SBI ಫೌಂಡೇಶನ್ ಈಗ ಸಮಾಜ ಸೇವೆಯುತ್ತ ಕೂಡ ಮುಖ ಮಾಡುತ್ತಿದೆ. ಇದರ ಪ್ರಯುಕ್ತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ SBIF ಆಶಾ ವಿದ್ಯಾರ್ಥಿವೇತನ ನೀಡಲು ನಿರ್ಧರಿಸಿ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಆರ್ಥಿಕ ಸಂಕಷ್ಟದ ಕಾರಣದಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಬಾರದು ಮತ್ತು ದೇಶದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಸಮಾನ ಶಿಕ್ಷಣ ಪಡೆಯುವ ಅವಕಾಶ ಸಿಗಬೇಕು ಎನ್ನುವ ಉದ್ದೇಶದಿಂದ ಬಡ ಕುಟುಂಬದ ಆರ್ಥಿಕವಾಗಿ ಹಿಂದುಳಿದ ವರ್ಗದ ಮಕ್ಕಳ ಏಳಿಗೆಗಾಗಿ ಈ ಮೂಲಕ ಶ್ರಮಿಸಲಾಗುತ್ತಿದೆ.
ಇದಕ್ಕೆ ಅರ್ಜಿ ಸಲ್ಲಿಸಲು ಅನುಸರಿಸಬೇಕಾದ ಕ್ರಮಗಳು, ಬೇಕಾದ ದಾಖಲೆಗಳು ಮತ್ತು ಸಿಗುವ ಸ್ಕಾಲರ್ಶಿಪ್ ಮೊತ್ತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವ ವಿಧಾನ ಕೊನೆಯ ದಿನಾಂಕ ಇದಕ್ಕೆ ಸಂಬಂಧಪಟ್ಟ ವಿವರಗಳು ಈ ರೀತಿ ಇದೆ.
ಅರ್ಹತೆಗಳು:-
● ಪ್ರಸಕ್ತ ವರ್ಷದಲ್ಲಿ ಪದವಿ, IIT, IIM ಮತ್ತು PHD ಓದುತ್ತಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನ ಪಡೆಯಬಹುದು.
● ದ್ವಿತೀಯ PUC ಅಥವಾ 12ನೇ ತರಗತಿಯಲ್ಲಿ ಶೇಕಡ 75% ಅಂಕಗಳೊಂದಿಗೆ ತೇರ್ಗಡೆ ಆಗಿರಬೇಕು.
● ಅರ್ಜಿದಾರರ ಕುಟುಂಬದ ಆದಾಯವು 3 ಲಕ್ಷ ಮೀರಿರಬಾರದು.
● ಭಾರತದಾದ್ಯಂತ ಯಾವುದೇ ವಿದ್ಯಾರ್ಥಿಗಳು ಬೇಕಾದರೂ ಅರ್ಜಿ ಸಲ್ಲಿಸಬಹುದು.
ಸಿಗುವ ಸ್ಕಾಲರ್ಶಿಪ್ ಮೊತ್ತ:-
● ಪದವಿ ವಿದ್ಯಾರ್ಥಿಗಳಿಗೆ – 50,000 ವಾರ್ಷಿಕವಾಗಿ
● IIT ವಿದ್ಯಾರ್ಥಿಗಳಿಗೆ – 3,40,000 ವಾರ್ಷಿಕವಾಗಿ
● IIM ವಿದ್ಯಾರ್ಥಿಗಳಿಗೆ – 5,00,000 ವಾರ್ಷಿಕವಾಗಿ
● PHD ವಿದ್ಯಾರ್ಥಿಗಳಿಗೆ – 2,00,000 ವಾರ್ಷಿಕವಾಗಿ
ಬೇಕಾಗುವ ದಾಖಲೆಗಳು:-
● ಹಿಂದಿನ ಶೈಕ್ಷಣಿಕ ವರ್ಷದ ಅಂಕಪಟ್ಟಿ
● ಆಧಾರ್ ಕಾರ್ಡ್
● ಪ್ರಸಕ್ತವರ್ಷ ದಾಖಲಾಗಿರುವ ಬಗ್ಗೆ ಶಿಕ್ಷಣ ಸಂಸ್ಥೆಯಿಂದ ಕೊಡುವ ಪುರಾವೆ ಅಥವಾ ಶುಲ್ಕ ರಶೀದಿ ಚೀಟಿ
● ಅರ್ಜಿದಾರರ ಬ್ಯಾಂಕ್ ಖಾತೆ ವಿವರಗಳು
● ಆದಾಯ ಪ್ರಮಾಣ ಪತ್ರ
● ಅರ್ಜಿದಾರರ ಭಾವಚಿತ್ರ
ಅರ್ಜಿ ಸಲ್ಲಿಸುವ ವಿಧಾನ:-
●ನಿಮ್ಮ ಇ-ಮೇಲ್, ಮೊಬೈಲ್ ಸಂಖ್ಯೆ ಅಥವಾ ಜಿ-ಮೇಲ್ ಖಾತೆಯೊಂದಿಗೆ buddy4study ನಲ್ಲಿ ನೊಂದಾಯಿಸಿ, ID ಸಂಖ್ಯೆ ಪಡೆಯಿರಿ.
● ID ಸಂಖ್ಯೆ ಮೂಲಕ buddy4studdy ಲಾಗಿನ್ ಆಗಿ.
● ಸ್ಕಾಲರ್ಶಿಪ್ ಅರ್ಜಿ ನಮೂನೆ ಪೇಜ್ ಗೆ ನೀವು ರೆಫರ್ ಆಗುತ್ತೀರಿ.
● ಸ್ಟಾರ್ಟ್ ಅಪ್ಲಿಕೇಶನ್ ಕ್ಲಿಕ್ ಮಾಡುವ ಮೂಲಕ ಮುಂದುವರೆಯಿರಿ.
● ನಮೂನೆಯಲ್ಲಿ ಕೇಳಲಾಗಿರುವ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ, ಕೇಳಿರುವ ದಾಖಲೆಗಳನ್ನು ಸಹ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
● ಟರ್ಮ್ಸ್ ಅಂಡ್ ಕಂಡೀಶನ್ ಇರುವ ಕಡೆ ಕೂಡ OK ಎಂದು ಕ್ಲಿಕ್ ಮಾಡಿ ಒಪ್ಪಿಕೊಳ್ಳಿ
● ಪೂರ್ವ ವೀಕ್ಷಣೆ ಮೇಲೆ ಕ್ಲಿಕ್ ಮಾಡಿ ಮತ್ತೊಮ್ಮೆ ಎಲ್ಲವನ್ನು ಚೆಕ್ ಮಾಡಿಕೊಳ್ಳಿ.
● ಕೊನೆಯಲ್ಲಿ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಪೂರ್ತಿಗೊಳಿಸಲು ಸಬ್ಮಿಟ್ ಬಟನ್ ಕ್ಲಿಕ್ ಮಾಡಿ.
ನಿಮ್ಮ ಅನುಕೂಲತೆಗಾಗಿ ಅರ್ಜಿ ಸಬ್ಮಿಟ್ ಆಗಿರುವ ಪ್ರಿಂಟ್ ಔಟ್ ತೆಗೆದು ಇಟ್ಟುಕೊಳ್ಳಿ ಅಥವಾ ಅರ್ಜಿ ಸಂಖ್ಯೆ, ವಿನಂತಿ ಸಂಖ್ಯೆ ಇವುಗಳನ್ನು ಬರೆದು ಇಟ್ಟುಕೊಳ್ಳಿ.
ಆಯ್ಕೆ ಪ್ರಕ್ರಿಯೆ:-
● ಕೊನೆಯ ದಿನಾಂಕದವರೆಗೆ ಬಂದ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಅರ್ಜಿದಾರರ ಕುಟುಂಬದ ಪರಿಸ್ಥಿತಿ ಮತ್ತು ವಿದ್ಯಾರ್ಥಿಯು ಪಡೆದಿರುವ ಅಂಕಗಳನ್ನು ಆಧರಿಸಿ ಮೊದಲಿಗೆ ಶಾರ್ಟ್ ಲಿಸ್ಟ್ ತಯಾರಿಸುತ್ತಾರೆ.
● ನಂತರ ದಾಖಲೆಗಳನ್ನು ಪರಿಶೀಲನೆ ನಡೆಸಿ ಮತ್ತೊಮ್ಮೆ ಫಿಲ್ಟರ್ ಮಾಡುತ್ತಾರೆ.
● ಟೆಲಿಫೋನಿಕ್ ಮೂಲಕ ಸಂದರ್ಶನ ನಡೆಸಿ ಫೈನಲ್ ಲಿಸ್ಟ್ ಮಾಡುತ್ತಾರೆ.