2014 ರವರೆಗೂ ಕೂಡ ಜನರು ಬ್ಯಾಂಕಿನಲ್ಲಿ ಖಾತೆ ತೆಗೆಯಬೇಕು ಎಂದರೆ ಕನಿಷ್ಠ ಮೊತ್ತದ ಹಣವನ್ನಾದರೂ ಖಾತೆ ತೆರೆಯುವ ವೇಳೆ ಅಕೌಂಟಿಗೆ ಹಾಕುವುದು ಕಡ್ಡಾಯವಾಗಿತ್ತು. ಈ ಕಾರಣದಿಂದ ಹಾಗೂ ಬ್ಯಾಂಕುಗಳ ಕಠಿಣ ನಿಯಮದ ನೆಪದಿಂದ ಅನೇಕರು ತಮ್ಮ ಆರ್ಥಿಕ ಚಟುವಟಿಕೆಗಳಿಗೆ ಬ್ಯಾಂಕನ್ನು ಅವಲಂಬಿಸದೆ ವ್ಯವಹಾರ ಮಾಡುತ್ತಿದ್ದರು.
2014ರಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲೊಂದು ಪರ್ವವೇ ಆಯಿತು ಎಂದು ಹೇಳಬಹುದು. ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಆ ಸಮಯದಲ್ಲಿ ದೇಶದ ನಾಗರಿಕರಾಗಿ ಜನಧನ್ ಖಾತೆ ಯೋಜನೆ ಎನ್ನುವ ಉಚಿತವಾಗಿ ಖಾತೆ ತೆರೆಯುವ ಅಥವಾ ಜೀರೋ ಬ್ಯಾಲೆನ್ಸ್ ಅಕೌಂಟ್ ಎನ್ನುವ ಜನಪ್ರಿಯ ಯೋಜನೆಯನ್ನು ಜಾರಿಗೆ ತಂದರು.
ಒಂದು ರೂಪಾಯಿಯೂ ಇಲ್ಲದೆ ಅಕೌಂಟ್ ತೆರೆಯಬಹುದು ಎನ್ನುವುದಕ್ಕೆ ಹೇಳಿ ಖುಷಿಯಾದ ಜನತೆ ಬ್ಯಾಂಕುಗಳತ್ತಾ ಧಾವಿಸಿದರು. ಇಂದು ಈ ಜನಧನ್ ಖಾತೆ ಯೋಜನೆಯಿಂದ ಸಾಕಷ್ಟು ಉಪಯೋಗಗಳನ್ನು ಜನರು ಪಡೆಯುತ್ತಿದ್ದಾರೆ. ಸರ್ಕಾರದ ಯಾವುದೇ ಯೋಜನೆಯ ಫಲಾನುಭವಿಗಳು ಆಗಬೇಕು ಎಂದರೆ ಈಗ ಖಾತೆ ಹೊಂದಿರುವುದು ಕಡ್ಡಾಯ ಯಾಕೆಂದರೆ ದೇಶದಾದ್ಯಂತ ಎಲ್ಲಾ ಕ್ಷೇತ್ರಗಳು ಡಿಜಟಲೀಕರಣಗೊಳ್ಳುತ್ತಿವೆ.
ಅದರಲ್ಲಿ ಬ್ಯಾಂಕಿಂಗ್ ಕ್ಷೇತ್ರವು ಮುನ್ನಡೆಯಲ್ಲಿದೆ. ಸರ್ಕಾರದ ಯೋಜನೆಯ ಫಲಾನುಭವಿಗಳಿಗೆ ಸಿಗಬೇಕಾದ ಸಹಾಯಧನಗಳು ಮಧ್ಯವರ್ತಿಗಳ ಹಾವಳಿಯಿಂದ ಕಡಿಮೆ ಆಗುತ್ತಿತ್ತು ಅಥವಾ ಕೈತಪ್ಪುತ್ತಿತ್ತು. ಇಂದು ದೇಶದ ಎಲ್ಲರೂ ಸಹ ಜೀರೋ ಅಕೌಂಟ್ ಹೊಂದಬಹುದಾದ ಕಾರಣ ಎಲ್ಲರೂ ಅಕೌಂಟ್ ಗಳನ್ನು ಹೊಂದಿದ್ದಾರೆ, ಇದರಿಂದ ಎಲ್ಲಾ ವ್ಯವಹಾರಗಳ ಹಣವು DBT ಮೂಲಕ ನೇರವಾಗಿ ಫಲಾನುಭವಗಳ ಖಾತೆಗೆ ಜಮೆ ಆಗುತ್ತಿದೆ.
ವಿದ್ಯಾರ್ಥಿವೇತನದಿಂದ ಹಿಡಿದು ಪೆನ್ಷನ್ ತನಕ ಎಲ್ಲಶೂ ಅಕೌಂಟ್ ಗಳ ಮೂಲಕವೇ ವ್ಯವಹಾರವಾಗುತ್ತಿದೆ. ಹಾಗಾಗಿ ಸರ್ಕಾರ ಜಾರಿಗೆ ತಂದ ಜೀರೋ ಬ್ಯಾಲೆನ್ಸ್ ಅಕೌಂಟ್ ಅಥವಾ ಜನಧನ ಖಾತೆ ಯೋಜನೆ ಗೆದ್ದಿದೆ ಎಂದು ಹೇಳಬಹುದು. ಜನಧನ ಖಾತೆಯನ್ನು ಬಡವರು ಹಾಗೂ ಮಧ್ಯಮ ವರ್ಗದವರೇ ಹೊಂದಿರುತ್ತಾರೆ. ರೈತರು, ಸಣ್ಣಪುಟ್ಟ ವ್ಯಾಪಾರ ಮಾಡುವ ಹಣ್ಣಿನಂಗಡಿ, ತರಕಾರಿ ಅಂಗಡಿಯವರು, ತಳ್ಳುಗಾಡಿ ವ್ಯಾಪಾರಿಗಳು, ಹೀಗೆ ಮುಂತಾದವರು ಜನಧನ ಖಾತೆಯನ್ನು ಹೊಂದಿರುತ್ತಾರೆ.
ಜನಧನ ಖಾತೆಯಿಂದ ಇವರಿಗೆ ಇನ್ನೂ ಹೆಚ್ಚಿನ ಅನುಕೂಲತೆ ಮಾಡಿ ಕೊಡುವ ಸಲುವಾಗಿ ಸರ್ಕಾರ ಈ ಯೋಜನೆ ಮೂಲಕ ಸಾಲ ಸೌಲಭ್ಯ ಕೂಡ ನೀಡುತ್ತಿದೆ. ಕಡಿಮೆ ಕಾಗದ ಪತ್ರಗಳೊಂದಿಗೆ ಶೀಘ್ರವಾಗಿ ಕಡಿಮೆ ಬಡ್ಡಿ ದರಕ್ಕೆ ಸಾಲ ಸೌಲಭ್ಯ ನೀಡಿ ಖಾತೆದಾರರ ಕಷ್ಟಕಾಲದಲ್ಲಿ ನೆರವಾಗುತ್ತಿದೆ. ಜನಧನ ಖಾತೆ ತೆರೆದ ಆರು ತಿಂಗಳವರೆಗೆ 2,000 ಓವರ್ ಡ್ರಾಫ್ಟ್ ಮೂಲಕ ಸಾಲ ನೀಡುತ್ತದೆ. ನಂತರ ದಿನಗಳಲ್ಲಿ 10 ಸಾವಿರದ ವರೆಗೂ ಕೂಡ ಸಾಲ ಸೌಲಭ್ಯ ಇದೆ.
ಗರಿಷ್ಠವಾಗಿ ಇಲ್ಲಿಯವರೆಗೆ 20 ಸಾವಿರ ರೂಪಾಯಿಗಳನ್ನು ಜನಧನ ಖಾತೆ ಹೊಂದಿರುವ ಖಾತೆದಾರರಿಗೆ ಸರ್ಕಾರ ಸಾಲ ಕೊಡುತ್ತಿತ್ತು. ಈಗ ಈ ಯೋಜನೆ ಮೂಲಕ ಸಾಲ ಪಡೆದು ಕಂತುಗಳನ್ನು ಸರಿಯಾಗಿ ನಿರ್ವಹಿಸಿಕೊಂಡು ಬಂದವರಿಗೆ ಈಗ ಸಿಹಿಸುದ್ದಿ. ಯಾಕೆಂದರೆ ಈಗ 50,000 ದ ವರೆಗೂ ಕೂಡ ಈ ಯೋಜನೆ ಮೂಲಕ ಸಾಲ ಸೌಲಭ್ಯ ನೀಡಲು ಸರ್ಕಾರ ನಿರ್ಧರಿಸಿದೆ.
ಆದರೆ ಈ ಸೌಲಭ್ಯವನ್ನು ಪಡೆಯುವವರು 60 ವರ್ಷದ ಒಳಗಿರಬೇಕು ಎನ್ನುವ ಕಡ್ಡಾಯ ನಿಯಮ ಇದೆ. ಹೆಚ್ಚಿನ ವಿವರಗಾಗಿ ನಿಮ್ಮ ಹತ್ತಿರದ ಯಾವುದೇ ಬ್ಯಾಂಕ್ ಗೆ ಹೋಗಿ ವಿಚಾರಿಸಬಹುದು ಅಥವಾ ಸರ್ಕಾರದ ಅಧಿಕೃತ ವೆಬ್ಸೈಟ್ ಭೇಟಿ ಕೊಟ್ಟು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದು.
ಈ ಸಾಲ ಸೌಲಭ್ಯ ಪಡೆಯಲು ಬೇಕಾಗುವ ದಾಖಲೆಗಳು :-
● ಆಧಾರ್ ಕಾರ್ಡ್
● ಬ್ಯಾಂಕ್ ಪಾಸ್ ಪುಸ್ತಕ
● ಮೊಬೈಲ್ ಸಂಖ್ಯೆ
● ರೇಷನ್ ಕಾರ್ಡ್
● ಇತ್ತೀಚಿನ ಭಾವಚಿತ್ರ