ನಿಮ್ಮ ಜಮೀನಿನ ನಕ್ಷೆ ,ನಿಮ್ಮ ಜಮೀನಿಗೆ ಹೋಗಲು ಕಾಲು ದಾರಿ, ಬಂಡಿ ದಾರಿ ಯಾವುದು? ಅದು ಎಲ್ಲಿಂದ ಎಲ್ಲಿಗೆ ಹಾದು ಹೋಗುತ್ತದೆ? ನಿಮ್ಮ ಜಮೀನಿನ ಸುತ್ತ ಯಾವ ಯಾವ ಸರ್ವೇ ನಂಬರ್ ಬರುತ್ತದೆ? ನಿಮ್ಮ ಹಳ್ಳಿಯಲ್ಲಿ ಯಾವ ಯಾವ ಸರ್ವೆ ನಂಬರ್ ಬರುತ್ತದೆ.?
ಇತ್ಯಾದಿ ಮಾಹಿತಿಗಳನ್ನು ಈಗ ನೀವು ಮೊಬೈಲ್ ನಲ್ಲಿಯೇ ತಿಳಿದುಕೊಳ್ಳಬಹುದು. ಭೂ ಮಾಪನ ಕಂದಾಯ ವ್ಯವಸ್ಥೆ ಭೂ ದಾಖಲೆ ಇಲಾಖೆಯು ಸಿದ್ಧಪಡಿಸಿರುವ ನಕ್ಷೆ ಸಮೇತವಾಗಿ ಪೂರ್ತಿ ಮಾಹಿತಿಯನ್ನು ಮೊಬೈಲ್ ನಲ್ಲಿ ನೋಡಬಹುದು. ಹೇಗೆ ಗೊತ್ತಾ?
* ಮೊಬೈಲ್ ಯಾವುದಾದ್ರೂ ಬ್ರೌಸರ್ ಗೆ ಹೋಗಿ ಓಪನ್ ಮಾಡಿ ಸರ್ಚ್ ಬಾರ್ ನಲ್ಲಿ landrecords.karnataka.gov.in ಟೈಪ್ ಮಾಡಿ ಎಂದು ಸರ್ಚ್ ಕೊಡಿ
* ಕಂದಾಯ ಇಲಾಖೆ ಅಧಿಕೃತ ವೆಬ್ಸೈಟ್ ಓಪನ್ ಆಗುತ್ತದೆ ಮುಖಪುಟವನ್ನು ಸ್ಕ್ರೋಲ್ ಮಾಡಿದರೆ ಕಂದಾಯ ನಕ್ಷೆಗಳು (Revenue maps) ಎನ್ನುವ ಆಪ್ಷನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
* Revenue Maps Online ಎನ್ನುವ ಮತ್ತೊಂದು ಪೇಜ್ ಕಾಣುತ್ತದೆ ಅದರಲ್ಲಿ Revenue map ಎನ್ನುವ ಚಾರ್ಟ್ ಇರುತ್ತದೆ. ನಿಮ್ಮ ಜಿಲ್ಲೆ , ತಾಲ್ಲೂಕು, ಹೋಬಳಿ ಇವುಗಳನ್ನು ಸೆಲೆಕ್ಟ್ ಮಾಡಿ Maps type ಎನ್ನುವ ಆಪ್ಷನ್ ನಲ್ಲಿ Cadastrial Maps ಎಂದು ಸೆಲೆಕ್ಟ್ ಮಾಡಬೇಕು.
* ನೀವು ಸೆಲೆಕ್ಟ್ ಮಾಡಿರುವ ತಾಲೂಕು ಹೋಬಳಿಯ ಪ್ರಕಾರ ಆ ವ್ಯಾಪ್ತಿಗೆ ಸೇರುವ ಎಲ್ಲಾ ಗ್ರಾಮಗಳ ಹೆಸರು ಬರುತ್ತದೆ. ಅದರಲ್ಲಿ ನಿಮ್ಮ ಗ್ರಾಮದ ಹೆಸರು ಗುರುತಿಸಿ ಅದರ ನೇರಕ್ಕೆ ಇರುವ pdf ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು.
* Pop-up blocked always show ಎನ್ನುವ pop-up notification ಬರುತ್ತದೆ always show ಎನ್ನುವುದರ ಮೇಲೆ ಕ್ಲಿಕ್ ಮಾಡಿ
* ಈಗ ನಿಮ್ಮ ಊರಿನ ನಕ್ಷೆ pdf form ನಲ್ಲಿ ಡೌನ್ಲೋಡ್ ಆಗುತ್ತದೆ ಅದನ್ನು ಓಪನ್ ಮಾಡಿದರೆ ನಿಮ್ಮ ಜಮೀನಿನ ಸಂಪೂರ್ಣ ನಕ್ಷೆ ನೋಡಬಹುದು.
* Menu bar ನಲ್ಲಿ find in document ಎನ್ನುವ ಆಪ್ಷನ್ ಇದೆ ಅದರ ಮೇಲೆ ನಿಮ್ಮ ಸರ್ವೆ ನಂಬರ್ ಎಂಟ್ರಿ ಮಾಡುವ ಮೂಲಕ ನಿಮ್ಮ ಜಮೀನಿನ ನಕ್ಷೆ ನೋಡಬಹುದು. ಆದರೆ adobe reader app ಇದ್ದರೆ ಮಾತ್ರ ಸಾಧ್ಯ ಇಲ್ಲವೆಂದರೆ ಆ ನಕ್ಷೆಯಲ್ಲಿಯೇ ನಿಮ್ಮ ಸರ್ವೆ ನಂಬರ್ ಹುಡುಕಾಡಿ.
* ನಿಮ್ಮ ಸರ್ವೆ ನಂಬರ್ ಜಮೀನಿಗೆ ಇರುವ ಕಾಲು ದಾರಿ, ಬಂಡಿ ದಾರಿ ಚಿಹ್ನೆಗಳು ನಕ್ಷೆಯಲ್ಲಿ ಕಾಣುತ್ತದೆ. ನಿಮ್ಮ ಗ್ರಾಮದ ನಕ್ಷೆಯಲ್ಲಿ ಇನ್ನು ಅನೇಕ ಚಿಹ್ನೆಗಳು ಕಾಣುತ್ತವೆ. ದೊಡ್ಡಮರಗಳು, ಕಲ್ಲುಗಳು, ನೀರು ಹರಿಯುವ ದಿಕ್ಕು , ದೇವಸ್ಥಾನ ಈ ರೀತಿ ಹಲವು ಮುಖ್ಯ ವಿಷಯಗಳಿಗೆ ಚಿಹ್ನೆ ಇರುತ್ತದೆ. ಒಂದು ವೇಳೆ ಈ ಚಿಹ್ನೆಗಳ ಬಗ್ಗೆ ನಿಮಗೆ ತಿಳಿಯಲಿಲ್ಲ ಎಂದರೆ ಇದೇ ಪುಟದ ಎಡಭಾಗದಲ್ಲಿ ಚಿಹ್ನೆಗಳು ಹಾಗೂ ಅದರ ವಿವರಗಳು ಏನನ್ನು ಸೂಚಿಸುತ್ತದೆ ಎನ್ನುವುದನ್ನು ಕೊಡಲಾಗಿರುತ್ತದೆ. ಆ ಮೂಲಕ ನೀವು ಚಿಹ್ನೆ ನೋಡಿ ಅರ್ಥಮಾಡಿಕೊಳ್ಳಬಹುದು.
* ಕಾಲುದಾರಿ, ಬಂಡಿ ದಾರಿ ಎಲ್ಲಿಂದ ಎಲ್ಲಿಗೆ ಇದೆ ಎನ್ನುವುದು ಕೂಡ ತಿಳಿಯುತ್ತದೆ ಇದರ ಜೊತೆಗೆ ನಿಮ್ಮ ಸರ್ವೇ ನಂಬರ್ ಸುತ್ತಮುತ್ತ ಇದು ಯಾವ ಸರ್ವೇ ನಂಬರ್ ಇದೆ ಆ ಮಾಹಿತಿ ಕೂಡ ತಿಳಿಯುತ್ತದೆ. ಒಟ್ಟು ನಿಮ್ಮ ಗ್ರಾಮದ ನಕ್ಷೆಯಲ್ಲಿ ಎಷ್ಟು ಸರ್ವೇ ನಂಬರ್ ಗಳು ಇವೆ ಎನ್ನುವುದರ ಮಾಹಿತಿ ಕೂಡ ಇದರಲ್ಲಿ ನೀವು ನೋಡಬಹುದು
* ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆ ಇಲಾಖೆ ಕರ್ನಾಟಕ ಸರ್ಕಾರ ಈ ನಕ್ಷೆಯನ್ನು ರೈತರಿಗೆ ಅನುಕೂಲವಾಗಲಿ ಎಂದು ಸಿದ್ಧಪಡಿಸಿದೆ ಈ ಮಾಹಿತಿಯನ್ನು ಹೆಚ್ಚಿನ ರೈತರ ಜೊತೆ ಹಂಚಿಕೊಳ್ಳಿ.