ದೇಶದಲ್ಲಿ ಜನಸಂಖ್ಯೆ ವಿಪರೀತವಾಗಿ ಹೆಚ್ಚುತ್ತಿದೆ. ಹಾಗೆ ಉದ್ಯೋಗ ಕೊರತೆಯು ಕಾಣುತ್ತಿದ್ದು ದೇಶದಾದ್ಯಂತ ನಿರುದ್ಯೋಗ ತಾಂಡವವಾಡುತ್ತಿದೆ. ನಮ್ಮ ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಬಡವರು ಹಾಗೂ ಕಡು ಬಡತನದ ಕುಟುಂಬಗಳ ಸಂಖ್ಯೆಯೇ ಹೆಚ್ಚಾಗಿದ್ದು. ಇವರೆಲ್ಲರ ಪೋಷಣೆ ಜವಾಬ್ದಾರಿ ಸರ್ಕಾರದ ಹೆಗಲಿಗಿದೆ. ಆರೋಗ್ಯ, ಶಿಕ್ಷಣ ಇವುಗಳ ಜೊತೆಗೆ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಆಹಾರ ವ್ಯವಸ್ಥೆಯನ್ನು ಕೂಡ ಸರ್ಕಾರ ನೋಡಿಕೊಳ್ಳಬೇಕು.
ಇದೇ ಕಾರಣಕ್ಕಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ರಾಜ್ಯ ಸರ್ಕಾರಗಳು ಪಡಿತರ ಚೀಟಿ ಮೂಲಕವಾಗಿ ಅವರುಗಳ ಕುಟುಂಬ ಪರಿಸ್ಥಿತಿಗೆ ಅನುಗುಣವಾಗಿ ಉಚಿತ ಪಡಿತರವನ್ನು ಹಂಚುತ್ತಿವೆ. ಈಗಾಗಲೇ ನಮ್ಮ ರಾಜ್ಯದಲ್ಲಿ ಕೋಟ್ಯಂತರ ಕುಟುಂಬಗಳು ಈ ಉಚಿತ ಪಡಿತರದ ಪ್ರಯೋಜನ ಪಡೆಯುತ್ತಿವೆ.
ಕರ್ನಾಟಕ ರಾಜ್ಯದಲ್ಲಿ ಅನ್ಯಭಾಗ್ಯ ಎನ್ನುವ ಹೆಸರಿನ ಒಂದು ಯೋಜನೆ ಬಂದು ರಾಜ್ಯದ ಎಲ್ಲಾ ಬಡ ಕುಟುಂಬದ ಮುಖದಲ್ಲಿ ನಗು ತರಿಸಿದೆ. ಯಾಕೆಂದರೆ ಈ ಯೋಜನೆ ಮೂಲಕ ಪ್ರತಿ ಕುಟುಂಬಕ್ಕೂ ಉಚಿತವಾಗಿ ಅಕ್ಕಿ, ಗೋಧಿ ನೀಡಲಾಗುತ್ತಿದೆ. ಕುಟುಂಬದ ಸದಸ್ಯರ ಸಂಖ್ಯೆ ಆಧಾರದ ಮೇಲೆ ವಿತರಣೆ ಮಾಡಲಾಗುತ್ತಿದೆ. ಇದರೊಂದಿಗೆ ಕೆಲವೊಮ್ಮೆ ರಾಗಿ ಮತ್ತು ಧಾನ್ಯಗಳ ಹಂಚಿಕೆಯನ್ನು ಮಾಡಲಾಗುತ್ತಿದೆ ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಚೀಟಿ ಹೊಂದಿರುವ ದೇಶದ ನಾಗರಿಕರು ಈ ರೀತಿ ಕೊಡುವ ಉಚಿತ ಪಡಿತರದ ಅನುಕೂಲ ಪಡೆಯುತ್ತಾರೆ.
ಕೆಲವೊಮ್ಮೆ ಉಚಿತ ಪಡಿತರದ ಜೊತೆಗೆ ಕಡಿಮೆ ಬೆಳೆಯಲ್ಲಿ ಬೆಳೆ ಕಾಳುಗಳು, ಅಡುಗೆ ಎಣ್ಣೆ ಮತ್ತು ಸೀಮೆಎಣ್ಣೆ ವಿತರಣೆ ಕೂಡ ಮಾಡಲಾಗುತ್ತದೆ. ಆದರೆ ಸೀಮೆಎಣ್ಣೆ ಅನಿಲ ರಹಿತ ಕಾರ್ಡ್ ಎಂದು ನೋಂದಣಿ ಹೊಂದಿರುವ ಕುಟುಂಬಗಳಿಗೆ ಮಾತ್ರ ಸಿಗುತ್ತದೆ. ಸದ್ಯಕ್ಕೆ ರಾಜ್ಯದಲ್ಲಿ ಈ ಬಾರಿ ವಿಧಾನಸಭಾ ಚುನಾವಣೆ ಇದೆ. ಗೆದ್ದು ಸರ್ಕಾರ ನಿರ್ಮಿಸುವ ಪಕ್ಷಗಳು ಸರ್ಕಾರದ ವತಿಯಿಂದ ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಉಚಿತವಾಗಿ ಸಾಕಷ್ಟು ಯೋಜನೆಗಳನ್ನು ತರುವುದಾಗಿ ತಮ್ಮ ಪ್ರಣಾಳಿಕೆಯಲ್ಲಿ ಭರವಸೆ ಕೊಡುತ್ತಿವೆ.
ಇದರ ನಡುವೆ ಎಲ್ಲರಿಗೂ ಹೊಸ ಸರ್ಕಾರ ರಚನೆಯಾದ ಮೇಲೆ ಹಿಂದೆ ಇದ್ದ ಉಚಿತ ಪಡಿತರದ ಯೋಜನೆ ನಿಂತು ಹೋಗುತ್ತದೆಯಾ ಎನ್ನುವ ಅನುಮಾನ ಕಾಡುತ್ತಿದೆ. ಆದರೆ ಭಾರತದ ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚೆ ಕೂಡ ನಡೆದಿದ್ದು 2023ರ ಡಿಸೆಂಬರ್ ತಿಂಗಳವರೆಗೂ ಕೂಡ ಇದೇ ಪ್ರತಿ ಕಾರ್ಡಿಗೂ ಸದಸ್ಯರ ಸಂಖ್ಯೆಗೆ ಅನುಗುಣವಾಗಿ ಉಚಿತ ಪಡಿತರ ನೀಡುವ ಕಾರ್ಯ ಮುಂದುವರೆಯಬೇಕು ಎನ್ನುವ ಆದೇಶ ಸಿಕ್ಕಿದೆ.
ಇದರಿಂದ ಕರ್ನಾಟಕ ರಾಜ್ಯ ಮಾತ್ರವಲ್ಲದೆ ದೇಶದಾದ್ಯಂತ ಬಡತನ ರೇಖೆಗಿಂತ ಕಡಿಮೆ ಇರುವ ರೇಷನ್ ಕಾರ್ಡ್ ಹೊಂದಿರುವ 81.40 ಕೋಟಿ ಕುಟುಂಬಗಳಿಗೆ ಅನುಕೂಲ ಆಗಲಿದೆ. ಈ ಆದೇಶದ ಪ್ರಕಾರ ಕಾರ್ಡ್ ನಲ್ಲಿರುವ ಒಬ್ಬ ಸದಸ್ಯನಿಗೆ 5 ಕೆಜಿ ಉಚಿತ ಅಕ್ಕಿ ಮತ್ತು ಸಿರಿಧಾನ್ಯ ಕೂಡ ನೀಡಬೇಕು ಎನ್ನುವ ಯೋಜನೆ ಇದೆ. ಹಾಗೆ ಒಂದು ಕೆಜಿ ಅಕ್ಕಿಗೆ 70 ರೂಪಾಯಿ ಎಂದರೂ ಒಬ್ಬ ವ್ಯಕ್ತಿಗೆ ಸರ್ಕಾರದ ಕಡೆಯಿಂದ 350 ರೂಪಾಯಿಗಳು ಸಿಕ್ಕ ಹಾಗಾಯಿತು.
ಗಂಡ ಹೆಂಡತಿ ಮತ್ತು ಎರಡು ಮಕ್ಕಳಿರುವ ಕುಟುಂಬಕ್ಕೆ ಒಟ್ಟು 20 ಕೆಜಿ ಅಕ್ಕಿಯಿಂದ 1,400 ರೂಗಳು ಸರ್ಕಾರದಿಂದ ಆಹಾರ ಧಾನ್ಯ ರೂಪದಲ್ಲಿ ಸಿಕ್ಕಿದ ರೀತಿ ಆಯಿತು. ಕರ್ನಾಟಕ ರಾಜ್ಯ ಕೂಡ ಒನ್ ನೇಷನ್ ಒನ್ ರೇಷನ್ ನೀತಿ ಅನುಸರಿಸುತ್ತಿರುವುದರಿಂದ ನೀವು ರಾಜ್ಯದ ಯಾವುದೇ ಮೂಲೆಯಲ್ಲಿ ಇದ್ದರೂ ಕೂಡ ನಿಮ್ಮ ಪಡಿತರ ಚೀಟಿ ತೋರಿಸಿ ಈ ಉಚಿತ ಪಡಿತರ ಯೋಜನೆಯ ಫಲಾನುಭವಿಗಳಾಗಿ.