ಎಲ್ಲಾ ಉದ್ಯಮಗಳಿಗಿಂತಲೂ ಲಾಭ ತರುವ ಉದ್ಯಮ ಎಂದರೆ ಅದು ಮಧ್ಯದಂಗಡಿ. ಎಂದೂ ಕೂಡ ಬಾರ್ ಗಳು ಲಾಸ್ ಆದ ಉದಾಹರಣೆಯೇ ಇಲ್ಲ. ಹಳ್ಳಿಗಳೇ ಇರಲಿ ನಗರ ಪ್ರದೇಶವೇ ಇರಲಿ ಬಾರ್ ಓಪನ್ ಮಾಡಿದವರು ದಿನಪೂರ್ತಿ ಹಣ ಎಣಿಸುವುದರಲ್ಲಿ ಅನುಮಾನವೇ ಇಲ್ಲ. ಹಾಗಾಗಿ ಹೆಚ್ಚಿನ ಜನರು ಈ ಉದ್ಯಮಕ್ಕೆ ಕೈ ಹಾಕಲು ಬಯಸುತ್ತಾರೆ. ಆದರೆ ಅದಕ್ಕೂ ಮುನ್ನ ಅದರ ಬಗ್ಗೆ ಕೆಲ ಮಾಹಿತಿಯನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ.
ಬಾರ್ ತೆರೆಯುವುದು ಸುಲಭದ ಮಾತಲ್ಲ, ಅದಕ್ಕಾಗಿ ಹಲವು ನಿಯಮಗಳು ಇವೆ, ಕೆಲವೊಂದು ಶುಲ್ಕವನ್ನು ಸಹ ಕಟ್ಟಬೇಕಾಗಿರುತ್ತದೆ, ಜೊತೆಗೆ ಅದನ್ನು ಮೇನ್ಟೇನ್ ಮಾಡುವುದು ಕೂಡ ಬಹಳ ಹಣ ಖರ್ಚಾಗುವ ಕೆಲಸ. ಇಷ್ಟೆಲ್ಲಾ ವೆಚ್ಚ ಮಾಡಿ ಒಮ್ಮೆ ಕೈ ಹಾಕಿದರೆ ನಂತರ ಹಣದ ಸುರಿಮಳೆ ಸುರಿಯುವುದರಲ್ಲಿ ಅನುಮಾನ ಇಲ್ಲ ಎನ್ನಬಹುದು.
ಎಲ್ಲಾ ಬಾರ್ ಗಳು ಕೂಡ ಒಂದೇ ರೀತಿ ಇರುವುದಿಲ್ಲ.
CAL 1, CAL 2, 4, 5, 6a, 7, 9, 11 ಹೀಗೆ ಅದರಲ್ಲೂ ಕೂಡ ಹಲವು ಬಗೆಗಳು ಇವೆ. ರಿಟೇಲ್ ಬಾರ್, ಸ್ಟಾರ್ ಬಾರ್, ಕ್ಲಬ್ ಬಾರ್, ಹೋಲ್ಸೇಲ್ ಬಾರ್, ಬಾರ್ ಅಂಡ್ ರೆಸ್ಟೋರೆಂಟ್, ಹೋಟೆಲ್ ಅಂಡ್ ಬೋರ್ಡಿಂಗ್ ಹೌಸ್ ಈ ರೀತಿ ಅವುಗಳು ಬೇರೆ ಬೇರೆ ಕೆಟಗರಿ ಅನ್ವಯ ಡಿವೈಡ್ ಆಗಿರುತ್ತವೆ. ಇವುಗಳಲ್ಲಿ ಯಾವುದೇ ಬಾರ್ ಓಪನ್ ಮಾಡಬೇಕು ಎಂದರು ಕನಿಷ್ಠ 7 ಲಕ್ಷವಾದರೂ ನೀವು ಲೈಸೆನ್ಸ್ ಫೀಸ್ ಕಟ್ಟಬೇಕಾಗುತ್ತದೆ.
ಮೊದಲಿಗೆ ರಾಜ್ಯ ಅಥವಾ ಜಿಲ್ಲಾ ಅಬಕಾರಿ ಅಧಿಕಾರಿಗಳಿಗೆ ಮಾಹಿತಿ ಕೊಡಬೇಕಾಗುತ್ತದೆ, ನಂತರ ನೀವು ಬಾರ್ ಓಪನ್ ಮಾಡುವ ಜಾಗ ಮಾಹಿತಿ ನೀಡಿದರೆ ಅವರು ಬಂದು ಸ್ಥಳ ಪರಿಶೀಲನೆ ಮಾಡುತ್ತಾರೆ ನಂತರ ಸ್ವಲ್ಪ ಹಣ ಕಟ್ಟಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಗಾಡ್ ಲೈಸನ್ಸ್ ಪಡೆದು ಬಾರ್ ಓಪನ್ ಮಾಡಲು ಇಚ್ಚಿಸುವವರು ಕಡ್ಡಾಯವಾಗಿ ಭಾರತೀಯ ಪ್ರಜೆಯಾಗಿರಬೇಕು, ಅವರಿಗೆ ಕನಿಷ್ಠ 21 ವರ್ಷಕ್ಕಿಂತ ಹೆಚ್ಚಿನ ವಯಸ್ಸಾಗಿರಬೇಕು.
ಸರಿಯಾಗಿ ಮಾಹಿತಿ ನೀಡಿದಲ್ಲಿ 10 ರಿಂದ 15 ದಿನಗಳ ಒಳಗೆ ನಿಮಗೆ ಲೈಸೆನ್ಸ್ ಸಿಗುತ್ತದೆ. ಆದರೆ ಸದ್ಯಕ್ಕೆ 2018 ರಿಂದ ಯಾರಿಗೂ ಕೂಡ ಈ ಲೈಸೆನ್ಸ್ ಅನ್ನು ನೀಡುತ್ತಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರ ಈ ಬಗ್ಗೆ ಗಮನ ಹರಿಸಬಹುದು ಎನ್ನುವ ನಿರೀಕ್ಷೆ ಇದೆ. ಒಂದು ಬಾರ್ ಓಪನ್ ಮಾಡಲು ಶಾಪ್ ಎಸ್ಟಾಬ್ಲಿಷ್ಡ್ ಮೆಂಟ್ ಲೈಸೆನ್ಸ್, ಪೋಲಿಸ್ ಹೌಸ್ ಲೈಸೆನ್ಸ್, ಫೆಸ್ಸಾಯ್ ಲೈಸೆನ್ಸ್, ಜಿಎಸ್ಟಿ ಲೈಸೆನ್ಸ್ ಮತ್ತು ಮುನ್ಸಿಪಾಲಿಟಿ ಲೈಸೆನ್ಸ್ ಕೂಡ ಇರಬೇಕಾಗುತ್ತದೆ. ಇದಕ್ಕೆ ಕಡಿಮೆ ಎಂದರೂ 6 ಲಕ್ಷ ಖರ್ಚಾಗುತ್ತದೆ.
ಆಯಾ ಭಾಗಗಳಿಗೆ ಅನುಗುಣವಾಗಿ ಈ ಮೊತ್ತ ಸ್ವಲ್ಪ ಹೆಚ್ಚು ಕಮ್ಮಿ ಆಗಬಹುದು ಆದರೆ ನಂತರ ನಿಮ್ಮ ಬಾರ್ ಇಂಟೀರಿಯರ್ ಡಿಸೈನ್ ಅದಕ್ಕೆ ಬೇಕಾದ ಸರಕು ಮತ್ತು ಕಾರ್ಮಿಕರು ಹಾಗೂ ಇನ್ನಿತರ ವೆಚ್ಚಗಳು ಎಲ್ಲವೂ ಸೇರಿ ಒಂದು ಬಾರ್ ಓಪನ್ ಮಾಡಲು ಕಡಿಮೆ ಎಂದರು 50 ರಿಂದ 70ಲಕ್ಷರು ಖಂಡಿತವಾಗಿ ಬೇಕು. ಆದರೆ ಒಮ್ಮೆ ನೀವು ಈ ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಾಡಿದಲ್ಲಿ ನಂತರ ಇದರಿಂದ ಆದಾಯ ಹೆಚ್ಚುತ್ತದೆ ಹೊರತು ಕಡಿಮೆ ಆಗುವ ಮಾತೇ ಇಲ್ಲ. ಹೆಚ್ಚಿನ ಮಾಹಿತಿಗಾಗಿ ಅಬಕಾರಿ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಮತ್ತು ಸಲಹೆ ಪಡೆದು ನಂತರ ಉದ್ಯಮ ಆರಂಭಿಸಿ.