ಕರ್ನಾಟಕ ರಾಜ್ಯದಾದ್ಯಂತ (Karnataka) ಇರುವ ಎಲ್ಲ ರೈತರಿಗೆ (Farmer’s) ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ ಕಿಸಾನ್ ಟ್ರ್ಯಾಕ್ಟರ್ (Nissan Tractor Schemes) ಯೋಜನೆಯ ಅಡಿಯಲ್ಲಿ ರೈತರಿಗೆ ಸಂಪೂರ್ಣ ಉಚಿತವಾಗಿ ಟ್ರಾಕ್ಟರ್ ಗಳನ್ನು ನೀಡಲಾಗುತ್ತಿದೆ. ಅಂದರೆ ರೈತರು ಟ್ರ್ಯಾಕ್ಟರ್ ಬೆಲೆಯಲ್ಲಿ ಅರ್ಧ ಹಣವನ್ನು ಕಟ್ಟಿದರೆ ಸಾಕು ನಿಮ್ಮ ಮನೆಗೆ ಹೊಸ ಟ್ರಾಕ್ಟರ್ ಅನ್ನು ತರಬಹುದು ಅದು ಕೂಡ ಸಂಪೂರ್ಣ ಉಚಿತವಾಗಿ ಆದರೆ ಉಳಿದ ಹಣವನ್ನು ಸರ್ಕಾರವೇ ಕಟ್ಟುತ್ತದೆ.
ಅಂದರೆ ಒಂದು ಸಂಪೂರ್ಣ ಟ್ರ್ಯಾಕ್ಟರ್ ಬೆಲೆಯಲ್ಲಿ ಅರ್ಧ ಹಣವನ್ನು ಸರ್ಕಾರವೇ ಕಟ್ಟುತ್ತದೆ ಇನ್ನು ಉಳಿದ ಅರ್ಧ ಹಣವನ್ನು ನೀವು ಕೊಟ್ಟು ಹೊಸ ಟ್ರ್ಯಾಕ್ಟರ್ ಅನ್ನು ಖರೀದಿ ಮಾಡಬಹುದು. ಹಾಗಾದರೆ ಪ್ರಧಾನ ಮಂತ್ರಿ ಟ್ರ್ಯಾಕ್ಟರ್ ಕಿಸಾನ್ ಯೋಜನೆಯ ಅಡಿಯಲ್ಲಿ ರೈತರು ಹೇಗೆ ಟ್ರ್ಯಾಕ್ಟರ್ ಅನ್ನು ಪಡೆದುಕೊಳ್ಳಬಹುದು.? ಇದಕ್ಕೆ ಬೇಕಾಗುವ ದಾಖಲೆಗಳೇನು.? ಹಾಗೂ ಈ ಒಂದು ಯೋಜನೆಯನ್ನು ಪಡೆದುಕೊಳ್ಳಬೇಕಾದರೆ ಎಲ್ಲಿ ಅರ್ಜಿಯನ್ನು ಸಲ್ಲಿಸುವುದು.? ಹಾಗೂ ರೈತರಿಗೆ ಯಾವ ಟ್ರ್ಯಾಕ್ಟರ್ ದೊರೆಯುತ್ತದೆ ಎಂವುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ PM ಟ್ರ್ಯಾಕ್ಟರ್ ಕಿಸಾನ್ ಯೋಜನೆಯೂ ಕೂಡ ಒಂದಾಗಿದ್ದು ಇದರ ಅಡಿಯಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಸಬ್ಸಿಡಿ ದರದಲ್ಲಿ ಟ್ರ್ಯಾಕ್ಟರ್ ಅನ್ನು ನೀಡುತ್ತಿದೆ. ಅದರಂತೆ ಈ ಯೋಜನೆ ಅಡಿ ರೈತರು ಸುಮಾರು 50% ಸಬ್ಸಿಡಿಯಲ್ಲಿ ಹೊಸ ಟ್ರ್ಯಾಕ್ಟರ್ ಖರೀದಿಸಬಹುದು. PM ಕಿಸಾನ ಟ್ರ್ಯಾಕ್ಟರ್ ಯೋಜನೆ ದೇಶದಾದ್ಯಂತ ರೈತರಿಗೆ ಲಭ್ಯವಿದ್ದು ಟ್ರ್ಯಾಕ್ಟರ್ ಸಬ್ಸಿಡಿ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ರಾಜ್ಯ ಮಟ್ಟದ ಅಧಿಕಾರಿಗಳ ಮೂಲಕ.
ಅರ್ಜಿಯನ್ನು ಸಲ್ಲಿಸಬಹುದು ಈ ಒಂದು ಅರ್ಜಿಯನ್ನು ಸಲ್ಲಿಸುವುದಕ್ಕೆ ಆನ್ಲೈನ್ ಹಾಗೂ ಆಫ್ಲೈನ್ ಈ ಎರಡು ವಿಧಾನದಲ್ಲೂ ಕೂಡ ಲಭ್ಯವಿದೆ. PM ಕಿಸಾನ್ ಟ್ರಾಕ್ಟರ್ ಯೋಜನೆ 2024 ರಲ್ಲಿ ಭಾರತ ಸರ್ಕಾರವು ಭಾರತದ ಎಲ್ಲಾ ಕಿಸಾನ್ ಅಂದರೆ ರೈತರಿಗೆ ಟ್ರ್ಯಾಕ್ಟರ್ ಗಳನ್ನು ನೀಡುತ್ತಿದೆ. ದೇಶದಾದ್ಯಂತ ಕೃಷಿಗೆ ಬೇಕಾಗಿರುವಂತಹ ಟ್ರ್ಯಾಕ್ಟರ್ ಅನ್ನು ಪಡೆಯಲು ಎಲ್ಲ ರೈತರು ಕೂಡ ಅರ್ಜಿಯನ್ನು ಸಲ್ಲಿಸಬಹುದು.
ಇದು ರಾಷ್ಟ್ರೀಯ ಯೋಜನೆಯಾಗಿರುವುದರಿಂದ ವಿವಿಧ ರಾಜ್ಯ ಸರ್ಕಾರ ಗಳು ರೈತರಿಗೆ ಸಬ್ಸಿಡಿ ದರದಲ್ಲಿ ಟ್ರ್ಯಾಕ್ಟರ್ ವಿತರಿಸುವ ಜವಾಬ್ದಾರಿ ಯನ್ನು ಹೊಂದಿರುತ್ತದೆ. ಈ ಯೋಜನೆಯಡಿ ನೀಡಲಾದ ಟ್ರ್ಯಾಕ್ಟರ್ ಗಳನ್ನು ಮನೆಯಲ್ಲಿರುವ ಒಬ್ಬ ಸದಸ್ಯನಿಗೆ ಮಾತ್ರ ನೀಡಲಾಗುವುದು. ಅದಲ್ಲದೆ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸುವ ಮಹಿಳಾ ಅಭ್ಯರ್ಥಿಗೆ ಕೆಲವು ಹೆಚ್ಚು ಪ್ರಯೋಜನಗಳನ್ನು ನೀಡುತ್ತದೆ.
ಅರ್ಜಿದಾರ ಭಾರತದ ಖಾಯಂ ನಿವಾಸಿಯಾಗಿರಬೇಕು, ವಯಸ್ಸು 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು, ಮತ್ತು 60 ವರ್ಷಕ್ಕಿಂತ ವಯಸ್ಸು ಕಡಿಮೆ ಇರಬೇಕು, ಅರ್ಜಿದಾರನ ಆದಾಯ ಹಾಗೂ ಅರ್ಜಿದಾರರ ಕುಟುಂಬದವರ ವಾರ್ಷಿಕ ಆದಾಯ 1.5 ಲಕ್ಷಕ್ಕಿಂತ ಕಡಿಮೆ ಇರಬೇಕು. ಇತರ ಸಣ್ಣ ಮತ್ತು ಅತಿ ಸಣ್ಣ ರೈತರ ಮಾನದಂಡಗಳ ಅಡಿಯಲ್ಲಿ ಇರಬೇಕು. ಟ್ರ್ಯಾಕ್ಟರ್ ಖರೀದಿಸುವ ರೈತ ತನ್ನ ಹೆಸರಿನಲ್ಲಿ ಕೃಷಿ ಭೂಮಿಯನ್ನು ಹೊಂದಿರಬೇಕು.
ಇತರೆ ಯಾವುದೇ ಸಬ್ಸಿಡಿ ಆಧಾರಿತ ಯೋಜನೆಯ ಫಲಾನುಭವಿ ಆಗಿರಬಾರದು. ಇದಲ್ಲದೆ ಸಬ್ಸಿಡಿಗಾಗಿ ಅರ್ಜಿಯನ್ನು ಸಲ್ಲಿಸುವ ರೈತರು ಕಳೆದ ಏಳು ವರ್ಷಗಳಲ್ಲಿ ಟ್ರ್ಯಾಕ್ಟರ್ ಅನ್ನು ಖರೀದಿಸಿರಬಾರದು. ಸಬ್ಸಿಡಿ ಟ್ರ್ಯಾಕ್ಟರ್ ಗಳನ್ನು ಖರೀದಿಸಲು ಪ್ರತಿ ಕುಟುಂಬಕ್ಕೆ ಒಬ್ಬ ವ್ಯಕ್ತಿಯನ್ನು ಮಾತ್ರ ಅರ್ಹ ಎಂದು ಪರಿಗಣಿಸಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.