ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2019ನೇ ವರ್ಷದಲ್ಲಿ ದೇಶದಲ್ಲಿರುವ ಎಲ್ಲಾ ರೈತರಿಗಾಗಿ ಒಂದು ಯೋಜನೆಯನ್ನು ಜಾರಿಗೆ ತಂದರು. ರೈತರ ಆರ್ಥಿಕ ಪರಿಸ್ಥಿತಿಯನ್ನು ಭದ್ರಗೊಳಿಸುವ ಉದ್ದೇಶದಿಂದ ದೇಶದಲ್ಲಿರುವ ಎಲ್ಲಾ ರೈತರ ಖಾತೆಗಳಿಗೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಮೂಲಕ ವಾರ್ಷಿಕವಾಗಿ 6,000ಗಳನ್ನು ನಾಲ್ಕು ತಿಂಗಳ ಅಂತರದಲ್ಲಿ ಮೂರು ಕಂತುಗಳಾಗಿ ರೈತರ ಬ್ಯಾಂಕ್ ಖಾತೆಗಳಿಗೆ ನೇರ ವರ್ಗಾವಣೆ ಮೂಲಕ ಜಮೆ ಮಾಡುವುದಾಗಿ ಘೋಷಣೆ ಮಾಡಿದರು.
ಅಂದಿನಿಂದ ಯಶಸ್ವಿಯಾಗಿ ಈವರೆಗೆ 13 ಕಂತುಗಳ ಹಣವನ್ನು ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದ್ದಾರೆ. ಜೊತೆಗೆ ವರ್ಷದಿಂದ ವರ್ಷಕ್ಕೆ ಈ ಯೋಜನೆಯಲ್ಲಿ ಸೇರುವವರ ಹೆಸರು ಹೆಚ್ಚಾಗುತ್ತಿದ್ದು, ಹಾಗೆ ನಕಲಿ ಫಲಾನುಭವಿಗಳನ್ನು ಗುರುತಿಸಿ ಅವರ ಹೆಸರನ್ನು ಫಲಾನುಭವಿಗಳ ಲಿಸ್ಟ್ ಇಂದ ಕಿತ್ತುಹಾಕಲಾಗುತ್ತಿದೆ. ದೇಶದ 14 ಕೋಟಿಗಿಂತಲೂ ಹೆಚ್ಚಿನ ರೈತರು ಇಂದು ಈ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಾಗಿದ್ದಾರೆ.
ಕೇಂದ್ರದಲ್ಲಿ ಇದು ಜಾರಿಗೆ ಬಂದ ಮೇಲೆ ರಾಜ್ಯದಲ್ಲಿಯೂ ಸಹ ಕರ್ನಾಟಕ ರಾಜ್ಯದ ರೈತರಿಗಾಗಿ ಸಿಎಂ ಕಿಸಾನ್ ಯೋಜನೆ ಎನ್ನುವ ಯೋಜನೆ ಜಾರಿಗೆ ಬಂತು. ಈ ಯೋಜನೆ ಮೂಲಕ 4,000ಗಳನ್ನು ಎರಡು ಕಂತುಗಳಲ್ಲಿ ರೈತರಿಗೆ ಕೊಡಲು ರಾಜ್ಯ ಸರ್ಕಾರ ನಿರ್ಧರಿಸಿತು. ಕೇಂದ್ರದ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ನೋಂದಣಿಯಾದ ಎಲ್ಲಾ ರೈತರಿಗೂ ಕೂಡ ರಾಜ್ಯದ ಸಿಎಂ ಕಿಸಾನ್ ಯೋಜನೆಯ ಹಣ ಬರುತ್ತಿದೆ.
ಈ ಯೋಜನೆ ಜಾರಿಗೆ ಬಂದ ನಾಲ್ಕೂ ವರ್ಷಕ್ಕಿಂತ ಹೆಚ್ಚು ಕಾಲ ಆಗುತ್ತಿದ್ದರೂ ಕೂಡ ಜನರಿಗೆ ಯೋಜನೆ ಬಗ್ಗೆ ಇನ್ನೂ ಸಾಕಷ್ಟು ಗೊಂದಲಗಳಿವೆ. ಹೆಚ್ಚಾಗಿ ಜನರು ಇದರ ಬಗ್ಗೆ ಕೇಳುವ ಒಂದು ಪ್ರಶ್ನೆ ಏನೆಂದರೆ, ತಂದೆ ಹೆಸರಿನಲ್ಲಿ ಜಮೀನು ಇದ್ದರೆ, ತಂದೆ ಈ ಯೋಜನೆಯ ಫಲಾನುಭವಿ ಆಗದಿದ್ದರೆ ತಾವು ಅದರ ಉಪಯೋಗ ಪಡೆಯಬಹುದೇ ಎಂದು.
ಆದರೆ ಕೇಂದ್ರ ಸರ್ಕಾರದ ನಿಯಮಗಳಲ್ಲಿ ಇಂತಹ ಒಂದು ವಿನಾಯಿತಿ ಕೊಟ್ಟಿಲ್ಲ. ಯಾಕೆಂದರೆ, ಪಿಎಮ್ ಕಿಸಾನ್ ಸಮ್ಮಾನ ಯೋಜನೆಯ ನಿಯಮಗಳ ಪ್ರಕಾರ ಯಾವ ವ್ಯಕ್ತಿ ತನ್ನ ಹೆಸರಿನಲ್ಲಿ ಕೃಷಿ ಭೂಮಿ ಹೊಂದಿರುತ್ತಾನೋ ಆ ವ್ಯಕ್ತಿ ಮಾತ್ರ ಈ ಯೋಜನೆಗೆ ಅರ್ಜಿ ಸಲ್ಲಿಸಿ ಅವನ ಹೆಸರಿನಲ್ಲಿಯೇ ದಾಖಲೆಗಳನ್ನು ಕೊಟ್ಟು ಯೋಜನೆಯ ಫಲಾನುಭವಿ ಆಗಲು ಸಾಧ್ಯ.
ಇಂತಹ ಕಟ್ಟು ನಿಟ್ಟಿನ ನಿಯಮ ಹೊಂದಿರುವುದರಿಂದ ತಂದೆಯ ಹೆಸರಿನಲ್ಲಿರುವ ಜಮೀನಿನಲ್ಲಿ ಮಕ್ಕಳು ಇದರ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ತಂದೆ ಈ ಯೋಜನೆಯಲ್ಲಿ ಇದ್ದು ಫಲಾನುಭವಿ ಆಗಿದ್ದು ಮ.ರ.ಣ ಹೊಂದಿದ ಪಕ್ಷದಲ್ಲಿ, ತಂದೆ ಹೆಸರಿನಲ್ಲಿರುವ ಜಮೀನಿನನ್ನು ಕಾನೂನಿನ ಪ್ರಕಾರ ತಮ್ಮ ಹೆಸರಿಗೆ ಮಾಡಿಕೊಂಡು ನಂತರ ಹೊಸದಾಗಿ ಯೋಜನೆಗೆ ನಿಮ್ಮ ಹೆಸರಿನಲ್ಲಿ ನೋಂದಣಿ ಆಗಿ ನಿಮ್ಮ ಹೆಸರಿನ ದಾಖಲೆಗಳನ್ನು ಕೊಟ್ಟು ಫಲಾನುಭವಿ ಆಗಬಹುದು.
ಈ ಯೋಜನೆ ಬಗ್ಗೆ ಹೆಚ್ಚಾಗಿ ಕೇಳಿ ಬರುವ ಮತ್ತೊಂದು ಪ್ರಶ್ನೆ ಏನು ಎಂದರೆ ಒಬ್ಬ ರೈತ ತಾನು ಕೃಷಿ ಮಾಡುತ್ತಿದ್ದು ಆದರೆ ಆತ ಕೃಷಿ ಮಾಡುತ್ತಿರುವ ಭೂಮಿಯು ಬೇರೆ ರೈತನ ಹೆಸರಿನಲ್ಲಿ ಇರುತ್ತದೆ. ಅಂತಹ ಸಮಯದಲ್ಲಿ ತಾನು ಕೂಡ ರೈತ ಆದರೆ ತನ್ನ ಹೆಸರಲ್ಲಿ ಕೃಷಿ ಭೂಮಿ ಇಲ್ಲ ಆದರೆ ಈ ಕಿಸಾನ್ ಸಮ್ಮಾನ್ ಯೋಜನೆಯ ಅನುಕೂಲ ಪಡೆಯಬಹುದೇ ಎಂದು ಕೇಳುತ್ತಾರೆ ಇಂತಹ ಸಾಧ್ಯತೆ ಕೂಡ ಸಾಧ್ಯವಿಲ್ಲ.
ಈ ಯೋಜನೆಗೆ ಫಲಾನುಭವಿಗಳು ಆಗಲು ಕೊಡಬೇಕಾದ ದಾಖಲೆಗಳನ್ನು ಮುಖ್ಯವಾಗಿ ಯೋಜನೆ ಅರ್ಜಿ ಸಲ್ಲಿಸುವ ರೈತನ ಹೆಸರಿನಲ್ಲಿ ಕೃಷಿ ಭೂಮಿ ಇರುವುದು ಕೂಡ ಕಡ್ಡಾಯವಾಗಿದೆ. ಆದ್ದರಿಂದ ಈ ರೀತಿ ಬೇರೆಯವರ ಜಮೀನಿನಲ್ಲಿ ಕೃಷಿ ಮಾಡುವ ರೈತರಿಗೂ ಇದರ ಫಲಾನುಭವಿಗಳಾಗಲು ಸಾಧ್ಯವಿರುವುದಿಲ್ಲ.