ಬ್ಯಾಂಕ್ ಅಕೌಂಟ್ ನಲ್ಲಿ 30 ಸಾವಿರಕ್ಕಿಂತ ಹೆಚ್ಚು ಹಣ ಹೊಂದಿದ್ದವರಿಗೆ ಹೊಸ ರೂಲ್ಸ್.! ಈ ಬಗ್ಗೆ RBI ಕೊಟ್ಟ ಸ್ಪಷ್ಟತೆ ಏನು ಗೊತ್ತ.? ಬ್ಯಾಂಕ್ ನಲ್ಲಿ ದುಡ್ಡು ಇಟ್ಟಿರೋರು ತಪ್ಪದೆ ನೋಡಿ

 

ಇತ್ತೀಚೆಗೆ ಜನರು ಸೋಶಿಯಲ್ ಮೀಡಿಯಾ ಮೂಲದಿಂದ ಹಲವು ವಿಷಯಗಳ ಬಗ್ಗೆ ತಿಳಿದುಕೊಳ್ಳುತ್ತಾರೆ. ಆದರೆ ಈ ರೀತಿ ಸೋಶಿಯಲ್ ಮೀಡಿಯಾದಲ್ಲಿ ಬರುವ ಎಲ್ಲಾ ವಿಚಾರಗಳು ಕೂಡ ಸತ್ಯವಾಗಿರುವುದಿಲ್ಲ. ಹಲವು ಬಾರಿ ಸರ್ಕಾರ ಅಥವಾ ಸರ್ಕಾರದ ಅಧಿಕಾರಿಗಳು ಘೋಷಣೆ ಮಾಡಿದ್ದಾರೆ ಎಂದು ಹರಿದಾಡುವ ಸಂದೇಶಗಳು ಫೇಕ್ ಆಗಿರುತ್ತವೆ, ಜನರು ಅವುಗಳನ್ನು ನಂಬಿ ಗಾಬರಿಕೊಂಡಿರುವ ಅಥವಾ ಮೋಸ ಹೋಗಿರುವ ಉದಾಹರಣೆಗಳು ಸಾಕಷ್ಟಿವೆ.

ಇಂತಹದ್ದೇ ಒಂದು ಸುದ್ದಿ ಈಗ ಬಾರಿ ವೈರಲ್ ಆಗಿದೆ. ಈ ಸುದ್ದಿಯಿಂದ ಬ್ಯಾಂಕ್ ಗಳ ವ್ಯವಹಾರ ನಡೆಸುವ ಎಲ್ಲರೂ ಕೂಡ ಭಾರೀ ತಲೆಕೆಡಿಸಿಕೊಂಡಿದ್ದರು. RBI ತಮ್ಮ ಖಾತೆಯಲ್ಲಿ 30000 ಕ್ಕಿಂತ ಹೆಚ್ಚು ಹಣ ಹೊಂದಿರುವ ಎಲ್ಲರ ಖಾತೆಯನ್ನು ಮುಚ್ಚುವುದಾಗಿ ಹೇಳಿದೆ, ಈ ಸುದ್ದಿಯನ್ನು ಆರ್ಬಿಐನ ಗವರ್ನರ್ ಶಕ್ತಿ ದಾಸ್ ಅವರೇ ತಿಳಿಸಿದ್ದಾರೆ ಎನ್ನುವ ಸುದ್ದಿ ಅದಾಗಿತ್ತು.

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ಈ ಸುದ್ದಿಯನ್ನು ನೋಡಿ ಅನೇಕರು ತಮ್ಮ ಖಾತೆಗಳಲ್ಲಿ ಹಣವನ್ನು ಹಿಂಪಡೆದುಕೊಳ್ಳುವ ನಿರ್ಧಾರ ಮಾಡಿದ್ದರು. ಇನ್ನು ಹಲವರು ಬ್ಯಾಂಕ್ ಗಳಿಗೆ ಕರೆ ಮಾಡುವ ಮೂಲಕ ಕಾರಣ ಕೇಳುತ್ತಿದ್ದರು. ಈ ಬಗ್ಗೆ ಎಲ್ಲೆಡೆ ಸುದ್ದಿ ವೈರಲ್ ಆಗಿ ಸಮಸ್ಯೆಗಳು ಹೆಚ್ಚಿದ ಕಾರಣ ಇದರ ಫ್ಯಾಕ್ಟ್ ಚೆಕ್ ನಡೆಸಲಾಯಿತು. ಈಗ PIB ಈ ವಿಷಯದ ಕುರಿತು ಫ್ಯಾಕ್ಚ್ ಚೆಕ್ ನಡೆಸಿ ವಿಚಾರವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದೆ.

ಈ ಪ್ರಕಾರ ಈ ಸುದ್ದಿ ಅಪ್ಪಟ ಸುಳ್ಳು, RBI ಈ ರೀತಿ ಯಾವುದೇ ಬದಲಾವಣೆಗಳು ಮಾಡಿಲ್ಲ ಎಂದು ಪೋಸ್ಟ್ ಹಾಕುವ ಮೂಲಕ ಈ ಸುದ್ದಿಗೆ ಬ್ರೇಕ್ ಹಾಕಿದೆ. ಈ ಬಗ್ಗೆ ಬ್ಯಾಂಕಲ್ಲಿ ಹಣ ಇಟ್ಟಿರುವ ಯಾರೂ ಕೂಡ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಹಾಗಾಗಿ ಜನರು ಇವುಗಳನ್ನು ನಂಬಿ ನಿಮ್ಮ ಖಾತೆಯಲ್ಲಿರುವ ಹಣವನ್ನು ಹಿಂಪಡೆದುಕೊಳ್ಳಬೇಡಿ ಅಥವಾ ಬ್ಯಾಂಕ್ಗಳಿಗೆ ಹೋಗಿ ಜನಜಂಗುಳು ಸೃಷ್ಟಿಸಿ ಸಮಸ್ಯೆ ಮಾಡಿಕೊಳ್ಳಬೇಡಿ.

ಇಂತಹ ಯಾವುದೇ ಸುದ್ದಿ ವೈರಲ್ ಆದರೂ ಕೂಡ ಅವುಗಳ ಸತ್ಯಾನು ಸತ್ಯತೆ ತಿಳಿದುಕೊಳ್ಳಲು ಫ್ಯಾಕ್ಟ್ ಚೆಕ್ ನಡೆಸಿ ಅಥವಾ ಆ ವೈರಲ್ ಸುದ್ದಿಯ ಪೋಸ್ಟ್ ಅಥವಾ ವಿಡಿಯೋವನ್ನು 918799711259 ವಾಟ್ಸಾಪ್ ಸಂದೇಶದ ಮೂಲಕ ಕಳುಹಿಸಿ ಅಥವಾ [email protected] ಇ-ಮೇಲ್ ಐಡಿಗೆ ಮೇಲ್ ಮಾಡಿ ಸುದ್ದಿ ಸತ್ಯವೋ ಅಥವಾ ಸುಳ್ಳೋ ಎನ್ನುವ ಸುದ್ದಿಯನ್ನು ತಿಳಿದುಕೊಳ್ಳಿ.

ನಿಮಗೆ ಯಾವುದೇ ವಿಷಯದ ಬಗ್ಗೆ ಸರಿಯಾದ ಮಾಹಿತಿ ಬೇಕು ಎಂದರೆ ಸರ್ಕಾರದ ಅಧಿಕೃತ ವೆಬ್ಸೈಟ್ ಗಳಲ್ಲಿ ಇರುವ ಮಾಹಿತಿಯನ್ನು ಮಾತ್ರ ಅವಲಂಬಿಸಿ ಎಂದು ಪೋಸ್ಟ್ ಮಾಡಿದೆ. RBI ತನ್ನ ಒಡೆತನದಲ್ಲಿರುವ ಹಣಕಾಸಿನ ಸಂಸ್ಥೆಗಳಲ್ಲಿ ಆಗಾಗ ಬದಲಾವಣೆಗಳನ್ನು ತರುತ್ತದೆ ಆದರೆ ಯಾವುದೇ ಕಾರಣಕ್ಕೂ ಗ್ರಾಹಕರಿಗೆ ತೊಂದರೆ ಆಗುವಂತಹ ಯಾವುದೇ ನಿರ್ಧಾರಕ್ಕೂ ಬರುವುದಿಲ್ಲ.

ಹಾಗೆ ಒಂದು ವೇಳೆ ಈ ರೀತಿ ನಿರ್ಧಾರಕ್ಕೆ ಬಂದರೆ ಮೊದಲಿಗೆ ಅದನ್ನು ತನ್ನ ವೆಬ್ಸೈಟ್ ಅಲ್ಲಿ ತಿಳಿಸಲಿದೆ, ಜೊತೆಗೆ ತಲೆ ಸೋಶಿಯಲ್ ಮೀಡಿಯಾ ಖಾತೆಗಳಲ್ಲೂ ಕೂಡ ಈ ಬಗ್ಗೆ ಪೋಸ್ಟ್ ಹಾಕಿ ಜನಸಾಮಾನ್ಯರಿಗೆ ಮಾಹಿತಿ ತಿಳಿಸಲಿದೆ. RBI ಅಧಿಕೃತ ಜಾಲಗಳನ್ನು ಹೊರತುಪಡಿಸಿ ಇನ್ಯಾವುದೇ ಮೂಲಗಳಿಂದ ಈ ರೀತಿ ಮಾಹಿತಿ ದೊರೆತರೂ ಕೂಡ ಈ ಮೇಲೆ ತಿಳಿಸಿದ ರೀತಿ ಫ್ಯಾಕ್ಟ್ ಚೆಕ್ ಮಾಡಿಕೊಂಡು ಗೊಂದಲಗಳನ್ನು ಪರಿಹರಿಸಿಕೊಳ್ಳಿ.

Leave a Comment

%d bloggers like this: