.
ಈಗ ದೇಶದಲ್ಲಿ ಪುರುಷರ ಸಮಾನಕ್ಕೆ ಮಹಿಳೆಯರ ಸಹ ದುಡಿಯುತ್ತಿದ್ದಾರೆ, ಇಂದು ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಂಸಾರವನ್ನು ಸರಿದೂಗಿಸಿಕೊಂಡು ಹೋಗಲು ಪುರುಷರ ಸಮಕ್ಕೆ ಮಹಿಳೆಯರು ದುಡಿಯುವ ಅನಿವಾರ್ಯತೆ ಇದೆ. ಮಹಿಳೆಗೂ ಕೂಡ ಆರ್ಥಿಕ ಸ್ವಾತಂತ್ರ್ಯ ಬೇಕು, ಹಾಗೆ ತನಗೆ ಇಷ್ಟವಾದ ಉದ್ಯೋಗ ಅಥವಾ ಇಚ್ಛೆಯಿಂದಲೇ ಸ್ವಂತ ಉದ್ಯಮವನ್ನು ಶುರು ಮಾಡುವುದಾದರೆ ಪ್ರೋತ್ಸಾಹಿಸಬೇಕು.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಕೂಡ ಮಹಿಳೆಯರ ಆರ್ಥಿಕ ಸ್ವಾವಲಂಬನೆಯನ್ನು ಪ್ರೋತ್ಸಾಹಿಸುತ್ತಿದ್ದು, ಮಹಿಳೆಯರಿಗೆ ಉದ್ಯಮಗಳಲ್ಲಿ ಭದ್ರತೆ ಕಂಡುಕೊಳ್ಳಲು ಅನುಕೂಲತೆ ಮಾಡಿ ಕೊಡುವ ಸಲುವಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿ ಮಹಿಳೆಯರಿಗೆ ಸಾಲ ಕೊಡುವ ಕೆಲಸಗಳನ್ನು ಮಾಡುತ್ತಿವೆ. ಇದುವರೆಗೆ ಸಾಕಷ್ಟು ಯೋಜನೆಗಳು ಈ ರೀತಿ ಜಾರಿಗೆ ಬಂದಿದ್ದು ಸದ್ಯಕ್ಕೆ ಈ ವರ್ಷದ ಬಜೆಟ್ನಲ್ಲೂ ಕೂಡ ರಾಜ್ಯ ಸರ್ಕಾರದಿಂದ ಇಂತಹದ್ದೇ ಒಂದು ಯೋಜನೆಯ ಘೋಷಣೆ ಆಗಿದೆ.
ಇದುವರೆಗೆ ಯಾವುದೇ ಯೋಜನೆಯ ಸಾಲ ಸೌಲಭ್ಯ ಪಡೆಯದೆ ಇರುವ ಅಥವಾ ಈಗಷ್ಟೇ 18 ವರ್ಷ ಪೂರೈಸಿ ಉದ್ಯಮ ಆರಂಭಿಸುವತ್ತ ಮುಖ ಮಾಡುತ್ತಿರುವ ಮಹಿಳೆಯರು ತಮ್ಮ ಆರ್ಥಿಕ ನೆರವಿಗೆ ಸರ್ಕಾರದ ಈ ಯೋಜನೆಯ ಸಹಾಯ ಪಡೆಯಬಹುದು. ಕರ್ನಾಟಕ ಸರ್ಕಾರದ ಮಹಿಳಾ ಅಭಿವೃದ್ಧಿ ನಿಗಮ ಉದ್ಯೋಗಿನಿ ಯೋಜನೆ ಎನ್ನುವ ಈ ಹೊಸ ಯೋಜನೆಯನ್ನು ಜಾರಿಗೆ ತಂದಿದೆ.
ಈ ಯೋಜನೆಯಿಂದ ಮಹಿಳೆಯರು ಸ್ವಂತ ಉದ್ಯಮ ಆರಂಭಿಸಲು ಗರಿಷ್ಠ 3 ಲಕ್ಷದ ವರೆಗೆ ಸಾಲ ಪಡೆಯಬಹುದು, ಅದು ಕೂಡ ಸಾಲ ಮೊತ್ತದ ಶೇಕಡ 50%ರಷ್ಟು ಸಬ್ಸಿಡಿ ಜೊತೆಗೆ. ಈ ಯೋಜನೆ ಕುರಿತು ಹೆಚ್ಚಿನ ವಿವರ ಮತ್ತು ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಹಾಗೂ ಹೇಗೆ ಎಲ್ಲಿ ಅರ್ಜಿ ಸಲ್ಲಿಸಬೇಕು ಎನ್ನುವ ಎಲ್ಲಾ ಮಾಹಿತಿ ತಿಳಿದುಕೊಳ್ಳಲು ಈ ಅಂಕಣವನ್ನು ಪೂರ್ತಿಯಾಗಿ ನೋಡಿ.
● ಯೋಜನೆ:- ರಾಜ್ಯ ಸರ್ಕಾರದ ಯೋಜನೆ.
● ಯೋಜನೆ ಹೆಸರು:- ಉದ್ಯೋಗಿನಿ ಯೋಜನೆ.
● ಯೋಜನೆಯ ಉದ್ದೇಶ:- ಸಮಾಜದ ಎಲ್ಲಾ ವರ್ಗದ ಮಹಿಳೆಯರಿಗೆ ಉದ್ಯೋಗ ಆರಂಭಿಸಲು ಸಬ್ಸಿಡಿ ಯೊಂದಿಗೆ ಸಾಲ ನೀಡುವುದು.
● ಸಾಲದ ಮೊತ್ತ:- ಗರಿಷ್ಠ 3 ಲಕ್ಷದವರೆಗೆ.
ಅರ್ಜಿ ಸಲ್ಲಿಸಲು ಅರ್ಹತೆಗಳು:-
1. ಮಹಿಳೆಯರಿಗೆ ಮಾತ್ರ ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ.
2. ಅರ್ಜಿ ಸಲ್ಲಿಸುವವರು 18 ವರ್ಷಕ್ಕಿಂತ ಮೇಲ್ಪಟ್ಟು 55 ವರ್ಷದ ಒಳಗಿನವರಾಗಿರಬೇಕು
3. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳಾ ಅರ್ಜಿದಾರರಿಗೆ ವಾರ್ಷಿಕ ಆದಾಯ 2 ಲಕ್ಷಕ್ಕಿಂತ ಕಡಿಮೆ ಇರಬೇಕು.
4. ಸಾಮಾನ್ಯ ವರ್ಗದ ಮಹಿಳೆಯರ ವಾರ್ಷಿಕ ಆದಾಯ 1.5 ಲಕ್ಷ ಮೀರಿರಬಾರದು.
ಅಗತ್ಯವಿರುವ ದಾಖಲೆಗಳು:-
1. ಭರ್ತಿ ಮಾಡಿದ ಅರ್ಜಿ ನಮೂನೆ
2. ಜನನ ಪ್ರಮಾಣ ಪತ್ರ
3. ಜಾತಿ ಪ್ರಮಾಣ ಪತ್ರ
4. ಆದಾಯ ಪ್ರಮಾಣ ಪತ್ರ
5. BPLರೇಷನ್ ಕಾರ್ಡ್
6. ಆಧಾರ್ ಕಾರ್ಡ್
7. ಬ್ಯಾಂಕ್ ಪಾಸ್ ಬುಕ್
8. ಇತ್ತೀಚಿನ ಭಾವಚಿತ್ರ
ಅರ್ಜಿ ಸಲ್ಲಿಸುವ ವಿಧಾನ:-
ಆಸಕ್ತರು ಆಯಾ ತಾಲೂಕಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಭೇಟಿ ನೀಡಿ, ಮಾಹಿತಿ ಪಡೆದು ಅರ್ಜಿ ನಮೂನೆ ಪಡೆದು ಸವಿವರಗಳೊಂದಿಗೆ ತುಂಬಿಸಿ, ಸಂಬಂಧ ಪಟ್ಟ ದಾಖಲೆಗಳನ್ನೆಲ್ಲ ಲಗತ್ತಿಸಿ ಅರ್ಜಿ ಸಲ್ಲಿಸಬೇಕು.