ಬ್ಯಾಂಕ್ ಅಕೌಂಟ್ ನಲ್ಲಿ ಹೆಸರು ತಪ್ಪಗಿದಿಯಾ..? ಚಿಂತೆ ಬಿಡಿ ಈ ರೀತಿ ಮಾಡಿದ್ರೆ ನಿಮಿಷದೊಳಗೆ ಹೆಸರು ಬದಲಾಗುತ್ತೆ.

 

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಗಳ ಬಳಕೆಯೇ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಅಗತ್ಯವಾಗಿ ಬೇಕಾಗುತ್ತದೆ. ಉದ್ಯೋಗ ಸ್ಥಳಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ, ರೈತ ಸಹಕಾರಿ ಕೇಂದ್ರಗಳಲ್ಲಿ, ಯಂತ್ರೋಪಕರಣಗಳ ಖರೀದಿಯಲ್ಲಿ, ಬ್ಯಾಂಕ್ ನಲ್ಲಿ, ಆಸ್ಪತ್ರೆಗಳಲ್ಲಿ, ನ್ಯಾಯಾಲಯಗಳಲ್ಲಿ ವ್ಯಾಪಾರ ವ್ಯವಹಾರಗಳಲ್ಲಿ ಎನ್ನುತ್ತಾ ಎಲ್ಲೆಡೆಯಲ್ಲಿಯೂ ದಾಖಲಾತಿ ಪತ್ರಗಳನ್ನು ಸಲ್ಲಿಸಬೇಕಾಗಿರುತ್ತದೆ.

ಆಧಾರ್ ಕಾರ್ಡ್ ನಲ್ಲಿ ಹೇಗೆ ವ್ಯಕ್ತಿಯ ಹೆಸರು ನಮೂದಿಸಲ್ಪಟ್ಟಿರುತ್ತದೆಯೋ ಅದೇ ರೀತಿಯಾಗಿ ಬ್ಯಾಂಕ್ ಖಾತೆಯಲ್ಲಿಯೂ ಹೆಸರು ಇರಬೇಕಾಗುತ್ತದೆ. ಇರಲಿಲ್ಲವೆಂದಾದರೆ ನಾನಾ ತರಹದ ತೊಂದರೆಗಳು ಕಾಡುತ್ತವೆ. ಯಾಕೆಂದರೆ ಇಂದಿನ ಕಾಲದಲ್ಲಿ ಎಲ್ಲವೂ ಆಧಾರ್ ಕಾರ್ಡ್ ನ ಆಧಾರವಾಗಿಯೇ ನಿಂತಿದೆ. ಸರ್ಕಾರದ ಯಾವುದೇ ಸೌಲಭ್ಯವನ್ನು ಪಡೆಯಲು ಆಧಾರ್ ಕಾರ್ಡ್ ನಲ್ಲಿ ಯಾವ ರೀತಿಯ ಹೆಸರಿರುತ್ತದೆಯೋ ಅದೇ ರೀತಿಯ ಹೆಸರನ್ನು ಬ್ಯಾಂಕ್ ಅಕೌಂಟ್ ನಲ್ಲಿ ಹೊಂದಿರಬೇಕು.

ಬ್ಯಾಂಕ್ ಅಕೌಂಟ್ ನಲ್ಲಿ ಹೆಸರು ತಿದ್ದುಪಡಿ ಮಾಡುವುದು ಹೇಗೆ ಯಾವ ಯಾವ ದಾಖಲಾತಿ ಪತ್ರಗಳನ್ನು ಸಲ್ಲಿಸಬೇಕು ಹೆಸರು ತಿದ್ದುಪಡಿಯ ಪ್ರಕ್ರಿಯೆ ಹೇಗಿರುತ್ತದೆ ಎಂಬುದರ ಕುರಿತಾದ ಸಂಪೂರ್ಣ ಮಾಹಿತಿಯು ಈ ಬರಹದಲ್ಲಿ ಇದೆ. ಓದಿದ ಬಳಿಕ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಬ್ಯಾಂಕ್ ಅಕೌಂಟ್ ನಲ್ಲಿರುವ ಹೆಸರನ್ನು ತಿದ್ದುಪಡಿ ಮಾಡಬೇಕು ಎಂದಾದರೆ ಮೊದಲಿಗೆ ಬಿಳಿಯ ಹಾಳೆಯ ಮೇಲೆ ಅರ್ಜಿಯೊಂದನ್ನು ಬರೆಯಬೇಕು. ಅರ್ಜಿಯನ್ನು ಹೇಗೆ ಬರೆಯಬೇಕು? ಬಳಿಕ ಅರ್ಜಿಯೊಂದಿಗೆ ಏನೆಲ್ಲಾ ಬ್ಯಾಂಕಿಗೆ ಸಲ್ಲಿಸಬೇಕು ಎಂಬುದನ್ನು ತಿಳಿಯೋಣ. ಬರೆಯುವ ವಿಧಾನ ಹೀಗಿದೆ; ಹಾಳೆಯ ಎಡ ಮೇಲ್ಭಾಗದಲ್ಲಿ ಗೆ ಅಂದರೆ ಶಾಖೆಯ ವ್ಯವಸ್ಥಾಪಕರಿಗೆ ಅರ್ಜಿಯನ್ನು ಬರೆಯಬೇಕು.

ಶಾಖೆಯ ಸ್ಥಳ ತಾಲೂಕು ಜಿಲ್ಲೆಯನ್ನು ನಮೂದಿಸಬೇಕು. ಬಲ ಮೇಲ್ಭಾಗದಲ್ಲಿ ದಿನಾಂಕ ಹಾಗೂ ಸ್ಥಳವನ್ನು ಬರೆಯಬೇಕು. ವಿಷಯ : ‘ಬ್ಯಾಂಕ್ ಅಕೌಂಟ್ ನಲ್ಲಿ ಹೆಸರನ್ನು ತಿದ್ದುಪಡಿ ಮಾಡುವ ಕುರಿತು’ ಎಂದು ಬರೆಯಬೇಕು. ವಿನಂತಿಸಿಕೊಳ್ಳುವಾಗ ವ್ಯಕ್ತಿಯ ಹೆಸರು, ವಾಸಿಸುವ ಗ್ರಾಮ ಹಾಗೂ ಶಾಖೆಯಲ್ಲಿನ ಉಳಿತಾಯ ಖಾತೆಯ ಸಂಖ್ಯೆಯನ್ನು ಅಗತ್ಯವಾಗಿ ಬರೆಯಬೇಕು.

ಆಧಾರ್ ಕಾರ್ಡ್ ನಲ್ಲಿ ಇರುವಂತೆ ಹೆಸರನ್ನು ತಿದ್ದುಪಡಿ ಮಾಡಿಕೊಡಬೇಕಾಗಿ ಕೇಳಿಕೊಳ್ಳುತ್ತಿದ್ದೇನೆ ಎಂದು ಬರೆದು, ಹೆಸರು ತಿದ್ದುಪಡಿ ಮಾಡಲು ಕಾರಣವನ್ನು ಬರೆಯಬೇಕು; ಅದೇನೆಂದರೆ ‘ಸರ್ಕಾರಿ ಸೌಲಭ್ಯಗಳನ್ನು ಪಡೆಯುವಲ್ಲಿ ಮತ್ತು ಇನ್ನಿತರ ಹಣಕಾಸಿನ ಕೆಲಸ ಕಾರ್ಯಗಳಿಗೆ ಬ್ಯಾಂಕ್ ಖಾತೆ ಹಾಗೂ ಆಧಾರ್ ಕಾರ್ಡ್ ನಲ್ಲಿನ ಹೆಸರಿನಲ್ಲಿರುವ ವ್ಯತ್ಯಾಸದಿಂದಾಗಿ ಅನೇಕ ಅನಾನುಕೂಲಗಳು ಆಗಿವೆ’ ಎಂದಿರಬೇಕು.

ಬಳಿಕ ಆಧಾರ್ ಕಾರ್ಡ್ ನಲ್ಲಿರುವಂತೆ ಹೆಸರನ್ನು ತಿದ್ದುಪಡಿ ಮಾಡಿ ಹೊಸದಾಗಿ ಮುದ್ರಿತ ಪಾಸ್ ಬುಕ್ ಅನ್ನು ನೀಡುವಂತೆ ವಿನಂತಿಸಿಕೊಳ್ಳಬೇಕು. ಹಾಳೆಯ ಬಲ ಕೆಳಭಾಗದಲ್ಲಿ ಧನ್ಯವಾದಗಳು ಅಂದಿಗೆ ಎಂದು ಬರೆದು ನಿಮ್ಮ ಹೆಸರನ್ನು ನಮೂದಿಸಿ ಸಹಿ ಕೂಡ ಹಾಕಬೇಕು. ಈ ಮೇಲೆ ಹೇಳಿದಂತೆ ಅರ್ಜಿಯನ್ನು ಬರೆದುಕೊಂಡು ಬ್ಯಾಂಕಿಗೆ ತೆರಳಿ ಅಲ್ಲಿ ಹೆಸರು ತಿದ್ದುಪಡಿಗಾಗಿ ನಿಗದಿಪಡಿಸಿದ ಫಾರಂ ಅನ್ನು ಪಡೆದು ಅದರಲ್ಲಿ ಹೆಸರು ತಿದ್ದುಪಡಿ ಕಾಲಮ್ ಅನ್ನು ಮಾತ್ರ ಭರ್ತಿ ಮಾಡಿದರೆ ಸಾಕು.

ಬಳಿಕ ಕೈ ಬರಹದ ಅರ್ಜಿ ಮತ್ತು ಭರ್ತಿ ಮಾಡಿದ ಅರ್ಜಿ ಜೊತೆಯಲ್ಲಿ ಆಧಾರ್ ಕಾರ್ಡ್, ಪಾನ್ ಕಾರ್ಡನ್ನು ಹೊಂದಿದ್ದರೆ ಪಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಇವೆಲ್ಲವನ್ನು ಬ್ಯಾಂಕಿಗೆ ಸಲ್ಲಿಸಬೇಕು. ಇವೆಲ್ಲವನ್ನು ಸರಿಯಾಗಿ ಗಮನದಲ್ಲಿಟ್ಟುಕೊಂಡು ಲಗತ್ತಿಸಬೇಕಾದ ದಾಖಲಾತಿಗಳನ್ನು ಮರೆಯದೆ ಸಲ್ಲಿಸಿದ್ದಲ್ಲಿ, ಹೆಸರು ತಿದ್ದುಪಡಿಗಾಗಿ ವ್ಯಕ್ತಿಯು ಅರ್ಜಿ ಸಲ್ಲಿಸಿದ ಕೆಲವೇ ಕೆಲವು ದಿನಗಳ ಒಳಗಾಗಿ ಹೆಸರು ತಿದ್ದುಪಡಿಯಾದ ಹೊಸ ಮುದ್ರಿತ ಪಾಸ್ ಬುಕ್ ಅನ್ನು ವ್ಯಕ್ತಿಗೆ ನೀಡಲಾಗುತ್ತದೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now