ಈ ರೈತರಿಗೆ ಸಿಗಲಿದೆ 2,000 ರೂಪಾಯಿಗಳ ಬದಲಾಗಿ 4,000ರೂ, ಅರ್ಹ ರೈತರ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ.? ಈ ರೀತಿ ಚೆಕ್ ಮಾಡಿ.

 

WhatsApp Group Join Now
Telegram Group Join Now

ಭಾರತ ದೇಶವು ಕೃಷಿ ಪ್ರಧಾನ ದೇಶವಾಗಿದೆ. ನಮ್ಮ ದೇಶದ ಆರ್ಥಿಕ ಚಟುವಟಿಕೆ ಬೆನ್ನೆಲುಬು ವ್ಯವಸಾಯವೇ ಆಗಿದೆ. ಈ ಕಸಬನ್ನು ಅವಲಂಬಿಸಿಯೇ ದೇಶದಾದ್ಯಂತ ಕೋಟ್ಯಂತರ ರೈತರು ತಮ್ಮ ಜೀವನ ಕಟ್ಟಿಕೊಂಡಿದ್ದಾರೆ. ಆಹಾರ ಭದ್ರತೆಯ ದೃಷ್ಟಿಕೋನದಿಂದ ಮಾತ್ರವಲ್ಲದೆ ದೇಶದ ಅಭಿವೃದ್ಧಿ ದೃಷ್ಟಿಕೋನದಿಂದ ಸಹ ಹಿಂದುಳಿದ ಹಾಗೂ ಸಣ್ಣ ರೈತನಿಗೆ ಸರ್ಕಾರದಿಂದ ಆದಷ್ಟು ಸೌಲಭ್ಯಗಳನ್ನು ನೀಡಿ ಅವರು ಆಧುನಿಕತೆಯಿಂದ ಕೂಡಿದ ಕೃಷಿ ಮಾಡಿ ಏಳಿಗೆ ಕಾಣಲಿ ಎನ್ನುವುದನ್ನು ಸರ್ಕಾರಗಳು ಬಯಸುತ್ತಿವೆ.

ಹಾಗಾಗಿ ಕೇಂದ್ರ ಸರ್ಕಾರಗಳು ಹಾಗೂ ಆಯಾ ರಾಜ್ಯ ಸರ್ಕಾರಗಳು ರೈತರ ಏಳಿಗೆಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿವೆ. ಈಗಾಗಲೇ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳು ರೈತರ ಮನಸ್ಸನ್ನು ಕೂಡ ಗೆದ್ದಿದ್ದು ಸಹಾಯಕ್ಕೆ ಬರುತ್ತಿವೆ ಇಂತಹ ಯೋಜನೆಗಳ ಪೈಕಿ ಕಿಸಾನ್ ಸಮ್ಮಾನ್ ಯೋಜನೆಯು ಮೊದಲ ಸ್ಥಾನದಲ್ಲಿ ಬರುತ್ತದೆ. ಯಾಕೆಂದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜಾರಿಗೆ ತಂದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನ ಸಹಾಯಧನವನ್ನು 6,000 ರೂಗಳನ್ನು ರೈತರು 3 ಕಂತುಗಳಲ್ಲಿ ಪಡೆಯಲಿದ್ದಾರೆ.

ಈವರೆಗೆ ನಮ್ಮ ದೇಶದ 14 ಕೋಟಿ ಗಿಂತ ಹೆಚ್ಚು ರೈತರು 13 ಕಂತುಗಳ ಹಣವನ್ನು ಪಡೆದಿದ್ದಾರೆ, 14ನೇ ಕಂತಿನ ಹಣವನ್ನು ಸದ್ಯದಲ್ಲೇ ಪಡೆಯಲಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆಗೆ ರೂಪಿಸಲಾಗಿರುವ ಮಾರ್ಗಸೂಚಿ ಪ್ರಕಾರ ಅರ್ಜಿ ಸಲ್ಲಿಸಿ ಈ ಯೋಜನೆ ಫಲಾನುಭವಿಗಳ ಲಿಸ್ಟ್ ಅಲ್ಲಿರುವ ರೈತರಿಗೆ ತಪ್ಪದೆ ಪ್ರತಿವರ್ಷ ಕೇಂದ್ರ ಸರ್ಕಾರದಿಂದ ಈ ರೀತಿ ಸಹಾಯಧನದ ಸೌಲಭ್ಯ ಸಿಗುತ್ತಿದೆ. ಇದರೊಂದಿಗೆ ಕಿಸಾನ್ ಫಸಲ್ ಭೀಮಾ ಯೋಜನೆ ಮುಂತಾದ ಯೋಜನೆಗಳು ಕೂಡ ಅಷ್ಟೇ ಪ್ರಸಿದ್ಧಿ ಪಡೆದಿವೆ.

ಅಲ್ಲದೆ ಸಬ್ಸಿಡಿ ರೂಪದ ಸಹಾಯಧನ, ಬಡ್ಡಿರಹಿತ ಸಾಲ, ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಾಲ, ರಸಗೊಬ್ಬರ ಮತ್ತು ಬಿತ್ತನೆ ಬೀಜ ಖರೀದಿಗೆ ಸಹಾಯಧನ ಮತ್ತು ಸಾಲ ಮುಂತಾದ ಯೋಜನೆಗಳು ಸಹ ರೈತನ ಅನುಕೂಲಕ್ಕೆ ಬರುತ್ತಿವೆ. ಇನ್ನು ರಾಜ್ಯ ಸರ್ಕಾರ ಕೊಡುತ್ತಿರುವ ಸಹಾಯಗಳಲ್ಲಿ ನಮ್ಮ ರಾಜ್ಯದಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಂತೆ ಸಿಎಂ ಕಿಸಾನ್ ಸಮ್ಮಾನ್ ಯೋಜನೆ ಕೂಡ ಜಾರಿಯಲ್ಲಿ ಇದೆ.

ಹೇಗೆ ಕೇಂದ್ರ ಸರ್ಕಾರದಿಂದ 6000 ರೂಗಳನ್ನು 3 ಕಂತುಗಳಲ್ಲಿ ಪಡೆಯುತ್ತಾರೋ ಅದೇ ರೈತರು ರಾಜ್ಯ ಸರ್ಕಾರದಿಂದ 4000 ಗಳನ್ನು 2 ಕಂತುಗಳಲ್ಲಿ ಪಡೆಯಲಿದ್ದಾರೆ. ಪಿಎಂ ಕಿಸಾನ್ ಸಮ್ಮಾನ್ ಪ್ರಯೋಜನ ಪಡೆದ ಎಲ್ಲ ರೈತರು ಕೂಡ ರಾಜ್ಯದಿಂದ ಸಿಗುವ ಸಿಎಂ ಕಿಸಾನ್ ಸಮ್ಮಾನ್ ಯೋಜನೆಯ ಲಾಭವನ್ನು ಪಡೆಯಲು ಕೂಡ ಅರ್ಹರಿರುತ್ತಾರೆ. ಈಗ ಇದರ ಫಲಾನುಭವಿಗಳ ಲಿಸ್ಟ್ ಅನ್ನು ಇನ್ನಷ್ಟು ಬಿಗಿ ನಿಯಮಗಳೊಂದಿಗೆ ತಯಾರಿಸಲಾಗುತ್ತಿದ್ದು, ನಖಲಿ ರೈತರ ಹೆಸರನ್ನು ಪಟ್ಟಿಯಿಂದ ಕೈ ಬಿಡಲಾಗುತ್ತಿದೆ.

ಇದಲ್ಲದೆ ಪ್ರತಿವರ್ಷ ಕೂಡ ಹೊಸದಾಗಿ ಯೋಜನೆಗೆ ಸೇರ್ಪಡೆ ಆಗುವ ಸಂಖ್ಯೆಯು ಹೆಚ್ಚುತ್ತಿದೆ. ಅವರಿಗೆಲ್ಲ ಈಗ ಮುಖ್ಯವಾದ ಸುದ್ದಿಯೊಂದು ಇದೆ. ಮೊದಲ ಬಾರಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಸಹಾಯ ಪಡೆಯಲು ಅರ್ಜಿ ಸಲ್ಲಿಸಿ ಫಲಾನುಭವಿಗಳಾಗುವ ರೈತರಿಗೆ ಮೊದಲ ಕಂತಿನಲ್ಲಿ 4000 ರೂಪಾಯಿಗಳು ಸಿಗಲಿದೆ. ಈ ವಿಷಯವನ್ನು ಇಲಾಖೆಯೇ ತಿಳಿಸಿದೆ.

ಆದರೆ ಈಗಾಗಲೇ ಕೇಂದ್ರ ಸರ್ಕಾರ ಸಿದ್ಧಪಡಿಸಲಾಗಿರುವ ಲಿಸ್ಟ್ ಅಲ್ಲಿ ಇರುವ ರೈತರಷ್ಟೇ ಈ ಪ್ರಯೋಜನ ಪಡೆಯಲಿದ್ದಾರೆ. ನೀವು ಮೊದಲ ಬಾರಿಗೆ ಪಿಎಂ ಕಿಸಾನ್ ಸನ್ಮಾನ ಹಣ ಪಡೆಯುತ್ತಿದ್ದರೆ ನೀವು ಸಹ ಈ ಲಿಸ್ಟಲ್ಲಿ ಇದ್ದೀರಾ ಎನ್ನುವುದನ್ನು ಚೆಕ್ ಮಾಡಲು ಇಲಾಖೆ ಅಧಿಕೃತ ವೆಬ್ಸೈಟ್ ಲಿಂಕ್ ಗೆ ಹೋಗಿ ಅದರ ಪ್ರಕಾರವಾಗಿ ಚೆಕ್ ಮಾಡಿಕೊಳ್ಳಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now