತಿದ್ದಾರೆ. ಈ ರೀತಿ ಸಿಕ್ಕಸಿಕ್ಕಲ್ಲಿ ಹೂಡಿಕೆ ಮಾಡುವ ಬದಲು ರಾಷ್ಟ್ರೀಕೃತ ಬ್ಯಾಂಕ್ ಗಳು ಹಾಗೂ ಅಂಚೆ ಕಚೇರಿಗಳಲ್ಲಿ ತಮ್ಮ ಹಣ ಹೂಡಿಕೆಯನ್ನು ಮಾಡುವುದು ಬಹಳ ಸುರಕ್ಷಿತ. ಅದರಲ್ಲೂ ಅಂಚೆ ಕಛೇರಿ ಅಂತಹ ಸೇವೆಗಳು ನಮ್ಮ ದೇಶದಲ್ಲಿ ಉತ್ತಮ ಸೇವೆಯನ್ನು ನೀಡುತ್ತಿರುವುದರಿಂದ ಎಲ್ಲಾ ನಾಗರಿಕರೂ ಕೂಡ ಇದರ ಸದುಪಯೋಗ ಪಡೆದುಕೊಳ್ಳಬಹುದು. ಈಗ ಭಾರತದ ಹಳ್ಳಿಗಳಲ್ಲಿ ಕೂಡ ಅಂಚೆ ಕಚೇರಿಯ ವ್ಯವಸ್ಥೆ ಇದೆ ಮತ್ತು ಇದಕ್ಕಾಗಿ ದೂರದ ಪ್ರಯಾಣ ಮಾಡುವ ಅವಶ್ಯಕತೆಯೂ ಇಲ್ಲದಿರುವುದರಿಂದ ನಿಶ್ಚಿಂತೆಯಾಗಿ ಜನರು ಇಲ್ಲಿ ತಮ್ಮ ಹಣಕಾಸಿನ ವ್ಯವಹಾರವನ್ನು ನಡೆಸಬಹುದು.
ಅಂಚೆ ಕಚೇರಿಗಳು ಮೊದಲಿನಿಂದಲೂ ಹಣದ ಸುರಕ್ಷತೆಗೆ ಹೆಸರುವಾಸಿಯಾಗಿದೆ. ಇದು ಕೇಂದ್ರದ ಹಿಡಿತದಲ್ಲಿ ಇರುವುದರಿಂದ ನಾಗರಿಕರಿಗೆ ಯಾವುದೇ ರೀತಿಯ ಹಣಕಾಸಿನ ತೊಂದರೆ ಆಗುವುದಿಲ್ಲ ನೂರಕ್ಕೆ ನೂರರಷ್ಟು ಇಲ್ಲಿ ಹೂಡಿಕೆ ಮಾಡುವುದು ಸೇಫ್ ಆಗಿರುವುದರಿಂದ ಅನೇಕ ವ್ಯಾಪಾರಸ್ಥರು ಲಾಭಕ್ಕಾಗಿ ಅಲ್ಲದಿದ್ದರೂ ಭವಿಷ್ಯದ ಚಿಂತನೆಯಿಂದ ಇಲ್ಲಿ ಕೆಲವು ಮೊತ್ತದ ಹಣವನ್ನು ಹೂಡಿಕೆ ಮಾಡುತ್ತಾರೆ. ಅದರಲ್ಲೂ ಫಿಕ್ಸೆಡ್ ಡೆಪಾಸಿಟ್ ಎನ್ನುವ ಯೋಜನೆಯು ಕಡಿಮೆ ಬಡ್ಡಿಯನ್ನು ಹೊಂದಿದ್ದರು ಸಹ ಹಣವು ಸುರಕ್ಷಿತ ಎನ್ನುವ ಕಾರಣದಿಂದಾಗಿ ಹೆಚ್ಚು ಫೇಮಸ್ ಆಗಿದೆ. ಇಂತಹ ಫಿಕ್ಸೆಡ್ ಡೆಪಾಸಿಟ್ ಯೋಜನೆಗಳಲ್ಲಿ ಒಂದು ಮೊತ್ತದ ಹಣವನ್ನು ನಿರ್ದಿಷ್ಟ ಅವಧಿಗೆ ಒಂದೇ ಬಾರಿಗೆ ಹೂಡಿಕೆ ಮಾಡಲಾಗುತ್ತದೆ ಮತ್ತು ಅದನ್ನು ಹಿಂಪಡೆಯುವ ಸಮಯದಲ್ಲಿ ಅದಕ್ಕೆ ಕೆಲವೊಂದಷ್ಟು ಮೊತ್ತದ ಹಣವನ್ನು ಬಡ್ಡಿ ರೂಪದಲ್ಲಿ ಹೂಡಿಕೆ ಹಣದ ಜೊತೆ ಹಿಂದೆ ತಿರುಗಿಸಿ ನೀಡಲಾಗುತ್ತದೆ.
ಈವರೆಗೆ ಇದರಲ್ಲಿ ಕಡಿಮೆ ಬಡ್ಡಿ ಇರುತ್ತದೆ ಎನ್ನುವುದೇ ಪ್ರಮುಖ ಆರೋಪವಾಗಿತ್ತು. ಆದರೆ ಇತ್ತೀಚೆಗೆ ಅಂಚೆ ಕಚೇರಿಯ ವ್ಯವಹಾರದ ಬಗ್ಗೆಯೂ ಕೂಡ ಜನ ಹೆಚ್ಚು ಆಸಕ್ತಿ ತೋರುತ್ತಿರುವುದರಿಂದ ಮತ್ತು ಗ್ರಾಹಕರನ್ನು ತನ್ನತ್ತ ಹೆಚ್ಚು ಆಕರ್ಷಿಸುವ ಸಲುವಾಗಿ ಅಂಚೆ ಕಚೇರಿ ಕೂಡ ತನ್ನ ಯೋಜನೆಗಳಲ್ಲಿ ಕೆಲವೊಂದು ಹೊಸ ರೀತಿಯ ಮಾರ್ಪಾಡುಗಳನ್ನು ಮಾಡಿಕೊಂಡಿದೆ. ಅದರಂತೆಯೇ ಈಗ ಫಿಕ್ಸೆಡ್ ಡೆಪಾಸಿಟ್ ಮಾಡುವವರು ಒಂದೇ ಬಾರಿಗೆ ಹೂಡಿಕೆ ಮಾಡದಿದ್ದರೂ ಕೂಡ ಪ್ರತಿ ತಿಂಗಳು ನಿರ್ದಿಷ್ಟ ಪಡಿಸಿಕೊಂಡ ಮೊತ್ತವನ್ನು ಹೂಡಿಕೆ ಮಾಡುತ್ತಾ ಬಂದರೆ ಅದಕ್ಕೆ ಉತ್ತಮ ಮೊತ್ತದ ಬಡ್ಡಿ ನೀಡುವುದರ ಜೊತೆಗೆ ಕಾಂಪೌಂಡಿಂಗ್ ಬಡ್ಡಿ ಕೂಡ ಇದರ ಜೊತೆ ಸೇರ್ಪಡೆ ಮಾಡಿ ನೀಡಲಾಗುತ್ತದೆ. ಮತ್ತು ಇನ್ನೂ ಅನೇಕ ರೀತಿಯ ವಿನಾಯಿತಿಗಳನ್ನು ಕೂಡ ಅಂಚೆ ಕಚೇರಿಯ ಈ ಯೋಜನೆಯು ಒಳಗೊಂಡಿದೆ. ಸದ್ಯಕ್ಕೆ ಇದರಲ್ಲಿ ಹೊಸ ರೀತಿಯ ಅನುಕೂಲತೆಯು ಗ್ರಾಹಕರಿಗೆ ಸಿಗಲಿದೆ.
ಅದೇನೆಂದರೆ ಈಗ ಏನಾದರೂ ನೀವು ಪ್ರತಿ ತಿಂಗಳು 10,000 ನಿರ್ದಿಷ್ಟ ಹಣವನ್ನು ಅಂಚೆ ಕಚೇರಿ ಈ ಫಿಕ್ಸೆಡ್ ಡೆಪಾಸಿಟ್ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಅಂದರೆ ಪ್ರತಿ ತಿಂಗಳು ಕೂಡ ತಪ್ಪದೆ ಹತ್ತು ಸಾವಿರ ಹೂಡಿಕೆ ಮಾಡುತ್ತಾ ಬಂದರೆ ಹತ್ತು ವರ್ಷದಲ್ಲಿ ನೀವು ಉಳಿತಾಯ ಮಾಡಲಾದ ಹಣದ ಮೊತ್ತವು 12ಲಕ್ಷ ರೂಗಳು ಆಗುತ್ತದೆ. ಇದಕ್ಕೆ 5.8% ಅಷ್ಟು ಬಡ್ಡಿ ನೀಡಲಾಗುತ್ತದೆ. ಇದರ ಜೊತೆಗೆ ಈ ಮೇಲೆ ತಿಳಿಸಿದಂತೆ ಮೂರು ತಿಂಗಳ ಅವಧಿಗೊಮ್ಮೆ ಕಾಂಪೌಂಡಿಂಗ್ ಬಡ್ಡಿಯನ್ನು ಕೂಡ ಸೇರಿಸಿ ನೀಡಲಾಗುತ್ತದೆ. ಕೊನೆಗೆ ಒಟ್ಟಾಗಿ ಇವೆಲ್ಲವನ್ನು ಸೇರಿಸಿ 16,26,000ಗಳು ಸಿಗಲಿದೆ. ಸದ್ಯಕ್ಕೆ ಈ ಯೋಜನೆಗೂ ತುಂಬಾ ಪ್ರಚಾರ ಪಡೆಯುತ್ತಿದ್ದು ಇಷ್ಟು ಅನುಕೂಲಕರವಾದ ಈ ಯೋಜನೆಯ ಬಗ್ಗೆ ಎಲ್ಲರೂ ಆಕರ್ಷಿತರು ಕೂಡ ಆಗುತ್ತಿದ್ದಾರೆ. ಈ ಹಿಂದೆ 2018 ರಲ್ಲಿ ಈ ರೀತಿ ಫಿಕ್ಸೆಡ್ ಡೆಪಾಸಿಟ್ ಮಾಡಲಾದ ಯೋಜನೆಗೆ 7.3% ಅಷ್ಟು ಬಡ್ಡಿ ನೀಡಲಾಗುತ್ತಿತ್ತು. ಇದು ರಾಷ್ಟ್ರೀಕೃತ ಬ್ಯಾಂಕ್ ಗಳು ಕೂಡ ನೀಡಲಾಗುತ್ತಿದ್ದ ಬಡ್ಡಿಗಿಂತ ಹೆಚ್ಚಿತ್ತು.
ಈ ಯೋಜನೆಯಲ್ಲಿ ಲಾಭವು ಸ್ವಲ್ಪ ತೃಪ್ತಿಯಾಗುವ ಮಟ್ಟದಲ್ಲಿದೆ ಮತ್ತು ಗ್ರಾಹಕರ ಹಣಕ್ಕೆ ಯಾವುದೇ ರೀತಿಯ ಅಪಾಯ ಕೂಡ ಇಲ್ಲ. ಆದ್ದರಿಂದ ಸುರಕ್ಷಿತವಾಗಿ ಹಣದ ಹೂಡಿಕೆ ಮಾಡುವ ಯೋಜನೆಯಲ್ಲಿ ಇರುವವರು ಎಲ್ಲರೂ ಕೂಡ ಅಂಚೆ ಕಚೇರಿಯ ಈ ಯೋಜನೆಯ ಕಡೆ ಒಮ್ಮೆ ಗಮನ ಕೊಡಿ ಮತ್ತು ಈ ಯೋಜನೆ ಕುರಿತಾದ ಹೆಚ್ಚಿನ ಮಾಹಿತಿ ಬೇಕು ಎಂದರೆ ಹತ್ತಿರದಲ್ಲಿರುವ ನಿಮ್ಮ ಅಂಚೆ ಕಚೇರಿಯ ಬ್ರಾಂಚ್ ಅನ್ನು ಒಮ್ಮೆ ಭೇಟಿಯಾಗಿ ಇದರಿಂದ ಈ ಯೋಜನೆ ಕುರಿತಾದ ಇನ್ನು ಹೆಚ್ಚಿನ ಮಾಹಿತಿಗಳು ಸಿಗಲಿದೆ ಮತ್ತು ಇದರ ಕುರಿತಾದ ನಿಮ್ಮ ಗೊಂದಲಗಳಿಗೂ ಪರಿಹಾರ ಸಿಗಲಿದೆ. ಇನ್ನೇಕೆ ತಡ ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿ ಸುರಕ್ಷಿತ ಜೊತೆ ಹೆಚ್ಚಿನ ಲಾಭ ಪಡೆಯಿರಿ. ಈ ಮಾಹಿತಿಯನ್ನು ಶೇರ್ & ಲೈಕ್ ಮಾಡಿ.