ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್ ಸರ್ಕಾರದಿಂದ ಉಚಿತವಾಗಿ 5000 ದಿಂದ 25,000 ಹಣ ಸಿಗಲಿದೆ ತಕ್ಷಣವೇ ಈ ಕೆಲಸ ಮಾಡಿ.!

 

WhatsApp Group Join Now
Telegram Group Join Now

ಕಟ್ಟಡ ನಿರ್ಮಾಣ ಮತ್ತು ಇತರೆ ನಿರ್ಮಾಣ ಕಾರ್ಮಿಕರುಗಳಿಗೆ ಸರ್ಕಾರದಿಂದ ಈಗ ಸಾಕಷ್ಟು ಸವಲತ್ತುಗಳು ಸಿಗುತ್ತಿವೆ. ಕಟ್ಟಡ ಕಾರ್ಮಿಕರಾಗಿರುವ ಮತ್ತು ಇಲಾಖೆಯಲ್ಲಿ ನೋಂದಣಿ ಮಾಡಿಸಿರುವಂತಹ ಲೇಬರ್ ಕಾರ್ಡ್ ಹೊಂದಿರುವ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಉಚಿತವಾಗಿ ಬಸ್ ಪಾಸ್, ಮೊದಲ ಎರಡು ಮಕ್ಕಳ ಮದುವೆಗೇ 50,000 ದವರೆಗೆ ಸಹಾಯಧನ ಮತ್ತು ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರ ಮಕ್ಕಳುಗಳಿಗೆ ವಿದ್ಯಾರ್ಥಿ ಕಿಟ್, ಉಚಿತ ಟ್ಯಾಬ್ ಹಾಗೂ ಲ್ಯಾಪ್ಟಾಪ್ ವಿತರಣೆ ಸೇರಿದಂತೆ ಆ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಸಹ ನೀಡಲಾಗುತ್ತಿದೆ.

ಪ್ರತಿ ವರ್ಷವೂ ಕೂಡ ಲೇಬರ್ ಕಾರ್ಡ್ ಹೊಂದಿರುವ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿರುವ ತರಗತಿಯ ಅನುಸಾರವಾಗಿ ಈ ರೀತಿ ವಿದ್ಯಾರ್ಥಿ ವೇತನವನ್ನು ನಿಗತಿಪಡಿಸಿ ಅವರಿಗೆ ಕೊಡಲಾಗುತ್ತಿದೆ. ಕಟ್ಟಡ ಕಾರ್ಮಿಕರ ಮಕ್ಕಳುಗಳು ಕೂಡ ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಬೇಕು. ಅವರ ಶಿಕ್ಷಣದ ಇನ್ನಿತರ ಖರ್ಚಿನ ಅನುಕೂಲತೆಗೆ ಅಥವಾ ಅವರಿಗೆ ಪೋಷಕಾಂಶ ಕೊರತೆ ಆಗದಂತೆ ಆಹಾರ ಪಡೆಯಲು ಅಥವಾ ಅವರ ಭವಿಷ್ಯಕ್ಕಾಗಿ ಇದು ಉಪಯೋಗಕ್ಕೆ ಬರಲಿ ಎನ್ನುವ ಯೋಚನೆಯಿಂದ ಸರ್ಕಾರ 5000 ರಿಂದ 25,000 ವರೆಗೂ ಕೂಡ ಲೇಬರ್ ಕಾರ್ಡ್ ಹೊಂದಿರುವ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದೆ.

ಕರ್ನಾಟಕ ಸರ್ಕಾರ ಕಾರ್ಮಿಕ ಕಲ್ಯಾಣ ಮಂಡಳಿ ಜಾರಿಗೆ ತಂದಿರುವಂತಹ ಈ ಯೋಜನೆಯಿಂದ ವರ್ಷಕ್ಕೆ ಲಕ್ಷಾಂತರ ವಿದ್ಯಾರ್ಥಿಗಳು ಅನುಕೂಲ ಪಡೆಯುತ್ತಿದ್ದಾರೆ. ಕೆಲವೊಂದು ಕಡ್ಡಾಯ ನಿಯಮಗಳನ್ನು ಪಾಲಿಸಿ ದಾಖಲೆಗಳನ್ನು ಸಲ್ಲಿಸಿ ಅರ್ಜಿ ಸಲ್ಲಿಸುವುದರ ಮೂಲಕ ಅವರ ಖಾತೆಗಳಿಗೆ ನೇರವಾಗಿ ಈ ಸಹಾಯಧನವನ್ನು ಪಡೆಯಬಹುದು. ಮತ್ತೊಂದು ಮುಖ್ಯವಾದ ಅಂಶ ಏನೆಂದರೆ ತಂದೆ ತಾಯಿ ಇಬ್ಬರು ಲೇಬರ್ ಕಾರ್ಡ್ ಹೊಂದಿದ್ದರೂ ಸಹ ಪೋಷಕರ ಎರಡು ಮಕ್ಕಳಿಗೆ ಮಾತ್ರ ಈ ಅನುಕೂಲತೆ ಸಿಗಲಿದೆ.

ನೀವು ಲೇಬರ್ ಕಾರ್ಡ್ ಹೊಂದಿರುವ ಕಾರ್ಮಿಕರ ಮಕ್ಕಳಾಗಿದ್ದರೆ ನಿಮಗೂ ಸಹ ಈ ವಿದ್ಯಾರ್ಥಿ ವೇತನದ ಸೌಲಭ್ಯ ಸಿಗಲಿದೆ. ಯಾವ ಯಾವ ತರಗತಿಗೆ ಎಷ್ಟೆಷ್ಟು ವಿದ್ಯಾರ್ಥಿ ವೇತನ ಸಿಗಲಿದೆ ಎನ್ನುವುದು ಮಾಹಿತಿ ಹೀಗಿದೆ ನೋಡಿ.

● ಶಿಶುವಿಹಾರ(ಅಂಗನವಾಡಿ)/ನರ್ಸರಿ—5,000ರೂ
● 1ರಿಂದ 4ನೇ ತರಗತಿ—5,000ರೂ
● 5 ರಿಂದ 8ನೇ ತರಗತಿ- 8,000ರೂ
● 9ರಿಂದ 10ನೇ ತರಗತಿ—–12,000ರೂ
● 9 & 10 ನೇ ತರಗತಿ—-6,000ರೂ
● ಪ್ರಥಮ & ದ್ವಿತೀಯ ಪಿ.ಯು.ಸಿ—- 15,000ರೂ
● ಪದವಿ—-25,000ರೂ
● ಡಿ.ಎಡ್—–25,000ರೂ
● ಬಿ.ಎಡ್—35,000ರೂ
● ಐ.ಟಿ.ಐ & ಡಿಪ್ಲಮೋ—-20,000ರೂ
● ಬಿ.ಎಸ್ಸಿ/GNM ನರ್ಸಿಂಗ್/ PARAMEDICAL—40,000ರೂ
● ಸ್ನಾತಕೋತ್ತರ ಪದವಿ—-35,000ರೂ
● ಇಂಜಿನಿಯರಿಂಗ್—-50,000ರೂ

ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು:-
● ಪೋಷಕರ ಲೇಬರ್ ಕಾರ್ಡ್
● ಪೋಷಕರ ಮತ್ತು ಮಕ್ಕಳ ಆಧಾರ್ ಕಾರ್ಡ್
● ಪೋಷಕರು ಅಥವಾ ಮಕ್ಕಳ ಬ್ಯಾಂಕ್ ಖಾತೆ ವಿವರ
● ಕಳೆದ ವರ್ಷ ಉತ್ತೀರ್ಣವಾದ ತರಗತಿಯ ಅಂಕಪಟ್ಟಿ
● ಪ್ರಸ್ತುತ ವರ್ಷಕ್ಕೆ ದಾಖಲಾಗಿರುವ ಪುರಾವೆಗೆ ಶುಲ್ಕ ರಶೀದಿ ಅಥವ ಶಾಲೆ ಮತ್ತು ಕಾಲೇಜಿನಲ್ಲಿ ಕೊಡುವ ಐಡಿ ಕಾರ್ಡ್.
● ರೇಷನ್ ಕಾರ್ಡ್
● ಇನ್ನಿತರ ದಾಖಲೆಗಳು

ಅರ್ಜಿ ಸಲ್ಲಿಸುವ ವಿಧಾನ:- ಆನ್ಲೈನ್ ಮೂಲಕ
● ಗ್ರಾಮ ಒನ್
● ಕರ್ನಾಟಕ ಒನ್
● ಸೇವಾ ಸಿಂಧು ಕೇಂದ್ರಗಳಲ್ಲಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now