ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರಾದ ಅಭಿವೃದ್ಧಿ ನಿಗಮವು ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್ ಗಳ ಸಹಾಯಕದೊಂದಿಗೆ ಇಂತಹದೊಂದು ಯೋಜನೆಯನ್ನು ಕೈಗೆತ್ತಿಕೊಂಡಿದೆ. ಈ ಯೋಜನೆ ಮೂಲಕ ಅರ್ಹ ಫಲಾನುಭವಿಗಳಿಗೆ ಪ್ಯಾಸೆಂಜರ್ ಆಟೋ, ಆಟೋರಿಕ್ಷಾ, ಟ್ಯಾಕ್ಸಿ, ಗೂಡ್ಸ್ ವಾಹನ ಮುಂತಾದವುಗಳ ಖರೀದಿಗೆ ಸಬ್ಸಿಡಿ ರೂಪದಲ್ಲಿ 2,50,000 ವರೆಗೂ ಕೂಡ ಸಹಾಯಧನ ನೀಡಲು ಮುಂದಾಗಿದೆ.
ಕರ್ನಾಟಕದ ಎಲ್ಲಾ ಅರ್ಹ ಫಲಾನುಭವಿಗಳು ಕೂಡ ಈ ಯೋಜನೆಯ ಸಹಾಯವನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆ ಆದ ಫಲಾನುಭವಿಗಳಿಗೆ ಮಾತ್ರ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಿಂದ ಈ ಸಹಾಯಧನದ ಸೌಲಭ್ಯ ಸಿಗಲಿದೆ. ಅದಕ್ಕಾಗಿ ಈ ಅಂಕಣದಲ್ಲಿ ಯೋಜನೆ ಕುರಿತ ಪ್ರಮುಖ ಅಂಶಗಳ ಬಗ್ಗೆ ತಿಳಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ತಪ್ಪದೆ ಹಂಚಿಕೊಳ್ಳಿ.
ಯೋಜನೆಯ ಕುರಿತು ಪ್ರಮುಖ ವಿಷಯಗಳು:-
● ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮವು ರಾಷ್ಟ್ರೀಕೃತ ಹಾಗೂ ಪರಿಶಿಷ್ಟ ಬ್ಯಾಂಕುಗಳ ಸಹಯೋಗದೊಂದಿಗೆ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.
● ಪ್ಯಾಸೆಂಜರ್, ಆಟೋ ರಿಕ್ಷಾ, ಗೂಡ್ಸ್ ವಾಹನ, ಟ್ಯಾಕ್ಸಿ ಇವುಗಳ ಖರೀದಿಗೆ ಬ್ಯಾಂಕ್ ಗಳ ಸಾಲ ಪಡೆದಿದ್ದ ಪಕ್ಷದಲ್ಲಿ 33% ಸಬ್ಸಿಡಿಯನ್ನು, ಅಂದರೆ ಗರಿಷ್ಠ 2,50,000 ದವರೆಗೆ ಸಹಾಯಧನವನ್ನು ನೀಡಲು ನಿರ್ಧರಿಸಿದೆ.
● ಪುರುಷ ಮತ್ತು ಮಹಿಳೆಯರಿಗೂ ಕೂಡ ಈ ಯೋಜನೆಯ ಸೌಲಭ್ಯ ದೊರೆಯಲಿದೆ.
● ಅರ್ಜಿ ಸಲ್ಲಿಸುವವರು ಅರ್ಹ ದಾಖಲೆಗಳ ಜೊತೆಗೆ ಕರ್ನಾಟಕ ಅಲ್ಪಸಂಖ್ಯಾತ ನಿಗಮ KMDC ಜಿಲ್ಲಾ ಕಚೇರಿಗೆ ವಾಹನ ಖರೀದಿಗೆ ಮತ್ತು ವಿಮೆಗೆ ಸಂಬಂಧಿಸಿದ ಕೆಲ ಪ್ರಮುಖ ದಾಖಲೆಗಳನ್ನು ನೀಡಬೇಕು.
● KMDC ಸಹಾಯಧನ ಪಡೆದು ವಾಹನಗಳ ಮೇಲೆ ಕಡ್ಡಾಯವಾಗಿ KMDC ಇಂದ ಸಬ್ಸಿಡಿ ನೀಡಲಾಗಿದೆ ಎಂದು ಬರೆಯಲಾಗುತ್ತದೆ.
ಈ ಯೋಜನೆಯ ಫಲಾನುಭವಿಗಳಾಗಲು ಬೇಕಾಗಿರುವ ಅರ್ಹತೆಗಳು:-
● ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು
● ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿರಬೇಕು. ಸಂಬಂಧಿಸಿದ ದಾಖಲೆ ಪತ್ರಗಳನ್ನು ಒದಗಿಸಬೇಕು
● ಅರ್ಜಿದಾರರ ವಯೋಮಿತಿ ಕನಿಷ್ಠ 18 ವರ್ಷ ಮತ್ತು 55 ವರ್ಷ ಮೀರಿರಬಾರದು.
● ಅರ್ಜಿದಾರರ ವಾರ್ಷಿಕದ ಕುಟುಂಬ ಆದಾಯವು 4.50,000 ರೂ. ಒಳಗೆ ಇದ್ದಲ್ಲಿ ಮಾತ್ರ ಈ ಸಹಾಯಧನ ದೊರೆಯುತ್ತದೆ
● ಅರ್ಜಿದಾರರ ಕುಟುಂಬದ ಸದಸ್ಯರು ರಾಜ್ಯ ಅಥವಾ ಕೇಂದ್ರ ಅಥವಾ ಸರ್ಕಾರಿ ಸಾರ್ವಜನಿಕ ವಲಯದ ಯಾವುದೇ ಘಟಕದಲ್ಲಿ ಉದ್ಯೋಗಿಯಾಗಿರಬಾರದು.
● ಅರ್ಜಿದಾರರು ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.
● ಅರ್ಜಿದಾರರು KMDC ಯಲ್ಲಿ ಸಾಲ ಡೀಫಾಲ್ಟರ್ ಆಗಿರಬಾರದು.
● ಅರ್ಜಿದಾರರು ಮತ್ತು ಕುಟುಂಬದ ಸದಸ್ಯರು ಬೇರೆ ಯಾವುದೇ ಬ್ಯಾಂಕ್ ಅಥವಾ ಖಾಸಗಿ ಹಣಕಾಸು ಸಂಸ್ಥೆಯಿಂದ ವಾಹನ ಖರೀದಿಗೆ ಸಾಲ ಪಡೆದಿರಬಾರದು.
ಬೇಕಾಗುವ ಪ್ರಮುಖ ದಾಖಲೆಗಳು:-
● ಆನ್ಲೈನ್ ಅಲ್ಲಿ ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿದ ಅರ್ಜಿ ಫಾರಂ.
● ಪಾಸ್ಪೋರ್ಟ್ ಗಾತ್ರದ 2 ಇತ್ತೀಚಿನ ಫೋಟೋಗಳು.
● ಜಾತಿ ಮತ್ತು ಆದಾಯ ಪ್ರಮಾಣ ಪತ್ರ
● ಅರ್ಜಿದಾರರ ಆಧಾರ್ ಕಾರ್ಡ್
● ಅರ್ಜಿದಾರರ ಡ್ರೈವಿಂಗ್ ಲೈಸೆನ್ಸ್
● ಅರ್ಜಿ ಸಲ್ಲಿಸುತ್ತಿರುವವರು ಮತ್ತು ಅವನ/ಅವಳ ಕುಟುಂಬದ ಸದಸ್ಯರು ವಾಹನ ಖರೀದಿಸಲು ರಾಜ್ಯ ಸರ್ಕಾರದ ಯಾವುದೇ ಯೋಜನೆಯಡಿಯಲ್ಲಿ ಸಾಲ ಸೌಲಭ್ಯವನ್ನು ಪಡೆಯದಿರುವ ಬಗ್ಗೆ ಫಲಾನುಭವಿಯಿಂದ ಅಫಿಡವಿಟ್.
● ಸಾಲದ ಅವಧಿಯಲ್ಲಿ ಈ ಯೋಜನೆಯಡಿಯಲ್ಲಿ ಪಡೆದ ವಾಹನವನ್ನು ವರ್ಗಾವಣೆ ಮಾಡದಿರುವ ಬಗ್ಗೆ ಅಫಿಡವಿಟ್.
● ಬ್ಯಾಂಕ್ ಪಾಸ್ ಬುಕ್ ನ ಪ್ರತಿ.
● ಸ್ವಯಂ ಘೋಷಣೆ ನಮೂನೆ
ಈ ಮೇಲ್ಕಂಡ ಎಲ್ಲಾ ದಾಖಲೆಗಳನ್ನು ಮತ್ತು ಭರ್ತಿ ಮಾಡಿದ ಅರ್ಜಿ ಫಾರಂ ಅನ್ನು ನಿಮ್ಮ ಜಿಲ್ಲೆಯ ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ಕಛೇರಿಗೆ ಸಲ್ಲಿಸಿದರೆ ಆಯ್ಕೆ ಆದ ಫಲಾನುಭವಿಗಳ ಖಾತೆಗೆ ನೇರವಾಗಿ ಸಬ್ಸಿಡಿ ಹಣ ವರ್ಗಾವಣೆ ಆಗಲಿದೆ.