ಮನೆ ತೆರಿಗೆ ಎನ್ನುವುದು ಒಂದು ವಿಭಾಗದ ಆಸ್ತಿ ತೆರಿಗೆ. ಮನೆ ಕೂಡ ಒಂದು ಆಸ್ತಿ ಆಗಿರುವುದರಿಂದ ಮನೆ ಕಂದಾಯವನ್ನು ತಪ್ಪದೇ ಸರ್ಕಾರಕ್ಕೆ ಪಾವತಿ ಮಾಡಲೇಬೇಕು. ಈ ಆಸ್ತಿ ತೆರಿಗೆ ಅಥವಾ ಮನೆ ಕಂದಾಯವನ್ನು ರಾಜ್ಯ ಸರ್ಕಾರಗಳು ನಿರ್ದೇಶಿಸುತ್ತವೆ. ಆದ್ದರಿಂದ ಈ ರೀತಿ ಮನೆ ಕಂದಾಯದ ಮಿತಿಯು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ಹಾಗೆಯೇ ಮನೆ ಕಂದಾಯವನ್ನು ಲೆಕ್ಕ ಹಾಕುವ ರೀತಿ ಕೂಡ ಬೇರೆ ಬೇರೆಯಾಗಿರುತ್ತದೆ.
ಆಸ್ತಿಯ ಸ್ಥಳ, ಸ್ವಯಂ ಆಕ್ರಮಿತ, ಬಾಡಿಗೆ ನೆಲ, ನಿರ್ಮಿಸಿದ ಮಹಡಿ ಸಂಖ್ಯೆ ಇಂತಹ ಅಂಶಗಳನ್ನು ಪರಿಗಣಿಗೆ ತೆಗೆದುಕೊಂಡು ತೆರಿಗೆಯನ್ನು ವಿಧಿಸುತ್ತಾರೆ. ಪ್ರತಿಯೊಬ್ಬ ಆಸ್ತಿದಾರನು ಈ ರೀತಿ ಆಸ್ತಿ ತೆರಿಗೆಯನ್ನು ಆಯಾ ಪುರಸಭೆ ಅಥವಾ ಸ್ಥಳೀಯ ಸಂಸ್ಥೆಗಳಿಗೆ ಪಾವತಿಸಲೇಬೇಕು. ಸದ್ಯಕ್ಕೀಗ ಹೆಚ್ಚಿನ ಕಾರ್ಯ ಚಟುವಟಿಕೆಗಳು ಹಾಗೂ ಹಣದ ವ್ಯವಹಾರ ಕೂಡ ಆನ್ಲೈನ್ ಪ್ರಕ್ರಿಯೆ ಮೂಲಕ ನಡೆಯುತ್ತಿರುವುದರಿಂದ ಈ ರೀತಿ ಮನೆ ಕಂದಾಯವನ್ನು ಸಹ ಆನ್ಲೈನ್ ಅಲ್ಲಿಯೇ ಕಟ್ಟಬಹುದು.
ಕೆಲವರಿಗೆ ಪ್ರತಿ ವರ್ಷ ಕೂಡ ಮನೆ ಕಂದಾಯ ಕಟ್ಟಲು ಸಾಧ್ಯವಿರುವುದಿಲ್ಲ, ಸರ್ಕಾರವು ಒಂದು ವರ್ಷಕ್ಕೆ ಅಥವಾ ಅರ್ಧವಾರ್ಷಿಕಕ್ಕೆ ಮನೆ ಕಂದಾಯವನ್ನು ನಿಗದಿ ಮಾಡಿರುತ್ತದೆ ಒಂದು ವೇಳೆ ಸರ್ಕಾರ ಸೂಚಿಸಿದ ದಿನಾಂಕದ ಒಳಗೆ ಕಂದಾಯ ಕಟ್ಟಲು ಸಾಧ್ಯವಾಗದೆ ಇದ್ದರೆ ಮುಂದಿನ ವರ್ಷದಲ್ಲಿ ಅದರ ಸಮೇತವಾಗಿ ಕಟ್ಟಬೇಕಾಗುತ್ತದೆ. ಆದ್ದರಿಂದ ನಿಮ್ಮ ಮನೆಯ ಕಂದಾಯ ಎಷ್ಟು ಬಾಕಿ ಇದೆ ಎಂದು ತಿಳಿದುಕೊಂಡು ಕಂದಾಯ ಕಟ್ಟುವುದು ಒಳ್ಳೆಯದು. ಅದನ್ನು ಸಹ ಈಗ ಈ ವಿಧಾನದಿಂದ ಆನ್ಲೈನ್ ಅಲ್ಲಿ ಚೆಕ್ ಮಾಡಬಹುದು.
● https://mahitikanaja.karnataka.gov.in ಮೇಲೆ ಕ್ಲಿಕ್ ಮಾಡಿ, ಮನೆ ತೆರಿಗೆ ಸಂಗ್ರಹ ಮತ್ತು ಬಾಕಿ ಚೆಕ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ
ಆಗ ನಿಮ್ಮ ಜಿಲ್ಲೆಯನ್ನು, ನಿಮ್ಮ ತಾಲೂಕನ್ನು ಮತ್ತು ನಿಮ್ಮ ಹೋಬಳಿಯನ್ನು ಹಾಗೂ ನಿಮ್ಮ ಗ್ರಾಮವನ್ನು ಆಯ್ಕೆ ಮಾಡಿಕೊಳ್ಳಬೇಕು.
● ಇಯರ್ ಆಪ್ಷನ್ ಇರುವಲ್ಲಿ 2022-23ನೇ ಸಾಲಿನದು ಎನ್ನುವುದನ್ನು ಆಯ್ಕೆ ಮಾಡಬೇಕು.
● ಆಗ ನಿಮ್ಮ ಗ್ರಾಮದಲ್ಲಿ ಯಾರ ಯಾರ ಹೆಸರಿನಲ್ಲಿ ಎಷ್ಟು ಕಂದಾಯ ಬಾಕಿ ಇದೆ ಎನ್ನುವ ಮಾಹಿತಿ ಸಿಗುತ್ತದೆ.
● ಅಲ್ಫಬೆಟ್ ಆಧಾರಿತವಾಗಿ ಸರ್ಚ್ ಬಾಕ್ಸ್ ಅಲ್ಲಿ ಹೋಗಿ ನಿಮ್ಮ ಹೆಸರಿನ ಮೊದಲ ಅಕ್ಷರವನ್ನು ಟೈಪ್ ಮಾಡಿ ನಿಮ್ಮ ಗ್ರಾಮದಲ್ಲಿ ಅಕ್ಷರ ಅಥವಾ ಆ ಹೆಸರಿನಲ್ಲಿ ಇರುವವರ ಬಾಕಿ ಎಷ್ಟಿದೆ ಎನ್ನುವುದು ತೋರಿಸುತ್ತದೆ.
● ಆಸ್ತಿಯ ಸಂಖ್ಯೆ ಮತ್ತು ಆಸ್ತಿಯ ವಿಶಿಷ್ಟ ಐಡಿ ಇರುತ್ತದೆ ಅದರ ವಿವರವನ್ನು ನೋಡುವುದರ ಮೂಲಕ ನಿಮ್ಮ ಮನೆಯ ಕಂದಾಯ ಅಥವಾ ನಿಮ್ಮ ಹೆಸರಿನಲ್ಲಿ ಕಂದಾಯ ಎಷ್ಟು ಬಾಕಿ ಇದೆ ಅಥವಾ ಎಲ್ಲವನ್ನು ಪ್ರತಿವರ್ಷ ಕಟ್ಟಿಕೊಂಡು ಬಂದಿದ್ದೀರಾ ಎನ್ನುವುದನ್ನು ಚೆಕ್ ಮಾಡಬಹುದು.
● ನಿಮ್ಮ ಮನೆ ತೆರಿಗೆ ಎಷ್ಟು ಮತ್ತು ಎಷ್ಟು ಬಾಕಿ ಇದೆ ಎನ್ನುವ ಅಂಶ ಆ ಪೇಜ್ ಅಲ್ಲಿ ನಿಮಗೆ ಕಾಣುತ್ತದೆ.
● ಈ ರೀತಿ ಬಾಕಿ ಇರುವ ಎಲ್ಲಾ ಕಂದಾಯವನ್ನು ಒಮ್ಮೆಲೇ ಕಟ್ಟುವುದು ಒಳ್ಳೆಯದು. ಈಗ ಆನ್ಲೈನ್ ಮೂಲಕ ಕೂಡ ಕಂದಾಯ ಪಾವತಿ ಮಾಡಬಹುದು. ಅಥವಾ ನಿಮ್ಮ ಪುರಸಭೆ ಅಥವಾ ಪಂಚಾಯಿತಿ ಕಚೇರಿಗಳಿಗೆ ಹೋಗಿ ದಾಖಲೆಗಳನ್ನು ಕೊಟ್ಟು ಕಂದಾಯ ಪಾವತಿ ಮಾಡಿ, ರಶೀತಿ ಪಡೆಯಬಹುದು.
● ಪ್ರತಿ ವರ್ಷ ಏಪ್ರಿಲ್ 30ರವರೆಗೆ ಕಂದಾಯ ಕಟ್ಟಲು ಕಾಲಾವಧಿ ನೀಡಲಾಗುತ್ತದೆ. ಆ ಸಮಯ ಮಿಸ್ ಆದರೆ ದಂಡ ಸಮೇತವಾಗಿ ಕಂದಾಯ ಕಟ್ಟಬೇಕಾಗುತ್ತದೆ.