ಬಾಡಿಗೆ ಮನೆಯಲ್ಲಿ ಇರುವವರು & ಮನೆ ಮಾಲೀಕರು ಗೃಹಜ್ಯೋತಿ ಉಚಿತ ಕರೆಂಟ್ ಗೆ ಮೊಬೈಲ್ ಅಲ್ಲಿಯೇ ಅರ್ಜಿ ಸಲ್ಲಿಸುವ ಸುಲಭ ವಿಧಾನ ಇದು.!

 

ಕಾಂಗ್ರೆಸ್ ಪಕ್ಷವನ್ನು ನೀಡಿದ ಗ್ಯಾರಂಟಿ ಕಾರ್ಡ್ ಭರವಸೆಗಳಲ್ಲಿ ಮೊದಲನೇ ಗ್ಯಾರಂಟಿ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜೂನ್ 18ರಿಂದ ಆರಂಭವಾಗಿದೆ. ಮನೆಗಳ ಮಾಲೀಕರು ಮತ್ತು ಬಾಡಿಗೆ ಮನೆಗಳಲ್ಲಿ ವಾಸಿಸುವವರು ಕೂಡ ಅರ್ಜಿ ಸಲ್ಲಿಸಿ 200 ಯೂನಿಟ್ ವರೆಗಿನ ವಿದ್ಯುತ್ತನ್ನು ಉಚಿತವಾಗಿ ಪಡೆದುಕೊಳ್ಳಲು ನೋಂದಣಿ ಆಗಬಹುದು ಗ್ರಾಹಕರು ಸೇವಾ ಸಿಂಧು ಪೊರ್ಟಲ್ sevasindhugs.karnataka.gov.in ಮೂಲಕ ತಮ್ಮ ಮೊಬೈಲ್ಗಳಲ್ಲಿ, ಲ್ಯಾಪ್ಟಾಪ್ ಗಳಲ್ಲಿ, ಕಂಪ್ಯೂಟರ್ಗಳಲ್ಲಿ ಅರ್ಜಿ ಸಲ್ಲಿಸಬಹುದು.

ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಕೂಡ ಅರ್ಜಿ ಸಲ್ಲಿಸಲು ಅವಕಾಶವಿದೆ. ಆಫ್ ಲೈನ್ ನಲ್ಲಿ ಅರ್ಜಿ ಸಲ್ಲಿಸುವವರು ಗ್ರಾಮ ಪಂಚಾಯಿತಿಗಳಲ್ಲಿ ಅಥವಾ ವಿದ್ಯುತ್ ಕಚೇರಿ ಇಲಾಖೆಗಳಲ್ಲಿ ಹೋಗಿ ಅರ್ಜಿ ಸಲ್ಲಿಸಬಹುದು. ಈ ಅಂಕಣದಲ್ಲಿ ಮೊಬೈಲ್ ಮೂಲಕ ಯಾವ ರೀತಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು ಎನ್ನುವುದನ್ನು ಹಂತ ಹಂತವಾಗಿ ತಿಳಿಸಿ ಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ.

● ಮೊದಲಿಗೆ ಗೂಗಲ್ ಗೆ ಹೋಗಿ ಈ ಮೇಲೆ ತಿಳಿಸಿದ ಸೇವಾ ಸಿಂಧು ಪೋರ್ಟಲ್ sevasindhu.karnataka.gov.in ವೆಬ್ ಸೈಟ್ ಗೆ ಭೇಟಿ ಕೊಡಿ.
● ಡ್ಯಾಶ್ ಬೋರ್ಡ್ ಅಲ್ಲಿ ವಿವ್ಯೂ ಆಲ್ ಸರ್ವಿಸಸ್ ನೋಡಿ ಅದರಲ್ಲಿ ಗೃಹಜ್ಯೋತಿ ಯೋಜನೆಯ ಬಗ್ಗೆ ಸರ್ಚ್ ಮಾಡಿ.
● ಇಂಧನ ಇಲಾಖೆಯ ಹೋಂ ಪೇಜ್ ತಲುಪಿ
ಮೊದಲನೇ ಆಪ್ಷನ್ ಆಗಿ ನಿಮ್ಮ ಆಯ್ಕೆ ಭಾಷೆಯನ್ನು ಕೇಳಲಾಗುತ್ತದೆ ಅದರಲ್ಲಿ ಕನ್ನಡ ಮತ್ತು ಇಂಗ್ಲೀಷ್ ಇರುತ್ತದೆ ಸೆಲೆಕ್ಟ್ ಮಾಡಿ.

● ಖಾತೆ ಸಂಖ್ಯೆ ಅಥವಾ ಸಂಪರ್ಕ ಸಂಖ್ಯೆ ಎಂದು ಕೇಳಲಾಗಿರುತ್ತದೆ ಈ ಸಂಖ್ಯೆಯು ನಿಮ್ಮ ವಿದ್ಯುತ್ ಬಿಲ್ ಅಲ್ಲಿ ಇರುತ್ತದೆ. ಆರ್.ಆರ್ಸಂಖ್ಯೆ ಮೇಲೆ ಇರುವ ಅಕೌಂಟ್ ID ನಂಬರ್ ನಮೂದಿಸಿ.
● ಕರೆಂಟ್ ಬಿಲ್ ಅಲ್ಲಿ ಇರುವಂತೆ ಹೆಸರನ್ನು ನಮೂದಿಸಲು ಕೇಳಲಾಗುತ್ತದೆ ಅದನ್ನು ಕೂಡ ವಿದ್ಯುತ್ ಬಿಲ್ ನೋಡಿ ಅದೇ ರೀತಿ ನಮೂದಿಸಿ.
● ಈ ಎರಡು ಮಾಹಿತಿಗಳು ಸರಿಯಾಗಿದ್ದರೆ ಮೂರನೇ ಆಪ್ಷನ್ ಅಲ್ಲಿ ವಿಳಾಸ ಇರುತ್ತದೆ ಅದು ಆಟೋಮೆಟಿಕ್ ಆಗಿ ವಿದ್ಯುತ್ ಬಿಲ್ ಅಲ್ಲಿ ಇರುವಂತೆಯೇ ಫಿಲ್ ಆಗುತ್ತದೆ.

● ನಂತರದ ಆಪ್ಷನ್ ಅಲ್ಲಿ ನಿವಾಸಿಯ ವಿಧ ಎಂದು ಕೇಳಲಾಗಿರುತ್ತದೆ. ಇದರಲ್ಲಿ ಮಾಲೀಕ ಮತ್ತು ಬಾಡಿಗೆದಾರ ಎನ್ನುವ ಎರಡು ಆಪ್ಷನ್ ಇರುತ್ತದೆ. ನೀವು ಸ್ವಂತ ಮನೆ ಹೊಂದಿದ್ದರೆ ಮಾಲೀಕ ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಒಂದು ವೇಳೆ ಬಾಡಿಗೆದಾರ ಆಗಿದ್ದರೆ ಅಥವಾ ಮನೆ ನಿಮ್ಮ ಪೋಷಕರ ಹೆಸರಲ್ಲಿದ್ದು ಅವರು ಬೇರೆ ಕಡೆ ವಾಸ ಮಾಡುತ್ತಿದ್ದು ನೀವು ಅವರ ಹೆಸರಿನಲ್ಲಿರುವ ಮನೆಯಲ್ಲಿ ವಾಸ ಮಾಡುತ್ತಿದ್ದರು ಕೂಡ ಇದೇ ಆಪ್ಷನ್ ಸೆಲೆಕ್ಟ್ ಮಾಡಿ.

● ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ಅಲ್ಲಿ ಇರುವಂತೆ ನಿಮ್ಮ ಹೆಸರನ್ನು ಕೂಡ ಫಿಲ್ ಮಾಡಿ.
● ನಿಮ್ಮ ಮೊಬೈಲ್ ಸಂಖ್ಯೆಯನ್ನು ಕೇಳಲಾಗುತ್ತದೆ ಅದನ್ನು ಕೂಡ ಹಾಕಿ.
● ಇಷ್ಟಾದ ಮೇಲೆ ಒಂದು ಘೋಷಣೆ ಬರುತ್ತದೆ ನೀವು ಇಂಧನ ಇಲಾಖೆಯ ಸೂಚಿಸಿರುವ ಎಲ್ಲಾ ನಿಯಮಗಳು ಒಪ್ಪಿಕೊಂಡಿರುವುದಾಗಿ ಬರೆಯಲಾಗಿರುತ್ತದೆ, ಓದಿ ಅಪ್ಪಣೆ ಇದ್ದರೆ ಐ ಅಗ್ರೀ ಎನ್ನುವ ಕಡೆ ರೈಟ್ ಮಾರ್ಕ್ ಕ್ಲಿಕ್ ಮಾಡಿ.

● ಪೇಜ್ ನ ಕೊನೆಯಲ್ಲಿ ವರ್ಡ್ ವೆರಿಫಿಕೇಶನ್ ಗಾಗಿ ಕೆಲವು ನಂಬರ್ ಗಳನ್ನು ಹಾಕಿರುತ್ತಾರೆ ಅದನ್ನು ಎಂಟ್ರಿ ಮಾಡಿ ಇದೆಲ್ಲಾ ಪೂರ್ತಿಯಾದ ಬಳಿಕ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ ಆಗ ನೀವು ನಮೂದಿಸಿದ ಮೊಬೈಲ್ ಸಂಖ್ಯೆಗೆ ಒಂದು OTP ಬರುತ್ತದೆ. ಅದನ್ನು ಕೂಡ ಎಂಟ್ರಿ ಮಾಡಿ.
● ನಿಮ್ಮ ಅರ್ಜಿ ಸ್ವೀಕೃತಿ ಆಗಿರುವುದರ ಬಗ್ಗೆ ಸ್ವೀಕೃತಿ ಪತ್ರ ಬರುತ್ತದೆ. ಭವಿಷ್ಯದ ಬಳಕೆಗಾಗಿ ಅದನ್ನು ಪ್ರಿಂಟ್ ಔಟ್ ತೆಗೆದು ಇಟ್ಟುಕೊಳ್ಳಿ. ಇಲ್ಲಿಗೆ ನಿಮ್ಮ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ತಿಯಾಗುತ್ತದೆ.

Leave a Comment

%d bloggers like this: