ಆಧಾರ್ ಕಾರ್ಡ್(Aadhaar card) ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೀಡುವ 12 ಅಂಕಿಗಳ ಗುರುತಿನ ಪುರಾವೆ ಸಂಖ್ಯೆಯಾಗಿದೆ. ಭಾರತದಲ್ಲಿ ಪ್ರಸ್ತುತ ಬಹುತೇಕ ಎಲ್ಲ ಕಾರ್ಯಗಳಿಗೂ ಕೂಡಾ ಆಧಾರ್ ಕಾರ್ಡ್ ಅತೀ ಮುಖ್ಯವಾಗಿದೆ. ಆಧಾರ್ ಕಾರ್ಡ್ನಲ್ಲಿ ನಮ್ಮ ವೈಯಕ್ತಿಕ ಮಾಹಿತಿಗಳು ಸೇರಿದಂತೆ ಬಯೋಮೆಟ್ರಿಕ್ ಡೇಟಾಗಳು ಕೂಡಾ ಇರುತ್ತದೆ.
ನೀವು ಆಧಾರ್ ಕಾರ್ಡ್ ಸಂಖ್ಯೆಯನ್ನು ನಿಮ್ಮ ಬ್ಯಾಂಕ್ ಖಾತೆಯನ್ನು ತೆರೆಯಲು, ಮೊಬೈಲ್ ಫೋನ್ ಸಂಪರ್ಕವನ್ನು ಪಡೆಯಲು, ಸರ್ಕಾರ ಸಬ್ಸಿಡಿಯ ಮೊತ್ತವನ್ನು ಪಡೆಯಲು ಬಳಕೆ ಮಾಡಬೇಕಾಗುತ್ತದೆ. ಈ ಆಧಾರ್ ಕಾರ್ಡ್ನಲ್ಲಿ ನಿಮ್ಮ ಹೆಸರು, ಜನನ ದಿನಾಂಕ, ವಿಳಾಸ ಮೊದಲಾದ ವೈಯಕ್ತಿಕ ಮಾಹಿತಿಗಳು ಇರುತ್ತದೆ. ಆಧಾರ್ ಕಾರ್ಡ್ ನಮ್ಮ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುತ್ತದೆ.
ನೀವು ಆಧಾರ್ನಲ್ಲಿ ಯಾವೆಲ್ಲ ಅಪ್ಡೇಟ್ ಮಾಡಿಕೊಳ್ಳಬಹುದು?
ಆಧಾರ್ ಕಾರ್ಡ್ನಲ್ಲಿ ನೀವು ಸಹಜ, ಸಾಮಾನ್ಯ ಮಾಹಿತಿಗಳಾದ ಹೆಸರು, ವಿಳಾಸ, ಜನನ ದಿನಾಂಕ, ಲಿಂಗ, ಮೊಬೈಲ್ ಸಂಖ್ಯೆ ಇಲೇಮ್ ಐಡಿಯನ್ನು ಅಪ್ಡೇಟ್ ಮಾಡಿಜೊಳ್ಳಬಹುದು. ಇನ್ನು ಬಯೋಮೆಟ್ರಿಕ್ ಡೇಟಾಗಳನ್ನು ಅಪ್ಡೇಟ್ ಮಾಡುವ ಅವಕಾಶ ನಿಮಗಿದೆ.
ಆಧಾರ್ ಕಾರ್ಡ್ನಲ್ಲಿ ಫೋಟೋ ಬದಲಾವಣೆ ಮಾಡುವುದು ಹೇಗೆ?
* ಮೊದಲು ನಿಮ್ಮ ಸಮೀಪದ ಆಧಾರ್ ಎನ್ರೋಲ್ಮೆಂಟ್ ಸೆಂಟರ್ಗೆ ಭೇಟಿ ನೀಡಬೇಕು.
* Locate an Enrolment Center ಮೇಲೆ ಕ್ಲಿಕ್ ಮಾಡಿ ಸಮೀಪದ ಎನ್ರೋಲ್ಮೆಂಟ್ ಸೇವೆ ಪತ್ತೆ ಹಚ್ಚಬಹುದಾಗಿದೆ.
* ಆನ್ಲೈನ್ನಲ್ಲಿ ಮೈಆಧಾರ್ ಆಪ್ ಬಳಕೆ ಮಾಡಿ ಆನ್ಲೈನ್ ಡೆಮಾಗ್ರಾಫಿಕ್ ಅಪ್ಡೇಟ್ ಮಾಡಿಕೊಳ್ಳಬಹುದಾಗಿದೆ.
ಫೋಟೋ ಬದಲಾವಣೆಯ ಬಗ್ಗೆ ಹಂತ ಹಂತದ ಮಾರ್ಗ ಇಲ್ಲಿದೆ
1: ಸಂಬಂಧಪಟ್ಟ ಫಾರ್ಮ್ ಅನ್ನು ಭರ್ತಿ ಮಾಡಿ ಆಧಾರ್ ಎನ್ರೋಲ್ಮೆಂಟ್ ಸೆಂಟರ್ಗೆ ಸಲ್ಲಿಸಿ
2: ಕೇಂದ್ರದಲ್ಲಿರುವ ನಿರ್ವಾಹಕರು ನಿಮ್ಮ ಕೋರಿಕೆಯಂತೆ ಬಯೋಮೆಟ್ರಿಕ್ ವಿವರಗಳನ್ನು ಸಂಗ್ರಹಿಸುತ್ತಾರೆ
3: ಆಧಾರ್ ಕಾರ್ಡ್ನಲ್ಲಿರುವ ನೀವು ಫೋಟೋವನ್ನು ಬದಲಾವಣೆ ಮಾಡಬೇಕಾದರೆ ನಿಮ್ಮ ಫೋಟೋವನ್ನು ತೆಗೆಯಲಾಗುತ್ತದೆ.
4: ಅಪ್ಡೇಟ್ ರಿಕ್ವೆಸ್ಟ್ ನಂಬರ್ (URN) ಜೊತೆ ಅಕ್ನಾಲಜ್ಮೆಂಟ್ ಸ್ಲಿಪ್ ಲಭ್ಯವಾಗಲಿದೆ. ಈ ಅಪ್ಡೇಟ್ ಬಳಿಕ ನೀವು ಆಧಾರ್ ಅಪ್ಡೇಟ್ ತಿಳಿಯಬಹುದು. ಆಧಾರ್ ಪ್ಯಾನ್ ಕಾರ್ಡ್ ಕೂಡಾ ಲಿಂಕ್ ಮಾಡುವುದು ಕಡ್ಡಾಯವಾಗಿದೆ.
ದಂಡ ಪಾವತಿ ಮಾಡಿ ಪ್ಯಾನ್ ಆಧಾರ್ ಲಿಂಕ್ ಮಾಡಿ
1: ಭಾರತದ ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
(https://www.incometaxindiaefiling.gov.in/)
2: ಹೋಮ್ ಪೇಜ್ನಲ್ಲಿ ‘Quick Links’ ನಲ್ಲಿ ಇರುವ Link Aadhaar ಮೇಲೆ ಕ್ಲಿಕ್ ಮಾಡಿ,
3: ಹೊಸ ಪೇಜ್ ತೆರೆಯಲಿದೆ, ಇಲ್ಲಿ ನಿಮ್ಮ ಆಧಾರ್ ಸಂಖ್ಯೆ, ಪ್ಯಾನ್ ಸಂಖ್ಯೆ, ಆಧಾರ್ನಲ್ಲಿ ಇರುವಂತೆ ನಿಮ್ಮ ಹೆಸರನ್ನು ನಮೂದಿಸಿ, Validate ಮೇಲೆ ಕ್ಲಿಕ್ ಮಾಡಿ
4: ನಿಮ್ಮ ಪಾವತಿ ವಿಧಾನ ವೆರಿಫೈ ಆದ ಬಳಿಕ Your payment details are verified ಎಂದು ಬರಲಿದೆ. ಇಲ್ಲಿ Continue ಬಟನ್ ಅನ್ನು ಕ್ಲಿಕ್ ಮಾಡಿ
5: ಕೇಳಲಾಗಿರುವ ಮಾಹಿತಿಗಳನ್ನು ಭರ್ತಿ ಮಾಡಿ, Link Aadhaar ಕ್ಲಿಕ್ ಮಾಡಿ
6: ಮೊಬೈಲ್ಗೆ ಬಂದ ಒಟಿಪಿಯನ್ನು ನಮೂದಿಸಿ
7: ಪ್ಯಾನ್ ಆಧಾರ್ ಲಿಂಕ್ ಮಾಡಲು ಮನವಿ ಸಲ್ಲಿಕೆ ಪ್ರಕ್ರಿಯೆ ಇಲ್ಲಿಗೆ ಕೊನೆಯಾಗಲಿದೆ.