ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಕಡೆಯಿಂದ 2023 ಬಜೆಟ್ ಮಂಡನೆ ಘೋಷಣೆ. ಎಲ್ಲರಿಗೂ ಬಂಪರ್ ಸುದ್ದಿ.

ಬಸವರಾಜ ಬೊಮ್ಮಾಯಿ ಅವರು 2023ರ ಬಜೆಟ್ ಮಂಡನೆ ಮಾಡಲಿದ್ದು ಈ ಬಜೆಟ್ ಮಂಡನೆಯಲ್ಲಿ ಕರ್ನಾಟಕ ರಾಜ್ಯದ ರೈತರಿಗೆ ಮತ್ತು ವಿಧವೆಯರಿಗೆ ಹಾಗೂ ಅಂಗವಿಕಲರಿಗೆ ಹಾಗೂ ವಯಸ್ಸಾದ ಪ್ರತಿಯೊಬ್ಬರಿಗೂ ಕೂಡ, ಹಾಗೂ ಬಿಪಿಎಲ್ ರೇಷನ್ ಕಾರ್ಡ್ ಹೊಂದಿರುವ ಪ್ರತಿಯೊಂದು ಕುಟುಂಬಗಳಿಗೂ, ಮತ್ತು ಬಡವರ್ಗದ ಮಹಿಳೆಯರಿಗೆ ಸೇರಿದಂತೆ, ನಿರುದ್ಯೋಗ ಯುವಕ ಯುವತಿಯರಿಗೆ, ಬಜೆಟ್ ನಲ್ಲಿ ಬಂಪರ್ ಘೋಷಣೆಯನ್ನು ನೀಡಲಾಗುತ್ತಿದ್ದು.

ಒಟ್ಟು ಈ ಬಜೆಟ್ ಮೂರು ಲಕ್ಷ ಕೋಟಿ ಗಾತ್ರದ ಬಜೆಟ್ ಅನ್ನು ಮಂಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಿದ್ದಗೊಂಡಿದ್ದಾರೆ. ಆದರೆ ಈಗ ಮಂಡಿಸುತ್ತಿರುವ ಬಜೆಟ್ ನಲ್ಲಿ ಯಾರಿಗೆ ಏನೆಲ್ಲ ಸಿಗಲಿದೆ ಎನ್ನುವ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಪ್ರತಿ ಬರಿ ಬಜೆಟ್ ಮಂಡನೆ ಮಾಡುವಂತಹ ಸಮಯ ದಲ್ಲಿ ಕೆಲವೊಂದಷ್ಟು ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಅದರಿಂದ ಬೇರೆಯವರಿಗೆ ಅನುಕೂಲವಾಗುವಂತೆ ಕೆಲವೊಮ್ಮೆ ಬಜೆಟ್ ಮಂಡನೆ ಮಾಡುತ್ತಾರೆ, ಹಾಗೂ ಕೆಲವೊಮ್ಮೆ ರೈತರಿಗೆ ಹಾಗು ಕೆಲ ವೊಮ್ಮೆ ಒಂದಲ್ಲ ಒಂದು ವಿಷಯದ ಬಗ್ಗೆ ಅಭಿವೃದ್ಧಿಪಡಿಸುವುದರ ಬಗ್ಗೆ ಕೆಲವೊಮ್ಮೆ ರೈತರಿಗೆ ಲಾಭವಾಗುವಂತೆ ಹೀಗೆ ಒಂದಲ್ಲ ಒಂದು ವಿಷಯದಲ್ಲಿ ಬಜೆಟ್ ಮಂಡನೆ ಮಾಡುವ ಸಮಯದಲ್ಲಿ ಈ ವಿಚಾರ ಗಳೆಲ್ಲವನ್ನು ಕೂಡ ಕೂಲಂಕುಶವಾಗಿ ತಿಳಿದುಕೊಂಡು ನಂತರ ಬಜೆಟ್ ಮಂಡನೆ ಮಾಡುತ್ತಾರೆ.

ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿ ಬಾರಿ ಬಜೆಟ್ ಮಂಡನೆ ಮಾಡುವ ಸಮಯದಲ್ಲಿ ಕೆಲವೊಂದಷ್ಟು ಜನರಿಗೆ ಪ್ರಧಾನವಾದಂತಹ ಅನುಕೂಲ ವನ್ನು ಮಾಡಿಕೊಡುವುದರಲ್ಲಿ ಸರ್ಕಾರವು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಹೇಳಬಹುದು. ಆದರೆ ಈ ಬಾರಿ 2023ರಲ್ಲಿ ಬಸವರಾಜ್ ಬೊಮ್ಮಾಯಿ ಅವರು ಯಾವ ರೀತಿಯಾದಂತಹ ಬಜೆಟ್ ಮಂಡನೆ ಮಾಡಿದ್ದಾರೆ ಯಾರಿಗೆ ಇದರಿಂದ ಅನುಕೂಲವಾಗುತ್ತದೆ ಎನ್ನುವ ಮಾಹಿತಿಯ ಬಗ್ಗೆ ಈ ದಿನ ತಿಳಿಯೋಣ.

ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ದಾಖಲೆಯ ಮೂರು ಲಕ್ಷ ಕೋಟಿ ಗಾತ್ರದ ಬಜೆಟ್ ಮಂಡಿಸಲಿದ್ದಾರೆ. ಸರ್ಕಾರದ ಬೊಕ್ಕಸ ತುಂಬಿಸುವ ಸಾರಿಗೆ, ಮೋಟಾರು ವಾಹನ ತೆರಿಗೆ, ಅಬಕಾರಿ ವಾಣಿಜ್ಯ ತೆರಿಗೆಗಳು ಮತ್ತು ಅಂಚೆ ಚೀಟಿಗಳು, ಹಾಗೂ ನೋಂದಣಿ ಇಲಾಖೆಗಳು, ಆದಾಯದ ಎಲ್ಲ ಪ್ರಮುಖ ಮೂಲಗಳಿಂದ ನಿರೀಕ್ಷೆಗೂ ಮೀರಿದ ತೆರಿಗೆ ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಬಂದಿದೆ.

ಜಿಎಸ್‌ಟಿ ಹಾಗೂ ತೈಲದ ಮೇಲಿನ ಮಾರಾಟದ ತೆರಿಗೆಯ ಮೂಲಕ ರಾಜ್ಯ ಭರ್ಜರಿ ಆದಾಯವನ್ನು ಸಂಗ್ರಹ ಮಾಡಿದೆ. ಕೃಷಿ ಮತ್ತು ಪೂರಕ ಚಟುವಟಿಕೆಗಳು 40,000 ಕೋಟಿ ರೂ, ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ 75,000 ಕೋಟಿ ರೂ, ಹಾಗೂ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ 65,000 ಕೋಟಿ ರೂ, ಬೆಂಗಳೂರು ಸಮಗ್ರ ಅಭಿವೃದ್ಧಿ 10,000 ಕೋಟಿ ರೂ, ಸಂಸ್ಕೃತಿ ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ 400 ಕೋಟಿ ರೂ,

ಆಡಳಿತ ಸುಧಾರಣೆ ಮತ್ತು ಸಾರ್ವಜನಿಕ ಸೇವೆ 65,000 ಕೋಟಿ ರೂ, ಮಹಿಳೆಯರ ಸಬಲೀಕರಣ ಹಾಗೂ ಕ್ಷೇಮಾಭಿವೃದ್ಧಿ 50,000 ಕೋಟಿ ರೂ, ಹಾಗೂ ಮಕ್ಕಳ ಆಯವ್ಯಯಕ್ಕೆ ಅನುದಾನ 50,000 ಕೋಟಿ ರೂ,SC, ST, TSP ಗೆ 35,000 ಕೋಟಿ ರೂ, ಆರೋಗ್ಯ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಮತ್ತು ಇತರ ಜನ ಕಲ್ಯಾಣ ಕಾರ್ಯಕ್ರಮಗಳಿಗೆ 10,000 ಕೋಟಿ ರೂ ಹೆಚ್ಚುವರಿ ಅನುದಾನವನ್ನು ಕೊಟ್ಟಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

%d bloggers like this: