ಬ್ಯಾಂಕ್ ನಲ್ಲಿ ಸಾಲ ಪಡೆದವರಿಗೆ ಗುಡ್ ನ್ಯೂಸ್, RBI ನಿಂದ ಅಧಿಕೃತ ಘೋಷಣೆ.!

 

WhatsApp Group Join Now
Telegram Group Join Now

ಬ್ಯಾಂಕ್ಗಳ ಬ್ಯಾಂಕ್ ಎಂದು RBIಯನ್ನು ಕರೆಯುತ್ತಾರೆ. RBI ಎಲ್ಲಾ ಬ್ಯಾಂಕ್ ಗಳ ಹೆಡ್ ಆಫೀಸ್ ಅಡ್ರೆಸ್ ಎಂದರೂ ತಪ್ಪಾಗಲಾರದು. ಯಾಕೆಂದರೆ ದೇಶದ ಎಲ್ಲಾ ಖಾಸಗಿ ವಲಯದ ಮತ್ತು ಸರ್ಕಾರಿ ವಲಯದ ಬ್ಯಾಂಕ್ಗಳು ಕೂಡ RBI ಸೂಚಿಸಿರುವ ನಿಯಮಗಳ ಪ್ರಕಾರವೇ ತಮ್ಮ ಪ್ರಕ್ರಿಯೆ ನಡೆಸುತ್ತಿವೆ RBI ದೇಶದ ಎಲ್ಲಾ ಆರ್ಥಿಕ ಚಟುವಟಿಕೆಗಳ ಮೇಲು ಗಮನ ಇಟ್ಟಿದೆ.

ಜೊತೆಗೆ ದೇಶದ ಆರ್ಥಿಕ ಅಭಿವೃದ್ಧಿ ವಿಚಾರದಲ್ಲೂ ಪಾಲು ಹೊಂದಿದೆ. ದೇಶದಲ್ಲಿ ಹಣದುಬ್ಬರ ಅಥವಾ ದೇಶದ ಆರ್ಥಿಕ ಬೆಳವಣಿಗೆ ಕುಂಠಿತ ಸಮಯದಲ್ಲಿ ಕೆಲ ಹೊಸ ನಿಯಮಗಳನ್ನು ಜಾರಿಗೆ ತಂದು ಅದನ್ನು ಕಂಟ್ರೋಲಿಗೆ ತರುತ್ತದೆ RBI. ಈ ನಿಯಮಗಳಿಂದ ಕಳೆದ ಎರಡು ವರ್ಷಗಳಿಂದ ರೆಪೋ ದರ ಹೆಚ್ಚಿಗೆ ಆಗಿತ್ತು, ಇದೀಗ ಈ ಕುರಿತು ಎಲ್ಲರಿಗೂ ಸಿಹಿ ಸುದ್ದಿ ಸಿಕ್ಕಿದೆ. ಅದೇನೆಂದರೆ, RBI ರೆಪೋದರ ಇಳಿಕೆ ಮಾಡಲಿದೆ, ಇದರಿಂದ ದೇಶದಲ್ಲಿರುವ ಬ್ಯಾಂಕ್ ಸಾಲಗಾರರಿಗೆ ಸಹಾಯ ಆಗಲಿದೆ.

ಈ ರೀತಿ ರೆಪೋ ದರ ಏರಿಕೆ ಮತ್ತು ಇಳಿಕೆ ಆಗುವುದು ನೇರವಾಗಿ ಬ್ಯಾಂಕಿನಲ್ಲಿ ವ್ಯವಹಾರ ನಡೆಸುವ ಗ್ರಾಹಕರ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಜನರು ಕಟ್ಟುವ ಸಾಲದ ಕಂತುಗಳು, ಪಡೆಯುವ ಸಾಲಗಳಿಗೆ ನಿಗದಿಪಡಿಸುವ ಬಡ್ಡಿದರ ಎಲ್ಲವೂ ರೆಪೋದರ ಹೆಚ್ಚಾದಾಗ ಹೆಚ್ಚಾಗುತ್ತದೆ. ರೆಪೋ ದರ ಇಳಿಕೆ ಆದರೆ ಗ್ರಾಹಕರ ಜೇಬಿಗೂ ಸ್ವಲ್ಪ ಹಣ ಉಳಿಕೆ ಆಗುತ್ತದೆ. ಇದೇ ಸುದ್ದಿಯಿಂದ ಈಗ ಸಾಲ ಪಡೆದಿರುವ ಎಲ್ಲರೂ ಸಹ ಖುಷಿಯಾಗಿದ್ದಾರೆ.

ಯಾಕೆಂದರೆ ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಬದಲಾವಣೆಗಳು ಬ್ಯಾಂಕ್ ಗಳ ವಿಚಾರದಲ್ಲಿ ಆಗಿತ್ತು ಅದರಲ್ಲೂ ಕರೋನಂತಹ ಮಹಾಮಾರಿ ತಂದೊಡ್ಡಿದ್ದ ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಂತೂ RBI ನಿಯಮಗಳನ್ನು ಜಾರಿಗೆ ತಂದು ರೆಪೋ ದರವನ್ನು ವಿಪರೀತವಾಗಿ ಹೆಚ್ಚಿಸಿತ್ತು. ಕಳೆದ ಮಾರ್ಚ್ ತಿಂಗಳಿಂದ ಆರು ಬಾರಿ ರೆಪೋ ದರ ಹೆಚ್ಚಿಗೆ ಮಾಡಿ 2.50% ವರೆಗೆ ಏರಿಸಿತ್ತು.

ಇದು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಾಗಲಿದೆಯಾ ಎಂದು ಆತಂಕ ಪಟ್ಟದ ಜನತೆ ಈಗ ನಿಟ್ಟಿಸಿರು ಬಿಡುವಂತೆ ಆಗಿದೆ. ಆರ್ಥಿಕ ತಜ್ಞರು ಹೇಳುವಂತೆ ಇಂಥದೊಂದು ಮನ್ಸೂಚನೆ RBI ನೀಡಿದೆ. ಸದ್ಯಕ್ಕೆ ದೇಶದ ಆರ್ಥಿಕ ಪರಿಸ್ಥಿತಿಯಲ್ಲಿ ಆಗಿರುವ ಸುಧಾರಣೆ ಮತ್ತು ಹಣದುಬ್ಬರದ ಇಳಿಕೆಯ ಕಾರಣದಿಂದಾಗಿ ಗ್ರಾಹಕರ ಪರಿಸ್ಥಿತಿಯನ್ನು ಮನಗಂಡು ದೇಶದ ನಾಗರಿಕರಿಗೆ ಅನುಕೂಲತೆ ಮಾಡಿ ಕೊಡುವ ಸಲುವಾಗಿ ಮುಂದಿನ ವರ್ಷದ ಆರಂಭದಲ್ಲೇ ರೆಪೋದರ ಇಳಿಕೆ ಮಾಡುವ ಸಾಧ್ಯತೆ ಇದೆ.

ಅಥವಾ ಮುಂದಿನ ವರ್ಷದಲ್ಲಿ ಯಾವುದೇ ರೀತಿ ವ್ಯತ್ಯಾಸ ಆಗದೆ ಈಗಿರುವ ಪರಿಸ್ಥಿತಿಯೇ ಮುಂದುವರೆಯಬಹುದು. ಸದ್ಯಕ್ಕೀಗ ಬ್ಯಾಂಕ್ ನೀತಿ ರೆಪೋ ದರ ಶೇಕಡ 6.50% ಇದೆ. 2024ನೇ ವರ್ಷದ ಕೊನೆ ತ್ರೈಮಾಸಿಕದಲ್ಲಿ ಇದು 0.25% ಇಳಿಕೆ ಆಗುವ ಸಾಧ್ಯತೆ ಇದೆ ಎನ್ನುವುದು ಆರ್ಥಿಕ ತಜ್ಞರ ನಿರೀಕ್ಷೆ.

ಒಂದು ವೇಳೆ ಈ ರೀತಿ ಆದಲ್ಲಿ ದೇಶದಲ್ಲಿ ಸಾಲ ಪಡೆದುಕೊಂಡಿರುವ ಬ್ಯಾಂಕ್ ಸಾಲಗಾರರ ಬಡ್ಡಿ ದರದಲ್ಲಿ ಇಳಿಕೆ ಆಗುತ್ತದೆ. ಜೊತೆಗೆ ಜನರು ತಾವು ಸಾಲ ಪಡೆದುಕೊಂಡಿರುವ ಮೊತ್ತವನ್ನು ಕಟ್ಟುವ EMI ಗಳ ಕಂತುಗಳ ಮೊತ್ತವೂ ತುಸು ಕಡಿಮೆ ಅಗಲಿದೆ. ದೇಶದ ನಾಗರಿಕರಿಗೆ ಅನುಕೂಲವಾಗುವಂತಹ ಈ ರೀತಿ ಬದಲಾವಣೆಗಳು ಆರ್ಥಿಕ ವಲಯದಲ್ಲಿ ಕಂಡು ಬರಲಿ ಎಂದು ನಾವು ಬಯಸೋಣ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now