ಕರ್ನಾಟಕ ರಾಜ್ಯದಲ್ಲಿ ಹಲವಾರು ವಸತಿ ನಿರ್ಮಾಣ ಯೋಜನೆಗಳು ಇವೆ. ಕರ್ನಾಟಕದ ನಾಗರಿಕರಾದ ಎಲ್ಲರಿಗೂ ಮೂಲಭೂತ ಅವಶ್ಯಕತೆಯಾದ ಮನೆಯನ್ನು ನಿರ್ಮಿಸಿಕೊಳ್ಳಲು ಅವಕಾಶ ಮಾಡಿಕೊಡುವುದು ಸರ್ಕಾರದ ಉದ್ದೇಶ. ಕೇಂದ್ರ ಸರ್ಕಾರದ ಯೋಜನೆಗಳು ರಾಜ್ಯ ಸರ್ಕಾರದ ಹಲವು ಯೋಜನೆಗಳು ಸಹಾಯಧನ ನೀಡುವ ಮೂಲಕ ನೆರವಾಗುತ್ತಿವೆ.
ಇವುಗಳ ಪೈಕಿ ನಿರಾಶ್ರಿತರಿಗೆ ಮತ್ತು ರಾಜ್ಯದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ವರ್ಗದವರಿಗೆ ಕನಿಷ್ಠ ಖರ್ಚಿನಲ್ಲಿ ಗುಣಮಟ್ಟದ ಮನೆಯನ್ನು ನಿರ್ಮಿಸಿ ಕೊಡುವ ಉದ್ದೇಶವನ್ನು ಬಸವ ವಸತಿ ಯೋಜನೆ ಹೊಂದಿದೆ ಈ ಯೋಜನೆಯನ್ನು. 2000 ನೇ ಇಸವಿಯಲ್ಲಿ ಈ ಯೋಜನೆಯು ಆರಂಭವಾಗಿದ್ದು ಈವರೆಗೆ ಹಿಂದುಳಿದ ಎಲ್ಲಾ ವರ್ಗದ ಜನರು ಕೂಡ ಇದರ ಪ್ರಯೋಜನವನ್ನು ಪಡೆದಿದ್ದಾರೆ.
ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ ಈ ಮನೆಗಳನ್ನು ನಿರ್ಮಿಸಿ ಹಂಚಿತದೆ ಕರ್ನಾಟಕದಂತ ಈ ಯೋಜನೆಯು RGHCL ಯೋಚನೆ ಎಂದು ಹೆಸರುವಾಸಿಯಾಗಿದೆ. ಇತ್ತೀಚಿನ ದಿನಗಳಲ್ಲಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆ ಕೂಡ ಸೇರ್ಪಡೆ ಆಗಿದ್ದು ಕರ್ನಾಟಕದ ಅತ್ಯಂತ ಇದು RGRHCL ಯೋಜನೆ ಎಂದು ಪ್ರಖ್ಯಾತಿಯಾಗಿದೆ.
ಆರ್ಥಿಕ ಪರಿಸ್ಥಿತಿಯ ಕಾರಣದಿಂದಾಗಿ ಮನೆ ಇಲ್ಲದೆ ಇರುವವರು ಈ ಯೋಜನೆಯಡಿ 80% ಅಷ್ಟು ಮನೆ ನಿರ್ಮಾಣಕ್ಕೆ ಬೇಕಾದ ಸಾಮಗ್ರಿಗಳನ್ನು ಪಡೆಯುತ್ತಾರೆ. ಅಥವಾ 2 ಲಕ್ಷದವರೆಗೂ ಕೂಡ ಸಹಾಯಧನವನ್ನು ಪಡೆಯುತ್ತಾರೆ. ಮನೆ ಕಟ್ಟಿಕೊಳ್ಳಲು ಸ್ವಂತ ಜಾಗ ಹೊಂದಿರುವ ಜನರಿಗೆ ಈ ಯೋಜನೆಯಡಿ ಮನೆ ನಿರ್ಮಾಣ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
EWS ವರ್ಗಕ್ಕೆ ವಾಸಿಸಲು ಯೋಗ್ಯವಾದ ಒಂದು ಗುಣಮಟ್ಟದ ಮನೆ ನಿರ್ಮಾಣ ಮಾಡಿಕೊಡುವುದೇ ಈ ಯೋಜನೆಯ ಉದ್ದೇಶ ಆಗಿದ್ದು, ಸಂಪನ್ಮೂಲಗಳ ಪಾರದರ್ಶಕತೆ ಮತ್ತು ಪರಿಣಾಮಕಾರಿ ನಿರ್ವಹಣೆಯಿಂದ ಈ ಯೋಜನೆಯ ಸಹಾಯಧನ ಮತ್ತು ಸಾಮಗ್ರಿಗಳು ಕೂಡ ಫಲಾನುಭವಿಗಳಿಗೆ ಶೀಘ್ರವಾಗಿ ಸಿಗುತ್ತಿವೆ.
ಈ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ:-
● ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ ಅಧಿಕೃತ ವೆಬ್ಸೈಟ್ ಆದ https://ashraya.karnataka.gov.in/ ಗೆ ಲಾಗ್ ಇನ್ ಆಗಿ.
● ಮುಖಪುಟದಲ್ಲಿ ಆನ್ಲೈನ್ ಅಪ್ಲಿಕೇಶನ್ ಅಥವಾ ನೋಂದಣಿಗೆ ಅಪ್ಲಿಕೇಶನ್ ಲಭ್ಯವಿರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
● ಅರ್ಜಿ ಫಾರಂನಲ್ಲಿ ಅರ್ಜಿದಾರರ ಹೆಸರು, ಜನ್ಮ ದಿನಾಂಕ, ಆಧಾರ್ ಸಂಖ್ಯೆ, ತಂದೆ ಹೆಸರು, ಲಿಂಗ, ಆದಾಯದ ವಿವರ, ವಾಸವಿರುವ ಗ್ರಾಮ, ತಾಲೂಕು, ಜಿಲ್ಲೆಯ ಹೆಸರು, ವಿಳಾಸ, ಭಾವಚಿತ್ರ, ಆದಾಯ ಪ್ರಮಾಣ ಪತ್ರದ ವಿವರ ಇತ್ಯಾದಿಗಳನ್ನು ಕೇಳಲಾಗಿರುತ್ತದೆ. ಈ ಮಾಹಿತಿಗಳನ್ನು ಸರಿಯಾದ ರೀತಿಯಲ್ಲಿ ಫಿಲ್ ಮಾಡಿ ಮತ್ತು ಕೆಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
● ಅರ್ಜಿ ಸಲ್ಲಿಕೆ ದಿನಾಂಕ ಮುಕ್ತಾಯವಾದ ಬಳಿಕ ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಪಂಚಾಯತ್ ಪ್ರಾಧಿಕಾರವು ಅಂತಿಮ ಗೊಳಿಸುತ್ತದೆ. ನೀವು ಅರ್ಜಿ ಸಲ್ಲಿಸಿರುವ ಸ್ಟೇಟಸ್ ಅನ್ನು ಇದೇ ವೆಬ್ ಸೈಟ್ ಗೆ ಭೇಟಿ ಕೊಡುವ ಮೂಲಕ ಚೆಕ್ ಮಾಡಿಕೊಳ್ಳಬಹುದು.
● ಈ ಯೋಜನೆ ಬಗ್ಗೆ ಹೆಚ್ಚು ಮಾಹಿತಿ ಬೇಕಾದಲ್ಲಿ ಇದೆ ವೆಬ್ಸೈಟ್ ಗೆ ಭೇಟಿ ಕೊಟ್ಟು ನೋಟಿಫಿಕೇಶನ್ ಓದಿ ತಿಳಿದುಕೊಳ್ಳಬಹುದು.
ಬಸವ ಸಮಿತಿ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
● ಅರ್ಜಿದಾರರ ಆಧಾರ್ ಕಾರ್ಡ್
● ವಿಳಾಸದ ದಾಖಲೆ
● ವಯಸ್ಸಿನ ದಾಖಲೆ
● ಆದಾಯ ಮತ್ತು ಜಾತಿ ಪ್ರಮಾಣ ಪತ್ರ
● ಪಾಸ್ಪೋರ್ಟ್ ಗಾತ್ರದ ಫೋಟೋಗಳು
● ಮೊಬೈಲ್ ಸಂಖ್ಯೆ